Homeಮುಖಪುಟದಿ ಕ್ವಿಂಟ್ ಸಂಪಾದಕನ ಮೇಲಿನ `ಐಟಿ ಹಲ್ಲೆ’ ಏನನ್ನು ಸೂಚಿಸುತ್ತಿದೆ...?

ದಿ ಕ್ವಿಂಟ್ ಸಂಪಾದಕನ ಮೇಲಿನ `ಐಟಿ ಹಲ್ಲೆ’ ಏನನ್ನು ಸೂಚಿಸುತ್ತಿದೆ…?

ಕೇಂದ್ರ ಸರ್ಕಾರದ ಐಟಿ ಇಲಾಖೆಯ `ಕಾರ್ಯಾಚರಣೆ’ ಹೇಗೆ ಕಾನೂನು ಉಲ್ಲಂಘನೆ ಮಾಡಿ ತನ್ನನ್ನು `ಟ್ರ್ಯಾಪ್’ ಮಾಡಲು ಯತ್ನಿಸುತ್ತಿದೆ ಎಂಬುದನ್ನು ಅವರು ಅದರಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

- Advertisement -
- Advertisement -

| ಗೌರಿ ಡೆಸ್ಕ್ |

ಮೇ 29, `ದಿ ಕ್ವಿಂಟ್’ ಆನ್‍ಲೈನ್ ಪೋರ್ಟಲ್‍ನ ಸಂಸ್ಥಾಪಕ ಸಂಪಾದಕ ರಾಘವ್ ಬಹ್ಲ್ ಒಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದರು. ಅವತ್ತಿಗೆ ಸರಿಯಾಗಿ ಇಪ್ಪತ್ತೆಂಟು ದಿನಗಳ ಹಿಂದೆ (ಮೇ 1ರಿಂದ) ಶುರುವಾದ ಕೇಂದ್ರ ಸರ್ಕಾರದ ಐಟಿ ಇಲಾಖೆಯ `ಕಾರ್ಯಾಚರಣೆ’ ಹೇಗೆ ಕಾನೂನು ಉಲ್ಲಂಘನೆ ಮಾಡಿ ತನ್ನನ್ನು `ಟ್ರ್ಯಾಪ್’ ಮಾಡಲು ಯತ್ನಿಸುತ್ತಿದೆ ಎಂಬುದನ್ನು ಅವರು ಅದರಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಅದರ ಸಾರಾಂಶ ಹೀಗಿದೆ.

ಮೇ 29, 2019ರಂದು ರಾಘವ್ ಅವರಿಗೆ ಅಧಿಕೃತ `ಇ ಕೋಟ್ರ್ಸ್’ ಆನ್‍ಲೈನ್ ಸೇವೆಯಿಂದ ಒಂದು ಸುದ್ದಿ ಬಂದು ತಲುಪುತ್ತದೆ. ಅವರ ವಿರುದ್ಧ ಮೀರತ್‍ನ ಚೀಫ್ ಜ್ಯೂಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‍ನಲ್ಲಿ ಮೇ 3ರಂದು ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ಅವುಗಳ ವಿಚಾರಣೆ ಜೂನ್ 6ಕ್ಕೆ ಇದೆ ಎಂಬುದು ಅದರ ಸಾರಾಂಶ.

ಐ.ಟಿ ಇಲಾಖೆಯ ಶೋಕಾಸ್ ನೋಟಿಸ್

ಅದನ್ನು ನೋಡಿದ ರಾಘವ್‍ರಿಗೆ ನಿಜಕ್ಕೂ ಶಾಕ್ ಆಗುತ್ತದೆ. ಯಾಕೆಂದರೆ, ದೂರು ದಾಖಲಾಗಿ ಹೆಚ್ಚೂಕಮ್ಮಿ ಒಂದು ತಿಂಗಳು ಕಳೆಯುತ್ತಾ ಬಂದರು ಅದರ ಬಗ್ಗೆ ಸಮನ್ಸ್ ಆಗಲಿ, ನೋಟಿಸನ್ನೇ ಆಗಲಿ ನೀಡದ ಐಟಿ ಇಲಾಖೆ, ಮುಂದಿನ ವಿಚಾರಣೆ ಇನ್ನೇನು ಬೆರಳೆಣಿಕೆಯ ದಿನಗಳಿರುವಾಗ ಸಾಕ್ಷ್ಯ ಸಮೇತ ವಿಚಾರಣೆಗೆ ಹಾಜರಾಗಿ ಎಂದದ್ದು ನಮ್ಮ ಸಂವಿಧಾನದ `ನೈಸರ್ಗಿಕ ನ್ಯಾಯ’ದ ಸ್ಪಷ್ಟ ಉಲ್ಲಂಘನೆಯಾಗಿತ್ತು. ಅದಕ್ಕಿಂತಲೂ ಮುಖ್ಯವಾಗಿ ಇದೇ ವಿಚಾರವಾಗಿ ಈ ಹಿಂದೆ ಐಟಿ ಇಲಾಖೆ ಕೊಟ್ಟಿದ್ದ ಶೋಕಾಸ್ ನೋಟಿಸ್‍ಗೆ ಪ್ರತಿಕ್ರಿಯಿಸುತ್ತಾ ಅದು ಆರೋಪಿಸುತ್ತಿರುವ ವ್ಯವಹಾರದಲ್ಲಿ ತಾವು ಯಾವ ಅಕ್ರಮವನ್ನೂ ನಡೆಸಿಲ್ಲ ಎಂಬುದನ್ನು ಸಾಬೀತುಪಡಿಸಲು ವಹಿವಾಟು ನಡೆದ ಎಲ್ಲಾ ದಾಖಲೆಗಳನ್ನೂ ಮತ್ತು ಈ ಆರ್ಥಿಕ ವರ್ಷದಲ್ಲಿ ತಾವು, ತಮ್ಮ ಮಡದಿ ರಿತು ಕಪೂರ್ ಸಲ್ಲಿಸಿದ್ದ ಆದಾಯ ತೆರಿಗೆ ಪಾವತಿ ಪ್ರಮಾಣಪತ್ರಗಳನ್ನು ತಮ್ಮ ಚಾರ್ಟೆಡ್ ಅಕೌಂಟೆಂಟ್ (ಸಿಎ) ಮೂಲಕ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ್ದರು. ಅವ್ಯಾವುಗಳನ್ನೂ ಲೆಕ್ಕಕ್ಕೆ ಪರಿಗಣಿಸದೆ ಐಟಿ ಇಲಾಖೆ ಈ ದೂರುಗಳನ್ನು ದಾಖಲಿಸಿದ್ದು ಇಲ್ಲಿ ಸ್ಪಷ್ಟವಾಗಿತ್ತು.

ಮೇ 1ರಂದು ರಾಘವ್ ಅವರ ಮೇಲ್ ಐಡಿಗೆ  incometax.gov.in ಅಕೌಂಟ್‍ನಿಂದ ಒಂದು ಶೋಕಾಸ್ ನೋಟಿಸ್ ಬಂದಿತ್ತು. `ನೀವು ಲಂಡನ್‍ನಲ್ಲಿ ಖರೀದಿಸಿರುವ ಆಸ್ತಿಯೊಂದರ ಮೌಲ್ಯವನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲುವಾಗ ತಪ್ಪೆಸಗಿದ್ದೀರಿ, ಆ ಆಸ್ತಿಯ ಮೌಲ್ಯಕ್ಕಿಂತ 2.45 ಕೋಟಿ ಕಡಿಮೆ ಮೌಲ್ಯ ತೋರಿಸಿ ತೆರಿಗೆ ವಂಚಿಸಿದ್ದೀರಿ ಎಂದು ಕಪ್ಪುಹಣ ನಿಗ್ರಹ ಕಾಯ್ದೆ-2015ರ ಸೆಕ್ಷನ್ 50 ಮತ್ತು 51ರಡಿ ನಿಮ್ಮ ವಿರುದ್ಧ ಯಾಕೆ ದೂರು ದಾಖಲಿಸಬಾರದು ಎಂಬುದಕ್ಕೆ ಸೂಕ್ತ ದಾಖಲೆಗಳ ಸಹಿತ ವಿವರಣೆ ಕೊಡಿ. ಇಲ್ಲವಾದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ನಿಮ್ಮ ಅಭ್ಯಂತರವಿಲ್ಲವೆಂದು ಪರಿಗಣಿಸಬೇಕಾಗುತ್ತದೆ’ ಎಂಬುದು ಇಡೀ ನೋಟಿಸಿನ ಸಾರಾಂಶ. ವಿಪರ್ಯಾಸವೆಂದರೆ ಮೇ 1ನೇ ತಾರೀಕು ನೋಟಿಸು ಬರುತ್ತೆ, ದಾಖಲೆ ಸಲ್ಲಿಸಲು ಮೇ 2ನೇ ತಾರೀಕು ಮಧ್ಯಾಹ್ನ 3.30ಕ್ಕೆ ಡೆಡ್‍ಲೈನ್ ಫಿಕ್ಸ್ ಮಾಡಲಾಗುತ್ತೆ. ಅಂದರೆ ಕೇವಲ 24 ಗಂಟೆಗಳ ಒಳಗೆ ಅವರು ದಾಖಲೆಗಳನ್ನು ಹಾಜರುಪಡಿಸಬೇಕಾಗಿತ್ತು.

ರಾಘವ್ ಅವರ ಸಿಎ,  incometax.gov.in ಅಕೌಂಟ್‍ಗೆ ಮೇಲ್ ಮಾಡಿ ನಿಮ್ಮ ಶೋಕಾಸ್ ನೋಟಿಸ್‍ನಲ್ಲಿ ಸಾಕಷ್ಟು ತಪ್ಪು ಆರೋಪಗಳಿವೆ, ಅವುಗಳಿಗೆಲ್ಲ ಸೂಕ್ತ ದಾಖಲೆ ಒದಗಿಸಿ, ಕಾನೂನು ಸಲಹೆ ಪಡೆಯಲು ಎರಡು ವಾರ ಕಾಲಾವಕಾಶ ಬೇಕೆಂದು ಮೇ 2ರಂದು ಇಮೇಲ್ ರವಾನಿಸಿದ್ದರು. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿದ್ದ ಐಟಿ ಇಲಾಖೆ, ಎರಡು ವಾರ ಕಾಲಾವಕಾಶ ಕೊಡಲು ಸಾಧ್ಯವೇ ಇಲ್ಲ, ಆದರೆ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದಿದ್ದರು ಫ್ಯಾಕ್ಚುಯಲ್ ಎರರ್‍ಗಳನ್ನಾದರು ನೀವು ಇವತ್ತೇ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಾಕೀತು ಮಾಡಿತ್ತು. ರಾಘವ್ ಅವರ ಸಿಎ ಅವತ್ತೇ `ಫ್ಯಾಕ್ಚುಯಲ್ ಪೊಸಿಷನ್’ಗಳನ್ನು ದಾಖಲಿಸಿ ಇಮೇಲ್ ರವಾನಿಸಿದ್ದರು.

ರಾಘವ್ ಅವರು ಒಪ್ಪಿಕೊಳ್ಳುವಂತೆ 2015ರಲ್ಲಿ ಅವರು ಲಂಡನ್‍ನಲ್ಲಿ 27.76 ಕೋಟಿ ಮೌಲ್ಯದ ಆಸ್ತಿ ಖರೀದಿಸಿದ್ದು ನಿಜ. ಆದರೆ ಅದಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರವನ್ನು ಬ್ಯಾಂಕ್ ಮಾರ್ಗಗಗಳಲ್ಲೇ ನಡೆಸಿದ್ದಾರೆ. ಹಾಗಾಗಿ ಕಪ್ಪು ಹಣ ವಹಿವಾಟಿಗೆ ಅವಕಾಶವೇ ಇಲ್ಲ. ಖರೀದಿಯ ಮುಂಗಡವಾಗಿ ರಾಘವ್ ಅವರ ಅಕೌಂಟ್‍ನಿಂದ 2.4 ಕೋಟಿ ವರ್ಗಾವಣೆಯಾದರೆ, ಅವರ ಮಡದಿ ರಿತು ಕಪೂರ್ ಅಕೌಂಟ್‍ನಿಂದ ಅಷ್ಟೇ ಮೊತ್ತ ವರ್ಗಾವಣೆಯಾಗಿದೆ. ಸಾಮಾನ್ಯವಾಗಿ ವಿದೇಶಗಳಲ್ಲಿ ಆಸ್ತಿ ಖರೀದಿಸುವಾಗ ಅಲ್ಲಿನ ಕಟ್ಟಳೆಗಳಿಗೆ ಒಳಪಟ್ಟು ಖರೀದಿ ಪ್ರಕ್ರಿಯೆಯನ್ನು ಸರಾಗವಾಗಿ ಪೂರ್ಣಗೊಳಿಸಿಕೊಡುವ ಕೆಲ ಏಜೆನ್ಸಿಗಳಿರುತ್ತವೆ. ಅಂತದ್ದೇ ಒಂದು ಆರ್.ಬಿ.ಆರ್.ಕೆ ಇನ್ವೆಸ್ಟ್‍ಮೆಂಟ್ ಕಂಪನಿಗೆ ರಾಘವ್ ತಮ್ಮ ಖರೀದಿ ವ್ಯವಹಾರ ಒಪ್ಪಿಸಿದ್ದರು. ಆ ಕಂಪನಿ ಇಂಗ್ಲೆಂಡ್‍ನ ಬರ್‍ಕ್ಲೇ ಬ್ಯಾಂಕ್‍ನಿಂದ ರಾಘವ್ ಅವರಿಗೆ ಸುಮಾರು 17.95 ಕೋಟಿಯಷ್ಟು ಸಾಲ ಮಂಜೂರು ಮಾಡಿಸಿದ್ದಲ್ಲದೆ, ಮಿಕ್ಕುಳಿದ 2.45 ಕೋಟಿಯನ್ನು ತನ್ನ ಅಕೌಂಟ್‍ನಿಂದ ಆಸ್ತಿ ಒಡೆಯರಿಗೆ ವರ್ಗಾವಣೆ ಮಾಡಿತ್ತು. ಈಗ ಐಟಿ ಇಲಾಖೆ ಹೆಚ್ಚುವರಿ ಮೌಲ್ಯ ಮುಚ್ಚಿಟ್ಟಿದ್ದೀರಿ ಎಂದು ಆರೋಪಿಸುತ್ತಿರುವುದು ಇದೇ ರೂ. 2.45 ಕೋಟಿಯ ಮೇಲೆ.

ಈ ಕಂಪನಿಯಲ್ಲಿ ರಾಘವ್ ಅವರ ಹೆಂಡತಿ ರಿತು ಕಪೂರ್ ಅವರು ಹೂಡಿಕೆ ಮಾಡಿದ್ದು, ಆ ಹೂಡಿಕೆ ಆಧಾರದಲ್ಲಿ ಕಂಪನಿ ಅಷ್ಟು ಮೊತ್ತ ಪಾವತಿಸಿದೆ. ಆ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಕ್ಕೆ ರಿತು ಅವರ ಬಳಿ ಎಲ್ಲಾ ದಾಖಲೆಗಳಿದ್ದು ಅದನ್ನು ಐಟಿ ಇಲಾಖೆಯ ಮುಂದೆ ಘೋಷಿಸಿಕೊಂಡು, ಕಟ್ಟಬೇಕಾದ ತೆರಿಗೆಯನ್ನೆಲ್ಲ ಪಾವತಿಸಿದ್ದಾರೆ. ಹಾಗಾಗಿ ಕಂಪನಿ ಪಾವತಿಸಿದ ಮೊತ್ತಕ್ಕೂ ರಾಘವ್ ದಂಪತಿಗಳು ನ್ಯಾಯಬದ್ಧವಾಗಿಯೇ ತೆರಿಗೆ ಕಟ್ಟಿದ್ದಾರೆ.

ಇದೆಲ್ಲವನ್ನು ವಿವರಿಸಿ ಇಮೇಲ್ ಕಳಿಸಿದ್ದರೂ ಅದನ್ನು ಲೆಕ್ಕಿಸದೆ, ಐಟಿ ಇಲಾಖೆ ಮೇ 3ನೇ ತಾರೀಕು ಎರಡು ದೂರುಗಳನ್ನು ದಾಖಲಿಸುತ್ತದೆಂದರೆ ಇದು ಪೂರ್ವ ನಿಯೋಜಿತ ಸಂಚು ಎಂಬುದು ರಾಘವ್ ಅವರ ಅಭಿಪ್ರಾಯ. ಯಾಕೆಂದರೆ, ಮೇಲ್‍ನಲ್ಲಿ ವಿವರಿಸಿದ್ದು ಮಾತ್ರವಲ್ಲದೆ ಮೇ 13ರಂದು ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಐಟಿ ಕಚೇರಿಗೆ ಹೋದ ರಾಘವ್ ಅವರ ಪ್ರತಿನಿಧಿಗಳು ಅವುಗಳನ್ನು ಸ್ವೀಕರಿಸಿ, ತಮ್ಮ ಸ್ಪಷ್ಟೀಕರಣ ದಾಖಲಿಸಲು ಅವಕಾಶ ಕೊಡುವಂತೆ ಕೇಳಿದ್ದರು. ಆದರೆ ಅಧಿಕಾರಿಗಳು ದಾಖಲೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದು ಮಾತ್ರವಲ್ಲದೆ, ಅವರ ಸ್ಪಷ್ಟೀಕರಣವನ್ನೂ ದಾಖಲಿಸಿಕೊಳ್ಳದೆ ವಾಪಾಸು ಕಳಿಸಿದ್ದರು. ಅವತ್ತು ಸಹಾ, ನಿಮ್ಮ ಕಕ್ಷಿದಾರರ ಮೇಲೆ ಈಗಾಗಲೇ (ಮೇ 3ರಂದು) ಕೇಸು ದಾಖಲಿಸಿದ್ದೇವೆ ಎಂಬ ಗುಟ್ಟನ್ನು ಐಟಿ ಅಧಿಕಾರಿಗಳು ಬಿಟ್ಟುಕೊಟ್ಟಿರಲಿಲ್ಲ. ಕೊನೆಗೆ ರೆಜಿಸ್ಟಾರ್ ಪೋಸ್ಟ್ ಮೂಲಕ ಅವುಗಳನ್ನೆಲ್ಲ ಐಟಿ ಕಚೇರಿಗೆ ಕಳುಹಿಸಿ, ಮೇ 14ರಂದು ಅದೇ ದಾಖಲೆಗಳ ಪ್ರತಿಗಳನ್ನು iಟಿಛಿomeಣಚಿx.gov.iಟಿ ಅಕೌಂಟಿಗೆ ಮೇಲ್ ಕೂಡಾ ಮಾಡಿದ್ದರು. ಆದರೆ ಅಲ್ಲಿಂದ ಯಾವ ಪ್ರತಿಕ್ರಿಯೆಯೂ ಬಂದಿರಲಿಲ್ಲ.

ಫ್ಯಾಕ್ಚುಯಲ್ ದೋಷಗಳಿರುವ ಶೋಕಾಸ್ ನೋಟಿಸ್ ನೀಡುವುದು, ನೋಟಿಸ್ ತಲುಪಿದ ಒಂದೇ ದಿನಕ್ಕೆ ದಾಖಲೆ ಒದಗಿಸುವಂತೆ ಅಪ್ರಾಯೋಗಿಕ ಗಡುವು ನೀಡುವುದು, ಅವಧಿ ವಿಸ್ತರಣೆ ಕೋರಿಕೆಯನ್ನು ಮನ್ನಿಸದೆ ಅವರು ಸಲ್ಲಿಸುವ ಪ್ರತಿಕ್ರಿಯೆಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ಮಾರನೇ ದಿನವೇ ದೂರು ದಾಖಲಿಸುವುದು, ಆ ದೂರಿನ ಕುರಿತು ಯಾವ ಸುಳಿವನ್ನೂ ಬಿಟ್ಟುಕೊಡದಿರುವುದು, ದಾಖಲೆ ಸಲ್ಲಿಸಲು ಕಚೇರಿಗೆ ಹೋದರೆ ಸ್ವೀಕರಿಸದೆ ವಾಪಾಸು ಕಳಿಸುವುದು, ವಿಚಾರಣೆಗೆ ಕೆಲವೇ ದಿನ ಇರುವಾಗ ಇವರಿಗೆ ಸುದ್ದಿ ಗೊತ್ತಾಗುವುದು, ಇವೆಲ್ಲವನ್ನೂ ಗಮನಿಸಿದರೆ ಕೇಂದ್ರ ಐಟಿ ಇಲಾಖೆ ಉದ್ದೇಶಪೂರ್ವಕವಾಗೇ, ಎಲ್ಲಾ ಕಟ್ಟಳೆಗಳನ್ನು ಧಿಕ್ಕರಿಸಿ ತನ್ನನ್ನು ಟ್ರ್ಯಾಪ್ ಮಾಡಲು ಯತ್ನಿಸುತ್ತಿದೆ ಎಂಬುದು ರಾಘವ್ ಅವರ ಸ್ಪಷ್ಟ ನಿಲುವು.

ರಾಘವ್ ಮತ್ತು ರಿತು ದಂಪತಿಗಳು `ನ್ಯೂಸ್ 18’ ಸಂಸ್ಥೆಯಿಂದ ಹೊರಬಂದ ನಂತರ 2015ರಲ್ಲಿ `ದಿ ಕ್ವಿಂಟ್’ ಎಂಬ ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಆನ್‍ಲೈನ್ ನ್ಯೂಸ್ ಪೋರ್ಟಲ್ ಆರಂಭಿಸಿದ್ದರು. 2016ರಲ್ಲಿ ಬ್ಲೂಮ್‍ಬರ್ಗ್ ನ್ಯೂಸ್ ಸಂಸ್ಥೆ ಪಾಲುದಾರನಾಗಿ ಇದರಲ್ಲಿ ಹೂಡಿಕೆ ಮಾಡಿದೆ. ಬಹುಪಾಲು ಮಾಧ್ಯಮಗಳು, ಪತ್ರಿಕೆಗಳು ಆಳುವ ಸರ್ಕಾರದ ಕೈಗೊಂಬೆಯಂತೆ, ಒಂದು ಪ್ರಬಲ ರಾಜಕೀಯ ಪಕ್ಷದ ಪಕ್ಷಪಾತಿಗಳಂತೆ ವರ್ತಿಸುತ್ತಿವೆ ಎಂಬ ಅಭಿಪ್ರಾಯ ಜನರ ನಡುವೆ ಮೂಡುತ್ತಿದ್ದ ಕಾಲದಲ್ಲಿ `ದಿ ಕ್ವಿಂಟ್’ ಅದಕ್ಕೆ ತದ್ವಿರುದ್ಧವಾಗಿ ಯಾರ ಮುಲಾಜಿಗೂ ಒಳಗಾಗದೆ ಅಧಿಕಾರಸ್ಥರ ವಿರುದ್ಧವೇ ಆಘಾತಕಾರಿ ಸತ್ಯಗಳನ್ನು ಹೊರಗೆಡವುವ ಸುದ್ದಿಸಂಸ್ಥೆಯಾಗಿ ಗುರುತಿಸಿಕೊಂಡಿತ್ತು. 2018ರಲ್ಲಿ ರಾಘವ್ ಅವರ ಮೇಲೆ ಐಟಿ ದಾಳಿ ನಡೆದಾಗ, ಅದರ ಹಿಂದೆ `ದಿ ಕ್ವಿಂಟ್’ ನ್ಯೂಸ್ ಸಂಸ್ಥೆಯನ್ನು ಹತ್ತಿಕ್ಕುವ ಹುನ್ನಾರಗಳಿರಬಹುದೆಂದು ಹಲವಾರು ವಿಶ್ಲೇಷಕರು ಅಂದಾಜಿಸಿದ್ದರು. ಈಗ ನಡೆಯುತ್ತಿರುವ ವಿದ್ಯಮಾನ ಗಮನಿಸಿದರೆ ಅದು ನಿಜವೆನ್ನಿಸುತ್ತದೆ.

ಇದನ್ನೂ ಓದಿರಿ: ಕನ್ನಡದ ನಟರ ಮೇಲೆಕೆ ಐ.ಟಿ ಕಣ್ಣು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...