ಮಹಾರಾಷ್ಟ್ರದ ಶಿವಸೇನಾ ಎನ್.ಸಿ.ಪಿ ಮತ್ತು ಕಾಂಗ್ರೆಸ್ ಸಮಾಗಮ ಕರಟಕ ದಮನಕರನ್ನು ಬೆಚ್ಚಿಬೀಳಿಸಿತಂತಲ್ಲಾ. ಸದಾ ಸಂಚುಗಳನ್ನ ರೂಪಿಸುತ್ತ ಅವುಗಳನ್ನ ಕಾರ್ಯರೂಪಗೊಳಿಸುತ್ತ ಭಾರತಕ್ಕೆ ಕ್ಯಾನ್ಸರ್ ತರ ಹರಡುತ್ತಿದ್ದ ಬಿಜೆಪಿಗೆ ಮಹಾರಾಷ್ಟ್ರದ ಮುಲಾಮು ಕಂಗಾಲಾಗಿಸಿದೆ. ಆದರೇನು ಕೆಟ್ಟಜನ ಎಂದೂ ಸುಮ್ಮನೆ ಕೂರುವವರಲ್ಲ. ಕೀಡೆ ಹಾಕುತ್ತಲೇ ಇರುತ್ತಾರೆ. ಸದ್ಯ ಮಹಾರಾಷ್ಟ್ರದಲ್ಲಿನ ಐತಿಹಾಸಿಕ ತ್ರಿವೇಣಿ ಸಂಗಮವನ್ನು ಸ್ವಾದಭರಿತ ಮದ್ಯಕ್ಕೆ ಹೋಲಿಸುವುದಾದರೆ, ಶಿವಸೇನೆ ರಾ ಡ್ರಿಂಕ್ಸಿನಂತಿತ್ತು. ಅದಕ್ಕೀಗ ಎನ್‍ಸಿಪಿ ಎಂಬ ಸೋಡ ಮತ್ತು ಕಾಂಗ್ರೆಸ್ ನೀರು ಬೆರೆತಿದೆ. ಈ ರೂಪದಲ್ಲಿ ಸಿದ್ಧಗೊಂಡ ಪಾನೀಯ ಮಹಾರಾಷ್ಟ್ರೀಯರಿಗೆ ಹಿತವಾಗಬಹುದು. ಇದರಲ್ಲಿ ಯಾವುದೇ ಹೆಚ್ಚಾದರೂ ರುಚಿ ಹದಗೆಡಬಹುದು ಆ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು. ಈ ಡ್ರಿಂಕ್ಸಿಗೆ ಏನಾದರೂ ಬೆರೆಸಿ ಹಾಳುಮಾಡಲು ಬಿಜೆಪಿಗಳು ಹಗಲಿರುಳೂ ಹೊಂಚುಹಾಕುತ್ತವೆ. ಹೊಂಚುಹಾಕುವುದರಲ್ಲಿ ಅವುಗಳು ಹೈಯಿನಾಗಳಿದ್ದಂತೆ, ಆ ನಂತರ ಅವುಗಳ ಕೇಕೆಯೂ ಕೂಡ ಹೈಯಿನಾಗಳ ತರಹವೇ ಇರುತ್ತದೆಂದು ಎನ್ಸಿಪಿಗಳು ಹೇಳುತ್ತವಂತಲ್ಲಾ… ಥೂತ್ತೇರಿ.

`ಬಿ.ಸಿ.ಪಾಟೀಲನದ್ದು ಪೊಲೀಸ್ ಬುದ್ಧಿ. ಅಂದರೆ ಲಾವ್ ಲಾವ್ ಬುದ್ಧಿ’ ಎಂದು ಸಿದ್ದು ಆಡಿಕೊಂಡಿದ್ದಕ್ಕೆ ಕೆರಳಿದ ಪಾಟೀಲ್, ಸಿದ್ದು ವಿರುದ್ಧ ಇಡೀ ಪೊಲೀಸ್ ಇಲಾಖೆಯೇ ತಿರುಗಿ ಬೀಳಲು ಕರೆಕೊಟ್ಟರಲ್ಲ. ಆದರೇನು ಪೊಲೀಸರಾರು ಪಾಟೀಲನ ಮಾತಿಗೆ ಕಿವಿಗೊಡಲಿಲ್ಲ. ಏಕೆಂದರೆ ಸಿದ್ದು ಬಳಸಿದ್ದ `ಅದರಲ್ಲಿ ಒಳ್ಳೆಯವರೂ ಇದ್ದಾರೆ’ ಎಂಬ ಪದವನ್ನ ತಮ್ಮ ಮೇಲೆ ಎಳೆದುಕೊಂಡು ಪಾಟೀಲನ ಮಾತಿಗೆ ಮೈಂಟ್ ಮಾಡಲಿಲ್ಲ. ಬಿ.ಸಿ.ಪಾಟೀಲ್ ಅಂದರೆ ದಕ್ಷ ಪೊಲೀಸ್ ಅಧಿಕಾರಿ. ಸಿನಿಮಾದಲ್ಲಿ ನಾಯಕ ನಟ ಮತ್ತು ಅಪರೂಪದ ರಾಜಕಾರಣಿ ಎಂದು ಭಾವಿಸಿರುವ ಈ ಪೊಲೀಸ್ ಪ್ಯಾರ ಮೂರರಲ್ಲೂ ತಲಹತ್ತದೆ ಬಾಂಬೆ ಪ್ಲೈಟ್ ಹತ್ತಿದವನು. ಅಂದರೆ ಒಳ್ಳೆ ಪೊಲೀಸನೂ ಆಗಲಿಲ್ಲ ಸಿನಿಮಾ ನಟನೂ ಆಗಲಿಲ್ಲ. ಉತ್ತಮ ರಾಜಕಾರಣಿಯೂ ಆಗಲಿಲ್ಲ. ಈಗ ಅನಿವಾರ್ಯವಾಗಿ ಲಿಂಗಾಯತರ ಮತಗಳು ಲಿಂಗಾಯಿತರಿಗೇ ಬೀಳಬೇಕು ಎಂಬ ಸ್ಲೋಗನ್ ಹಿಡಿದು ಹೊರಟಿದ್ದಾನೆ ಬಹು ಜನಾಂಗದ ಅಭ್ಯರ್ಥಿಯಾದ ಈತ ಗೆದ್ದರೂ ಹಿರೇಕೆರೂರು ರಾಜಕಾರಣದ ಸೋಲಂತಲ್ಲಾ….. ಥೂತ್ತೇರಿ.

ಕಾಂಗ್ರೆಸ್‍ನಲ್ಲಿ ಬದುಕನ್ನ ಆರಂಭಿಸಿ ಆಸ್ತಿ ಮಾಡಿಕೊಂಡು ಅಧಿಕಾರ ಅನುಭವಿಸಿ ಈಗ ಬಿಜೆಪಿಯ ಗೋಶಾಲೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಗೊಡ್ಡು ದನದಂತಿರುವ ಎಸ್ಸೆಂ ಕೃಷ್ಣ ಎಂಬ ವೃದ್ಧರು, ಸುಧಾಕರನ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡು `ಈ ಸರಕಾರ ಕೆಡವಿದ್ದು ನಾನೆ. ಸುಧಾಕರನ ರಾಜೀನಾಮೆ ಕೊಡಿಸಿದ್ದು ನಾನೇ’ ಎಂದುಬಿಟ್ಟಿದ್ದಾರಲ್ಲಾ. ಇದರಿಂದ ಕರ್ನಾಟಕದ ಜನ ಆಶ್ಚರ್ಯಪಡುವುದರ ಬದಲು ಈತನ ಪತನ ಕಂಡು ಮರುಗಿದ್ದಾರಂತಲ್ಲಾ. ಈ ಶತಮಾನದ ಬಹುದೊಡ್ಡ ರಾಜಕೀಯ ದ್ರೋಹವೆಸಗಿರುವ ಕೃಷ್ಣನಿಗೆ ಪಕ್ಷಾಂತರಿಗಳನ್ನ ಕಂಡರೆ ಬಲುಪ್ರೀತಿ. ಅದರಲ್ಲೂ, ಉಂಡು ತಿಂದು ಹೊಟ್ಟೆ ಮುಂದುಮಾಡಿಕೊಂಡು ಎದುರು ಕಂಡ ಪಾರ್ಟಿಗೆ ನೆಗೆಯುವ ಹನುಮಂತರನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ. ಅದಕ್ಕೆ ಸುಧಾಕರ ರಾಜೀನಾಮೆ ಕೊಟ್ಟು ನನ್ನಂತಾಗಲು ಸೂಚಿಸಿದ್ದು ಎಂದಿರುವ ಕೃಷ್ಣನಿಗೆ ಸುಧಾಕರನನ್ನು ನೋಡಿದರೆ ತನ್ನ ತಮ್ಮನನ್ನ ನೋಡಿದಂಗಾಗುತ್ತದೆ. ಆತನೂ ನಯವಾಗಿ ಮಾತನಾಡುತ್ತಾನೆ. ನುಣ್ಣಗಿರುವ ಬುರುಡೆಗೆ ವಿಗ್ ಕೂರಿಸಲು ಒಂದು ಗಂಟೆ ತೆಗೆದುಕೊಳ್ಳುತ್ತಾನೆ. ಇಂತೆಲ್ಲಾ ಗುಣಗಳನ್ನ ಗ್ರಹಿಸಿದ ಕೃಷ್ಣ, ಮುದಿಗಾಲದಲ್ಲಿ ಗರತಿಯರನ್ನ ದಾರಿತಪ್ಪಿಸುವಂತಹ ಸಲಹೆ ಕೊಟ್ಟಿರುವುದು ಸೂಕ್ತವಾಗಿದೆಯಂತಲ್ಲಾ… ಥೂತ್ತೇರಿ.

ಈ ಉಪಚುನಾವಣೆಯಲ್ಲಿ ತುಂಬ ತಮಾಸೆ ಮಾಡಿದವರೆಂದರೆ ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರಂತಲ್ಲಾ. ಕೆ.ಆರ್.ಪೇಟೆಗೆ ಚುನಾವಣಾ ಪ್ರಚಾರಕ್ಕೆಂದು ಬಂದ ಕುಮಾರಣ್ಣ, ಕಾಣೆಯಾದ ತಾಯಿ ನೆನೆದು ಅಳುವ ಎಮ್ಮೆಕರುವಿನಂತೆ ಅತ್ತರಲ್ಲಾ. ಎಂತಹ ವಿಷಯಕ್ಕೂ ಅಷ್ಟು ಸುಲಭವಾಗಿ ಅಳದ ಕೆ.ಆರ್.ಪೇಟೆ ಜನ ಮಗನ ಸೋಲು ನೆನೆಸಿಕೊಂಡು ಅಳುತ್ತಿರುವ ಕುಮಾರಣ್ಣ ಸ್ಥಿತಿ ಕಂಡು ನಕ್ಕರಂತಲ್ಲಾ. ನಗುವಿಗೆ ಕಾರಣ, ಮಗನ ಸೋಲಿನ ಕಾರಣವನ್ನೇ ಈವರೆಗೆ ಗ್ರಹಿಸಿಲ್ಲ ಎಂಬುದು. ಮುಖ್ಯವಾಗಿ ಮಂಡ್ಯದ ಸ್ವಾಭಿಮಾನ ಕಡೆಗಣಿಸಿ ಮಗನನ್ನ ತಂದು ನಿಲ್ಲಿಸಿದ್ದು. ಸುಮಲತಾ ಬಗ್ಗೆ ಹಗುರವಾಗಿ ಮಾತನಾಡಿದ್ದೂ ಅಲ್ಲದೆ, ಮೂರು ಜನ ಸುಮಲತಾರನ್ನ ರೆಡಿಮಾಡಿದ್ದೂ ಅಲ್ಲದೆ ಅವರ ಹೆಸರುಗಳು ಸುಮಲತರ ಜೊತೆಗೆ ಮತಯಂತ್ರದಲ್ಲಿರುವಂತೆ ಮಾಡಿದ್ದು. ಇದಲ್ಲದೆ ಕನ್ನಡ ಚಿತ್ರರಂಗದ ನಾಯಕನಟರಾದ ದರ್ಶನ್ ಮತ್ತು ಯಶ್ ಜೋಡಿಯ ¨ಗ್ಗೆ ಹಗುರವಾಗಿ ಮಾತನಾಡಿ ಯುವಜನಾಂಗದ ಓಟು ಕಳೆದುಕೊಂಡಿದ್ದು. ಇವೆಲ್ಲಾ ಸೋಲಿನ ಕಾರಣಗಳೆಂಬುದನ್ನ ಇನ್ನ ತಿಳಿದುಕೊಳ್ಳದ ಕುಮಾರಣ್ಣ ಕೆ.ಆರ್.ಪೇಟೆಯಲ್ಲಿ ಅಳುತ್ತಿರಬೇಕಾದರೆ ಜನ ತುಟಿಯಂಚಿನಲ್ಲಿ ನಕ್ಕರಂತಲ್ಲಾ….. ಥೂತ್ತೇರಿ.

ಅನಂತಕುಮಾರ್ ಹೆಗಡೆ ಎಂಬ ಕಡಲ ತೀರದ ಸಮಸ್ಯೆಯೊಂದು ಆಗಾಗ್ಗೆ ನಾವು ಸಂವಿಧಾನವನ್ನು ಬದಲಿಸುತ್ತೇವೆ. ಅದಕ್ಕಾಗಿಯೇ ಬಂದಿರುವುದು ಎಂದು ವದರುತ್ತಿತ್ತು. ಇದು ಪತ್ರಿಕೆಯಲ್ಲಿ ದೊಡ್ಡ ಸುದ್ದಿಯಾಗಿ ಪ್ರಕಟವಾದಾಗ ಅದರ ವಾರಸುದಾರರು ಪ್ರತಿಕ್ರಿಯಿಸಲಿಲ್ಲ. ಬದಲಿಗೆ ತಮ್ಮ ಬಿಜೆಪಿ ಪಾರ್ಟಿಯ ಅಜೆಂಡಾವನ್ನೇ ಘಂಟಾಘೋಷವಾಗಿ ಹೇಳುತ್ತಿದ್ದಾನೆಂದು ಒಳಗೊಳಗೆ ಮೆಚ್ಚುಗೆ ಸೂಚಿಸುತ್ತಿದ್ದರು. ಆದರೆ ಅನಂತನ ಉವಾಚ ಅರಿವಿಲ್ಲದೆ ಜಾರಿಯನ್ನ ಪಡೆಯುತ್ತಿದೆ. ಅದು ನಮ್ಮ ರಾಜ್ಯದ ಶಾಸಕರ ಅನರ್ಹತೆ ವಿಷಯದಲ್ಲಿ ಮತ್ತು ಬಾಬರಿ ಮಸೀದಿ ವಿಷಯದಲ್ಲಿ ನಮ್ಮ ನ್ಯಾಯಾಲಯಗಳು ಸಂವಿಧಾನವನ್ನ ಬದಿಗಿಟ್ಟು ವರ್ತಿಸಿದ ರೀತಿ ನೋಡಿದರೆ ಸಂವಿಧಾನ ಬದಲಾವಣೆಯೆಂಬುದು ಜರುಗುವುದು ಇದೇರೀತಿ ಎಂಬುದು ಮನವರಿಕೆ ಆಗುತ್ತಿದೆಯಂತಲ್ಲಾ. ಯಾವಕಡೆಯಿಂದ ನೋಡಿದರೂ ಈ ಬಿಜೆಪಿಗಳಿಗೆ ಗಾಂಧೀಜಿ ಮತ್ತು ಅಂಬೇಡ್ಕರ್ ಅರಗಿಸಿಕೊಳ್ಳಲಾರದ ವ್ಯಕ್ತಿತ್ವಗಳಾಗಿ ಕಂಡು, ಆಗಾಗ್ಗೆ ಈ ಎರಡೂ ಮೇರುಪರ್ವತಗಳನ್ನ ಅಲ್ಲಾಡಿಸುವ ಕೆಲಸ ಮಾಡುತ್ತಿವೆಯಂತಲ್ಲಾ… ಥೂತ್ತೇರಿ.

ಮದ್ಯ ಮಾಂಸ ಮಾರಾಟ ಕೇಂದ್ರಗಳ ಮುಂದೆ ರಾರಾಜಿಸುತ್ತಿರುವ ದೇವರ ಹೆಸರುಗಳನ್ನ ಬದಲಿಸಲು ಕೆಲಸಿಲ್ಲದ ಸರಕಾರ ಚಿಂತಿಸುತ್ತಿದೆಯಂತಲ್ಲಾ. ಈ ಬಿಜೆಪಿಗಳ ಆಲೋಚನೆಯನ್ನ ಹಗುರವಾಗಿ ಪರಿಗಣಿಸುವಂತಿಲ್ಲ. ಒಂದಲ್ಲಾ ಒಂದು ದಿನ ಬೆಳಗಿನ ಜಾವ ಎದ್ದು ತಮ್ಮ ಅಜೆಂಡಾಗಳನ್ನು ಜಾರಿ ಮಾಡಿಬಿಡುತ್ತವೆ ಎಂದು ಆತಂಕಗೊಂಡಿರುವ ಕರ್ನಾಟಕದ ಮದ್ಯ ಮಾಂಸದ ಮಳಿಗೆಗಳ ಮಾಲಿಕರು ಚೆಡ್ಡಿಗಳನ್ನ ತೃಪ್ತಿಪಡಿಸಲು ಹಲವು ಹೆಸರುಗಳನ್ನ ಹುಡುಕಿಟ್ಟುಕೊಂಡಿದ್ದಾರಂತಲ್ಲಾ. ಆ ಪೈಕಿ ಮೋದಿ ಮಟನ್ ಸ್ಟಾಲ್, ಶಾ ಪಿಶ್ ಕಾರ್ನರ್, ಈಶ್ವರಪ್ಪ ತಲೆಮಾಂಸದ ಅಂಗಡಿ, ಎಡೂರ್ ನಾನ್‍ವೆಜ್ ಮೀಲ್ಸ್, ರಾಮುಲು ಬೋಟಿ ಕಾರ್ನರ್, ಅಶೋಕ ಗ್ರಾಂಡ್ ಬಿರಿಯಾನಿ, ರೇಣುಕಾಚಾರಿ ರಂ ಸೆಂಟರ್, ಸದಾನಂದ ಬಾಂಗಡೆ ಬಜಾರ್, ಸುರೇಶ್ ಚಿಕನ್ ಸೆಂಟರ್, ರವಿ ಕಬಾಬ್ ಕಾರ್ನರ್, ಗೊಳವಾಲಕರ್ ಗೋಬಿ ಮಂಚೂರಿ, ಸಾವರ್ಕರ್ ಸಾಗರದ ಮೀನೂಟ, ಲಿಂಬಾವಳಿ ಮಸಾಜ್ ಸೆಂಟರ್ ಇತ್ಯಾದಿ ಹೆಸರುಗಳು ನೇತಾಡಲು ರೆಡಿಯಾಗುತ್ತಿವೆಯಂತಲ್ಲಾ. ಇದಲ್ಲದೆ ಬಿಜೆಪಿಯ ಮಹಿಳಾ ಮಣಿಗಳಾದ ಉಮಾ ಭಾರತಿ, ಪ್ರಜ್ಞಾ ಇಂತಹ ಸ್ತ್ರೀಲೋಕದ ಸಮಸ್ಯೆಗಳನ್ನ ಯಾವ ಅಂಗಡಿಗೆ ಇಟ್ಟರೆ ಸೂಕ್ತ ಎಂಬ ಚರ್ಚೆ ನಡೆಯುತ್ತಿದೆಯಂತಲ್ಲಾ. ಚೆಡ್ಡಿಗಳ ದೈವಭಕ್ತಿ ಇನ್ನ ಏನೇನು ಮಾಡಲಿದೆಯೋ ಏನೋ….. ಥೂತ್ತೇರಿ.

LEAVE A REPLY

Please enter your comment!
Please enter your name here