Homeಸಾಮಾಜಿಕ`ಯುವಜನರು ನಮ್ಮ ಕಡೆಗೆ ನೋಡುವಂತೆ ಮಾಡಬೇಕು’

`ಯುವಜನರು ನಮ್ಮ ಕಡೆಗೆ ನೋಡುವಂತೆ ಮಾಡಬೇಕು’

- Advertisement -
- Advertisement -

ಸರೋವರ್ ಬೆಂಕಿಕೆರೆ |

ಮೇ 26, 27ರಂದು ಧಾರವಾಡದಲ್ಲಿ ಮೇ ಸಾಹಿತ್ಯ ಮೇಳ ನಡೆಯಿತು. ಇದರ ಒಂದು ಗೋಷ್ಠಿಯಲ್ಲಿ ‘ಸಮಕಾಲೀನ ಚಳವಳಿಗಳು: ವಿದ್ಯಾರ್ಥಿ ನೋಟ’ ಎಂಬ ವಿಷಯದ ಬಗ್ಗೆ ಯುವ ನಾಯಕ ಸರೋವರ್ ಬೆಂಕಿಕೆರೆ ಮಾತನಾಡಿದರು. ಬಹುಜನರ ಮೆಚ್ಚುಗೆಗೆ ಪಾತ್ರವಾದ ಈ ಭಾಷಣದ ಸಂಕ್ಷಿಪ್ತ ರೂಪ ಇಲ್ಲಿದೆ.

ಇಂದು ನಾವು ಮೇ ಸಾಹಿತ್ಯ ಮೇಳದಂತಹ ಪರ್ಯಾಯ ಧಾರೆಯ ವೇದಿಕೆಯಲ್ಲಿ ನಿಂತು ‘ಜನಪರ ಚಳವಳಿಗಳು’ ಎಂದು ಗುರುತಿಸುವುದಾದರೆ, ಅವು ಜನಪರವಾದ ಫ್ಯಾಸಿಸ್ಟ್ ವಿರೋಧಿ ಚಳವಳಿಗಳೂ ಕೂಡ ಆಗಿರುತ್ತವೆ. ಆದರೆ ಈ ಚಳವಳಿಗಳನ್ನು ಸಮಕಾಲೀನ ವಿದ್ಯಾರ್ಥಿ-ಯುವಜನರು ಹೇಗೆ ನೋಡುತ್ತಿದ್ದಾರೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಾದ್ದು ಮುಖ್ಯವಾಗುತ್ತದೆ. ನಾವು ‘ಫ್ಯಾಸಿಸ್ಟ್ ವಿರೋಧಿ’ ಎಂದು ಕರೆಯುವ ಜನಪರ ಚಳವಳಿಗಳನ್ನು ‘ಬಹುಸಂಖ್ಯಾತ’ ವಿದ್ಯಾರ್ಥಿ-ಯುವಜನರು ಇದು ನನ್ನ ಹೋರಾಟ ಎಂದು ನೋಡುವುದೇ ಇಲ್ಲ. ಇದರಲ್ಲಿ ನನ್ನ ಪಾಲ್ಗೊಳ್ಳುವಿಕೆಯೂ ಮುಖ್ಯ, ಈ ಚಳವಳಿ ನನ್ನ ಚಳವಳಿ ಎಂದು ನೋಡುವ ಯುವಜನರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಬಹುಸಂಖ್ಯಾತ ಯುವಜನರ ಆಸಕ್ತಿ ಮತ್ತು ಆದ್ಯತೆಗಳು ಬೇರೆಯದ್ದೇ ಆಗಿವೆ. ಇಂದು ಅವರ ಕೈಯಲ್ಲಿ ಮೊಬೈಲ್ ಇದೆ. ಅವರಿಗೆ ಬೇಕಾಗಿರುವ ಎಲ್ಲವೂ ಎಂದರೆ ಎಲ್ಲವೂ ಅಲ್ಲಿಯೇ ಸಿಕ್ಕಿಬಿಡುತ್ತದೆ! ಬೇಸರವಾದರೆ ಅಸಂಖ್ಯಾತ ಮನೋರಂಜನೆಗಳು, ಪೋರ್ನೊಗ್ರಫಿ, ಪ್ರೀತಿಸಲು ಜಗಳವಾಡಲು ಬೇಕಿರುವ ಜನರು ಕೂಡ ಅಲ್ಲಿಯೇ ಸಿಕ್ಕಿಬಿಡುತ್ತಾರೆ, ಸರ್ಕಾರದ ಮೇಲಿನ ಅಸಹನೆ ಮತ್ತು ಕೋಪವನ್ನು ತೀರಿಸಿಕೊಳ್ಳಲು ಸಹ ಅವರಿಗೆ ಅಲ್ಲಿಯೇ ವೇದಿಕೆ ಸಿಕ್ಕಿಬಿಡುತ್ತದೆ (ಅದರೆ ಇದನ್ನು ರಾಜಕೀಯ ವೇದಿಕೆಯಾಗಿ ಬಳಸಿಕೊಳ್ಳುವವರ ಸಂಖ್ಯೆ ಕಡಿಮೆ). ಹೀಗಿರುವಾಗ ಸಮಕಾಲೀನ ಚಳವಳಿಗಳಲ್ಲಿನ ಭಾಗವಹಿಸುವಿಕೆಯ ಮಾತು ಹಾಗಿರಲಿ, ಮನುಷ್ಯರ ಜೊತೆಗಿನ ಸಂಬಂಧವೇ ಕ್ಷೀಣಿಸುತ್ತಿದೆ!

ಇನ್ನು ಈ ಸಾಹಿತ್ಯ ಮೇಳಕ್ಕೆ ಬಂದಿರುವ ವಿದ್ಯಾರ್ಥಿ-ಯುವಜನರ ಸಂಖ್ಯೆ ಎಷ್ಟಿದೆ ಎಂದು ನೋಡಿ! ಬಂದಿರುವ ಕಡಿಮೆ ಸಂಖ್ಯೆಯ ಯುವಜನರ ಆಸಕ್ತಿಯನ್ನು ಗಮನಿಸಿ. ವಿಶೇಷವಾಗಿ ಎರಡು ದಿನಗಳಿಂದ ಇಲ್ಲಿ ಫೋಟೋಗ್ರಾಫರ್ಸ್‍ಗಳಲ್ಲಿ ಮೂವರು ಯುವ ಮಹಿಳೆಯರು ಇದ್ದಾರೆ, ಇನ್ನೂ ಕೆಲವರು ವೇದಿಕೆಯ ಮುಂದಿನ ಸೋಷಿಯಲ್ ಮೀಡಿಯಾ ಡೆಸ್ಕ್‍ನಲ್ಲಿ ಕೂತು, ತಮ್ಮ ಸೋಷಿಯಲ್ ಮೀಡಿಯಾ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಆದರೆ ಸಮ್ಮೇಳನಕ್ಕೆಂದು ಬಂದಿರುವ ಬಹುತೇಕ ಯುವಜನರು ಗೋಷ್ಠಿಯಲ್ಲಿರದೆ ಹೊರಗಿದ್ದಾರೆ! ಇವರೆಲ್ಲರ ಆಸಕ್ತಿ ಬೇರೆಯೇ ಇದೆ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಬಂದಿರುವ ಬಹುತೇಕ ಯುವಜನರು ಯಾಕೆ ಇಲ್ಲಿನ ಚರ್ಚೆಯಿಂದ ಹೊರಗಿದ್ದಾರೆ ಎನ್ನುವ ಪ್ರಶ್ನೆಯಿಂದ ಶುರುಮಾಡಬೇಕಾಗಿದೆ. ಇವರೆಲ್ಲರಿಗೂ ‘ಇಲ್ಲಿ ನಡೆಯುವ ಚರ್ಚೆಗಳು ಹಳೆಯದ್ದು.. ನಮಗೆ ಇದೆಲ್ಲಾ ಗೊತ್ತಿರುವುದೇ ಅಲ್ಲವೇ’ ಎಂದು ಅನ್ನಿಸಿ ಹೊರಗಿದ್ದಾರಾ ಎಂಬುದು ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ.

ಯಾಕೆ ಹೀಗಾಗುತ್ತಿದೆ?

ವಿಶ್ಲೇಷಣೆ ಮಾಡುವುದರಲ್ಲಿ ನಾವು ನಿಸ್ಸೀಮರಾಗಿದ್ದೇವೆ. ಅದು ರಾಜಕೀಯ, ಚುನಾವಣೆ, ಜನಚಳವಳಿ ಯಾವುದೇ ಇರಬಹುದು. ಸೋಲುಗೆಲುವುಗಳು ಯಾಕಾದವು ಅನ್ನುವುದನ್ನು ಅತ್ಯದ್ಭುತವಾಗಿ ವಿಶ್ಲೇಷಣೆ ಮಾಡುತ್ತೇವೆ. ಆದರೆ ಸೋಲಿನ ಪಾಠವೇನು ಮತ್ತು ಮುಂದೇನು ಅನ್ನುವ ವಿಚಾರದಲ್ಲಿ ಸಮಗ್ರತೆಯಿಲ್ಲ, ನಿಖರತೆ, ಸ್ಪಷ್ಟತೆಯನ್ನು ಕಟ್ಟಿಕೊಡುತ್ತಿಲ್ಲ. ಆದ್ದರಿಂದಲೇ ನಿನ್ನೆಯಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಭಾಷಣಕಾರರು ಮತ್ತದೇ ಹಳೆಯ ವಿಶ್ಲೇಷಣೆಯನ್ನೇ ಮುಂದುವರೆಸುತ್ತಿದ್ದರೆ, ಯುವಜನರಿಂದ ‘ಇದರಲ್ಲಿ ಯುಜನರ ಕರ್ತವ್ಯವೇನು?’ ‘ನಾವು ಇದನ್ನು ಹೇಳಿದರೆ ನಮ್ಮ ಸ್ನೇಹಿತರು ನಂಬುತ್ತಿಲ್ಲ, ಏನು ಮಾಡಬೇಕು?’ ಎನ್ನುವ ಪ್ರಶ್ನೆಗಳು ಯುವ ಸಭಿಕರಿಂದ ಬರುತ್ತಿವೆ. ಹೀಗೆ ವೇದಿಕೆ ಮತ್ತು ಯುವ ಸಭಿಕರ ವಿಚಾರಗಳು ಪರಸ್ಪರ ಡಿಕ್ಕಿ ಹೊಡೆಯುತ್ತಿವೆ! ನಾವು ಚಳವಳಿಯಿಂದ ವಿಮುಖರಾಗುತ್ತಿರುವ ಯುವಜನರನ್ನು ಕರೆತರುವ ದಾರಿ ಮತ್ತು ಮುಂದೆ ಏನು ಎನ್ನುವುದರ ಕುರಿತು ಮುನ್ನೋಟ ಕಟ್ಟಿಕೊಡುವ ಚರ್ಚೆ ಮಾಡದೆ ಸೋಲುತ್ತಿದ್ದೇವೆ. ಇದು ನಮ್ಮೆಲ್ಲರ ಕಲೆಕ್ಟಿವ್ ಫೇಲ್ಯೂರ್ ಅಲ್ಲವೆ?

ಇಂದು ನಾವು ಮಾಡುತ್ತಿರುವ ವಿಶ್ಲೇಷಣೆಗಳು 15-20 ವರ್ಷಗಳ ಹಿಂದಿನಿಂದಲೂ ಮಾಡಿಕೊಂಡು ಬಂದಿರುವಂಥವೇ. ಲಕ್ಷಾಂತರ ಜನರ ಸಮ್ಮತಿ ಮತ್ತು ಪಾಲ್ಗೊಳ್ಳುವಿಕೆಯಿಂದ ನಡೆದ ಬಾಬರಿ ಮಸೀದಿ ಧ್ವಂಸದ ಸಂದರ್ಭದಲ್ಲಿಯೇ ನಾವು ಇಂದಿನ ದಿನಗಳ ಬಗ್ಗೆ ಅಂದಾಜು ಮಾಡಿದ್ದೆವು. ಆದರೆ ಇಂದೂ ಕೂಡ ಮತ್ತದೇ ವಿಶ್ಲೇಷಣೆಯಲ್ಲಿಯೇ ಮುಳುಗಿದ್ದೇವೆ. ನಾವು ಅಪ್‍ಡೇಟ್ ಆಗುತ್ತಿಲ್ಲ. ಹಾಗೆಂದು ನಮ್ಮ ಸಿದ್ಧಾಂತ, ನಮ್ಮ ಗುರಿ, ನಮ್ಮ ಆಶಯಗಳು ತಪ್ಪಾಗಿವೆ ಎಂದರ್ಥವಲ್ಲ. ನಿಜಕ್ಕೂ ಈ ಸಮಾಜಕ್ಕೆ ಬೇಕಿರುವುದು ಜನಪರವಾದ ನಮ್ಮದೇ ಸಿದ್ಧಾಂತ, ಆಶಯ ಮತ್ತು ಕನಸುಗಳು. ಆದರೆ ಫ್ಯಾಸಿಸ್ಟ್ ಶಕ್ತಿಗಳು ಯುವಜನರನ್ನು ಹೊಸ ಹೊಸ ರೀತಿಯಲ್ಲಿ ಅವರಿಗೆ ‘ಒಂದು ಮಾಡೆಲ್’ ಅನ್ನು ಕಣ್ಣಿಗೆ ಕಾಣುವಂತೆ ಮುಂದಿಟ್ಟಿದ್ದಾರೆ. ಅಪ್‍ಡೇಟ್ ಆಗುತ್ತಿದ್ದಾರೆ. ಒಂದು ಕೆಟ್ಟ ಉದಾಹರಣೆಯನ್ನು ಈ ಸಂದರ್ಭದಲ್ಲಿ ಹೇಳಬೇಕಿದೆ. ಚುನಾವಣೆ ಸಂದರ್ಭದಲ್ಲಿ ಹಣ, ಹೆಂಡ ಸೀರೆ ಕೊಡುವುದು ಹಳೆಯ ಸಾಂಪ್ರದಾಯಿಕ ಶೈಲಿಯಲ್ಲಿ ರಾಜಕಾರಣಿಗಳು ಮಾಡಿಕೊಂಡು ಬಂದಿರುವುದು ನಮಗೆಲ್ಲ ಗೊತ್ತಿರುವ ವಿಷಯ. ಆದರೆ ಈ ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ಯುವಕರಿಗೆ ಐಪಿಎಲ್ ಟಿಕೆಟ್ ಕೊಟ್ಟು ಓಟು ಮಾಡುವಂತೆ ಆಮಿಷ ಒಡ್ಡಿದ್ದಾರೆ! ಇದು ಅವರು ಕಂಡುಕೊಂಡ ಹೊಸ ಮಾದರಿ. ಇಂತಹ ನೂರಾರು ಕೆಟ್ಟ ಮತ್ತು ಒಳ್ಳೆ ಉದಾಹರಣೆಗಳಿವೆ.

ನಾವು ಇಷ್ಟುದಿನ ಅನುಸರಿಸುತ್ತಾ ಬಂದ ಮಾದರಿಗಳನ್ನಷ್ಟೇ ನೆಚ್ಚಿಕೊಂಡರೆ ಆಗೋದಿಲ್ಲ. 70-80ರ ದಶಕದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದಂತ ಚಳವಳಿಗಳು 90ರ ನಂತರ ಕ್ಷೀಣಿಸಿದ್ದು ಯಾಕೆ ಎಂಬ ಪ್ರಶ್ನೆ ಹಾಕಿಕೊಳ್ಳಬೇಕಾಗಿದೆ. ಇಂದಿನ ಜನರೇಷನ್ ಮೂಡ್‍ನಿಂದ ನಾವು ದೂರ ಸರಿಯುತ್ತಿದ್ದೇವೆ. ಹಳೆಯದಕ್ಕೆ ಜೋತು ಬಿದ್ದಿದ್ದೇವೆ, ಹೊಸತನ ಇಲ್ಲದಂತಾಗಿದೆ. ಹೊಸ ಪೀಳಿಗೆಯ ಜೊತೆಜೊತೆಗೆ ‘ಪಬ್ಲಿಕ್ ಕಾಮನ್‍ಸೆನ್ಸ್’ ಬೇರೆಯದ್ದೇ ಆಗಿದೆ. 70-80ರ ದಶಕದಲ್ಲಿ ಮೇಲೆದ್ದ ರೈತ ಮತ್ತು ದಲಿತ ಚಳವಳಿಗಳ ‘ಹೊಸತನದ ಅಲೆ’ ಹೊಸ ನರೇಟಿವ್‍ಅನ್ನು ಕಟ್ಟಿಕೊಟ್ಟಿತ್ತು. ಅಂದಿನ ಆ ಹೋರಾಟಗಳು ಉತ್ತುಂಗದ ಸ್ಥಿತಿಯಲ್ಲಿ ಇದುದ್ದರಿಂದ ದಲಿತರ ಅಸ್ಮಿತೆ ಮರುಸ್ಥಾಪನೆ ಆಯಿತು. ಇದೇ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳು ಮುದ್ರಣಗೊಂಡು ಅವರ ಸಿದ್ಧಾಂತ ಇನ್ನು ಹೆಚ್ಚು ಮುನ್ನೆಲೆಗೆ ಬಂದಿತು. ಅಟ್ರಾಸಿಟಿ ಕಾಯಿದೆ, ಮೀಸಲಾತಿ, ಸಾಮಾಜಿಕ ನ್ಯಾಯವೆಂಬ ಚರ್ಚೆ ಎಲ್ಲವೂ ಬಂದವು.

ಆದರೆ 90ರ ನಂತರದ ಬೆಳವಣಿಗೆಯೇ ಬೇರೆ. ಎಲ್.ಪಿ.ಜಿ (ಲಿಬರಲೈಸೇಷನ್, ಪ್ರೈವೇಟೈಸೇಷನ್, ಗ್ಲೋಬಲೈಸೇಷನ್) ನಂತರದ ಯುವಜನರ ಮೂಡ್ ಶಿಫ್ಟ್ ಆಗುತ್ತಾ ಹೋಯಿತು. ಈ ಪೀಳಿಗೆಯ ಯುವಜನರು ರಥಯಾತ್ರೆ, ಬಾಬರಿ ಮಸೀದಿ ಧ್ವಂಸ, ಖಾಸಗೀಕರಣ, ಮೀಸಲಾತಿ ವಿರೋಧಿ ಹೋರಾಟ ಇತ್ಯಾದಿಗಳನ್ನು ನೋಡಿಕೊಂಡು ಬೆಳೆದವರು. ಮೀಸಲಾತಿ ಸಾಮಾಜಿಕ ನ್ಯಾಯದ ಚರ್ಚೆಯನ್ನು 90ರ ಪೂರ್ವದಲ್ಲಿ ಚಳವಳಿಗಳು ಹುಟ್ಟುಹಾಕಿದರೆ 90ರ ನಂತರದಲ್ಲಿ ಓಬಿಸಿಗಳಿಗೆ ಮೀಸಲಾತಿಗಾಗಿ ಶಿಫಾರಸ್ಸುಗೊಂಡ ಮಂಡಲ್ ಆಯೋಗದ ವರದಿಯ ವಿರುದ್ಧ ದುರಂತದ ರೀತಿಯಲ್ಲಿ ಓಬಿಸಿ ಸಮುದಾಯದ ಯುವಜನರೇ ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಿದರು. ತಮ್ಮನ್ನು ತಾವು ಬೆಂಕಿ ಹಚ್ಚಿಕೊಂಡು ಸಾಯಿಸಿಕೊಳ್ಳುವ ಮಟ್ಟಕ್ಕಿಳಿದು ಪ್ರತಿಭಟಿಸಿದರು. ಇಂದಿಗೂ ಕೂಡ ಕೆಲವು ಸರ್ಕಾರಿ ವಿವಿಗಳಲ್ಲಿ ಬಿಟ್ಟರೆ ಬಹುತೇಕ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶೋಷಿತ ಸಮುದಾಯದ ಯುವಜನರೇ ಮೀಸಲಾತಿ ವಿರುದ್ಧ ಮಾತನಾಡುತ್ತಾರೆ, ಖಾಸಗೀಕರಣ ಕೋಮುವಾದಿಕರಣವನ್ನು ಗಟ್ಟಿದನಿಯಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ನಾವು ಇಂದು ಸಮಾನತೆಯ ಆಶಯಗಳ ಬಗ್ಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿ-ಯುವಜನರು ಸಮುದಾಯಗಳ ನಡುವಿನ ಸಮಾನತೆಯ ಮಾತು ಹಾಗಿರಲಿ, ಒಬ್ಬರು ಮತ್ತೊಬ್ಬರನ್ನು ಪ್ರತಿಸ್ಫರ್ಧಿಯಂತೆಯೇ ನೋಡುತ್ತಿರುವುದನ್ನು ನಾವು ಗಮನಿಸಬೇಕಾಗಿದೆ.

ನಿನ್ನೆಯಿಂದ ನಡೆಯುತ್ತಿರುವ ಮೇ ಸಾಹಿತ್ಯ ಮೇಳದ ಹಿಂದೆ ಒಂದು ಸದಾಶಯವಿದೆ, ಪರಿಶ್ರಮವಿದೆ. ಆದರೆ ಮುಂದೇನು ಎನ್ನುವುದರ ಕುರಿತ ಚರ್ಚೆ ಮಾಡುವುದರಲ್ಲಿ ಒತ್ತು ಕಮ್ಮಿಯಿದ್ದಂತಿದೆ. ಫ್ಯಾಸಿಸ್ಟ್ ಶಕ್ತಿಗಳ ಹಿಂದೆಯೇ ಹೆಚ್ಚು ಯುವಜನರು ರ್ಯಾಲಿ ಆಗುತ್ತಿರುವುದನ್ನು ನಾವು ಒಪ್ಪಿಕೊಳ್ಳಬೇಕು. ಹಾಗೆಂದು ಎಲ್ಲವೂ ಮುಗಿದುಹೋಯಿತು, ಕೈ ತಪ್ಪಿಹೋಯಿತು ಎಂದು ಅನಿಸುವುದಿಲ್ಲ. ಮೋದಿಗೆ ಓಟು ಹಾಕುವ ಯುವಜನರಲ್ಲೂ ಒಂದು ಪಾಸಿಟಿವ್ ಆಂಶವನ್ನು ಗಮನಿಸಬಹುದು. ಅವರಲ್ಲಿ ದೇಶಕ್ಕಾಗಿ ಏನಾದರು ಮಾಡಬೇಕು ಎನ್ನುವ ಮುಗ್ಧರೇ ಹೆಚ್ಚಿನ ಜನರು ಇದ್ದಾರೆ, ಇವರಲ್ಲಿ ಒಂದು ಪೊಟೆನ್ಷಿಯಲ್ ಇದೆ, ಆದರೆ ಅದನ್ನು ಬಲಪಂಥೀಯರು ಎಂಗೇಜ್ ಮಾಡಿಕೊಂಡಿದ್ದಾರೆ. ನಾವು ಹೊಸ ಕÀನಸುಗಳನ್ನು ಮತ್ತು ಅದು ಸಾಕಾರಗೊಳ್ಳುವ ಭರವಸೆಯನ್ನು ಬಿತ್ತುವುದರ ಜೊತೆಗೆ ಯುವಪೀಳಿಗೆ ನಮ್ಮಕಡೆ ತಿರುಗಿ ನೋಡುವ, ಹೌದು ಖಚಿತವಾಗಿ ಹೇಳುತ್ತಿದ್ದೇನೆ ನಮ್ಮನ್ನೇ ತಿರುಗಿ ನೋಡುವ ರೀತಿಯಲ್ಲಿ ಮಾಡಬೇಕಿದೆ.

ಇದಕ್ಕಾಗಿ ಯಾವುದೇ ಒಂದು ಸಿದ್ಧ ಮಾದರಿ ಇಲ್ಲ. ಬದಲಾಗುತ್ತಿರುವ ಕಾಲಘಟ್ಟಕ್ಕೆ ಹೊಸಹೊಸ ಪ್ರಯೋಗಗಳನ್ನು ಮಾಡಬೇಕಿದೆ. ದನದ ಮಾಂಸ ನಮ್ಮ ಹಕ್ಕು ಎನ್ನುವ ಪರಿಭಾಷೆಯ ಬದಲಿಗೆ ಊನಾದಲ್ಲಿ ‘ದನದ ಬಾಲವನ್ನು ನೀವೇ ಇಟ್ಟುಕೊಳ್ಳಿ, ನಮಗೆ ನಮ್ಮ ಭೂಮಿಕೊಡಿ’ ಎನ್ನುವ ಹೊಸ ಘೋಷಣೆ ಹೊಸತನವನ್ನು ಕೊಟ್ಟಿತು. ಆದರೆ ಅಲ್ಲಿ ಕೂಡ ಈ ಚಳವಳಿಯ ಜೊತೆ ಸಂಘಟಿತರಾದವರು ಯಾರು ಮತ್ತು ಎಷ್ಟು ಹೊಸ ಯುವಜನರು ಎನ್ನುವ ಅಂಶವನ್ನು ವಿಮರ್ಶಾತ್ಮಕವಾಗಿ ನೋಡಬೇಕಿದೆ. ಊನಾ ಹೋರಾಟ, ಜೆಎನ್‍ಯು, ಪಿಂಜ್ರಾಥೋಡ್, ಜಲ್ಲಿಕಟ್ಟು, ತೂತ್ತುಕುಡಿ ಇನ್ನಿತ್ಯಾದಿ ಪ್ರಯೋಗಗಳಿಂದ ಸರಿತಪ್ಪಿನ ಪಾಠಗಳನ್ನು ಕಲಿಯಬೇಕಿದೆ. ಕರ್ನಾಟಕದಲ್ಲಿ ರೈಟ್ ಆಫ್ ದಿ ಸೆಂಟರ್‍ನ ದೊಡ್ಡ ಯುವಸಮೂಹವನ್ನು ಜನಪರ ಚಳವಳಿಗಳತ್ತ ಸೆಳೆಯುವ ‘ಉದ್ಯೋಗಕ್ಕಾಗಿ ಯುವಜನರು’ ತಂಡದ ಪ್ರಯತ್ನವೂ ಹೊಸ ಪ್ರಯೋಗವಾಗಿತ್ತು. ಇಂತಹ ನೂರಾರು ಪ್ರಯೋಗದಿಂದ ಹೊಸ ಮಾದರಿಗಳನ್ನು ರೂಪಿಸಿಕೊಳ್ಳಬೇಕು; ಇಂಥಾ ವಿಚಾರಗಳ ಮೇಲೆಯೇ ಹೆಚ್ಚು ಚರ್ಚೆಯಾಗಬೇಕು.

ಆದರೆ ಎಲ್ಲರನ್ನು ಎಲ್ಲಾ ಕಾಲಕ್ಕೂ ಮೋಸಗೊಳಿಸಲು ಸಾಧ್ಯವಿಲ್ಲ ಎಂಬ ಚಾರಿತ್ರಿಕ ಸತ್ಯ ನಮ್ಮ ಮುಂದಿದೆ. ಫ್ಯಾಸಿಸ್ಟರ ವಿರುದ್ಧವೇ ಬಹುಸಂಖ್ಯಾತ ಯುವಜನರು ಸಂಘಟಿತರಾಗುವ ಕಾಲ ಬರುತ್ತದೆ. ಆದರೆ ಅದಕ್ಕಾಗಿ ಕಾಯುತ್ತ ಕೂತು ತಡಮಾಡದೆ ಕೆಟಲಿಸ್ಟ್ ರೀತಿಯಲ್ಲಿ ನಾವು ಕೆಲಸ ಮಾಡಬೇಕು. ಈ ಕಾರ್ಯಕ್ರಮಕ್ಕಾಗಿ ಸರಪಳಿಯಿಂದ ಬಿಡಿಸಿಕೊಳ್ಳುತ್ತಿರುವ ಬಿಗಿಮುಷ್ಠಿಯನ್ನು ಲಾಂಛನ ಮಾಡಿಕೊಂಡಿದ್ದೇವೆ. ಇದಕ್ಕೆ ನೂರಾರು ಬಂಧನಗಳಿಂದ ಬಿಡಿಸಿಕೊಂಡು ಬಹುತ್ವದ ಕಡೆಗೆ ಹೋಗುತಿದ್ದೇವೆ ಅನ್ನುವ ಅರ್ಥವಿದೆ. ಇದರ ಜೊತೆಗೆ ನಮ್ಮ ಹಳೆಯ ಸಿದ್ಧಮಾದರಿ, ಸಾಂಪ್ರದಾಯಿಕ ರೀತಿಯ ಚಳವಳಿ-ವ್ಯಾಖ್ಯಾನÀದ ಬಂಧನವನ್ನು ಬಿಡಿಸಿಕೊಂಡು ಹೊಸತನಕ್ಕೆ ತೆರೆದುಕೊಳ್ಳುವ ಸವಾಲನ್ನು ಸ್ವೀಕರಿಸಿಕೊಂಡು ಮುಂದೆ ಸಾಗಬೇಕಾದ ತುರ್ತು ನಮ್ಮ ಮುಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...