Homeಅಂಕಣಗಳುಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡೋ ಭಕುತರಿಗೆ ತಿಂಗಳಿಗೆ 25 ಸಾವಿರ ಭಕ್ಷೀಸು!

ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡೋ ಭಕುತರಿಗೆ ತಿಂಗಳಿಗೆ 25 ಸಾವಿರ ಭಕ್ಷೀಸು!

- Advertisement -
- Advertisement -

ಕೇಳುಗರಿಗೆಲ್ಲ ವೀರ ನಮಸ್ಕಾರಗಳು, ಇದೀಗ ನೀವು ಕೇಳುತ್ತಿದ್ದೀರಿ ಆಘಾತವಾಣಿ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತು. ಬನ್ನಿ ಈ ವಾರದ ಸುದ್ದಿಗಳೇನೇನಿವೆ ಎಂದು ನೋಡೋಣ.
ಶಿವಮೊಗ್ಗದ ಹೊಸನಗರ ಕಡೆಯ ದನ ಕಾಯೋ ಅಂಕಲ್ ಕೌಬಾಯ್ ಸ್ವಾಮಿಯ ಬಗ್ಗೆ ಒಂದು ಆಘಾತಕಾರಿ ಸುದ್ದಿ ಬಂದಿದೆ. ಊರಲ್ಲಿ ಓಡಾಡೋ ಬೀಡಾಡಿ ದನಹಸುಗಳನ್ನು ಎಳೆದೊಯ್ದು ‘ಕೌ ಸ್ಕೂಲ್’ನೊಳಗೆ ಕೂಡಿ ಹಾಕಿ ದಂಧೆ ನಡೆಸುತ್ತಿದ್ದ ಈ ಕೌಬಾಯ್ ಸ್ವಾಮಿ ಮುಸುಡಿಗೆ ಹೈಕೋರ್ಟ್ ಬಕ್ ಬಕ್ ಎಂದು ಗುದ್ದಿದೆ. ಧಡಿಯೂರಪ್ಪನ ಕಾಲದಲ್ಲಿ ಗೋಕರ್ಣದ ದೇವಸ್ಥಾನವನ್ನು ತನ್ನ ಮಠದ ವಶಕ್ಕೆ ಪಡೆದಿದ್ದ ಕೌಬಾಯ್ ಕಳ್ಳನ ಕೋತಿಮುಷ್ಠಿಯಿಂದ ದೇವಸ್ಥಾನವನ್ನು ಕಿತ್ತು, ಸಾರ್ವಜನಿಕರ ಸಮಿತಿಯ ಮಂಡಳಿಗೆ ಒಪ್ಪಿಸಲಾಗಿದೆ. ಇಲ್ಲೀತನಕ ‘ಕೌ ಸ್ಕೂಲ್’ನ ಹಸುಗಳ ಹಾಲು-ಬೆಣ್ಣೆ ತುಪ್ಪ ಮಜ್ಜಿಗೆ-ಮೊಸರನ್ನು ಕನ್ಸೆಷನ್ ರೇಟಿಗೆ ಮಾರಿಕೊಂಡು, ಏಕಾಂತ ಸೇವೆಯಂಥ ‘ಅಡಲ್ಟ್ ಓನ್ಲಿ’ ಮಿಡ್ ನೈಟ್ ಚಟುವಟಿಕೆಗಳಲ್ಲಿ ಕಾಲೆತ್ತಿಕೊಂಡು ಆನಂದವಾಗಿದ್ದ ರಸಿಕರರಾಜ ಕೌಬಾಯ್ ಸ್ವಾಮಿಗೆ ಇದರಿಂದಾಗಿ ರಕ್ತವಾಂತಿಯಾದಷ್ಟು ನೋವುಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಗೋಕರ್ಣ ದೇವಳದಿಂದ ಬರುತ್ತಿದ್ದ ಲಕ್ಷ ಲಕ್ಷ ಆದಾಯಕ್ಕೆ ಹೈಕೋರ್ಟ್ ಆದೇಶವು ಮಣ್ಣು ಸುರಿದಿರುವುದರಿಂದ ಇನ್ನು ಮುಂದೆ ‘ಕೌಸ್ಕೂಲ್’ ಬ್ಯುಸಿನೆಸ್ಸಿನಲ್ಲಿ ಸಿಗುತ್ತಿದ್ದ ಪುಡಿಗಾಸೇ ಗಟ್ಟಿ ಎಂದು ಖಾತ್ರಿಯಾಗುತ್ತಿದ್ದಂತೆ ಕೌಬಾಯ್ ಮುಸುಡಿ ಕಿವುಚಿಕೊಂಡು ತಲೆಮೇಲೆ ಕೈಹೊತ್ತು ಕುಳಿತಿದ್ದಾನಂತೆ. ಕೌಬಾಯ್ ಕಳ್ಳನ ಈ ಭೀಭತ್ಸ ಮುಖಾರವಿಂದವನ್ನು ನೋಡಿದ ಪೂಜೆಗೆಂದು ಬಂದ ಭಕ್ತರು, ಸ್ವಾಮಿಗೆ ಯಾವುದೋ ಆಫ್ರಿಕನ್ ದೆವ್ವ ಮೆಟ್ಟಿಕೊಂಡಿರಬೇಕೆಂದು ಭಯಗೊಂಡು ಕೇರಳ ಪಂಡಿತರನ್ನು ಕರೆತರಲು ದೌಡಾಯಿಸಿದ್ದಾರೆಂದು ನಂಬಲನರ್ಹ ಮೂಲಗಳು ತಿಳಿಸಿವೆ.

**********

ಕೇಂದ್ರ ಸರ್ಕಾರದ “ರನ್ನಿಂಗ್ ಇನ್ ದಿ ಫಾರಿನ್, ರನ್ ರನ್ ರನ್’ ಯೋಜನೆಯ ಲಾಭ ಪಡೆದ ಬ್ಯಾಂಕ್ ವಂಚಕರು ಸರ್ಕಾರಿ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಉಂಡೆ ನಾಮ ತಿಕ್ಕಿ ಕಂಡ ಕಂಡ ದೇಶಗಳಿಗೆ ಓಡಿ ಹೋಗಿರುವುದು ಹಳೆಯ ವಿಷಯ. ಇಂಥಹ ವಂಚಕರನ್ನು, ಜಟಕಾಗಾಡಿ ಹತ್ತಿಕೊಂಡು ದೇಶದೇಶಗಳಿಗೆ ಪರ್ಯಟನೆ ಮಾಡಿ ಹಿಡಿದು ತರುತ್ತೇನೆಂದು ಬೊಗಳಿದ್ದ ಹಾಫ್‍ಮೆಂಟ್ಲು ಪಕೋಡೇಂದ್ರನು ಆನಂತರ ಮುಖ ಮತ್ತು ಇನ್ನೊಂದಕ್ಕೆ ಬ್ಯಾಂಡೇಜ್ ಹಾಕ್ಕೊಂಡು ಮಲಗಿರುವುದು ಸಹ ಹಳೇ ವಿಷಯ. ಹೊಸ ವಿಷಯ ಏನಪ್ಪ ಅಂತಂದ್ರೆ.. ಹೀಗೆ ಸರ್ಕಾರಿ ಬ್ಯಾಂಕುಗಳಿಗೆ ವಂಚಿಸಿ ಓಡಿಹೋದವರಲ್ಲಿ ಅಗ್ರಗಣ್ಯನಾದ ವಿಜಯ್ ಮಲ್ಯ, ತನ್ನ ಲಂಡನ್ ಮನೆಯಲ್ಲಿ ಕಕ್ಕ ಮಾಡಲು ಚಿನ್ನದ ಟಾಯ್ಲೆಟ್ ಕಮೋಡ್ ಕಟ್ಟಿಸಿಕೊಂಡಿರುವುದು ಬಯಲಾಗಿದೆ. ಒಬ್ಬರ ಹಿಂದೊಬ್ಬರು 28 ಮಂದಿ ಬ್ಯಾಂಕ್ ವಂಚಕರು ದೇಶ ಬಿಟ್ಟು ಓಡಿಹೋಗಿ ಹೀಗೆ ರಾಜಾಧಿರಾಜರಂತೆ ಎಂಜಾಯ್ ಮಾಡಿಕೊಂಡು ತಿರುಗುತ್ತಿದ್ದರೂ ಬ್ಲೂಜೆಪಿ ಪಕ್ಷದ ದ್ವೇಷಭಕ್ತ ಶಿಖಾಮಣಿಗಳು ಕಣ್ಣಿಗೆ ಲಕ್ವ ಹೊಡೆದವರಂತೆ ಸುಮ್ಮನಿರುವುದು ಆಶ್ಚರ್ಯವೇ ಸರಿ. ಪಕೋಡೇಂದ್ರನ ಫಾರಿನ್ ತೆವಲು ಹುಚ್ಚುಗೆದರಿ ದೇಶ ದೇಶ ಓತ್ಲಾ ಹೊಡೆಯುವಾಗ ಈ ವಂಚಕರಿರುವ ದೇಶಗಳಿಗೆಲ್ಲ ಹೋಗಿ ಬಂದರೂ ಇವರನ್ನು ಹಿಡಿದು ತರುವ ಬದಲು ತನ್ನ ‘ದೋಸ್ತಾನ ದೋಸ್ತ್’ಗಳಾದ ಅಂಬಾನಿ-ಆದಾನಿಗಳಿಗೆ ಆ ದೇಶಗಳಲ್ಲಿ ಬ್ಯುಸಿನೆಸ್ ಕಾಂಟ್ರಾಕ್ಟ್ ಕೊಡಿಸೋ ಅಡಿಕೆಮಂಡಿಯ ಕಮಿಷನ್ ಏಜೆಂಟ್ ದಲ್ಲಾಳಿಯಂತೆ ವರ್ತಿಸುತ್ತಿದ್ದಾನೆಂದು ಶ್ರಮಜೀವಿ ರೈತರು ಕ್ಯಾಕರಿಸಿ ಉಗಿಯುತ್ತಿದ್ದಾರೆಂದು ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.

**********

ಉತ್ತರಪ್ರದೇಶದ ಬೋಳುಮಂಡೆ ‘ಕುಂಗ್ ಫೂ ಮಾಂಕ್’ ಭೋಗಿ ಅನಿಷ್ಠನಾಥ್ ತನ್ನ ಆಡಳಿತಾವಧಿಯ ಅಭಿವೃದ್ಧಿ ಕೆಲಸಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವವರಿಗೆ ತಿಂಗಳಿಗೆ 25 ಸಾವಿರ ರೂಪಾಯಿ ಸಂಬಳ ಕೊಡೋದಾಗಿ ಪ್ರಕಟಿಸಿದ್ದಾರೆ. ಇದೇ ಕೆಲಸಕ್ಕೆಂದು ರಾಜ್ಯ ಸರ್ಕಾರದಡಿಯಿರುವ ವಾರ್ತಾ ಮತ್ತು ಪ್ರಚಾರ ಇಲಾಖೆಯವರು ಮಾಡೋ ಕೆಲಸ ಬಿಟ್ಟು ಯಾವ ದೊಡ್ಡಮೋರಿಗೆ ಕೇಸರಿ ಪೇಂಟ್ ಹೊಡೆಯಲು ಹೋಗಿದ್ದಾರೆಂದು ಜನರು ಪ್ರಶ್ನಿಸುತ್ತಿದ್ದಾರೆ. ಇರಲಿ, ಈ ಬಗ್ಗೆ ಅನಿಷ್ಠನಾಥನ ಅಭಿವೃದ್ಧಿಗಳನ್ನು ಪಟ್ಟಿ ಮಾಡುವುದಾದರೆ ಅವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾರಿಗೂ ಹೊಳೆಯದ ತಲೆಕೆಟ್ಟ ಐಡಿಯಾಗಳೇ ಎಂಬುದು ಅರಿವಾಗುತ್ತದೆ. ಉತ್ತರಪ್ರದೇಶದ ರೋಡು, ಮೋರಿ, ಟಾಯ್ಲೆಟ್, ಸರ್ಕಾರಿ ಕಚೇರಿ, ಕಾರು ಬಸ್ಸು, ಸೈಕಲ್ ಆಟೋರಿಕ್ಷಾಗಳು… ಹೀಗೆ ಅನಿಷ್ಠನಾಥನ ಬುರುಡೆಯೊಂದನ್ನು ಬಿಟ್ಟು ಮಿಕ್ಕೆಲ್ಲದ್ದಕ್ಕೂ ಕೇಸರಿ ಪೇಂಟ್ ಹೊಡೆಯಲಾಗಿದೆ. ಸೆಗಣಿ ತಿಂದ್ರೆ ಗಂಡು ಮಗುವಾಗುತ್ತೆ, ಸೆಗಣಿ ಶಾಂಪೂನಲ್ಲಿ ತಲೆಸ್ನಾನ ಮಾಡಿದ್ರೆ ತಲೆಗೂದಲು ಸೊಂಪಾಗಿ ಬೆಳೆಯುತ್ತೆ, ದನದ ಉಚ್ಚೆ ಕುಡಿದರೆ ಸರ್ವರೋಗಗಳೂ ನಿವಾರಣೆಯಾಗುತ್ತೆ, ಸೆಗಣಿ ಸೋಪು, ಸೆಗಣಿ ಬಿಸ್ಕತ್ತು, ಸೆಗಣಿ ಸೊಳ್ಳೆಬತ್ತಿ, ಸೆಗಣಿ ನೆಲ ಕ್ಲೀನರ್.. ಇಂಥಹ ಲೂಸ್ ಸಂಶೋಧನೆ ನಡೆಸಿದ ಅಡ್ನಾಡಿ ಸನಾತನ ಪೀಡೆಗಳಿಗೆ ಪ್ರೋತ್ಸಾಹ ಕೊಡಲಾಗಿದೆ. ರಾಜ್ಯದಲ್ಲಿ ಯಾರು ಯಾರನ್ನು ಬೇಕಾದರೂ ಗುಂಪು ಕಟ್ಟಿಕೊಂಡು ಹೊಡೆದು ಕೊಲ್ಲಲು ಸರ್ಕಾರದಿಂದಲೇ ಅನಧಿಕೃತ ಅನುಮತಿ ನೀಡಲಾಗಿದೆ. ಸಾಯುತ್ತಿರೋ ಮನುಷ್ಯರಿಗೆ ಆಸ್ಪತ್ರೆ ಕಟ್ಟಿಸಲು, ಆಕ್ಸಿಜನ್ ಇಲ್ಲದೆ ಸತ್ತ ಸಾವಿರಾರು ಎಳೆಕಂದಮ್ಮಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲು ಯೋಗ್ಯತೆಯಿಲ್ಲದಿದ್ದರೂ ಬೀಡಾಡಿ ದನಗಳಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದಂತೆ ಉತ್ತರಪ್ರದೇಶದ ಗ್ರಾಮೀಣಭಾಗವನ್ನು ಕ್ರಿಸ್ತಪೂರ್ವದಲ್ಲೇ ಬಾಕಿ ಉಳಿಸಲಾಗಿದೆ.. ಹೀಗೆ ಹೇಳುತ್ತ ಹೋದರೆ ಪಕೋಡಪ್ಪನ ಸುಳ್ಳುಗಳಂತೆ ಬೆಳೆಯುತ್ತ ಹೋಗುವ ಈ ತರುಕಲಾಂಡಿ ಕೆಲಸಗಳೇ ಭೋಗಿ ಅನಿಷ್ಠನಾಥನ ಅಭಿವೃದ್ಧಿಗಳೆಂದು ಸರ್ಕಾರದ ವರದಿಗಳೇ ಹೇಳುತ್ತಿವೆ. ವಸ್ತುಸ್ಥಿತಿ ಹೀಗಿರುವಾಗ ತಿಂಗಳಿಗೆ 25 ಸಾವಿರ ಸಂಬಳ ಕೊಟ್ಟು ತನ್ನ ಪಕ್ಷದ ‘ಬೇ ರೋಜ್ಗಾರ್ ಅಬ್ಬೇಪಾರಿಗಳಿಗೆ’ ಪುಗ್ಸಟ್ಟೆ ಸಂಬಳದ ವ್ಯವಸ್ಥೆ ಮಾಡ್ತಿರೋ ಅನಿಷ್ಠನಾಥ.. ಅದಕ್ಕೆ ಬೇಕಾದ ದುಡ್ಡನ್ನು ಸರ್ಕಾರಿ ಬೊಕ್ಕಸದಿಂದ ಕೊಡುತ್ತಾನೋ ಅಥವ ಅವನಪ್ಪನ ಮನೆಯೊಳಗೆ ಪ್ರಿಂಟು ಮಾಡಿ ತಂದು ಹಂಚುತ್ತಾನಾ ಎಂಬ ಬಗ್ಗೆ ಜನರಲ್ಲಿ ತೀವ್ರ ಜಿಜ್ಞಾಸೆ ಹುಟ್ಟಿಕೊಂಡಿದೆ.
ಇಲ್ಲಿಗೆ ವಾರ್ತಾಪ್ರಸಾರ ಮುಕ್ತಾಯವಾಯಿತು. ಮತ್ತೊಂದಷ್ಟು ಆಘಾತಕಾರಿ ನ್ಯೂಸುಗಳ ಸಮೇತ ಮತ್ತೆ ಭೇಟಿಯಾಗೋಣ. ಅಲ್ಲೀತನಕ ನಮಗೂ ನಿಮಗೂ ಅಟ್ಟೆ ಮಟ್ಟೆ ಕೋಳಿ ಮಟ್ಟೆ ವಾರದ್ ತನಕ ಮಾತಾಡ್ಸಲ್ಲ ಠೂ ಬಳೆ. ಧನ್ಯವಾದಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...