Homeಮುಖಪುಟಎರಡು ಪ್ರೆಸ್ ಮೀಟ್: ಹೊಳೆದ ರಾಹುಲ್, ಕನಲಿದ ಮೋದಿ!

ಎರಡು ಪ್ರೆಸ್ ಮೀಟ್: ಹೊಳೆದ ರಾಹುಲ್, ಕನಲಿದ ಮೋದಿ!

ಸುಲಲಿತ ಮಾತು, ವಿನಯವಂತಿಕೆ, ವಾಸ್ತವದ ಅರಿವು, ಲಘುಹಾಸ್ಯ: 'ಲೀಡರ್ ಮಟಿರಿಯಲ್' ಹಾದಿಯಲ್ಲಿ ರಾಹುಲ್...

- Advertisement -
- Advertisement -

| ನಾನುಗೌರಿ ಡೆಸ್ಕ್ |

ಶುಕ್ರವಾರ ಸಾಯಂಕಾಲ ನಡೆದ ಎರಡು ಪತ್ರಿಕಾಗೋಷ್ಠಿಗಳ ಸ್ವರೂಪ ತದ್ವಿರುದ್ಧವಾಗಿದ್ದವು. ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಕುಳಿತ ದೇಶದ ಪ್ರಧಾನಿಯ ಮುಖದಲ್ಲಿ ಮಂದಹಾಸವಿರಲಿಲ್ಲ, ಇನ್ನೊಂದು ಪ್ರೆಸ್‍ಮೀಟ್‍ನಲ್ಲಿ ರಾಹುಲ್ ಗಾಂಧಿ ಹಸನ್ಮುಖಿಯಾಗಿದ್ದರು. ಪ್ರಧಾನಿ ಯಾವ ಪ್ರಶ್ನೆಗೂ ಉತ್ತರಿಸದೇ ಸೊಕ್ಕೆ ಪ್ರದರ್ಶಿಸಿದರೆ, ರಾಹುಲ್ ಎಲ್ಲ ಪ್ರಶ್ನೆಗಳಿಗೂ ಸರಳವಾಗಿ, ವಿನಯವಂತಿಕೆಯಿಂದ ಉತ್ತರಿಸಿದರು.

ಸುಲಲಿತ ಮಾತಿನ ಓಘ, ಅಲ್ಲಲ್ಲಿ ಲಘು ಹಾಸ್ಯ ಮತ್ತು ದೇಶದ ಪ್ರಚಲತ ಸಮಸ್ಯೆಗಳ ಬಗೆಗೆನ ಅರಿವು… ರಾಹುಲ್ ಪಳಗಿದ್ದಾರೆ. ನಿಜವಾದ ‘ಲೀಡರ್ ಮಟಿರಿಯಲ್’ ಆಗುವ ಹಾದಿಯಲ್ಲಿ ಸದೃಡ ಹೆಜ್ಜೆ ಹಾಕುತ್ತಿದ್ದಾರೆ ಎಂಬುದಕ್ಕೆ ರಾಹುಲ್ ನಡೆಸಿದ ಪತ್ರಿಕಾಗೋಷ್ಠಿ ನಿದರ್ಶನವಾಗಿತ್ತು. ರಾಹುಲ್ ಮಾತಾಡಿದ್ದನ್ನು ಇಲ್ಲಿ ಸಾರಾಂಶೀಕರಿಸಿ, ಅವರದೇ ಮಾತಿನ ಲಹರಿಯಲ್ಲಿ ಕನ್ನಡದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇವೆ…..

‘ಮೊದಲಿಗೆ ಮಾಧ್ಯಮದ ಎಲ್ಲರಿಗೂ ಧನ್ಯವಾದಗಳು. ಅದಕ್ಕಿಂತ ಮುಖ್ಯವಾಗಿ ಬರಲಿರುವ ದಿನಗಳಲ್ಲಿ ಈ ದೇಶ ಯಾವ ದಾರಿಯಲ್ಲಿ ಸಾಗಬೇಕೆಂದು ಸೂಚಿಸುವ ಈ ದೇಶದ ಜನರಿಗೆ ಧನ್ಯಾವಾದಗಳು… ನಮ್ಮ ಕಾರ್ಯಕರ್ತರು, ಬೂತ್ ಕಮಿಟಿ ಸದಸ್ಯರು, ನಮ್ಮ ಅಭ್ಯರ್ಥಿಗಳು, ಎಲ್ಲ ನಾಯಕರಿಗೂ ಧನ್ಯವಾದಗಳು….

ಪ್ರಶ್ನೆ ಕೇಳಲು ಶುರು ಮಾಡಿ…

(ಪ್ರೆಸ್: ನೀವು ಪದೇ ಪದೇ ಮೋದಿಯವರು ಉತ್ತರ ನೀಡಲ್ಲ, ಪ್ರೆಸ್‍ನಿಂದ ದೂರ ಅಂತಿದ್ದಿರಿ. ಈಗ ಅವರು ಪ್ರೆಸ್ ಮೀಟ್ ಮಾಡ್ತಾ ಇದ್ದಾರೆ)

ಹಾಂ ಹಾಂ ಹಾಂ…. ನಾನೂ ಈ ವಿಷಯ ಕೇಳಿದೆ… ಬಡಾ ಕಾಮ್! ಅಂತೂ ಈ ದೇಶದ ಪ್ರಧಾನಿ ಮೊದಲ ಹೆಜ್ಜೆ ಇಟ್ಟರಲ್ಲ. ಗ್ರೇಟ್… ನಮ್ಮ ರಣದೀಪ್ (ಸುರ್ಜೇವಾಲ) ಹೇಳ್ತಾ ಇದ್ದರು: ಅಮಿತ್ ಶಾ ಜೊತೆ ಪ್ರಧಾನಿ ಪ್ರೆಸ್‍ಮೀಟ್‍ಗೆ ಹೋಗಿದ್ದಾರೆಂದು… ವಾವ್ ಎಂತಹ ಅಸಾಂಪ್ರದಾಯಿಕ ನಡೆ.. ಈ ದೇಶದ ಪ್ರಧಾನಿ ಮೊದಲ ಬಾರಿಗೆ ಪಾರ್ಟಿ ಅಧ್ಯಕ್ಷರ ಜೊತೆಗಾರರಾಗಿ ಪ್ರೆಸ್ ಮೀಟ್ ಮಾಡ್ತಾ ಇದ್ದಾರೆ…ನೋಡೋಣ ಅಲ್ಲಿ ಉತ್ತರ ನೀಡ್ತಾರಾ ಅಂತ.. ಮತ್ತೆ ರಣದೀಪ್ ಹೇಳಿದರು ಅಲ್ಲಿ ಬೇಗನೇ ಎಲ್ಲ ಬಾಗಿಲು ಮುಚ್ಚಿ ಬಂದೋಬಸ್ತ್ ಮಾಡಿದ್ದರು ಅಂತಾ… ನಮ್ಮ ಕಡೆಯಿಂದ ಕೆಲವು ಪ್ರಶ್ನೆಗಳನ್ನು ಕೇಳಲು ಒಂದಿಬ್ಬರು ಜರ್ನಲಿಸ್ಟ್‍ಗೆ ಹೇಳಿದ್ದೆವು. ಆದರೆ ಬಾಗಿಲು ತೆಗೆಯದೇ ಇದ್ದುದರಿಂದ ವಾಪಸ್ ಬಂದರು…

ಪ್ರಧಾನಿಯ ಪ್ರೆಸ್ ಮೀಟ್ ಲೈವ್ ಇರಬೇಕಿತ್ತು. ನಾನೂ ಒಂಡೆರಡು ಪ್ರಶ್ನೆ ಕೇಳುವುದಿತ್ತು. ರಫೇಲ್ ಡೀಲ್ ಬಗ್ಗೆ ನನ್ನ ಜೊತೆ ಚರ್ಚಿಸಲು ನೀವೇಕೆ ಹಿಂಜರಿದಿರಿ? ನಾನು ಕೇಳಬೇಕಿತ್ತು: ಈ ಹಿಂದೂಸ್ತಾನದ ಜನರ ಬೆವರಿನ 30 ಸಾವಿರ ಕೋಟಿ ರೂ.ಗಳನ್ನು ಅಂಬಾನಿಗೇಕೆ ನೀಡಿದಿರಿ? ಈ ಚರ್ಚೆ ಮಾಡಲು ನೀವು ಹೆದರಿಬಿಟ್ಟಿರಲ್ಲ?

(ಪ್ರೆಸ್: ಸರ್ಕಾರ ರಚನೆ ಕುರಿತು…ಈ ಪ್ರಶ್ನೆ ವಿವಿಧ ರೂಪದಲ್ಲಿ ಮತ್ತೆ ಮತ್ತೆ ಬಂತು)

ನಾನು ಮೊನ್ನೇನೆ ಹೇಳಿದ್ದೀನಿ..ಆದರೂ ಅದೇ ಪ್ರಶ್ನೆಯನ್ನು ಬೇರೆ ಬೇರೆ ರೂಪದಲ್ಲಿ ಮತ್ತೆ ವಾಪಸ್ ಕೇಳ್ತಾ ಇದ್ದೀರಿ. ಮೇ 23ಕ್ಕೆ ಕಾಯೋಣ… ನಿಮಗ್ಯಾಕೆ ಇಷ್ಟು ಆತುರ? ಜನರ ನಿರ್ಧಾರ ನೋಡಿದ ನಂತರವಷ್ಟೇ ಆ ಬಗ್ಗೆ ನಾನು ಮಾತಾಡುವೆ… ಜನಾದೇಶಕ್ಕೆ ನಾನು ಗೌರವ ಕೊಡುವೆ….

ನೀವು ನನಗೆ ಎಂತಹ ಕಠಿಣ ಪ್ರಶ್ನೆ ಕೇಳುತ್ತ ಬಂದಿದ್ದೀರಿ. ನ್ಯಾಯ್ ಯೋಜನೆಗೆ ದುಡ್ಡನ್ನು ಎಲ್ಲಿಂದ ತರುತ್ತೀರಿ ಇತ್ಯಾದಿ… ಆದರೆ ಮೋದೀಜಿಗೆ, ನೀವು ಮಾವಿನ ಹಣ್ಣು ಹೇಗೆ ತಿಂತೀರಿ, ನೀವು ಕುರ್ತಾ ತೋಳನ್ನು ಕಟ್ ಮಾಡ್ತಿದ್ದಿರಂತೆ, ಡ್ರೆಸ್ ಹೇಗೆ ಹಾಕಿಕೊಳ್ಳುತ್ತೀರಿ, ಈ ಕುರ್ತಾ ಎಲ್ಲಿಂದ ತಂದೀರಿ?
(ಮಂದಹಾಸದಲ್ಲಿ) ಇಂತಹ ಪ್ರಶ್ನೆ ಕೇಳ್ತಿರಪ್ಪ…

(ಪ್ರೆಸ್: ಸರ್ ಅದು ಪ್ರೆಸ್‍ನವರ ಸಂದರ್ಶನ ಅಲ್ಲ ಎಂದು ತಮಾಷೆ)

ಹಾ ಗೊತ್ತು… ಮೊನ್ನೆ ಪ್ರೆಸ್‍ನವರೇ ಬಾಲಾಕೋಟ್ ಬಗ್ಗೆ ಕೇಳಿದರಲ್ಲ? ಅದಕ್ಕೆ ಮೋದೀಜಿ, ಮಳೆ ಬರ್ತಾ ಇದೆ ಅಂತಾ ಹವಾಮಾನ ವರದಿ ಹೇಳೋಕೆ ಶುರು ಮಾಡಿದಾಗ ನನಗೆ ಗಾಬರಿ ಆಯ್ತು… ಅವರು ಏರ್‍ಫೋರ್ಸ್‍ನ ಅಧಿಕಾರಿಗಳಿಗೆ ಹೇಳಿದರಂತೆ: ಮೋಡ ಇವೆ, ರೇಡಾರ್‍ನಿಂದ ತಪ್ಪಿಸಿಕೊಬಹುದು, ದಾಳಿ ಮಾಡಿಬಿಡಿ…(ಬಲಗೈಯಿಂದ 4-5 ಸಲ ಮೇಜು ಕುಟ್ಟುತ್ತ) ಪ್ರೈಮ್ ಮಿನಿಸ್ಟರ್ ಎಕ್ಸ್‍ಲೆಂಟ್! ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ ಎಕ್ಸ್‍ಲೆಂಟ್…..

(ಪ್ರೆಸ್: ವೈಯಕ್ತಿಕ ಟೀಕೆ ಕುರಿತಂತೆ)

ನೋಡಿ, ನನಗೆ ಮೋದಿಯವರ ಬಗ್ಗೆ, ಅವರ ತಂದೆ ತಾಯಿಯವರ ಬಗ್ಗೆ ಗೌರವವಿದೆ. ಅವರ ತಂದೆ ತಾಯಿ ರಾಜಕೀಯದಲ್ಲಿ ಇಲ್ಲ, ಆದರೆ ಅವರೂ ತಪ್ಪು ಮಾಡಿದ್ದರೆ, ಅದನ್ನು ನಾನು ಪ್ರಶ್ನಿಸಲು ಹೋಗುವುದಿಲ್ಲ… ನನ್ನ ಬಗ್ಗೆ, ನನ್ನ ಪರಿವಾರದ ಬಗ್ಗೆ, ನನ್ನ ತಂದೆ-ತಾಯಿ ಬಗ್ಗೆ ಟೀಕಿಸಿವುದು, ಕೆಟ್ಟದಾಗಿ ಮಾತಾಡುವುದು ಮೋದೀಜಿಯವರಿಗೆ ಬಿಟ್ಟಿದ್ದು… ಅವರು ಎಷ್ಟಾದರೂ ಟೀಕಿಸಲಿ…

(ಪ್ರೆಸ್: ವಿಪಕ್ಷವಾಗಿ ಕಾಂಗ್ರೆಸ್ ಪಾತ್ರದ ಕುರಿತು)

2014ರ ಸಂಸತ್‍ನಲ್ಲಿ ನಮಗೆ ತುಂಬ ಕಡಿಮೆ ಸೀಟು ಇದ್ದವು. ಆದರೆ ನಾನು ಖುಷಿಯಿಂದ, ಗರ್ವದಿಂದ ಹೇಳುತ್ತೇನೆ: ವಿಪಕ್ಷವಾಗಿ ಕಾಂಗ್ರೆಸ್ ಅತ್ಯುತ್ತಮ ಅಂದರೆ ‘ಎ’ ಗ್ರೇಡ್ ಮಟ್ಟದ ರಚನಾತ್ಮಕ ವಿರೋಧವನ್ನು ಮಾಡಿದೆ. ಮೋದೀಜಿ ತಪ್ಪಿಸಿಕೊಳ್ಳದಂತೆ ನಾವು ಶೇ 90ರಷ್ಟು ಬಾಗಿಲುಗಳನ್ನು ಮುಚ್ಚಿದ್ದೇವೆ….
ಮೋದಿಯವರಿಗೆ ದೊಡ್ಡ ಅವಕಾಶಗಳಿದ್ವು.. ಅವರಿಂದ ನಾವು ಉತ್ತಮ ಕೆಲಸ ನಿರೀಕ್ಷಿದ್ದೆವು.. ಜನರ ಸಮಸ್ಯೆಗಳನ್ನು ಅವರು ಅರ್ಥ ಮಾಡಿಕೊಳ್ಳಲೇ ಇಲ್ಲ. ಅವರು ಯಾವ ಪ್ರಪಂಚದಲ್ಲಿ ಇದ್ದಾರೋ? ಜನರು ಅವರನ್ನು ಪ್ರಧಾನಿ ಪಟ್ಟದಲ್ಲಿ ಕೂಡಿಸಿದ್ದು ಅವರ ಬೋಧನೆಗಳನ್ನು ಕೇಳುತ್ತ ಕೂಡಲಲ್ಲ. ಅವರು ಸಮಸ್ಯೆ ಬಗೆಹರಿಸಲು.. ನಿರುದ್ಯೋಗ, , ರೈತರ ಬಿಕ್ಕಟ್ಟು, ಆರ್ಥಿಕತೆಯ ಕುಸಿತ ಇದ್ಯಾವುದಕ್ಕೂ ಅವರು ಸ್ಪಂದಿಸಲೇ ಇಲ್ಲ… ನೋಟ್‍ಬ್ಯಾನ್, ಗಬ್ಬರ್‍ಸಿಂಗ್ ಟ್ಯಾಕ್ಸ್ ಮೂಲಕ ಅರ್ಥವ್ಯವಸ್ಥೆಯನ್ನು ಹಾಳು ಮಾಡಿದರು…

ನಾವು ಈ ಎಲ್ಲ ಸಮಸ್ಯೆ ಇಟ್ಟುಕೊಂಡು ದೇಶಾದ್ಯಂತ ಹೋರಾಟ ಮಾಡಿದ್ದೇವೆ. ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸಘಡಗಳಲ್ಲಿ ಅದರ ಪರಿಣಾಮ ನೀವು ನೋಡಿದ್ದೀರಿ.. ಈ ಚುನಾವಣೆಯಲ್ಲಿ ಮೇಲೆ ಹೇಳಿದ ಸಮಸ್ಯೆಗಳನ್ನು ಇಟ್ಟುಕೊಂಡೇ ನಾವು ಪ್ರಚಾರ ಮಾಡಿದ್ದೇವೆ…

ಇದನ್ನು ಓದಿರಿ ನರೇಂದ್ರ ಮೋದಿಯವರ ಮೀಟ್ ದಿ ಪ್ರೆಸ್ಸೂ ಕಾರ್ಟೂನುಗಳು

ಪ್ರೆಸ್: ಉತ್ತರ ಪ್ರದೇಶದಲ್ಲಿ ಮೈತ್ರಿ ಆಗದೇ ಇದ್ದುದರ ಕುರಿತು)

ಕೇಳಿ ಇಲ್ಲಿ. ಈ ಸಲ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಸ್ಪೇಸ್‍ಗಾಗಿ ಹುಡುಕಾಡಿಲ್ಲ. ನಮ್ಮ ಮೊದಲ ಉದ್ದೇಶ ಮೋದಿಯನ್ನು ಸೋಲಿಸುವುದು… ಕಾಂಗ್ರೆಸ್ ನೀತಿಗಳನ್ನು ಜನರಿಗೆ ತಲುಪಿಸುವುದು… ಮುಂದಿನದು ಅಸೆಂಬ್ಲಿ ಚುನಾವಣೆ…

ಎಸ್‍ಪಿ-ಬಿಎಸ್‍ಪಿ ಮೈತ್ರಿಯನ್ನು ನಾವು ಸ್ವಾಗತಿಸಿದ್ದೇವೆ. ಮಾಯಾವತಿಯವರ ಬಗ್ಗೆ ನನಗೆ ಗೌರವವಿದೆ… ಮಾಯಾವತಿ, ಮಮತಾ ಬ್ಯಾನರ್ಜಿ, ನಾಯ್ಡು ಇವರ್ಯಾರೂ ಮೋದಿ ಬೆಂಬಲಿಸುವುದಿಲ್ಲ ಎಂಬ ಖಾತ್ರಿಯಿದೆ…

ಈ ಚುನಾವಣೆ ಆರೆಸ್ಸೆಸ್ ಬಿಜೆಪಿಗಳಿಂದ ನಮ್ಮ ಸಂವಿಧಾನ ರಕ್ಷಿಸಲು, ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಕಾಪಾಡಿಕೊಳ್ಳಲು ನಡೆದಿದೆ,, ಜನ ನಮಗೆ ಅವಕಾಶ ಕೊಡುತ್ತಾರೆ ಎಂಬ ನಂಬಿಕೆಯಿದೆ…

ಎಲ್ಲರಿಗೂ ಧನ್ಯವಾದ…(ಮತ್ತೆ ನಗುತ್ತ) ನಾನೀಗ ಪ್ರೆಸ್ ಮೀಟ್ ಚೆನ್ನಾಗಿ ಮಾಡ್ತಾ ಇದ್ದೀನಿ ಅಲ್ಲವಾ? ಹೌದಲ್ಲೋ ನೀವೇ ನೋಡಿದಿರಲ್ಲ ಈಗ.. ಅದಕ್ಕೆ ಯಾರು ಕಾರಣ? ನೀವೇ… ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ನೆರವಾಗಿದ್ದೀರಿ… ಥ್ಯಾಂಕ್ಸ್, ಆಲ್ ದಿ ಬೆಸ್ಟ್

ಇದನ್ನು ಓದಿರಿ ಇದಿಂನ ಅಮಿತ್ ಷಾ ಪತ್ರಿಕಾಗೋಷ್ಠಿಯಲ್ಲಿ ಒಂದೂ ಪ್ರಶ್ನೆಯನ್ನು ತೆಗೆದುಕೊಳ್ಳದ ಪ್ರಧಾನಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...