Homeಮುಖಪುಟಸೆನ್ಸೋಡೈನ್‌‌ನ ತಪ್ಪು ದಾರಿಗೆಳೆಯುವ ಜಾಹೀರಾತು ನಿಷೇಧಿಸಿ 10 ಲಕ್ಷ ದಂಡವನ್ನು ವಿಧಿಸಿದ ಸರ್ಕಾರ

ಸೆನ್ಸೋಡೈನ್‌‌ನ ತಪ್ಪು ದಾರಿಗೆಳೆಯುವ ಜಾಹೀರಾತು ನಿಷೇಧಿಸಿ 10 ಲಕ್ಷ ದಂಡವನ್ನು ವಿಧಿಸಿದ ಸರ್ಕಾರ

- Advertisement -
- Advertisement -

ಟೂತ್‌ಪೇಸ್ಟ್‌ ಬ್ರಾಂಡ್‌ ಆಗಿರುವ ಸೆನ್ಸೋಡೈನ್‌‌ ತನ್ನ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಏಳು ದಿನಗಳಲ್ಲಿ ನಿಲ್ಲುಸುವಂತೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಆದೇಶಿಸಿದ್ದು, ಬ್ರಾಂಡ್‌ಗೆ 10 ಲಕ್ಷ ದಂಡ ವಿಧಿಸಿದೆ ಎಂದು ಒಕ್ಕೂಟ ಸರ್ಕಾರ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

‘ವಿಶ್ವದಾದ್ಯಂತ ದಂತವೈದ್ಯರಿಂದ ಶಿಫಾರಸು ಮಾಡಲ್ಪಟ್ಟಿದೆ’ ಮತ್ತು ‘ವಿಶ್ವದ ನಂ.1 ಸೂಕ್ಷ್ಮತೆಯ ಟೂತ್‌ಪೇಸ್ಟ್’ ಎಂದು ಹೇಳಿಕೊಳ್ಳುವ ಸೆನ್ಸೋಡೈನ್ ಉತ್ಪನ್ನಗಳ ಜಾಹೀರಾತುಗಳನ್ನು ಏಳು ದಿನಗಳೊಳಗೆ ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ ಎಂದು ಮಂಗಳವಾರ ಅಧಿಕೃತ ಪ್ರಕಟಣೆ ತಿಳಿಸಿದೆ. ಜೊತೆಗೆ 10 ಲಕ್ಷ ರೂ. ದಂಡ ಪಾವತಿಸುವಂತೆಯೂ ಪ್ರಾಧಿಕಾರ ಸೂಚಿಸಿದೆ.

CCPA ಅಂಗೀಕರಿಸಿದ ಹಿಂದಿನ ಆದೇಶದ ಪ್ರಕಾರ ವಿದೇಶಿ ದಂತವೈದ್ಯರ ಅನುಮೋದನೆಗಳನ್ನು ತೋರಿಸುವ ಜಾಹೀರಾತುಗಳನ್ನು ನಿಲ್ಲಿಸಲು ಆದೇಶಿಸಲಾಗಿದೆ.

ಇದನ್ನೂ ಓದಿ: ಮಂಗಳಸೂತ್ರ ಜಾಹಿರಾತು ವಾಪಾಸು ಪಡೆಯುವಂತೆ BJPಯಿಂದ ಬೆದರಿಕೆ

CCPA ಮುಖ್ಯಸ್ಥೆ ನಿಧಿ ಖರೆ ಅವರು, “ಇತ್ತೀಚೆಗೆ ಸೆನ್ಸೋಡೈನ್ ಉತ್ಪನ್ನಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಆದೇಶವನ್ನು ಜಾರಿಗೊಳಿಸಿದೆ. ಇದು ‘ವಿಶ್ವದಾದ್ಯಂತ ದಂತವೈದ್ಯರಿಂದ ಶಿಫಾರಸು ಮಾಡಲಾಗಿದೆ’ ಮತ್ತು ‘ವಿಶ್ವದ ನಂ 1 ಸೂಕ್ಷ್ಮತೆಯ ಟೂತ್‌ಪೇಸ್ಟ್’ ಎಂದು ಹೇಳುತ್ತದೆ” ಎಂದು ಹೇಳಿದ್ದಾರೆ.

ವಿದೇಶಿ ದಂತವೈದ್ಯರ ಅನುಮೋದನೆಯನ್ನು ತೋರಿಸುವ ಸೆನ್ಸೋಡೈನ್ ಉತ್ಪನ್ನಗಳ ಜಾಹೀರಾತನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸುವ ಆದೇಶವನ್ನು CCPA ಫೆಬ್ರವರಿ 9ರಂದು ಅಂಗೀಕರಿಸಿತ್ತು.

ದೂರದರ್ಶನ, ಯೂಟ್ಯೂಬ್, ಫೇಸ್‌ಬುಕ್ ಮತ್ತು ಟ್ವಿಟರ್ ಸೇರಿದಂತೆ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಸೆನ್ಸೋಡೈನ್ ಉತ್ಪನ್ನಗಳ ಜಾಹೀರಾತಿನ ವಿರುದ್ಧ CCPA ಸ್ವಯಂ ಪ್ರೇರಿತ ಕ್ರಮವನ್ನು ಪ್ರಾರಂಭಿಸಿದೆ. ಭಾರತದ ಹೊರಗೆ (ಯುನೈಟೆಡ್ ಕಿಂಗ್‌ಡಮ್) ಕೆಲಸ ಮಾಡುತ್ತಿರುವ ದಂತವೈದ್ಯರು ಹಲ್ಲುಗಳ ಸೂಕ್ಷ್ಮತೆಯ ವಿರುದ್ಧ ರಕ್ಷಣೆಗಾಗಿ, ‘ಸೆನ್ಸೋಡೈನ್ ರಾಪಿಡ್ ರಿಲೀಫ್’ ಮತ್ತು ‘ಸೆನ್ಸೋಡೈನ್ ಫ್ರೆಶ್ ಜೆಲ್’ ಎಂಬ ಸೆನ್‌ಸೋಡೈನ್ ಉತ್ಪನ್ನಗಳ ಬಳಕೆಯನ್ನು ಅನುಮೋದಿಸುವುದನ್ನು ಜಾಹೀರಾತುಗಳು ತೋರಿಸುತ್ತವೆ.

ಈ ಜಾಹೀರಾತುಗಳು ಸೆನ್ಸೋಡೈನ್ ಅನ್ನು ‘ವಿಶ್ವದಾದ್ಯಂತ ದಂತವೈದ್ಯರು ಶಿಫಾರಸು ಮಾಡಿದ್ದಾರೆ’, ‘ವಿಶ್ವದ ನಂ. 1 ಸೂಕ್ಷ್ಮತೆಯ ಟೂತ್‌ಪೇಸ್ಟ್’ ಮತ್ತು ‘60 ಸೆಕೆಂಡುಗಳಲ್ಲಿ ಟೂತ್‌ಪೇಸ್ಟ್‌ ಕಾರ್ಯನಿರ್ವಹಿಸುತ್ತದೆ ಎಂದು ವೈದ್ಯಕೀಯವಾಗಿ ಸಾಬೀತಾಗಿದೆ’ ಎಂದು ತೋರಿಸುತ್ತದೆ.

ಇದನ್ನೂ ಓದಿ: ‘ಸುಪ್ರೀಂಕೋರ್ಟ್‌ ಇ-ಮೇಲ್‌‌ನಲ್ಲೂ ಮೋದಿ ಜಾಹಿರಾತು!’ – ತೆಗೆದುಹಾಕಿ ಎಂದ ಸುಪ್ರೀಂ

ಕಂಪನಿಯು ಸಲ್ಲಿಸಿದ ಪ್ರತಿಕ್ರಿಯೆಯನ್ನು ಪರಿಶೀಲಿಸಿದ ನಂತರ, ‘ವಿಶ್ವದಾದ್ಯಂತ ದಂತವೈದ್ಯರು ಶಿಫಾರಸು ಮಾಡಿದ್ದಾರೆ’ ಮತ್ತು ‘ವಿಶ್ವದ ನಂ.1 ಸಂವೇದನಾಶೀಲತೆಯ ಟೂತ್‌ಪೇಸ್ಟ್’ ಎಂಬ ತನ್ನ ಪ್ರತಿಪಾದನೆಯನ್ನು ಸಾಬೀತುಪಡಿಸಲು ಕಂಪೆನಿ ಸಲ್ಲಿಸಿದ ಎರಡು ಮಾರುಕಟ್ಟೆ ಸಮೀಕ್ಷೆಗಳನ್ನು CCPA ನೋಡಿದೆ. ಆದರೆ ಜಾಹಿರಾತನ್ನು ಭಾರತದ ದಂತ ವೈದ್ಯರೊಂದಿಗೆ ಮಾತ್ರ ನಡೆಸಲಾಗಿದೆ ಎಂದು CCPA ಹೇಳಿದೆ.

“ಜಾಹೀರಾತುಗಳಲ್ಲಿ ಮಾಡಲಾದ ಪ್ರತಿಪಾದನೆಗಳನ್ನು ದೃಢೀಕರಿಸಲು ಅಥವಾ ಸೆನ್ಸೋಡೈನ್ ಉತ್ಪನ್ನಗಳನ್ನು ವಿಶ್ವದಾದ್ಯಂತ ಪ್ರಾಮುಖ್ಯತೆ ಇದೆ ಎಂದು ಸೂಚಿಸುವ ಯಾವುದೆ ಆಧಾರಗಳನ್ನು ಕಂಪೆನಿಯು ನೀಡಿಲ್ಲ. ಹೀಗಾಗಿ, ಯಾವುದೇ ಅದರ ಪ್ರತಿಪಾದನೆಯು ಸರಿಯಿಲ್ಲ” ಎಂದು ಸಚಿವಾಲಯ ಹೇಳಿದೆ.

ಟೂತ್‌ಪೇಸ್ಟ್‌ನ ಬ್ರ್ಯಾಂಡಿಂಗ್‌ನಲ್ಲಿನ ಮತ್ತೊಂದು ಪ್ರತಿಪಾದನೆ, ‘60 ಸೆಕೆಂಡುಗಳಲ್ಲಿ ಕಾರ್ಯನಿರ್ವಹಿಸುತ್ತದೆ’ ಎಂಬುವುದು. ಇದನ್ನು ಸಹಾಯಕ ಔಷಧ ನಿಯಂತ್ರಕರು, ರಾಜ್ಯ ಪರವಾನಗಿ ಪ್ರಾಧಿಕಾರ, ದಾದ್ರಾ ಮತ್ತು ನಗರ ಹವೇಲಿಯ ಸಿಲ್ವಾಸ್ಸಾದಿಂದ ತನಿಖೆ ನಡೆಸಲಾಗುತ್ತಿದೆ. ಇವುಗಳು ಕಂಪೆನಿಯ ಪ್ರತಿಪಾದನೆಯನ್ನು ಮೌಲ್ಯಮಾಪನ ಮಾಡುವ ವೈಜ್ಞಾನಿಕ ಸಂಸ್ಥೆಯಾಗಿದೆ ಎಂದು CCPA ಆದೇಶವನ್ನು ಉಲ್ಲೇಖಿಸಿ ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ.

ಸಹಾಯಕ ಔಷಧ ನಿಯಂತ್ರಕರು ಸಿಸಿಪಿಎಗೆ ಪತ್ರ ಬರೆದಿದ್ದು, ಕಂಪನಿಯು ಮಾಡಿರುವ ಪ್ರತಿಪಾದನೆಗಳು ತನಿಖೆಯಲ್ಲಿವೆ ಮತ್ತು ವಿಚಾರಣೆಯ ಪ್ರಕ್ರಿಯೆಯ ನಂತರ ಮುಂದಿನ ಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಾಮ ಮಂದಿರದ ಜಾಹಿರಾತು ಹಾಕದಂತೆ ಒತ್ತಡ ಹಾಕಿದ್ದು ಮುಸ್ಲಿಂ ಸಂಘಟನೆಗಳು ಮಾತ್ರವೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...