Homeಅಂಕಣಗಳುರಾಷ್ಟ್ರ ಸಾಗಿದ ದೂರವೆಷ್ಟು?

ರಾಷ್ಟ್ರ ಸಾಗಿದ ದೂರವೆಷ್ಟು?

- Advertisement -
- Advertisement -

ಮಹಾತ್ಮಗಾಂಧಿಯವರ ನೇತೃತ್ವದಲ್ಲಿ ಭಾರತದ ಪ್ರಜೆಗಳು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ದೇಶ ಕೊನೆಗೂ ಸ್ವತಂತ್ರವಾಯಿತು. ನಮ್ಮದೇ ರಾಜ್ಯಾಂಗ ರಚನೆಯಾಯಿತು. ಭಾರತ ಒಂದು ರಿಪಬ್ಲಿಕ್ ಆಯಿತು, ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿ ಎಲ್ಲ ರಾಜ್ಯಗಳು ಸ್ವತಂತ್ರವಾಗಿ ರಾಜ್ಯಾಂಗದ ಆಶಯಗಳಿಗನುಸಾರ ಕಾರ್ಯನಿರ್ವಹಿಸುತ್ತಾ ಅಧಿಕಾರ ಪಡೆದವು. ಸ್ವಾತಂತ್ರ್ಯ ಬಂದಾಗ ಭಾರತದ ಶೇ.20ರಷ್ಟು ಜನ ಮಾತ್ರ ಅಕ್ಷರಜ್ಞಾನ ಉಳ್ಳವರಾಗಿದ್ದರು. ಆದರೂ ಭಾರತದ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲ ಪುರುಷರಿಗೂ ಸ್ತ್ರೀಯರಿಗೂ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ಕಲ್ಪಿಸಲಾಯಿತು. ಭಾರತದ ಈ ಮತದಾರರು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವುದರಲ್ಲಿ ಯಶಸ್ವಿಯಾದರು. ಅಂದು ಭಾರತದ 10 ಜನರಲ್ಲಿ 8 ಜನ ಬಡತನದ ಸೀಮಾರೇಖೆಯ ತಳಗಿದ್ದರು.
ಈ 70 ವರ್ಷಗಳಲ್ಲಿ ಅನೇಕ ವಿಚಾರಗಳಲ್ಲಿ ಭಾರತ ಪ್ರಗತಿ ಹೊಂದಿದೆ. ಚಂದ್ರಮಂಡಲಕ್ಕೆ ಲಗ್ಗೆ ಹಾಕಿದ್ದೇವೆ. ಸೂರ್ಯನ ಹೊರವಲಯದವರೆಗೆ ಹೋಗಿ ಅಧ್ಯಯನ ನಡೆಸುವ ಸಾಹಸಕ್ಕೆ ಕೈಹಾಕಿದ್ದೇವೆ. ಇಂದಿಗೂ ಭಾರತದಲ್ಲಿ ಶೇ.18ರಷ್ಟು ಜನ ಬಡತನದ ಸೀಮಾರೇಖೆಯ ತಳಗೆ ವಾಸಿಸುತ್ತಿದ್ದಾರೆ. ಅಂದರೆ ಇವರಿಗೆ ಎರಡು ಹೊತ್ತಿನ ಊಟ ಕೂಡ ದೊರೆಯುತ್ತಿಲ್ಲ. 13 ಪಂಚವಾರ್ಷಿಕ ಯೋಜನೆಗಳು ಜಾರಿಗೊಂಡಂತಾದರೂ ಬಡವ ಮತ್ತಷ್ಟು ಬಡವನಾಗಿದ್ದಾನೆ. ಶೇ.10ರಷ್ಟು ಜನರಿಗೆ ಪಂಚವಾರ್ಷಿಕ ಯೋಜನೆಗಳ ಲಾಭ ಲಭ್ಯವಾಗಿದೆ. ಪ್ರಧಾನಿ ಜವಾಹರಲಾಲ್ ನೆಹರು ಅವರು 1964ರಲ್ಲಿ ಹೋಮಿಬಾಬಾ ಅವರ ಮುಂದಾಳತ್ವದಲ್ಲಿ ಭಾರತ ಸ್ಪರ್ಧಾತ್ಮಕವಾಗಿ ಅನುಕೂಲಗಳನ್ನು ಪಡೆಯಲು ಸಮಿತಿಯೊಂದನ್ನು ರಚಿಸಿದರು. ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್‍ಗಳನ್ನು ಅಭಿವೃದ್ಧಿಪಡಿಸಲು ಸಮಿತಿ ನಿರ್ಧರಿಸಿತು. ಆ ಮೂಲಕ ಭಾರತ ಆರ್ಥಿಕವಾಗಿ ಸದÀೃಢ ರಾಷ್ಟ್ರವಾಗುವ ಅವಕಾಶವಿದೆಯೆಂದು ಸಮಿತಿ ಅಭಿಪ್ರಾಯಪಟ್ಟಿತು. ಭಾರತ ಸಾಫ್ಟ್‍ವೇರ್ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಯಿತು. ಸಾಫ್ಟ್‍ವೇರ್ ಉದ್ಯಮದಲ್ಲಿ ಭಾರತ ದಾಪುಗಾಲು ಹಾಕಿತು. ಲಕ್ಷಾಂತರ ಯುವಕ ಯುವತಿಯರಿಗೆ ಈ ಮೂಲಕ ಉದ್ಯೋಗಾವಕಾಶ ದೊರೆಯಿತು.
1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಅದೇ ಕಾಲದಲ್ಲಿ ತುಳಿತಕ್ಕೆ ಒಳಗಾಗಿದ್ದ ಇಂಡೋನೇಷಿಯಾ, ಮೈನ್‍ಮಾರ್, ಶ್ರೀಲಂಕಾ, ದಕ್ಷಿಣ ಕೊರಿಯಾ, ಜೋರ್ಡಾನ್, ಇಸÉ್ರೀಲ್, ಚೈನಾ ಸ್ವಾತಂತ್ರ್ಯ ಪಡೆದವು. ಎರಡನೇ ಮಹಾಯುದ್ಧದಿಂದ ಜಪಾನ್ ಮತ್ತು ಜರ್ಮನಿ ಸಂಪೂರ್ಣ ನೆಲಕಚ್ಚಿದ್ದವು. ಮುಂದಿನ ದಶಕದಲ್ಲಿ ಸಿಂಗಪೂರ್ ಮತ್ತು ಮಲೇಷಿಯಾಗಳಲ್ಲಿ ಸ್ವತಂತ್ರ ದೇಶಗಳಾದವು.
ಭಾರತೀಯರ ಸರಾಸರಿ ಆಯಸ್ಸು ಈಗ 60 ವರ್ಷಗಳಾದರೆ ಇಂಡೋನೇಷಿಯಾದಲ್ಲಿ ಸರಾಸರಿ ಆಯಸ್ಸು ಈಗ 80ಕ್ಕೆ ಮೇಲ್ಪಟ್ಟು. ಮಾನವ ಸಂಪನ್ಮೂಲ ಅಭಿವೃದ್ಧಿಯ ವಿಚಾರದಲ್ಲಿ ಇಂಡೋನೇಷಿಯಾ, ದಕ್ಷಿಣ ಕೊರಿಯಾ, ಮಲೇಷಿಯಾ ಮತ್ತು ಸಿಂಗಪುರ್‍ಗಳಿಗಿಂತ ಭಾರತ ಬಹಳ ಹಿಂದೆ ಬಿದ್ದಿದೆ. 168 ರಾಷ್ಟ್ರಗಳ ಪೈಕಿ ಭಾರತ 131ನೇ ಸ್ಥಾನದಲ್ಲಿದೆ. ಸಿಂಗಾಪುರದ ಸರಾಸರಿ ಆದಾಯ ಭಾರತದ 25 ಪಟ್ಟು. ಏಷ್ಯಾದಲ್ಲಿ ಅತಿಕಡಿಮೆ ಬಡತನವಿರುವ ರಾಷ್ಟ್ರ ಮಲೇಷಿಯಾ. 1990ರವರೆಗೆ ಇಂಡೋನೇಷಿಯಾ ಶಿಕ್ಷಣ ಮತ್ತು ಆರೋಗ್ಯ ಬಾಬಿನಲ್ಲಿ ತುಂಬ ಹಣ ವ್ಯಯಮಾಡಿತು. ಅದರ ಫಲವಾಗಿ ಈಗ ಬಡತನ ಶೇ.10ಕ್ಕೆ ಇಳಿದಿದೆ. 70ರ ದಶಕದಲ್ಲಿ ಭಾರತ ಮತ್ತು ಚೈನಾದ ಸರಾಸರಿ ಆದಾಯ ಒಂದೇ ಆಗಿತ್ತು. ಈಗ ಚೈನಾದ ಸರಾಸರಿ ಆದಾಯ ಆಗಿನ ಹೋಲಿಕೆಯಲ್ಲಿ ಹನ್ನೆರಡು ಪಟ್ಟು ಹೆಚ್ಚಿದೆ. ಬೆಟ್ಟದ ತುದಿ ಮುಟ್ಟಬೇಕೆಂಬ ಕನವರಿಕೆಯೇ ಬೇರೆ, ಬೆಟ್ಟದ ಶಿಖರ ಏರಿ ಅದರ ಸುಖ ಅನುಭವಿಸುವುದೇ ಬೇರೆ.
ಕಾನೂನಿಗೆ ವಿರುದ್ಧವಾಗಿ ಜಮೀನು ಕಬಳಿಸುವುದು, ಅಕ್ರಮದ ಡಿನೋಟಿಫಿಕೇಷನ್ ಹೊರಡಿಸುವುದು, ಸೈನ್ಯಕ್ಕೆ ಆಯುಧಗಳನ್ನು ಕೊಳ್ಳುವುದರಲ್ಲೂ ಲಂಚ ನುಂಗುವುದು, ತರಂಗಾಂತರಗಳನ್ನು ನೀತಿ ನಿಯಮವಿಲ್ಲದೆ ಮಾರಾಟ ಮಾಡುವುದು. ಆಟ, ಮನರಂಜನೆ, ಕ್ರೀಡೆಗಳ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ಸೂರೆಮಾಡುವುದು. ಅದಾನಿ, ಅಂಬಾನಿ ಮುಂತಾದ ಭ್ರಷ್ಟ ಉದ್ಯಮಿಗಳ ಸಾಲಮನ್ನಾ ಮಾಡುವುದು… ಇವು ಇಂದಿನ ಪ್ರಚಲಿತ ವಿದ್ಯಮಾನಗಳು. ಬಡತನ ನಿವಾರಣೆಯ ಯೋಜನೆಗಳ ಹೆಸರಿನಲ್ಲಿ ಲೂಟಿ ಅವ್ಯಾಹತವಾಗಿ ನಡೆಯುತ್ತಿದ್ದು, ಪ್ರತಿವರ್ಷ ಅಧಿಕಾರಿಗಳು ಸುಮಾರು 90000 ಕೋಟಿ ರೂ.ಗಳ ಲೂಟಿ ಮಾಡುತ್ತಾರೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಹೆಸರಿನಲ್ಲಿ ಒಂದು ಸಾವಿರ ಕೋಟಿಗಿಂತ ಹೆಚ್ಚಿಗೆ ರಾಷ್ಟ್ರ ಖರ್ಚು ಮಾಡುತ್ತದೆ. ರಾಷ್ಟೀಯ ಆರೋಗ್ಯ ಯೋಜನೆ ನೆಪದಲ್ಲಿ 1000 ಕೋಟಿ ಖರ್ಚು ಬೀಳುತ್ತದೆ. ಬಂಡವಾಳ ಪರದೇಶಗಳಿಗೆ ಹಾರಿಹೋಗುವುದು 462 ಬಿಲಿಯನ್ ರೂಗಳು. ಭ್ರಷ್ಟ ಉನ್ನತಾಧಿಕಾರಿಗಳು ಕದಿಯುವುದು 92000 ಕೋಟಿ ರೂಗಳು. ಇವೆಲ್ಲ ಕಪ್ಪು ಹಣವಾಗಿ ಪರಿವರ್ತನೆಯಾಗುತ್ತದೆ. ಅಧಿಕಾರದ ದುರುಪಯೋಗದ ಕಾರಣದಿಂದ, ಮಂತ್ರಿಗಳು, ಅಧಿಕಾರಿಗಳು, ಶಾಸಕರುಗಳ ಲೂಟಿಯ ಕಾರಣದಿಂದ ದೇಶದ ಆರ್ಥಿಕ ಪ್ರಗತಿ ಹಿಮ್ಮೆಟ್ಟುತ್ತಿದೆ. ಇದು ವಾಸ್ತವ.
ಹಣಕಾಸಿನ ವಹಿವಾಟನ್ನು ನಮ್ಮ ಸರ್ಕಾರಗಳು ಸರಿಯಾಗಿ ನಿರ್ವಹಿಸುತ್ತಿಲ್ಲ. ರಾಷ್ಟ್ರದ ಆದಾಯದ 1/6ರಷ್ಟು ಹಣ ಭಾರತದ 2/3ರಷ್ಟು ಜನಸಂಖ್ಯೆಗೆ ಹಂಚಿಕೆಯಾಗುತ್ತಿದೆ. 5/6ರಷ್ಟು ಆದಾಯ 1/3 ರಷ್ಟು ಜನರ ಪಾಲಾಗುತ್ತದೆ. ಸರ್ಕಾರದ ಒಟ್ಟು ಆದಾಯಕ್ಕೂ ಮಾಡುವ ಖರ್ಚಿಗೂ ಮಧ್ಯೆ ದೊಡ್ಡ ಕಂದರ ನಿರ್ಮಾಣವಾಗಿದೆ. ಸರ್ಕಾರದ ಸಾಧನೆಗೂ ವ್ಯಕ್ತಿಗಳ ನಿರೀಕ್ಷೆಗಳಿಗೂ ಅಜಗಜಾಂತರ. ಆಹಾರಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಸರ್ಕಾರಕ್ಕೆ ಸಾಮಾನ್ಯರ ಕಷ್ಟ ಅರ್ಥವಾಗುತ್ತಲೇ ಇಲ್ಲ. ಈಚೆಗೆ ಸರ್ಕಾರದ ಸಾಲದ ಪಟ್ಟಿ ಹೆಚ್ಚಿದೆ. ಬಡ್ಡಿ ಕಟ್ಟಲು ಬಜೆಟ್‍ನಲ್ಲಿ ಪ್ರತಿವರ್ಷ ಬಜೆಟ್‍ನ ಶೇ.23ರಷ್ಟು ಹಣವನ್ನು ತೆಗೆದಿಡುತ್ತದೆ. ಸರ್ಕಾರ ದಿನಕ್ಕೆ 1600 ಕೋಟಿ ಸಾಲ ಮಾಡುತ್ತದೆ. ಆಹಾರ ಪದಾರ್ಥಗಳ ಹಂಚಿಕೆಯಲ್ಲಿ ಮೋಸ, ಅಳತೆಯಲ್ಲಿ ಮೋಸ, ಆಹಾರಧಾನ್ಯಗಳ ಕಳ್ಳ ಸಾಗಾಣಿಕೆಯಿಂದ ಸರ್ಕಾರಕ್ಕೆ 40000 ಕೋಟಿ ರುಪಾಯಿಗಳ ನಷ್ಟವಾಗುತ್ತದೆ. ಕಳೆದ 10 ವರ್ಷಗಳಿಂದಲೂ ಪ್ರತಿ ವರ್ಷ ಇಷ್ಟೊಂದು ನಷ್ಟವುಂಟಾಗುತ್ತಿದೆ.
ಈ ಎಲ್ಲ ಅನಿಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬೇಕಾದ ತುರ್ತು ನಮ್ಮ ಕಣ್ಣೆದುರಿಗಿರುವಾಗಲೇ, ಈಗ ಹಿಂದು ಸೇವಾಸಂಸ್ಥೆಯ ಹೆಸರಿನಲ್ಲಿ ಭಯೋತ್ಪಾದಕರನ್ನು ಬೆಳೆಸಲಾಗುತ್ತಿದೆ. ಅವರಿಗೆ ಧರ್ಮದ ಅಫೀಮು ತಿನ್ನಿಸಿ ಯುವಕರ ತಲೆಕೆಡಿಸಿ ಸಮಾಜದಲ್ಲಿ ದ್ವೇಷಭಾವನೆ ಬೆಳೆಸಲು ಅನೇಕ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಲಾಗಿದೆ. ಇದೊಂದು ಅತ್ಯಂತ ಅಪಾಯಕಾರಿ ಬೆಳವಣಿಗೆ. ದೇಶದಾದ್ಯಂತ ಅಶಾಂತಿ, ಗೊಂದಲ, ಹಿಂಸೆ, ಭಯೋತ್ಪಾದನೆ ಹರಡಲು ಮತಾಂಧ ಸಂಸ್ಥೆಗಳು ಹಿಂದೂ ಹೆಸರಿನಲ್ಲಿ ರೂಪತಾಳಿರುವುದು ಒಂದು ಭಯಾನಕ ಬೆಳವಣಿಗೆ.
ಒಟ್ಟಿನಲ್ಲಿ ಸಮಾಜದಲ್ಲಿ ಒಂದು ಅಲ್ಲೋಲಕಲ್ಲೋಲ ಪರಿಸ್ಥಿತಿ ಉದ್ಭವವಾಗುತ್ತಿದೆ. ಸಮಾಜದ ಇತರ ಪಿಡುಗುಗಳ ವಿರುದ್ಧ ಹೋರಾಡುವುದರ ಜೊತೆಗೆ ಈ ದುಷ್ಟ ಭಯೋತ್ಪಾದನೆಯ ಪ್ರವೃತ್ತಿಯನ್ನು ತಡೆಗಟ್ಟುವುದು ಎಲ್ಲ ಭಾರತೀಯರ ಆದ್ಯ ಕರ್ತವ್ಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...