Homeಅಂಕಣಗಳುಮೈತ್ರಿ ಸರಕಾರವ ಕೆಡವಿದ್ದು ನಾನೇ...!!!

ಮೈತ್ರಿ ಸರಕಾರವ ಕೆಡವಿದ್ದು ನಾನೇ…!!!

- Advertisement -
- Advertisement -

ಮಹಾರಾಷ್ಟ್ರದ ಶಿವಸೇನಾ ಎನ್.ಸಿ.ಪಿ ಮತ್ತು ಕಾಂಗ್ರೆಸ್ ಸಮಾಗಮ ಕರಟಕ ದಮನಕರನ್ನು ಬೆಚ್ಚಿಬೀಳಿಸಿತಂತಲ್ಲಾ. ಸದಾ ಸಂಚುಗಳನ್ನ ರೂಪಿಸುತ್ತ ಅವುಗಳನ್ನ ಕಾರ್ಯರೂಪಗೊಳಿಸುತ್ತ ಭಾರತಕ್ಕೆ ಕ್ಯಾನ್ಸರ್ ತರ ಹರಡುತ್ತಿದ್ದ ಬಿಜೆಪಿಗೆ ಮಹಾರಾಷ್ಟ್ರದ ಮುಲಾಮು ಕಂಗಾಲಾಗಿಸಿದೆ. ಆದರೇನು ಕೆಟ್ಟಜನ ಎಂದೂ ಸುಮ್ಮನೆ ಕೂರುವವರಲ್ಲ. ಕೀಡೆ ಹಾಕುತ್ತಲೇ ಇರುತ್ತಾರೆ. ಸದ್ಯ ಮಹಾರಾಷ್ಟ್ರದಲ್ಲಿನ ಐತಿಹಾಸಿಕ ತ್ರಿವೇಣಿ ಸಂಗಮವನ್ನು ಸ್ವಾದಭರಿತ ಮದ್ಯಕ್ಕೆ ಹೋಲಿಸುವುದಾದರೆ, ಶಿವಸೇನೆ ರಾ ಡ್ರಿಂಕ್ಸಿನಂತಿತ್ತು. ಅದಕ್ಕೀಗ ಎನ್‍ಸಿಪಿ ಎಂಬ ಸೋಡ ಮತ್ತು ಕಾಂಗ್ರೆಸ್ ನೀರು ಬೆರೆತಿದೆ. ಈ ರೂಪದಲ್ಲಿ ಸಿದ್ಧಗೊಂಡ ಪಾನೀಯ ಮಹಾರಾಷ್ಟ್ರೀಯರಿಗೆ ಹಿತವಾಗಬಹುದು. ಇದರಲ್ಲಿ ಯಾವುದೇ ಹೆಚ್ಚಾದರೂ ರುಚಿ ಹದಗೆಡಬಹುದು ಆ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು. ಈ ಡ್ರಿಂಕ್ಸಿಗೆ ಏನಾದರೂ ಬೆರೆಸಿ ಹಾಳುಮಾಡಲು ಬಿಜೆಪಿಗಳು ಹಗಲಿರುಳೂ ಹೊಂಚುಹಾಕುತ್ತವೆ. ಹೊಂಚುಹಾಕುವುದರಲ್ಲಿ ಅವುಗಳು ಹೈಯಿನಾಗಳಿದ್ದಂತೆ, ಆ ನಂತರ ಅವುಗಳ ಕೇಕೆಯೂ ಕೂಡ ಹೈಯಿನಾಗಳ ತರಹವೇ ಇರುತ್ತದೆಂದು ಎನ್ಸಿಪಿಗಳು ಹೇಳುತ್ತವಂತಲ್ಲಾ… ಥೂತ್ತೇರಿ.

`ಬಿ.ಸಿ.ಪಾಟೀಲನದ್ದು ಪೊಲೀಸ್ ಬುದ್ಧಿ. ಅಂದರೆ ಲಾವ್ ಲಾವ್ ಬುದ್ಧಿ’ ಎಂದು ಸಿದ್ದು ಆಡಿಕೊಂಡಿದ್ದಕ್ಕೆ ಕೆರಳಿದ ಪಾಟೀಲ್, ಸಿದ್ದು ವಿರುದ್ಧ ಇಡೀ ಪೊಲೀಸ್ ಇಲಾಖೆಯೇ ತಿರುಗಿ ಬೀಳಲು ಕರೆಕೊಟ್ಟರಲ್ಲ. ಆದರೇನು ಪೊಲೀಸರಾರು ಪಾಟೀಲನ ಮಾತಿಗೆ ಕಿವಿಗೊಡಲಿಲ್ಲ. ಏಕೆಂದರೆ ಸಿದ್ದು ಬಳಸಿದ್ದ `ಅದರಲ್ಲಿ ಒಳ್ಳೆಯವರೂ ಇದ್ದಾರೆ’ ಎಂಬ ಪದವನ್ನ ತಮ್ಮ ಮೇಲೆ ಎಳೆದುಕೊಂಡು ಪಾಟೀಲನ ಮಾತಿಗೆ ಮೈಂಟ್ ಮಾಡಲಿಲ್ಲ. ಬಿ.ಸಿ.ಪಾಟೀಲ್ ಅಂದರೆ ದಕ್ಷ ಪೊಲೀಸ್ ಅಧಿಕಾರಿ. ಸಿನಿಮಾದಲ್ಲಿ ನಾಯಕ ನಟ ಮತ್ತು ಅಪರೂಪದ ರಾಜಕಾರಣಿ ಎಂದು ಭಾವಿಸಿರುವ ಈ ಪೊಲೀಸ್ ಪ್ಯಾರ ಮೂರರಲ್ಲೂ ತಲಹತ್ತದೆ ಬಾಂಬೆ ಪ್ಲೈಟ್ ಹತ್ತಿದವನು. ಅಂದರೆ ಒಳ್ಳೆ ಪೊಲೀಸನೂ ಆಗಲಿಲ್ಲ ಸಿನಿಮಾ ನಟನೂ ಆಗಲಿಲ್ಲ. ಉತ್ತಮ ರಾಜಕಾರಣಿಯೂ ಆಗಲಿಲ್ಲ. ಈಗ ಅನಿವಾರ್ಯವಾಗಿ ಲಿಂಗಾಯತರ ಮತಗಳು ಲಿಂಗಾಯಿತರಿಗೇ ಬೀಳಬೇಕು ಎಂಬ ಸ್ಲೋಗನ್ ಹಿಡಿದು ಹೊರಟಿದ್ದಾನೆ ಬಹು ಜನಾಂಗದ ಅಭ್ಯರ್ಥಿಯಾದ ಈತ ಗೆದ್ದರೂ ಹಿರೇಕೆರೂರು ರಾಜಕಾರಣದ ಸೋಲಂತಲ್ಲಾ….. ಥೂತ್ತೇರಿ.

ಕಾಂಗ್ರೆಸ್‍ನಲ್ಲಿ ಬದುಕನ್ನ ಆರಂಭಿಸಿ ಆಸ್ತಿ ಮಾಡಿಕೊಂಡು ಅಧಿಕಾರ ಅನುಭವಿಸಿ ಈಗ ಬಿಜೆಪಿಯ ಗೋಶಾಲೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಗೊಡ್ಡು ದನದಂತಿರುವ ಎಸ್ಸೆಂ ಕೃಷ್ಣ ಎಂಬ ವೃದ್ಧರು, ಸುಧಾಕರನ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡು `ಈ ಸರಕಾರ ಕೆಡವಿದ್ದು ನಾನೆ. ಸುಧಾಕರನ ರಾಜೀನಾಮೆ ಕೊಡಿಸಿದ್ದು ನಾನೇ’ ಎಂದುಬಿಟ್ಟಿದ್ದಾರಲ್ಲಾ. ಇದರಿಂದ ಕರ್ನಾಟಕದ ಜನ ಆಶ್ಚರ್ಯಪಡುವುದರ ಬದಲು ಈತನ ಪತನ ಕಂಡು ಮರುಗಿದ್ದಾರಂತಲ್ಲಾ. ಈ ಶತಮಾನದ ಬಹುದೊಡ್ಡ ರಾಜಕೀಯ ದ್ರೋಹವೆಸಗಿರುವ ಕೃಷ್ಣನಿಗೆ ಪಕ್ಷಾಂತರಿಗಳನ್ನ ಕಂಡರೆ ಬಲುಪ್ರೀತಿ. ಅದರಲ್ಲೂ, ಉಂಡು ತಿಂದು ಹೊಟ್ಟೆ ಮುಂದುಮಾಡಿಕೊಂಡು ಎದುರು ಕಂಡ ಪಾರ್ಟಿಗೆ ನೆಗೆಯುವ ಹನುಮಂತರನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ. ಅದಕ್ಕೆ ಸುಧಾಕರ ರಾಜೀನಾಮೆ ಕೊಟ್ಟು ನನ್ನಂತಾಗಲು ಸೂಚಿಸಿದ್ದು ಎಂದಿರುವ ಕೃಷ್ಣನಿಗೆ ಸುಧಾಕರನನ್ನು ನೋಡಿದರೆ ತನ್ನ ತಮ್ಮನನ್ನ ನೋಡಿದಂಗಾಗುತ್ತದೆ. ಆತನೂ ನಯವಾಗಿ ಮಾತನಾಡುತ್ತಾನೆ. ನುಣ್ಣಗಿರುವ ಬುರುಡೆಗೆ ವಿಗ್ ಕೂರಿಸಲು ಒಂದು ಗಂಟೆ ತೆಗೆದುಕೊಳ್ಳುತ್ತಾನೆ. ಇಂತೆಲ್ಲಾ ಗುಣಗಳನ್ನ ಗ್ರಹಿಸಿದ ಕೃಷ್ಣ, ಮುದಿಗಾಲದಲ್ಲಿ ಗರತಿಯರನ್ನ ದಾರಿತಪ್ಪಿಸುವಂತಹ ಸಲಹೆ ಕೊಟ್ಟಿರುವುದು ಸೂಕ್ತವಾಗಿದೆಯಂತಲ್ಲಾ… ಥೂತ್ತೇರಿ.

ಈ ಉಪಚುನಾವಣೆಯಲ್ಲಿ ತುಂಬ ತಮಾಸೆ ಮಾಡಿದವರೆಂದರೆ ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರಂತಲ್ಲಾ. ಕೆ.ಆರ್.ಪೇಟೆಗೆ ಚುನಾವಣಾ ಪ್ರಚಾರಕ್ಕೆಂದು ಬಂದ ಕುಮಾರಣ್ಣ, ಕಾಣೆಯಾದ ತಾಯಿ ನೆನೆದು ಅಳುವ ಎಮ್ಮೆಕರುವಿನಂತೆ ಅತ್ತರಲ್ಲಾ. ಎಂತಹ ವಿಷಯಕ್ಕೂ ಅಷ್ಟು ಸುಲಭವಾಗಿ ಅಳದ ಕೆ.ಆರ್.ಪೇಟೆ ಜನ ಮಗನ ಸೋಲು ನೆನೆಸಿಕೊಂಡು ಅಳುತ್ತಿರುವ ಕುಮಾರಣ್ಣ ಸ್ಥಿತಿ ಕಂಡು ನಕ್ಕರಂತಲ್ಲಾ. ನಗುವಿಗೆ ಕಾರಣ, ಮಗನ ಸೋಲಿನ ಕಾರಣವನ್ನೇ ಈವರೆಗೆ ಗ್ರಹಿಸಿಲ್ಲ ಎಂಬುದು. ಮುಖ್ಯವಾಗಿ ಮಂಡ್ಯದ ಸ್ವಾಭಿಮಾನ ಕಡೆಗಣಿಸಿ ಮಗನನ್ನ ತಂದು ನಿಲ್ಲಿಸಿದ್ದು. ಸುಮಲತಾ ಬಗ್ಗೆ ಹಗುರವಾಗಿ ಮಾತನಾಡಿದ್ದೂ ಅಲ್ಲದೆ, ಮೂರು ಜನ ಸುಮಲತಾರನ್ನ ರೆಡಿಮಾಡಿದ್ದೂ ಅಲ್ಲದೆ ಅವರ ಹೆಸರುಗಳು ಸುಮಲತರ ಜೊತೆಗೆ ಮತಯಂತ್ರದಲ್ಲಿರುವಂತೆ ಮಾಡಿದ್ದು. ಇದಲ್ಲದೆ ಕನ್ನಡ ಚಿತ್ರರಂಗದ ನಾಯಕನಟರಾದ ದರ್ಶನ್ ಮತ್ತು ಯಶ್ ಜೋಡಿಯ ¨ಗ್ಗೆ ಹಗುರವಾಗಿ ಮಾತನಾಡಿ ಯುವಜನಾಂಗದ ಓಟು ಕಳೆದುಕೊಂಡಿದ್ದು. ಇವೆಲ್ಲಾ ಸೋಲಿನ ಕಾರಣಗಳೆಂಬುದನ್ನ ಇನ್ನ ತಿಳಿದುಕೊಳ್ಳದ ಕುಮಾರಣ್ಣ ಕೆ.ಆರ್.ಪೇಟೆಯಲ್ಲಿ ಅಳುತ್ತಿರಬೇಕಾದರೆ ಜನ ತುಟಿಯಂಚಿನಲ್ಲಿ ನಕ್ಕರಂತಲ್ಲಾ….. ಥೂತ್ತೇರಿ.

ಅನಂತಕುಮಾರ್ ಹೆಗಡೆ ಎಂಬ ಕಡಲ ತೀರದ ಸಮಸ್ಯೆಯೊಂದು ಆಗಾಗ್ಗೆ ನಾವು ಸಂವಿಧಾನವನ್ನು ಬದಲಿಸುತ್ತೇವೆ. ಅದಕ್ಕಾಗಿಯೇ ಬಂದಿರುವುದು ಎಂದು ವದರುತ್ತಿತ್ತು. ಇದು ಪತ್ರಿಕೆಯಲ್ಲಿ ದೊಡ್ಡ ಸುದ್ದಿಯಾಗಿ ಪ್ರಕಟವಾದಾಗ ಅದರ ವಾರಸುದಾರರು ಪ್ರತಿಕ್ರಿಯಿಸಲಿಲ್ಲ. ಬದಲಿಗೆ ತಮ್ಮ ಬಿಜೆಪಿ ಪಾರ್ಟಿಯ ಅಜೆಂಡಾವನ್ನೇ ಘಂಟಾಘೋಷವಾಗಿ ಹೇಳುತ್ತಿದ್ದಾನೆಂದು ಒಳಗೊಳಗೆ ಮೆಚ್ಚುಗೆ ಸೂಚಿಸುತ್ತಿದ್ದರು. ಆದರೆ ಅನಂತನ ಉವಾಚ ಅರಿವಿಲ್ಲದೆ ಜಾರಿಯನ್ನ ಪಡೆಯುತ್ತಿದೆ. ಅದು ನಮ್ಮ ರಾಜ್ಯದ ಶಾಸಕರ ಅನರ್ಹತೆ ವಿಷಯದಲ್ಲಿ ಮತ್ತು ಬಾಬರಿ ಮಸೀದಿ ವಿಷಯದಲ್ಲಿ ನಮ್ಮ ನ್ಯಾಯಾಲಯಗಳು ಸಂವಿಧಾನವನ್ನ ಬದಿಗಿಟ್ಟು ವರ್ತಿಸಿದ ರೀತಿ ನೋಡಿದರೆ ಸಂವಿಧಾನ ಬದಲಾವಣೆಯೆಂಬುದು ಜರುಗುವುದು ಇದೇರೀತಿ ಎಂಬುದು ಮನವರಿಕೆ ಆಗುತ್ತಿದೆಯಂತಲ್ಲಾ. ಯಾವಕಡೆಯಿಂದ ನೋಡಿದರೂ ಈ ಬಿಜೆಪಿಗಳಿಗೆ ಗಾಂಧೀಜಿ ಮತ್ತು ಅಂಬೇಡ್ಕರ್ ಅರಗಿಸಿಕೊಳ್ಳಲಾರದ ವ್ಯಕ್ತಿತ್ವಗಳಾಗಿ ಕಂಡು, ಆಗಾಗ್ಗೆ ಈ ಎರಡೂ ಮೇರುಪರ್ವತಗಳನ್ನ ಅಲ್ಲಾಡಿಸುವ ಕೆಲಸ ಮಾಡುತ್ತಿವೆಯಂತಲ್ಲಾ… ಥೂತ್ತೇರಿ.

ಮದ್ಯ ಮಾಂಸ ಮಾರಾಟ ಕೇಂದ್ರಗಳ ಮುಂದೆ ರಾರಾಜಿಸುತ್ತಿರುವ ದೇವರ ಹೆಸರುಗಳನ್ನ ಬದಲಿಸಲು ಕೆಲಸಿಲ್ಲದ ಸರಕಾರ ಚಿಂತಿಸುತ್ತಿದೆಯಂತಲ್ಲಾ. ಈ ಬಿಜೆಪಿಗಳ ಆಲೋಚನೆಯನ್ನ ಹಗುರವಾಗಿ ಪರಿಗಣಿಸುವಂತಿಲ್ಲ. ಒಂದಲ್ಲಾ ಒಂದು ದಿನ ಬೆಳಗಿನ ಜಾವ ಎದ್ದು ತಮ್ಮ ಅಜೆಂಡಾಗಳನ್ನು ಜಾರಿ ಮಾಡಿಬಿಡುತ್ತವೆ ಎಂದು ಆತಂಕಗೊಂಡಿರುವ ಕರ್ನಾಟಕದ ಮದ್ಯ ಮಾಂಸದ ಮಳಿಗೆಗಳ ಮಾಲಿಕರು ಚೆಡ್ಡಿಗಳನ್ನ ತೃಪ್ತಿಪಡಿಸಲು ಹಲವು ಹೆಸರುಗಳನ್ನ ಹುಡುಕಿಟ್ಟುಕೊಂಡಿದ್ದಾರಂತಲ್ಲಾ. ಆ ಪೈಕಿ ಮೋದಿ ಮಟನ್ ಸ್ಟಾಲ್, ಶಾ ಪಿಶ್ ಕಾರ್ನರ್, ಈಶ್ವರಪ್ಪ ತಲೆಮಾಂಸದ ಅಂಗಡಿ, ಎಡೂರ್ ನಾನ್‍ವೆಜ್ ಮೀಲ್ಸ್, ರಾಮುಲು ಬೋಟಿ ಕಾರ್ನರ್, ಅಶೋಕ ಗ್ರಾಂಡ್ ಬಿರಿಯಾನಿ, ರೇಣುಕಾಚಾರಿ ರಂ ಸೆಂಟರ್, ಸದಾನಂದ ಬಾಂಗಡೆ ಬಜಾರ್, ಸುರೇಶ್ ಚಿಕನ್ ಸೆಂಟರ್, ರವಿ ಕಬಾಬ್ ಕಾರ್ನರ್, ಗೊಳವಾಲಕರ್ ಗೋಬಿ ಮಂಚೂರಿ, ಸಾವರ್ಕರ್ ಸಾಗರದ ಮೀನೂಟ, ಲಿಂಬಾವಳಿ ಮಸಾಜ್ ಸೆಂಟರ್ ಇತ್ಯಾದಿ ಹೆಸರುಗಳು ನೇತಾಡಲು ರೆಡಿಯಾಗುತ್ತಿವೆಯಂತಲ್ಲಾ. ಇದಲ್ಲದೆ ಬಿಜೆಪಿಯ ಮಹಿಳಾ ಮಣಿಗಳಾದ ಉಮಾ ಭಾರತಿ, ಪ್ರಜ್ಞಾ ಇಂತಹ ಸ್ತ್ರೀಲೋಕದ ಸಮಸ್ಯೆಗಳನ್ನ ಯಾವ ಅಂಗಡಿಗೆ ಇಟ್ಟರೆ ಸೂಕ್ತ ಎಂಬ ಚರ್ಚೆ ನಡೆಯುತ್ತಿದೆಯಂತಲ್ಲಾ. ಚೆಡ್ಡಿಗಳ ದೈವಭಕ್ತಿ ಇನ್ನ ಏನೇನು ಮಾಡಲಿದೆಯೋ ಏನೋ….. ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನರವಾಣೆ ಅವರ ಆತ್ಮಚರಿತ್ರೆಯ ಯಾವುದೇ ಪ್ರತಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲ: ಪೆಂಗ್ವಿನ್ ಪ್ರಕಾಶನ ಸ್ಪಷ್ಟನೆ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಅವರ ಆತ್ಮಚರಿತ್ರೆ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ'ಗೆ ವಿಶೇಷ ಪ್ರಕಾಶನ ಹಕ್ಕುಗಳನ್ನು ಹೊಂದಿದ್ದೇವೆ ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (ಪಿಆರ್‌ಎಚ್‌ಐ) ಹೇಳಿದ್ದು,...

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಪ್ರತಿಪಕ್ಷಗಳು

ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆ, ಲೋಕಸಭೆಯ ಬಜೆಟ್ ಅಧಿವೇಶನದ 10ನೇ ದಿನದ ಕಲಾಪವೂ ಸೋಮವಾರ (ಫೆ.10) ಪದೇ ಪದೇ ಮುಂದೂಡಿಕೆಯಾಯಿತು. ಎಂದಿನಂತೆ ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾದಾಗ ವಿರೋಧ ಪಕ್ಷಗಳ ಸದಸ್ಯರು...

ರಾಜಸ್ಥಾನ| ಅನಧಿಕೃತ ಧರ್ಮೋಪದೇಶದ ಆರೋಪ; 12 ತಬ್ಲಿಘಿ ಜಮಾತ್ ಸದಸ್ಯರ ಬಂಧನ

ಗುಜರಾತ್‌ನ ಗೋಧ್ರಾದಿಂದ ಬಂದಿದ್ದ 10 ರಿಂದ 12 ಜನರ ಗುಂಪು ಕಳೆದ ಎರಡು ದಿನಗಳಿಂದ ಬಾಗಿಡೋರಾ ಪ್ರದೇಶದಲ್ಲಿ ಓಡಾಡುತ್ತಿದೆ ಎಂದು ಸ್ಥಳೀಯ ಪೊಲೀಸರಿಗೆ ಮಾಹಿತಿ ಬಂದ ನಂತರ ಅವರನ್ನು ಬಂಧಿಸಲಾಗಿದೆ. ಅಧಿಕಾರಿಗಳಿಗೆ ಮಾಹಿತಿ...

ಕೆನಡಾದಲ್ಲಿ ನೆಲಮಂಗಲ ಮೂಲದ 37ವರ್ಷದ ಟೆಕ್ಕಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಅಪರಿಚಿತ ಗುಂಪು 

ಬೆಂಗಳೂರು: ಕೆನಡಾದ ಟೊರೊಂಟೊದಲ್ಲಿರುವ ಜನನಿಬಿಡ ಶಾಪಿಂಗ್ ಸೆಂಟರ್‌ನ ಪಾರ್ಕಿಂಗ್ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಬೆಂಗಳೂರು ಮೂಲದ 37 ವರ್ಷದ ಟೆಕ್ಕಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೆಲಮಂಗಲ ಬಳಿಯ ತ್ಯಾಮಗೊಂಡ್ಲು ನಿವಾಸಿ...

ತೆಲಂಗಾಣ| ಪುರಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಆತ್ಮಹತ್ಯೆಗೆ ಶರಣು; ಕುಟುಂಬದಿಂದ ಬೆದರಿಕೆ ಆರೋಪ

ಪುರಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆಯಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣದಿಂದ ವರದಿಯಾಗಿದೆ. ಸೋಮವಾರ ತಡರಾತ್ರಿ ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ಪುರಸಭೆಯಲ್ಲಿ ಈ ಘಟನೆ ನಡೆದಿದೆ. ಮಕ್ತಲ್ ಪುರಸಭೆಯ...

ದ್ವೇಷ ಭಾಷಣ : ಅಸ್ಸಾಂ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಮ್ಯುನಿಸ್ಟ್ ಪಕ್ಷಗಳು

ಮುಸ್ಲಿಮರ ವಿರುದ್ಧ ಪದೇ ಪದೇ ದ್ವೇಷ ಕಾರುತ್ತಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್ -ಸಿಪಿಐ (ಎಂ)) ಮತ್ತು ಕಮ್ಯುನಿಷ್ಟ್...

ಬಿಹಾರ: ಬಹುಜನ ಸಮುದಾಯಗಳಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೋಧ್ ಗಯಾದಲ್ಲಿ ಬಹುಜನ ವಿದ್ವಾಂಸರ ಸಮ್ಮೇಳನ

ಭಾರತದ ಪ್ರಮುಖ ವಿಶ್ವವಿದ್ಯಾಲಯಗಳ ವಿದ್ವಾಂಸರು, ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ಬೋಧ್ ಗಯಾದಲ್ಲಿ ಒಟ್ಟುಗೂಡಿ ಬಹುಜನ ಸಮುದಾಯಕ್ಕೆ ಸಮಾನತೆ ಮತ್ತು ಸಾಮಾಜಿಕ ಪರಿವರ್ತನೆಯನ್ನು ಮುನ್ನಡೆಸುವಲ್ಲಿ ಉನ್ನತ ಶಿಕ್ಷಣದ ಪಾತ್ರದ ಕುರಿತು ಚರ್ಚಿಸಿದರು. ಫೆಬ್ರವರಿ...

ಭಾರತೀಯ ಬಿಷಪ್‌ಗಳ ಸಂಸ್ಥೆಯ ಮುಖ್ಯಸ್ಥರಾಗಿ ದಲಿತ ಕಾರ್ಡಿನಲ್ ಪೂಲಾ ಆಯ್ಕೆ

ಭಾರತೀಯ ಬಿಷಪ್‌ಗಳ ಸಂಸ್ಥೆಯ ಮುಖ್ಯಸ್ಥರಾಗಿ ದಲಿತ ಕಾರ್ಡಿನಲ್ ಪೂಲಾ ಅವರು ಆಯ್ಕೆಯಾಗಿದ್ದಾರೆ. ಭಾರತದ ಕ್ಯಾಥೋಲಿಕ್‌ಗಳಲ್ಲಿ ಸುಮಾರು ಮೂರನೇ ಎರಡರಷ್ಟು ಜನಸಂಖ್ಯೆ ದಲಿತರೇ ಇದ್ದಾರೆ ಎಂದು ನಂಬಲಾಗಿದ್ದರೂ, ಅವರು ಧಾರ್ಮಿಕ ಆಚರಣೆ ಮತ್ತು ಬಿಷಪ್‌...

ಪಶ್ಚಿಮ ಬಂಗಾಳ ಎಸ್‌ಐಆರ್ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರ್ದೇಶನ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.9) ಹಲವಾರು ನಿರ್ದೇಶನಗಳನ್ನು ನೀಡಿದೆ. ಚುನಾವಣಾ ಆಯೋಗವು ನಿಯೋಜಿಸಿರುವ ಮೈಕ್ರೋ-ಅಬ್ಸರ್ವರ್‌ಗಳ (ಸೂಕ್ಷ್ಮ ವೀಕ್ಷಕರು) ಬದಲಿಗೆ ಗ್ರೂಪ್...

ಮುಸ್ಲಿಮರಿಗೆ ಗುಂಡಿಕ್ಕುವಂತೆ ವಿಡಿಯೋ ಹಂಚಿಕೆ: ಅಸ್ಸಾಂ ಸಿಎಂ ವಿರುದ್ಧ ಓವೈಸಿ ದೂರು: ದ್ವೇಷ ಭಾಷಣ ಆದೇಶ ಉಲ್ಲೇಖ 

ಅಸ್ಸಾಂ ಬಿಜೆಪಿ ಘಟಕದ ಅಧಿಕೃತ 'ಎಕ್ಸ್' ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ಮತ್ತು ಈಗ ಅಳಿಸಲಾದ ವೀಡಿಯೊದಲ್ಲಿ, ಮುಸ್ಲಿಮರ ಮೇಲೆ ಸಾಂಕೇತಿಕವಾಗಿ ಗುಂಡು ಹಾರಿಸುತ್ತಿರುವುದನ್ನು ತೋರಿಸಲಾಗಿದೆ ಎಂದು ಆರೋಪಿಸಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ...