Homeಕರ್ನಾಟಕ10 ನಿಮಿಷಗಳಲ್ಲಿ ಆಹಾರ ವಿತರಣೆ ನಿಯಮ ಘೊಷಿಸಿದ ‘ಜೊಮೆಟೊ’; ತೀವ್ರ ವಿರೋಧ

10 ನಿಮಿಷಗಳಲ್ಲಿ ಆಹಾರ ವಿತರಣೆ ನಿಯಮ ಘೊಷಿಸಿದ ‘ಜೊಮೆಟೊ’; ತೀವ್ರ ವಿರೋಧ

- Advertisement -
- Advertisement -

ಆನ್‌ಲೈನ್‌‌ ಆಹಾರ ವಿತರಣಾ ಕಂಪೆನಿ ಜೊಮೊಟೊ ಸಿಇಒ ದೀಪಿಂದರ್‌ ಗೋಯಲ್‌ ಅವರು ಮಾರ್ಚ್ 21ರ ಸೋಮವಾದಂದು, ತಮ್ಮ ಕಂಪನಿಯು ಶೀಘ್ರದಲ್ಲೇ ಹತ್ತು ನಿಮಿಷಗಳಲ್ಲಿ ಆಹಾರ ವಿತರಣೆಯನ್ನು ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದ ಬಳಕೆದಾರರು ಮತ್ತು ಆಹಾರವನ್ನು ವಿತರಣೆ ಮಾಡುವ ಕಾರ್ಮಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹಲವಾರು ಜನರು ಹತ್ತು ನಿಮಿಷಗಳಲ್ಲಿ ಆಹಾರವನ್ನು ವಿತರಣೆ ಮಾಡಲು ಹೇಗೆ ಸಾಧ್ಯ ಎಂದ ಪ್ರಶ್ನಿಸಿದ್ದಾರೆ. ಕಂಪೆನಿಯ ಈ ನೀತಿಯಿಂದಾಗಿ ವಿತರಣೆ ಮಾಡುವ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

10 ನಿಮಿಷದ ವಿತರಣೆಯ ಕಲ್ಪನೆಯನ್ನು ಜೊಮಾಟೊಗೆ ಬಂಡವಾಳ ಹೂಡಿಕೆ ಮಾಡಿದ ಕಂಪನಿಯಾದ ಬ್ಲಿಂಕಿಟ್‌‌ ಮೊದಲು ಮುಂದಿಟ್ಟಿತ್ತು. ಹತ್ತು ನಿಮಿಷದಲ್ಲಿ ವಿತರಣೆ ಮಾಡುವ ವ್ಯಾಪಾರಿ ಮಾದರಿಯು ದಿನಸಿ ವಸ್ತುಗಳನ್ನು ವಿತರಣೆ ಮಾಡುವ ಕಂಪೆನಿಗಳಲ್ಲಿ ಸಾಮಾನ್ಯವಾಗಿದೆ.

ಇದನ್ನೂ ಓದಿ: ಜೊಮೊಟೊ ಏಜೆಂಟ್‌ ಹಿಂದಿ ಪ್ರೀತಿ: ತೀವ್ರ ಆಕ್ಷೇಪದ ಬಳಿಕ ಕಂಪನಿ ಕ್ಷಮೆಯಾಚನೆ

ಕಂಪೆನಿಯ ನಿರ್ಧಾರಗಳನ್ನು ಮುಂದಿಡುತ್ತಾ ಮಾತನಾಡಿದ ದೀಪಿಂದರ್ ಗೋಯಲ್, “ಜೊಮಾಟೊ ವಿತರಣಾ ಕಾರ್ಮಿಕರ ಮೇಲೆ ವೇಗವಾಗಿ ತಲುಪಿಸಲು ಯಾವುದೇ ಒತ್ತಡವನ್ನು ಹೇರುವುದಿಲ್ಲ. ವಿತರಣೆಗೆ ಮಾಡಲಾದ ಭರವಸೆಯ ಸಮಯದ ಬಗ್ಗೆ ಅವರಿಗೆ ತಿಳಿಸಲಾಗುವುದಿಲ್ಲ. ಸಮಯ ನಿರ್ವಹಣೆಯನ್ನು ರಸ್ತೆಯಲ್ಲಿ ಮಾಡಲಾಗುವುದಿಲ್ಲ ಮತ್ತು ಇದರಿಂದಾಗಿ ಯಾವುದೆ ಜೀವಕ್ಕೆ ಅಪಾಯವಿಲ್ಲ” ಎಂದು ಹೇಳಿದ್ದಾರೆ.

ಗ್ರಾಹಕರು ತಮ್ಮ ಅಗತ್ಯಗಳಿಗೆ ಅನುಸಾರವಾಗಿ ತ್ವರಿತ ಸೇವೆಯನ್ನು ಬಯಸುತ್ತಿದ್ದಾರೆ ಎಂದು ಗೋಯಲ್ ಹೇಳಿದ್ದು, ಪ್ರಸ್ತುತ ಜೊಮೊಟೊದಲ್ಲಿ ಇರುವ 30 ನಿಮಿಷಗಳ ಸರಾಸರಿ ವಿತರಣಾ ಸಮಯವು ತುಂಬಾ ನಿಧಾನವಾಗಿದ್ದು, ಅದು ತುಂಬಾ ಹಳೆಯ ಮಾದರಿಯಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಬೆಂಗಳೂರಿನಲ್ಲಿ ಜೊಮೆಟೊ ಕಂಪೆನಿಯಲ್ಲಿ ಆಹಾರ ವಿತರಣೆ ಮಾಡುತ್ತಿರುವ ಮಂಡ್ಯದ ದಲೀಪ್‌, “ಈ ಬಗ್ಗೆ ನಮಗೆ ಇನ್ನೂ ಯಾವುದೆ ನೋಟಿಫಿಕೇಷನ್ ಬಂದಿಲ್ಲ. ಆದರೆ ಹತ್ತು ನಿಮಿಷದಲ್ಲಿ ಆಹಾರ ವಿತರಣೆ ಮಾಡಲು ಸಾಧ್ಯವೆ ಇಲ್ಲ. ಗ್ರಾಹಕರು ಆರ್ಡರ್‌ ಮಾಡಿದ ಆಹಾರ ಹೊಟೆಲ್‌ನಲ್ಲಿ ತಯಾರಾಗಿ ಪ್ಯಾಕ್ ಆಗುವಾಗಲೆ ಹತ್ತು ನಿಮಿಷ ಆಗಿರುತ್ತದೆ. ಉಳಿದಂತೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಗ್ರಾಹಕರನ್ನು ತಲುಪಲು ತುಂಬಾ ಸಮಯ ಹಿಡಿಯುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಯ್ಕಾಟ್ ಚೀನಾ: ಟೀಶರ್ಟ್‌ ಸುಟ್ಟು ಪ್ರತಿಭಟಿಸಿದ ಜೊಮಾಟೊ ಉದ್ಯೋಗಿಗಳು!

ಮಂಗಳೂರಿನಲ್ಲಿ ಜೊಮೆಟೊ ವಿತರಣೆ ಮಾಡುವ ಅನೀಶ್ ಮಾತನಾಡಿ, “ಇದು ಅಪಾಯವನ್ನೂ ತಂದೊಡ್ಡಬಹುದು. ಕಂಪೆನಿಯ ದಂಡಕ್ಕೆ ಹೆದರಿ ವೇಗವಾಗಿ ಅಹಾರ ವಿತರಣೆ ಮಾಡಲು ಹೊರಟರೆ ಅಪಘಾತ ಆಗುವ ಸಾಧ್ಯತೆ ಕೂಡಾ ಇರುತ್ತದೆ. ಈಗಾಗಲೆ ನೀಡಿರುವ 30 ನಿಮಿಷಗಳ ಸಮಯವೇ ಸಾಕಾಗುವುದಿಲ್ಲ. ಅದರಲ್ಲೂ ಹೊಸದಾಗಿ ಜೊಮೊಟೊಗೆ ಕೆಲಸಕ್ಕೆ ಸೇರಿದ ಕಾರ್ಮಿಕರಿಗೆ ಗೂಗಲ್‌ ಲೊಕೇಷನ್ ನೋಡಿಕೊಂಡು ಹೋದರೆ ಈಗ ಇರುವ ಸಮಯವೇ ಸಾಕಾಗುವುದಿಲ್ಲ. ಪ್ರತಿ ವಿತರಣೆಗೆ ದಂಡ ಕಟ್ಟುತ್ತಿದ್ದಾರೆ. ಇನ್ನು ಹತ್ತು ನಿಮಿಷಗಳ ನಿಯಮ ಬಂದರೆ ಅಷ್ಟೆ ಕತೆ” ಎಂದು ಹೇಳಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಸ್ವಾತಿ ಅವರು, “ಬಂಡವಾಳಶಾಹಿ ಕಂಪೆನಿಗಳು ಯಾವ ಮಟ್ಟಿಗೆ ತನ್ನ ಕಾರ್ಮಿಕರನ್ನು ಹಿಂಡಿ ಹಿಪ್ಪೆ ಮಾಡಲು ತಯಾರಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಈಗಾಗಲೆ ಈ ಕಂಪೆನಿಗಳು ತಮ್ಮ ಕಾರ್ಮಿಕರನ್ನು ‘ಪಾಲುದಾರ’ ಎಂದು ಹೇಳುತ್ತಾ ಅವರು ಕಾರ್ಮಿಕರ ಹಕ್ಕುಗಳನ್ನು ನೀಡದೆ ವಂಚಿಸುತ್ತಿದೆ. ಹತ್ತು ನಿಮಿಷದಲ್ಲಿ ಆಹಾರ ವಿತರಣೆ ಎಂಬುವುದು ಅಮಾವನೀಯ ನಡೆಯಾಗಿದೆ. ಸರ್ಕಾರ ಈ ಕಂಪೆನಿಗಳನ್ನು ಹದ್ದುಬಸ್ತಿನಲ್ಲಿ ಇಡಲು ನಿಯಮಗಳನ್ನು ರೂಪಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೊಮೊಟೊ ನಿರ್ಧಾರವನ್ನು ಕಾಂಗ್ರೆಸ್ ನಾಯಕ, ಸಂಸದ ಕಾರ್ತಿ ಚಿದಂಬರಂ ಅವರು ವಿರೋಧಿಸಿದ್ದು, ಅವಾಸ್ತವಿಕ ನಿರ್ಧಾರಗಳಿಂದ ವಿತರಣೆ ಮಾಡುವ ಕಾರ್ಮಿಕರನ್ನು ರಕ್ಷಿಸಲು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ನಿರೂಪಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ವಿತರಣಾ ಕಂಪನಿಗಳಾದ ಸ್ವಿಗ್ಗಿ ಮತ್ತು ಜೊಮಾಟೊವನ್ನು ನಿಯಂತ್ರಿಸುವಂತೆ ಸರ್ಕಾರಕ್ಕೆ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ವಾರದೊಳಗೆ ಎಲ್ಲಾ ಕೆಎಫ್‌ಸಿ ಮಳಿಗೆಗಳಲ್ಲಿ ಕನ್ನಡವಿರಲಿ: ಕರವೇ ತಾಕೀತು

“ಭಾರತದಲ್ಲಿ ಆನ್‌ಲೈನ್‌‌ ವಿತರಣೆ ಮಾಡುವ ಮಾರುಕಟ್ಟೆ(‘ಗಿಗ್ ಆರ್ಥಿಕತೆ)ಯಲ್ಲಿ 1.5 ಕೋಟಿ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು 2.5 ಕೋಟಿಯಿಂದ ಮತ್ತು ದೀರ್ಘಾವಧಿಯಲ್ಲಿ 10 ಕೋಟಿಯವರೆಗೆ ಬೆಳೆಯಲಿದೆ” ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ.

“ಕಾರ್ಮಿಕರು ದ್ವಿಚಕ್ರ ವಾಹನವನ್ನು ಓಡಿಸುತ್ತಾರೆ. ಅದು ಅವರ ವೈಯಕ್ತಿಕ ವಾಹನವಾಗಿದ್ದಾಗಿಯೂ, ವಾಣಿಜ್ಯ ವಿತರಣೆಯನ್ನು ಮಾಡುತ್ತಿದ್ದಾರೆ. ಹಿಂಬದಿಯ ಸೀಟ್‌ನಲ್ಲಿ ಅಥವಾ ಕ್ಯಾರಿಯರ್‌ನಲ್ಲಿ ಭಾರಿ ತೂಕವನ್ನು ಸಾಗಿಸುತ್ತಾರೆ. ಈ ಕಾರ್ಮಿಕರಿಗೆ ಯಾವುದೇ ರಕ್ಷಣೆ ಇಲ್ಲ. ಈ ವಾಹನಗಳನ್ನು ವಾಣಿಜ್ಯ ವಿತರಣೆಗೆ ಎಂದು ಯಾವುದೇ ವರ್ಗೀಕರಣವಾಗಿಲ್ಲ. ಅಪಘಾತ ಸಂಭವಿಸಿದರೆ ಪರಿಹಾರ ನೀಡಲು ವಿಮಾ ಕಂಪನಿಗಳು ನಿರಾಕರಿಸುತ್ತವೆ. ಆದ್ದರಿಂದ ಈ ವಿತರಣಾ ಕಂಪನಿಗಳನ್ನು ನಿಯಂತ್ರಿಸಬೇಕು’’ ಎಂದು ಹೇಳಿದ್ದಾರೆ.

ಚಿದಂಬರಂ ಅವರು ಈ ‘ಅವಾಸ್ತವಿಕ ಮತ್ತು ಅವಿವೇಕದ’ ವಿತರಣಾ ಸಮಯವನ್ನು ಹೊಂದಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಇದು ಈ ಕಾರ್ಮಿಕರ ಜೀವನವನ್ನು ದೊಡ್ಡ ಗಂಡಾಂತರಕ್ಕೆ ತಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗೋಯಲ್‌, “10 ನಿಮಿಷದ ವಿತರಣೆಯು, ಈ ಹಿಂದಿನ 30 ನಿಮಿಷದ ವಿತರಣೆಯಂತೆ ಸುರಕ್ಷಿತವಾಗಿರುತ್ತದೆ. ಇದು ನಿರ್ದಿಷ್ಟ ಹತ್ತಿರದ ಸ್ಥಳಗಳಿಗೆ ಮತ್ತು ಜನಪ್ರಿಯ ಪ್ರಮಾಣಿತ ಮೆನುವನ್ನು ಮಾತ್ರ ಹೊಂದಿದೆ” ಎಂದು ಸ್ಪಷ್ಟೀಕರಣ ನೀಡಿದ್ದಾರೆ. ತಡವಾಗಿ ಅಥವಾ ಸಮಯಕ್ಕೆ ಸರಿಯಾಗಿ ವಿತರಿಸಲು ಆಗದ ಕಾರ್ಮಿಕರಿಗೆ ಯಾವುದೇ ದಂಡ ಇರುವುದಿಲ್ಲ ಮತ್ತು ಸಮಯದ ಮಿತಿಯ ಬಗ್ಗೆ ಅವರಿಗೆ ತಿಳಿಸಲಾಗುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಆಹಾರ ನಮ್ಮ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು’: ಪ್ರತಿಭಟನಾಕಾರರ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. 10. ನಿಮಿಷದಲ್ಲಿ ಡೆಲಿವರಿ ಮಾಡೋಕೆ ಹೋದ್ರೆ 108 ನಲ್ಲಿ ವಾಪಾಸ್ ಬರ್ಬೇಕಾಗುತ್ತೆ , ಸದ್ಯ ಇಲ್ಲಾ ಎಲ್ಲ ಜೊಮಾಟೋ ಡೆಲಿವರಿ ಬಾಯ್ಸ್ ಇದನ್ನೂ ತಿರಸ್ಕಾರ ಮಾಡಿ ಇದಾರ ವಿರುದ್ಧ ಹೋರಾಟ ಮಾಡ್ಬೇಕು ,

LEAVE A REPLY

Please enter your comment!
Please enter your name here

- Advertisment -

ಸತ್ನಾದಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್: ಮಧ್ಯಪ್ರದೇಶ ಸರ್ಕಾರ ರಕ್ತ ನಿಧಿಯ ಮುಖ್ಯಸ್ಥ ಸೇರಿ ಮೂವರು ಅಮಾನತು

ಭೋಪಾಲ್: ಸತ್ನಾ ಜಿಲ್ಲೆಯ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಆಸ್ಪತ್ರೆಯಲ್ಲಿ ಆರು ಮಕ್ಕಳಿಗೆ ಎಚ್‌ಐವಿ ಪಾಸಿಟಿವ್ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರ್ಕಾರ ಗುರುವಾರ ರಕ್ತ ನಿಧಿಯ ಉಸ್ತುವಾರಿ ಮತ್ತು ಇಬ್ಬರು ಪ್ರಯೋಗಾಲಯ...

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....