ಇವಿಷ್ಟೂ ಕನ್ನಡದ ನ್ಯೂಸ್ ಚಾನಲ್ ಒಂದರ ಸುದ್ದಿ ಶೀರ್ಷಿಕೆಗಳು. ಸ್ಪೆಲ್ಲಿಂಗ್ ಮಿಸ್ಟೇಕ್ಸ್ ಅವರವೇ. ಓದಿ ಪಾವನರಾಗಿ.
1. ದತ್ತ ಮಾಂಡ್ರೇಯನಿಗೂ ಎದುರಾಯ್ತು ಜಲಕಂಟಕ
2. ಕೊಲ್ಲಾಪುರದ ಮಹಾಲಕ್ಷ್ಮಿಯನ್ನೂ ಬಿಡದ ಜಲರಾಕ್ಷಸ
3. ಜನ, ಜಾನುವಾರು, ದೇವರಿಗೂ ಜಲಕಂಟಕ
4. ಕೃಷ್ಣಾರ್ಭಟಕ್ಕೆ ಕೊಚ್ಚಿಹೋಗ್ತಾನಾ ಬಸವೇಶ್ವರ?
5. ದೇವರ ನಾಡಿಗೆ ಮತ್ತೆ ವರುಣಾಘಾತ!
6. ದೇವರಿಗೂ ದಿಗ್ಬಂಧನ ಮುಳುಗಿದೆ 20 ದೇವಸ್ಥಾನ
7. ಅಯ್ಯೋ ದೇವರೇ!
8. ಕೊಡಗಿಗೆ ಮತ್ತೆ ‘ಆಗಸ್ಟ್’ ಕಂಟಕ
9. ಉತ್ತರ, ದಕ್ಷಿಣ, ಪಶ್ಚಿಮ ವಿಲವಿಲ
10. 16 ಜನ, 338 ಗ್ರಾಮಗಳನ್ನು ನುಂಗಿದ ಜಲರಾಕ್ಷಸ
11. ಕರ್ನಾಟಕ ಪ್ರವಾಹಕ್ಕೆ ಮಹಾಲಕ್ಷ್ಮಿ, ಸುಬ್ರಹ್ಮಣ್ಯ ಗೋವಿಂದ!
12. ದೇವರೇ ಕಾಪಾಡು.. ಮುಳುಗುತ್ತಿದೆ ಕರುನಾಡು!
13. ನೀನೇ ಮುಳುಗಿದ್ರೆ ಕಾಪಾಡೋರು ಯಾರು?
14. ಜಲದಿಗ್ಬಂಧನದಲ್ಲಿದ್ದಾನೆ ಸಾಯಿಬಾಬಾ
15. ನಂಜುಂಡನಿಗೂ ದಿಗ್ಬಂಧನ
16. ಮುಳುಗುತ್ತಿದೆ ಅರ್ಧ ಕರ್ನಾಟಕ
17. ಅವನೇನಾ ಪ್ರಳಯಾಂತಕ?
18. ಮಹಾ ಪ್ರಳಯ ಸೃಷ್ಟಿಸಿದ್ದು ಅವನೇನಾ?
19. ಆಕಾಶದ ಹಿಂದೆ ಕಂಡ ವಿಚಿತ್ರ ಬೆಳಕಿನ ಹಿಂದಿದ್ಯಾ ರಹಸ್ಯ?
20. ಜಲಪ್ರಳಯ, ವಿಚಿತ್ರ ಬೆಳಕು, ಆ ಅಗೋಚರ ಶಕ್ತಿ!
22. ಪ್ರಕೃತಿಯನ್ನು ಸ್ವಾಹಾ ಮಾಡಲು ಕಾಯ್ತಿದ್ದಾನಾ ಆತ?
23. ಮದೋನ್ಮತ್ತನಾಗಿ ಮೆರೀತಿದ್ದಾನೆ ಮಳೆರಾಕ್ಷಸ
24. ವಿಶ್ವ ನಾಶಕ್ಕೆ ಟೊಂಕ ಕಟ್ಟಿ ನಿಂತವನಾರು?
25. ಸಾವಿನ ಕೇಕೆ ಹಾಕಿದ ರಾಕ್ಷಸ ಮಳೆ
26. ಸ್ವರ್ಗಲೋಕ ಈಗ ನರಕ
27. ಕುಸಿಯುತ್ತಿದೆ ಬೆಟ್ಟಗಳ ಸಾಲು
28. ಆನೆಗಳನ್ನೂ ಬಿಡದ ನೀರು
29. ಮಹಾಮಳೆಗೆ ಒಂದೇ ಮಳೆಗೆ 34 ಬಲಿ
30. ಸಂತ್ರಸ್ತರನ್ನು ಚದುರಿಸಲು ಲಾಠಿ ಬೀಸಿದ ಪೋಲೀಸರು!
31. ಗಂಜಿಕೇಂದ್ರದಲ್ಲಿ ಹೈಡ್ರಾಮಾ
32. ದೇವರನ್ನೇ ನಾಶ ಮಾಡಲು ಹೊರಟವನು ಇವನೇನಾ?
33. ಪ್ರಕೃತಿಯನ್ನು ನಾಶ ಮಾಡಲು ಮುನ್ಸೂಚನೆ ನೀಡಿತಾ ಆ ಶಕ್ತಿ?
34.ಆಶ್ಲೇಷ ಬಲಿ!
ಪ್ರವಾಹದಂತದ ಭೀಕರ ಪರಿಸ್ಥಿತಿಯಲ್ಲಿ ಈ ರೀತಿ ಮನಬಂದಂತೆ ವರ್ತಿಸುವುದು ಯಾರಿಗೂ ಶೋಭೆ ತರುವ ಕೆಲಸವಲ್ಲ. ಪ್ರವಾಹದ ಅಪಾಯಗಳು, ಮುನ್ನೆಚ್ಚರಿಕೆಗಳು, ಪರಿಹಾರ ಕಾರ್ಯಕಗಳ ಕುರಿತು ಸಂಯಮದ ವರದಿಗಾರಿಕೆ ಬೇಕಾಗುತ್ತದೆ. ಅದನ್ನು ನಮ್ಮ ಕನ್ನಡದ ಚಾನೆಲ್ ಗಳು ಯಾವಾಗ ಕಲಿಯುತ್ತವೆಯೋ ಗೊತ್ತಿಲ್ಲ.



ಮಾಮೇರಿ ಮಳೆಗೆ ನಾಡು ತತ್ತರ!