Homeಅಂಕಣಗಳುಜನರ ತಲೆಗೆ ಮೌಢ್ಯದ ‘ಚಿಪ್ಪು’!

ಜನರ ತಲೆಗೆ ಮೌಢ್ಯದ ‘ಚಿಪ್ಪು’!

- Advertisement -
- Advertisement -

ಬುರುಡೆ ಜ್ಯೋತಿಷ್ಯವು ಹೇಗೆ ಹುಟ್ಟಿದ ಮಗುವನ್ನು ತಕ್ಷಣವೇ ಸುತ್ತಿಕೊಳ್ಳುತ್ತದೆ ಮತ್ತು ಹೆಸರಿನ ನೆಪದಲ್ಲಿ ಹೇಗೆ ‘ಹ್ಯೂಮನ್ ಐಡೆಂಟಿಟಿ, ಸ್ಟೇಟಸ್ ರೆಕಗ್ನಿಷನ್ ಸಿಸ್ಟಮ್’ ಎಂಬ ಅದ್ಭುತ ಆವಿಷ್ಕಾರವು ಮನುಷ್ಯನ ಜಾತಿ ಮತ್ತು ಹಿನ್ನೆಲೆಯನ್ನು ಹೇಗೆ ಗುರುತಿಸುತ್ತದೆ ಹಾಗೂ ‘ಹ್ಯೂಮನ್ ಫಿಲ್ತ್ ಸೆಪರೇಶನ್ ಎಂಡ್ ಸೆಗ್ರೆಗೇಶನ್ ಸಿಸ್ಟಮ್’ ಎಂಬ ಅವಿಷ್ಕಾರವು ಹೇಗೆ ನಿಕೃಷ್ಟ ಮಾನವರನ್ನು ಗುರುತಿಸಿ, ಜೀವನದುದ್ದಕ್ಕೂ ಪ್ರತ್ಯೇಕಿಸಿ ಮೂಲೆಗುಂಪು ಮಾಡುತ್ತದೆ ಎಂಬುದನ್ನು ಕಳೆದ ಸಂಚಿಕೆಯಲ್ಲಿ ನೋಡಿದೆವು.

ದಶಕಗಳ ಹಿಂದೆ ಪಂಚಾಂಗಗಳು ಮನೆಮನೆಯನ್ನು ಪ್ರವೇಶಿಸಲು ಅರಂಭಿಸಿದವು. ದಿನಮಾನವನ್ನು ಅಂದರೆ ಭೂಮಿ ಚಂದ್ರಾದಿ ಗ್ರಹಗಳ ಚಲನೆಯನ್ನು, ಋತುಗಳನ್ನು, ಗ್ರಹಣಗಳನ್ನು ನಿಖರವಾಗಿ ಗುರುತಿಸುವ ಈ ಪಂಚಾಂಗಗಳು ವಾಸ್ತವಿಕವಾಗಿ ನಮ್ಮ ಪುರಾತನ ಖಗೋಳಶಾಸ್ತ್ರಜ್ಞರ, ಗಣಿತಜ್ಞರ, ವೈಜ್ಞಾನಿಕ ಕೊಡುಗೆ. ಅದರೆ, ಅದರ ಪೇಟೆಂಟ್ ಪಡೆದುಕೊಂಡ ಬುರುಡೆ ಶಾಸ್ತ್ರಜ್ಞರು ಅದಕ್ಕೆ ತಮ್ಮದೇ ಆದ ಹೊಸಹೊಸ ಆವಿಷ್ಕಾರಗಳನ್ನು ಸೇರಿಸಿ, ಮುಗ್ಧ ಜನರ ‘ಇಯರ್ ಮೇಲೆ ಫ್ಲವರ್’ ಇಡಲು ಪ್ರಾರಂಭಿಸಿದರು.
ಒಂದು ಪ್ರದೇಶದ ಋತುಮಾನ, ಹವಾಮಾನ, ಮಳೆಯ ಸಮಯವನ್ನು ಗುರುತಿಸಲು ಈ ಲೆಕ್ಕಾಚಾರಗಳು ರೈತಾಪಿ ಜನರಿಗೆ ಅನುಕೂಲಕರವಾದುದರಿಂದ ಸ್ವಲ್ಪ ಅಕ್ಷರ ಬಲ್ಲವರ ಮನೆಗಳಲ್ಲಿ ಪಂಚಾಂಗಗಳು ಇರುತ್ತಿದ್ದವು. ಅವರು ಕಾಂಪೌಂಡರ್‍ಗಳಂತೆ ಉಳಿದವರ ಚಿಕ್ಕಪುಟ್ಟ ಸಮಸ್ಯೆಗಳಿಗೆ ಮದ್ದು ಕೊಡುತ್ತಿದ್ದರು. ದೊಡ್ಡ ಸಮಸ್ಯೆಗಳು ಎದುರಾದರೆ ಜೋಯಿಸರ ಬಳಿಯೇ ಹೋಗಬೇಕಾಗುತ್ತಿತ್ತು.
ಈ ಪಂಚಾಂಗಗಳಲ್ಲಿ ನಕ್ಷತ್ರಗಳ ಪಟ್ಟಿ, ಘಳಿಗೆ, ಇಲ್ಲದ ರಾಹುಕಾಲ, ಗುಳಿಕಕಾಲ, ಯಮಗಂಡ ಕಾಲ, ರಾಶಿ, ದೋಷಗಳು, ಫಲಗಳು, ಕಾಟಗಳು ಇತ್ಯಾದಿಗಳನ್ನು ಸೇರಿಸಲಾಯಿತು. ಇವರ ಅತ್ಯಂತ ದೊಡ್ಡ ಆವಿಷ್ಕಾರವೆಂದರೆ ವೈಜ್ಞಾನಿಕವಾದ ಪುರಾತನ ಆವಿಷ್ಕಾರಗಳಿಗೆ ಬುರುಡೆ ಅಪ್ಲಿಕೇಷನ್‍ಗಳನ್ನು ಕಂಡುಹಿಡಿದು, ಅವುಗಳ ಜೊತೆಗೆ ಭಯದ ಪ್ರೋಗ್ರಾಮ್ ಚಿಪ್ಪನ್ನು ಜನರ ಮೆದುಳಿಗೆ ಇಂಪ್ಲಾಂಟ್ ಮಾಡಿದ್ದು! ಇಂದಿಗೂ ವಿದ್ಯಾವಂತರೆನಿಸಿಕೊಂಡವರು ಕೂಡಾ ಇಂತಹ ಒಂದು ಚಿಪ್ಪನ್ನು ತಲೆಯೊಳಗೆ ಹೊತ್ತು ತಿರುಗುವುದನ್ನು ನೋಡಬಹುದು. ನಮ್ಮ ಮಾಧ್ಯಮದಲ್ಲೂ ಇಂತಹ ‘ಚಿಪ್ಪು’ ಹಂದಿಗಳು ದಂಡಿಯಾಗಿವೆ!
ಪಂಚಾಂಗಗಳ ದೊಡ್ಡ

ಸಾಧನೆ ಎಂದರೆ ಮನುಷ್ಯನ ಹುಟ್ಟು-ಸಾವು-ಕರ್ಮಗಳಿಗೂ ಗ್ರಹ-ನಕ್ಷತ್ರ-ಘಳಿಗೆಗಳಿಗೂ, ಭವಿಷ್ಯಕ್ಕೂ ಇಲ್ಲದ ಸಂಬಂಧ ಕಲ್ಪಿಸಿದ್ದು! ಮತ್ತು ಮಂತ್ರವಾದಿ ಕತೆಗಳಂತಹ ಕಾಲ್ಪನಿಕ ಚಿತ್ರಣವನ್ನು ಪಂಚಾಂಗಕ್ಕೆ ಸೇರಿಸಿ ಸಂವತ್ಸರಗಳು ಪಿಶಾಚಿಗಳಂತೆ ಜನರ ತಲೆಯಲ್ಲಿ ಕುಣಿಯುವಂತೆ ಮಾಡಿದ್ದು.
ನನ್ನ ಬಾಲ್ಯದಲ್ಲಿ ಪಂಚಾಂಗ ಮನೆ ಸೇರಿದ ಕೂಡಲೇ ತಂದೆಯವರು ಒಮ್ಮೆ ಕಣ್ಣಾಡಿಸಿದ್ದೇ ತಡ ಅದು ನನ್ನ ಪಾಲಾಗುತ್ತಿತ್ತು. ಯಾಕೆಂದರೆ ಶಾಲೆಗಳಲ್ಲಿ ಅಶ್ವಿನಿ, ಭರಣಿ, ಕೃತ್ತಿಕಾ… ಮುಂತಾದ ನಕ್ಷತ್ರಗಳು, ಮೇಷ, ವೃಷಭ, ಮಿಥುನ… ಮುಂತಾದ ರಾಶಿಗಳು, ಚೈತ್ರ, ವೈಶಾಖ, ಆಷಾಡ…ಇತ್ಯಾದಿ ಋತುಗಳು, ಪ್ರಭವ, ವಿಭವ, ಶುಕ್ಲ…ಇತ್ಯಾದಿ ಸಂವತ್ಸರಗಳನ್ನು ಉರುಹೊಡೆಸಲಾಗುತ್ತಿತ್ತು.
ಮಹಾ ಕುತೂಹಲಕಾರಿ, ಅದ್ಭುತ, ಭಯಾನಕವಾಗಿದ್ದುದು ಮಾತ್ರ ಚಂದಾಮಾಮ ಕತೆಗಳನ್ನು ಮೀರಿಸುವ ಸಂವತ್ಸರ ಫಲ! ಅವುಗಳಲ್ಲಿ ಆಯಾ ಸಂವತ್ಸರಕ್ಕೆ ಒಂದೊಂದು ಭಯಾನಕ ರೂಪ ಕೊಡಲಾಗುತ್ತಿತ್ತು. “ರಕ್ತಾಕ್ಷಿ ನಾಮದ ದೇವತೆಯು ಪೀತವಸ್ತ್ರಧಾರಿಣಿಯಾಗಿ, ಒಂದು ಕೈಯಲ್ಲಿ ಕಪಾಳವನ್ನೂ ಇನ್ನೊಂದು ಕೈಯ್ಯಲ್ಲಿ ಶೂಲವನ್ನೂ ಹಿಡಿದುಕೊಂಡು, ನೇರಳೆ ಬಣ್ಣದ ಹೂವಿನ ಮಾಲೆಯನ್ನು ಧರಿಸಿಕೊಂಡು, ಭಿಕ್ಷಾನ್ನವನ್ನು ಮುಕ್ಕುತ್ತಾ, ಪಶ್ಚಿಮದಿಂದ ಪೂರ್ವಾಭಿಮುಖವಾಗಿ ದಕ್ಷಿಣ ದಿಕ್ಕನ್ನು ದಿಟ್ಟಿಸುತ್ತಾ ಕತ್ತೆಯ ಮೇಲೇರಿ ಪಯಣಿಸುವಳು… ಎರಡು ಕೊಳಗ ಮಳೆಯನ್ನು ಸುರಿಸುವಳು… ಇಷ್ಟ ಧಾನ್ಯ ಗೋಧಿ… ಆಕೆ ಬಳಸಿದ ವಸ್ತುಗಳಿಗೆ ಕೊರತೆಯಾಗುವುದು… ಹೀಗೆ ಸಾಗುವ ಕತೆಯನ್ನು ಓದಿ ನಾವು ಮಕ್ಕಳು ರಾತ್ರಿ ವೇಳೆ ಭಯಾನಕ ಕನಸುಬಿದ್ದು ಬೆವರುತ್ತಿದ್ದರೆ, ಹಿರಿಯರು ಇವುಗಳಿಗೆ ತಮ್ಮದೇ ಕಾಲ್ಪನಿಕ ಅರ್ಥ ಕಲ್ಪಿಸಿ, ಈ ಸಲ ಮಳೆ ಕಡಿಮೆ, ಕಾಲ ಕಷ್ಟ, ಗೋಧಿಗೆ ಹೇಗೋ ಗೊತ್ತಿಲ್ಲ; ಭತ್ತಕ್ಕೆ ತೊಂದರೆಯಿಲ್ಲ ಎಂಬಿತ್ಯಾದಿ ಚಿಂತೆಗಳಲ್ಲಿ ಮುಳುಗಿರುತ್ತಿದ್ದರು. ಇಂತಹಾ ಒಂದು ಸಾಮೂಹಿಕ ಸನ್ಮೋಹನದ, ಸಮೂಹ ಸನ್ನಿಯ ಮನಶ್ಶಾಸ್ತ್ರೀಯ ಆವಿಷ್ಕಾರವನ್ನು ಭಾರತದ ಬುರುಡೆ ಜ್ಯೋತಿಷಿಗಳು ಬಿಟ್ಟರೆ ಪ್ರಪಂಚದಲ್ಲಿ ಬೇರಾರೂ ಮಾಡಿರಲಿಕ್ಕಿಲ್ಲ.
ಒಂದೆರಡು ಕೊಳಗ ಮಳೆ ಎಂದರೆ ಬರ ಬರುತ್ತದೆಂದೂ, ನಾಲ್ಕು ಕೊಳಗ ಎಂದರೆ ಪ್ರಳಯವೆಂದೂ ನಂಬುವ ರೈತಾಪಿ ಜನರು, ಈ ಸಂವತ್ಸರವು ಇಡೀ ಜಗತ್ತಿಗೆ ಅನ್ವಯಿಸುವುದಾದರೆ ಮರುಭೂಮಿಯಲ್ಲಿ ಕಡಿಮೆ ಮಳೆ, ಕರಾವಳಿ-ಮಲೆನಾಡುಗಳಲ್ಲಿ ಹೆಚ್ಚು ಮಳೆ ಯಾಕೆ ಸುರಿಸುತ್ತದೆ ಎಂದು ಎಂದಿಗೂ ಯೋಚಿಸುವುದಿಲ್ಲ! ಏನಾದರೂ ಹೆಚ್ಚುಕಡಿಮೆ ಅದರೆ, ಸಮಜಾಯಿಷಿ ಕೊಡಲು ಜೋಯಿಸರಿಗೆ ಮಾತ್ರ ಈ ತರ್ಕ ಅನುಕೂಲಕ್ಕೆ ಬರುತ್ತದೆ.
ನಾಲ್ಕು ಕೊಳಗ ಮಳೆ ಎಂದಿದ್ದಾಗ ತೀರಾ ಕಡಿಮೆ ಮಳೆ ಬಂದಿದ್ದನ್ನೂ, 1974ರಲ್ಲಿ ಎರಡೋ ಮೂರೋ ಕೊಳಗ ಎಂದಿದ್ದಾಗ, ನೇತ್ರಾವತಿ ನದಿಯಲ್ಲಿ ಒಂದು ಇಡೀ ತಲೆಮಾರು ಮರೆಯದ, ಪ್ರಳಯದಂತಹ ಮಳೆ ಮತ್ತು ನೆರೆ ಬಂದದ್ದನ್ನೂ ನಾನು ಕಂಡಿದ್ದೇನೆ, ಆ ಮಾತು ಬೇರೆ.
ಈ ಜೋಯಿಸರು ಒಳ್ಳೆಯ ಹಾಸ್ಯಪಟುಗಳೂ ಹೌದು! ಅದಕ್ಕಾಗಿಯೇ ಅವರು ‘ಗವಳಿ ಪತನ ಫಲ’ ಎಂದೇನೋ ಒಂದು ಶಕುನವನ್ನೂ ಕೊಡುತ್ತಿದ್ದರು. ಅಂದರೆ, ಅಕಸ್ಮಾತ್ ಹಲ್ಲಿಯೇನಾದರೂ ಮೈಮೇಲೆ ಬಿದ್ದರೆ ಯಾವ ಫಲ ಇತ್ಯಾದಿ. ಕೈಗೆ ಬಿದ್ದರೆ, ಹೆಗಲಿಗೆ ಬಿದ್ದರೆ…ಹೀಗೆ ಫಲಗಳಿರುತ್ತವೆ. ಇರುವ ಎಲ್ಲಾ ಮನೆವಾರ್ತೆ ಪ್ರಾಣಿಗಳಲ್ಲಿ ಹಲ್ಲಿ ಏಕೆ ವಿಶೇಷ ಎಂದು ನನಗಿನ್ನೂ ಒಗಟು. ಹಲ್ಲಿ ಏನಾದರೂ ಬ್ಯಾಲೆನ್ಸ್ ತಪ್ಪಿ ಜೋಕಾಲಿಯಿಂದ ಬಲೆಗೆ ಬೀಳುವ ಸರ್ಕಸಿನ ಜೋಕರ್‍ನಂತೆ ಅನ್ನದ ಪಾತ್ರೆಗೆ ಬಿದ್ದರೆ ಏನು ಫಲ ಎಂದರೆ, ತಿಂದವರಿಗೆ ವಾಂತಿ-ಬೇಧಿ ಎಂದು ಕಂಡಿದ್ದೇನೆ. ಅದರೆ ಹಲ್ಲಿ ಬೀಳುವುದಕ್ಕೂ ಭವಿಷ್ಯಕ್ಕೂ ಏನು ಸಂಬಂಧ? ಆಗ ಭವಿಷ್ಯದ ಮೇಲೆ ಪ್ರಭಾವ ಬೀರುವ ಗ್ರಹ, ನಕ್ಷತ್ರಗಳು ರಜೆ ಹಾಕಿರುತ್ತವೆಯೆ!?
ನಾನು ಏಳನೇ ತರಗತಿಯಲ್ಲಿರುವಾಗ ಹಲ್ಲಿ ಪತನದ ಪರಿಣಾಮವನ್ನು ಕಣ್ಣಾರೆ ಕಾಣುವಂತಾಯಿತು. ಆ ಭಯಾನಕ ಘಟನೆ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ! ನಮ್ಮದು ಅಗಲೇ ಏಳ್ನೂರು ವಿದ್ಯಾರ್ಥಿಗಳಿದ್ದ ಅತ್ಯಂತ ಹಳೆಯ ಖಾಸಗಿ ಅನುದಾನಿತ ಕನ್ನಡ ಮಾಧ್ಯಮ ಶಾಲೆ! ಭಾರಿ ಕಟ್ಟಡ, ಇಪ್ಪತ್ತೈದು ಅಡಿ ಮೀರಿದ ಛಾವಣಿ.
ಒಂದು ದಿನ ಬೋಳು ತಲೆಯ ಒಬ್ಬರು ಮೇಷ್ಟ್ರು ಪಾಠ ಮಾಡುತ್ತಿದ್ದರು. ಮೇಲ್ಜಾತಿಗೆ ಸೇರಿದ ಅವರು ಮಕ್ಕಳನ್ನು ಜಾತಿ-ಧರ್ಮದ ಹೆಸರೆತ್ತಿ ಅವಮಾನಿಸುತ್ತಿದ್ದರಿಂದ, ಹೊಡೆಯುತ್ತಿದ್ದುದರಿಂದ ಅವರನ್ನು ಕಂಡರೆ ನಮಗ್ಯಾರಿಗೂ ಆಗುತ್ತಿರಲಿಲ್ಲ! ಆ ದಿನ ಮಟಮಟ ಮಧ್ಯಾಹ್ನ! ಒಂದು ಹಲ್ಲಿ ತಟಕ್ಕನೇ ಅವರ ಬೋಳು ನೆತ್ತಿಯ ಮೇಲೆ ಬಿತ್ತು! ಇಡೀ ತರಗತಿ ದಂಗಾಯಿತು. ನನ್ನನ್ನೂ ಸೇರಿದಂತೆ ಹೆಚ್ಚಿನವರಿಗೇ ಒಳಗೊಳಗೇ ಖುಷಿ ಕೂಡ- “ಮಾಷ್ಟ್ರು ಸಾಯುತ್ತಾರೆ!”. ನಡುನೆತ್ತಿಗೆ ಹಲ್ಲಿ ಬಿದ್ದರೆ ಮರಣ ಅಂತ ಪಂಚಾಂಗದಲ್ಲಿ ಬರೆದಿದೆ! ಕೊನೆಗೂ ಹಾಗೆಯೇ ಆಯಿತು!
ಮೇಷ್ಟ್ರು ಕೇಳಿದರು, “ಪಂಚಾಂಗ ನೋಡುತ್ತೀರ?! ನಡು ನೆತ್ತಿಯ ಮೇಲೆ ಹಲ್ಲಿ ಬಿದ್ದರೆ ಏನು ಫಲ?”
ನಾನು ತಟ್ಟನೇ ಉತ್ತರಿಸಿದೆ, “ಮರಣ!”
ಮೇಷ್ಟ್ರು “ಹೌದು! ಮರಣ! ಯಾರಿಗೆ?…ಹಲ್ಲಿಗೆ!” ಎಂದವರೇ ನೆಲ ತೋರಿಸಿದರು. ಅಲ್ಲಿ ಅಷ್ಟು ಎತ್ತರದಿಂದ ಬಿದ್ದಿದ್ದ ಹಲ್ಲಿ ಕಾಲು ಮೇಲಾಗಿ ಬಿಳಿಹೊಟ್ಟೆ ತೋರಿಸುತ್ತಾ ಸತ್ತುಬಿದ್ದಿತ್ತು! ಅಂದೇ, ಈ ಬುರುಡೆ ಜ್ಯೋತಿಷ್ಯ ಕುರಿತ ನನ್ನ ನಂಬಿಕೆ ಕಳಚಿಹೋಯಿತು. ಈ ಮೇಷ್ಟ್ರು ಇಂದಿಗೂ ಮುಂಬಯಿಯಲ್ಲಿ ಮಕ್ಕಳ ಮನೆಯಲ್ಲಿ ಇದ್ದಾರೆಂದು ಕೇಳಿದ್ದೆ!
ಇವೆಲ್ಲವುಗಳ ವಾಸ್ತವವನ್ನು ಮುಂದೆ ಆಧುನಿಕ ವಿಜ್ಞಾನದ ಮೂಲಕ ವಿವರವಾಗಿ ಮತ್ತು ತಾರ್ಕಿಕವಾಗಿ ಪರಿಶೀಲಿಸುವ ಮೊದಲು ಇಂತಹ ಇನ್ನಷ್ಟು ಆವಿಷ್ಕಾರಗಳ ಕತೆಗಳನ್ನು ಕೇಳೋಣ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...