Homeಕರ್ನಾಟಕಊರೂರು ನುಂಗುತ್ತಿರುವ ಕಡಲ ಮುಂದೆ ಆಡಳಿತಗಾರರ ಪಿಟೀಲು!

ಊರೂರು ನುಂಗುತ್ತಿರುವ ಕಡಲ ಮುಂದೆ ಆಡಳಿತಗಾರರ ಪಿಟೀಲು!

- Advertisement -
- Advertisement -

 ಶುದ್ದೋಧನ|

ಅರಬ್ಬೀ ಸಮುದ್ರದ ತೀರದಲ್ಲಿರುವ ಉತ್ತರ ಕನ್ನಡದ ಐದೂ ತಾಲ್ಲೂಕುಗಳಲ್ಲಿ ಕಡಲು ಕೊರೆತ ಭೂತ ಬೆನ್ನಿಗೆ ಬಿದ್ದು ಕಾಡುತ್ತಿದೆ. ಮಳೆಗಾಲ ಬಂತೆಂದರೆ ಸಾಕು; ಕಡಲತಡಿಯ ಮಂದಿ ಜೀವಭಯದಿಂದ ತತ್ತರಿಸುತ್ತಾರೆ. ಕಡಲಿನ ಹೆಬ್ಬಲೆಗಳು ಯಾವ ಗಳಿಗೆಯಲ್ಲಿ ತೋಟ-ಮನೆಗೆ ನುಗ್ಗಿ ಆಪೋಷನ ಪಡೆಯುತ್ತವೆಯೋ ಎಂಬ ಚಡಪಡಿಕೆ ಶುರುವಾಗುತ್ತದೆ. ರಾತ್ರಿಯಿಡೀ ನಿದ್ದೆ ಮಾಡದೆ ಎದ್ದು ಕೂರುವ ಪರಿಸ್ಥಿತಿ. ಮಳೆಗಾಲ ಎಂದರೆ ಸಮುದ್ರ ದಂಡೆಯ ಜನರ ಪಾಲಿಗೆ ಬದುಕು ಬರ್ಬಾದ್ ಆಗುವ ಆತಂಕದ ಕಾಲ!! ಈ ಕಡಲುಕೊರೆತವನ್ನು ಜಿಲ್ಲೆಯ ಆಳುವ ವರ್ಗ ಗಂಭೀರವಾಗಿ ಪರಿಗಣಿಸಿಲ್ಲ. ಈ ಎರಡು ದಶಕದಲ್ಲಿ ಕಡಲುಕೊರೆತ ಕಾಮಗಾರಿ ಹೆಸರಲ್ಲಿ ಕೋಟಿಕೋಟಿ ನುಂಗಿ ಕುಬೇರರಾದ ಗುತ್ತಿಗೆದಾರ-ಇಂಜಿನಿಯರ್-ರಾಜಕಾರಣಿಗಳ ದೊಡ್ಡ ದಂಡೇ ಇದೆ.

ಜಿಲ್ಲೆಯ ಮಂತ್ರಿ, ಸಂಸದ-ಶಾಸಕರಿಗೆ ತಂತಮ್ಮ ಕ್ಷೇತ್ರದ ಕಡಲು ಕೊರೆತ ಶಾಶ್ವತವಾಗಿ ನಿಲ್ಲಿಸಿ ಜನರಿಗೆ ನೆಮ್ಮದಿ ಕೊಡಬೇಕೆಂಬ ಕನಿಷ್ಠ ಕಾಳಜಿಯೂ ಇಲ್ಲ. ಬೇಸಿಗೆಯಲ್ಲೇ ಸಮುದ್ರ ದಾಳಿ ಆಗಬಹುದಾದ ಏರಿಯಾದ ಸ್ಪಷ್ಟ ಕಲ್ಪನೆ, ಮಾಹಿತಿಯಿದ್ದರೂ ಜಿಲ್ಲಾಡಳಿತ ಉದಾಸೀನದಿಂದಲೇ ಉಳಿದುಬಿಡುತ್ತದೆ. ಯಾವಾಗ ಮಳೆ ಜೋರಾಗುತ್ತದೋ ಆಗ ಅಲೆಗಳ ಅಬ್ಬರ ಕಡಲತಡಿಯವರನ್ನು ದಿಕ್ಕೆಡಿಸುತ್ತದೆ. ಜನರ ಚೀತ್ಕಾರ ಆರಂಭವಾದಾಗ ಸಂಬಂಧಿಸಿದ ಅಧಿಕಾರಿ-ಶಾಸಕ-ಮಂತ್ರಿಗಳು ಕಣ್ಣೊರೆಸುವ “ಆಟ” ಆರಂಭಿಸುತ್ತಾರೆ. ಸಮುದ್ರಕ್ಕೆ ಕಲ್ಲುಹಾಕುವ ಬೋಗಸ್ ಕಾಮಗಾರಿ ಮಾಡಿ ಸಿಕ್ಕಷ್ಟು ಸ್ವಾಹಾ ಮಾಡುತ್ತಾರೆ. ಮುಂದಿನ ವರ್ಷಕ್ಕೆ ಪಿಡುಗು ಹಾಗೇ ಉಳಿಸುತ್ತಾರೆ.
ಪಕ್ಕದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಡಲ್ಕೊರೆತದ ಹಾವಳಿ ಇಲ್ಲವೆಂದಲ್ಲ. ಆದರೆ ಅಲ್ಲಿಯ ಆಳುವವರ್ಗ ಸವiಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ವಿಶೇಷ ಅನುದಾನ ತಂದು ತೊಂದರೆ ಮರುಕಳಿಸದಂತೆ ನಿಗಾ ವಹಿಸುತ್ತಿದೆ. ಇಂಥ ಇಚ್ಛಾಶಕ್ತಿ ಉತ್ತರಕನ್ನಡವು ಹೆತ್ತ ಜನಪ್ರತಿನಿಧಿ ಭೂಪರಿಗಿಲ್ಲ! ಹೀಗಾಗಿ ಜನಸಾಮಾನ್ಯರ ಜೀವನಕ್ಕಾಧಾರವಾದ ಗದ್ದೆ-ತೋಟ-ಬಾವಿ-ಕಸುಬಿಗೆಲ್ಲಾ ಉಪ್ಪು ನೀರು ನುಗ್ಗಿ ಬಂಜರಾಗುತ್ತಿದೆ; ಮನೆಗಳು ಕಣ್ಣೆದುರೇ ಕಡಲಲ್ಲಿ ಕರಗುತ್ತಿವೆ. ಕಲ್ಲು ಹೃದಯದ ಪಡಪೋಸಿ ಜನಪ್ರತಿನಿಧಿಗಳು ಏನೂ ಆಗಿಲ್ಲ ಎಂಬಂತೆ ಆರಾಮಾಗಿದ್ದರೆ.

ಆಳುವ ಮಂದಿಯ ಉದಾಸೀನ-ಹೊಣೆಗೇಡಿತನದಿಂದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಕಡಲ್ಕೊರೆತದ ಆರ್ಭಟ ಜೋರಾಗುತ್ತಲೇ ಇದೆ. ಕಳೆದ ಮೂರು ವರ್ಷದಿಂದ ಅಂದಿನ-ಇಂದಿನ ಸಿಎಂಗಳು, ಸಂಸದರು, ಮಂತ್ರಿಗಳು, ಎಮ್ಮೆಲ್ಲೆಗಳಿಗೆಲ್ಲಾ ತಮ್ಮನ್ನು ಸಮುದ್ರದ ಬಾಯಿಂದ ಬಚಾವು ಮಾಡಿರೆಂದು ಮನವಿ ಮೇಲೆ ಮನವಿ ಮಾಡಿಕೊಳ್ಳುತ್ತಲೇ ಬಂದಿರುವ ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದ ತೊಪ್ಪಲಕೇರಿ ಕಡಲು ಕಿನಾರೆಯ ಮಂದಿ ಅಳಲು ಅರಣ್ಯ ರೋದನದಂತೆ ಆಗಿರುವುದು ವ್ಯವಸ್ಥೆಯ ಕ್ರೌರ್ಯಕ್ಕೆ ಹಿಡಿದ ಕನ್ನಡಿಯಂತಿದೆ.

ತೊಪ್ಪಲಕೇರಿಯ ಮನೆ-ಮರ-ಬಾವಿಗಳನ್ನೆಲ್ಲ ಸಮುದ್ರ ಒಂದೊಂದಾಗಿ ನುಂಗಲು ಶುರುಮಾಡಿ ಹಲವು ವರ್ಷವಾಗಿದೆ. ಮೂರು ವರ್ಷದ ಹಿಂದೆ ಅಲೆಗಳ ಆರ್ಭಟಕ್ಕೆ ಆ ಪುಟ್ಟ ಕೇರಿ ತತ್ತರಿಸಿಹೋಯಿತು. ಕಂಗಾಲಾದ ಜನ ಕಾಪಾಡಿ ಎಂದು ಜಿಲ್ಲಾಧಿಕಾರಿ, ಅಂದಿನ ಶಾಸಕಿ ಶಾರದಾ ಶೆಟ್ಟಿ, ಇಂದಿನ ಶಾಸಕ ದಿನಕರ ಶೆಟ್ಟಿ, ಸಂಸದ ಅನಂತ್ಮಾಣಿ, ಮಂತ್ರಿ ಮಹಾಶಯ ದೇಶ್‍ಪಾಂಡೆ, ಹಿಂದಿನ ಸಿಎಂ ಸಿದ್ಧು, ಇಂದಿನ ಸಿಎಂ ಕುಮ್ಮಿ ಕೈ-ಕಾಲು ಹಿಡಿದು ಅಂಗಲಾಚಿದರೂ ಪ್ರಯೋಜನವೇನೂ ಆಗಲಿಲ್ಲ. ರಾಜ್ಯದ ಮಾನವ ಹಕ್ಕು ಆಯೋಗಕ್ಕೆ ಪರಿಸ್ಥಿತಿಯ ಗಂಭೀರತೆ ಬಗ್ಗೆ ಮನವಿ ಕಳಿಸಿದರು. ದುರಂತವೆಂದರೆ ಮಾನವಹಕ್ಕು ಆಯೋಗಕ್ಕೂ ಈ ಮಂದಿಯ ಸಾವುಬದುಕಿನ ಹೋರಾಟ ಅರ್ಥವಾಗಲಿಲ್ಲ.

ತೊಪ್ಪಲಕೇರಿಯ ಜನರ ದೂರು ಸರ್ಕಾರಿ ಕಚೇರಿಗಳ ಟೇಬಲ್‍ನಿಂದ ಟೇಬಲ್‍ಗೆ ಹಾರಾಡಿತೇ ಹೊರತು ಜನಪರವಾಗಿ ಯಾರೂ ಚಿಂತಿಸಲಿಲ್ಲ. ಕೊನೆಗೊಮ್ಮೆ ಶಾಸಕ, ಎಸಿ, ತಹಸೀಲ್ದಾರ್ ತೊಪ್ಪಲಕೇರಿಗೆ ಬರುವುದು ಅನಿವಾರ್ಯವಾಯ್ತು. ಬಂದವರು ಜನರಿಗೆ ಸಾಂತ್ವನ ಹೇಳಲಿಲ್ಲ; ಪುನರ್ವಸತಿ ಬಗ್ಗೆ ಮಾತಾಡಲಿಲ್ಲ; ಸಮುದ್ರ ಕೊರೆತ ತಡೆಯುವ ಕಾಮಗಾರಿ ಆರಂಭಿಸುವ ಬಗ್ಗೆಯೂ ಭರವಸೆ ಕೊಡಲಿಲ್ಲ. ಬದಲಿಗೆ ನೊಂದವರನ್ನು ಇನ್ನಷ್ಟು ಧೃತಿಗೆಡಿಸುವ ಮಾತಾಡಿದರು. ಕಾಮಗಾರಿಗೆ ಹಣಕಾಸಿನ ಅಡಚಣೆಯಿದೆ; ಬಜೆಟ್‍ನಲ್ಲಿ ತೊಪ್ಪಲಕೇರಿ ಕಡಲ್‍ಕೊರೆತ ಸೇರಿಲ್ಲ ಎಂದು ಹೊಣೆಗೇಡಿತನ ಪ್ರದರ್ಶಿಸಿ ಹೋದರು.

ತೊಪ್ಪಲಕೇರಿಯ ಮಂದಿಯ ಅಳಲು ಹೃದಯವಿದ್ರಾವಕವಾಗಿದೆ. ರಾತ್ರಿ ಮಲಗಿದಾಗ ಮನೆ ಎಷ್ಟೊತ್ತಿಗೆ ಅಲೆಗಳ ಹೊಡೆತಕ್ಕೆ ಉರುಳುತ್ತದೋ ಗೊತ್ತಾಗುತ್ತಿಲ್ಲ. ಇಂಥ ಭಯದಲ್ಲಿ ಹೆಂಗಸರು, ಮಕ್ಕಳನ್ನು ಇಟ್ಟುಕೊಂಡು ರಾತ್ರಿ ಹೇಗೆ ಕಳೆಯಬೇಕು? ಪತ್ರಿಕೆ-ಟಿವಿಯಲ್ಲಿ ನಮ್ಮ ಪರಿಸ್ಥಿತಿ ಸುದ್ದಿಯಾದರೂ ಜಿಲ್ಲಾಡಳಿತಕ್ಕೆ, ಶಾಸಕನಿಗೆ, ಕನಿಷ್ಟ ಮಾನವ ಹಕ್ಕು ಆಯೋಗಕ್ಕೂ ಎಚ್ಚರ ಆಗಿಲ್ಲ ಎಂದು ಕಂಗೆಟ್ಟಿರುವ ಮಂದಿ ಹೇಳುತ್ತಾರೆ. ಮಾನವ ಹಕ್ಕು ಆಯೋಗದ ನಿರ್ಲಕ್ಷ ಧೋರಣೆಗೆ ಬೇಸತ್ತರೂ ನೊಂದವರು ಸರಣಿ ಪತ್ರ ಬರೆಯುತ್ತಲೇ ಇದ್ದರು. ಕೊನೆಗೊಂದು ದಿನ “ನಾವೆಲ್ಲ ಸತ್ತ ನಂತರ ಲೆಕ್ಕ ಮಾಡಲು ಬರ್ತೀರಾ, ಸರ್…” ಎಂದೂ ಪತ್ರ ಬರೆದರು. ಆದರೂ ಎಮ್ಮೆಲ್ಲೆಯಿಂದ ಹಿಡಿದು ಮುಖ್ಯಮಂತ್ರಿವರೆಗಿನ ಎಲ್ಲರೂ ಕಣ್ಣು-ಬಾಯಿ ಮುಚ್ಚಿಕೊಂಡೇ ಇದ್ದಾರೆ.

ಈಗ ತೊಪ್ಪಲಕೇರಿಯ ಕಡಲ ಗುಮ್ಮದ ಅಂಜಿಕೆಯಲ್ಲೇ ದಿನ ಕಳೆಯುತ್ತಿರುವ ಮಂದಿ ಕೊನೇ ಪ್ರಯತ್ನವೆಂದು ಪ್ರಧಾನಿ ಮೋದಿಗೆ ಕಾಪಾಡುವಂತೆ ಟ್ವೀಟ್ ಮಾಡಿದ್ದಾರೆ. ನಮೋ ಆ್ಯಪ್ ಮೂಲಕ ದೂರು ಕಳಿಸಿದ್ದಾರೆ. ಸಿಎಂ ಆಫೀಸಿನಲ್ಲೂ ಆ ಟ್ವೀಟ್‍ಗೆ ಸ್ಪಂದನೆ ಬಂದಿಲ್ಲ. ಕಡಲು ಮಾತ್ರ ಮುನ್ನುಗ್ಗಿ ಬರುತ್ತಲೇ ಇದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...