| ನಾನುಗೌರಿ ಡೆಸ್ಕ್ |
ಶುಕ್ರವಾರ ಸಾಯಂಕಾಲ ನಡೆದ ಎರಡು ಪತ್ರಿಕಾಗೋಷ್ಠಿಗಳ ಸ್ವರೂಪ ತದ್ವಿರುದ್ಧವಾಗಿದ್ದವು. ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ಕುಳಿತ ದೇಶದ ಪ್ರಧಾನಿಯ ಮುಖದಲ್ಲಿ ಮಂದಹಾಸವಿರಲಿಲ್ಲ, ಇನ್ನೊಂದು ಪ್ರೆಸ್‍ಮೀಟ್‍ನಲ್ಲಿ ರಾಹುಲ್ ಗಾಂಧಿ ಹಸನ್ಮುಖಿಯಾಗಿದ್ದರು. ಪ್ರಧಾನಿ ಯಾವ ಪ್ರಶ್ನೆಗೂ ಉತ್ತರಿಸದೇ ಸೊಕ್ಕೆ ಪ್ರದರ್ಶಿಸಿದರೆ, ರಾಹುಲ್ ಎಲ್ಲ ಪ್ರಶ್ನೆಗಳಿಗೂ ಸರಳವಾಗಿ, ವಿನಯವಂತಿಕೆಯಿಂದ ಉತ್ತರಿಸಿದರು.
ಸುಲಲಿತ ಮಾತಿನ ಓಘ, ಅಲ್ಲಲ್ಲಿ ಲಘು ಹಾಸ್ಯ ಮತ್ತು ದೇಶದ ಪ್ರಚಲತ ಸಮಸ್ಯೆಗಳ ಬಗೆಗೆನ ಅರಿವು… ರಾಹುಲ್ ಪಳಗಿದ್ದಾರೆ. ನಿಜವಾದ ‘ಲೀಡರ್ ಮಟಿರಿಯಲ್’ ಆಗುವ ಹಾದಿಯಲ್ಲಿ ಸದೃಡ ಹೆಜ್ಜೆ ಹಾಕುತ್ತಿದ್ದಾರೆ ಎಂಬುದಕ್ಕೆ ರಾಹುಲ್ ನಡೆಸಿದ ಪತ್ರಿಕಾಗೋಷ್ಠಿ ನಿದರ್ಶನವಾಗಿತ್ತು. ರಾಹುಲ್ ಮಾತಾಡಿದ್ದನ್ನು ಇಲ್ಲಿ ಸಾರಾಂಶೀಕರಿಸಿ, ಅವರದೇ ಮಾತಿನ ಲಹರಿಯಲ್ಲಿ ಕನ್ನಡದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇವೆ…..
‘ಮೊದಲಿಗೆ ಮಾಧ್ಯಮದ ಎಲ್ಲರಿಗೂ ಧನ್ಯವಾದಗಳು. ಅದಕ್ಕಿಂತ ಮುಖ್ಯವಾಗಿ ಬರಲಿರುವ ದಿನಗಳಲ್ಲಿ ಈ ದೇಶ ಯಾವ ದಾರಿಯಲ್ಲಿ ಸಾಗಬೇಕೆಂದು ಸೂಚಿಸುವ ಈ ದೇಶದ ಜನರಿಗೆ ಧನ್ಯಾವಾದಗಳು… ನಮ್ಮ ಕಾರ್ಯಕರ್ತರು, ಬೂತ್ ಕಮಿಟಿ ಸದಸ್ಯರು, ನಮ್ಮ ಅಭ್ಯರ್ಥಿಗಳು, ಎಲ್ಲ ನಾಯಕರಿಗೂ ಧನ್ಯವಾದಗಳು….
ಪ್ರಶ್ನೆ ಕೇಳಲು ಶುರು ಮಾಡಿ…
(ಪ್ರೆಸ್: ನೀವು ಪದೇ ಪದೇ ಮೋದಿಯವರು ಉತ್ತರ ನೀಡಲ್ಲ, ಪ್ರೆಸ್‍ನಿಂದ ದೂರ ಅಂತಿದ್ದಿರಿ. ಈಗ ಅವರು ಪ್ರೆಸ್ ಮೀಟ್ ಮಾಡ್ತಾ ಇದ್ದಾರೆ)
ಹಾಂ ಹಾಂ ಹಾಂ…. ನಾನೂ ಈ ವಿಷಯ ಕೇಳಿದೆ… ಬಡಾ ಕಾಮ್! ಅಂತೂ ಈ ದೇಶದ ಪ್ರಧಾನಿ ಮೊದಲ ಹೆಜ್ಜೆ ಇಟ್ಟರಲ್ಲ. ಗ್ರೇಟ್… ನಮ್ಮ ರಣದೀಪ್ (ಸುರ್ಜೇವಾಲ) ಹೇಳ್ತಾ ಇದ್ದರು: ಅಮಿತ್ ಶಾ ಜೊತೆ ಪ್ರಧಾನಿ ಪ್ರೆಸ್‍ಮೀಟ್‍ಗೆ ಹೋಗಿದ್ದಾರೆಂದು… ವಾವ್ ಎಂತಹ ಅಸಾಂಪ್ರದಾಯಿಕ ನಡೆ.. ಈ ದೇಶದ ಪ್ರಧಾನಿ ಮೊದಲ ಬಾರಿಗೆ ಪಾರ್ಟಿ ಅಧ್ಯಕ್ಷರ ಜೊತೆಗಾರರಾಗಿ ಪ್ರೆಸ್ ಮೀಟ್ ಮಾಡ್ತಾ ಇದ್ದಾರೆ…ನೋಡೋಣ ಅಲ್ಲಿ ಉತ್ತರ ನೀಡ್ತಾರಾ ಅಂತ.. ಮತ್ತೆ ರಣದೀಪ್ ಹೇಳಿದರು ಅಲ್ಲಿ ಬೇಗನೇ ಎಲ್ಲ ಬಾಗಿಲು ಮುಚ್ಚಿ ಬಂದೋಬಸ್ತ್ ಮಾಡಿದ್ದರು ಅಂತಾ… ನಮ್ಮ ಕಡೆಯಿಂದ ಕೆಲವು ಪ್ರಶ್ನೆಗಳನ್ನು ಕೇಳಲು ಒಂದಿಬ್ಬರು ಜರ್ನಲಿಸ್ಟ್‍ಗೆ ಹೇಳಿದ್ದೆವು. ಆದರೆ ಬಾಗಿಲು ತೆಗೆಯದೇ ಇದ್ದುದರಿಂದ ವಾಪಸ್ ಬಂದರು…
ಪ್ರಧಾನಿಯ ಪ್ರೆಸ್ ಮೀಟ್ ಲೈವ್ ಇರಬೇಕಿತ್ತು. ನಾನೂ ಒಂಡೆರಡು ಪ್ರಶ್ನೆ ಕೇಳುವುದಿತ್ತು. ರಫೇಲ್ ಡೀಲ್ ಬಗ್ಗೆ ನನ್ನ ಜೊತೆ ಚರ್ಚಿಸಲು ನೀವೇಕೆ ಹಿಂಜರಿದಿರಿ? ನಾನು ಕೇಳಬೇಕಿತ್ತು: ಈ ಹಿಂದೂಸ್ತಾನದ ಜನರ ಬೆವರಿನ 30 ಸಾವಿರ ಕೋಟಿ ರೂ.ಗಳನ್ನು ಅಂಬಾನಿಗೇಕೆ ನೀಡಿದಿರಿ? ಈ ಚರ್ಚೆ ಮಾಡಲು ನೀವು ಹೆದರಿಬಿಟ್ಟಿರಲ್ಲ?
(ಪ್ರೆಸ್: ಸರ್ಕಾರ ರಚನೆ ಕುರಿತು…ಈ ಪ್ರಶ್ನೆ ವಿವಿಧ ರೂಪದಲ್ಲಿ ಮತ್ತೆ ಮತ್ತೆ ಬಂತು)
ನಾನು ಮೊನ್ನೇನೆ ಹೇಳಿದ್ದೀನಿ..ಆದರೂ ಅದೇ ಪ್ರಶ್ನೆಯನ್ನು ಬೇರೆ ಬೇರೆ ರೂಪದಲ್ಲಿ ಮತ್ತೆ ವಾಪಸ್ ಕೇಳ್ತಾ ಇದ್ದೀರಿ. ಮೇ 23ಕ್ಕೆ ಕಾಯೋಣ… ನಿಮಗ್ಯಾಕೆ ಇಷ್ಟು ಆತುರ? ಜನರ ನಿರ್ಧಾರ ನೋಡಿದ ನಂತರವಷ್ಟೇ ಆ ಬಗ್ಗೆ ನಾನು ಮಾತಾಡುವೆ… ಜನಾದೇಶಕ್ಕೆ ನಾನು ಗೌರವ ಕೊಡುವೆ….
ನೀವು ನನಗೆ ಎಂತಹ ಕಠಿಣ ಪ್ರಶ್ನೆ ಕೇಳುತ್ತ ಬಂದಿದ್ದೀರಿ. ನ್ಯಾಯ್ ಯೋಜನೆಗೆ ದುಡ್ಡನ್ನು ಎಲ್ಲಿಂದ ತರುತ್ತೀರಿ ಇತ್ಯಾದಿ… ಆದರೆ ಮೋದೀಜಿಗೆ, ನೀವು ಮಾವಿನ ಹಣ್ಣು ಹೇಗೆ ತಿಂತೀರಿ, ನೀವು ಕುರ್ತಾ ತೋಳನ್ನು ಕಟ್ ಮಾಡ್ತಿದ್ದಿರಂತೆ, ಡ್ರೆಸ್ ಹೇಗೆ ಹಾಕಿಕೊಳ್ಳುತ್ತೀರಿ, ಈ ಕುರ್ತಾ ಎಲ್ಲಿಂದ ತಂದೀರಿ?
(ಮಂದಹಾಸದಲ್ಲಿ) ಇಂತಹ ಪ್ರಶ್ನೆ ಕೇಳ್ತಿರಪ್ಪ…
(ಪ್ರೆಸ್: ಸರ್ ಅದು ಪ್ರೆಸ್‍ನವರ ಸಂದರ್ಶನ ಅಲ್ಲ ಎಂದು ತಮಾಷೆ)
ಹಾ ಗೊತ್ತು… ಮೊನ್ನೆ ಪ್ರೆಸ್‍ನವರೇ ಬಾಲಾಕೋಟ್ ಬಗ್ಗೆ ಕೇಳಿದರಲ್ಲ? ಅದಕ್ಕೆ ಮೋದೀಜಿ, ಮಳೆ ಬರ್ತಾ ಇದೆ ಅಂತಾ ಹವಾಮಾನ ವರದಿ ಹೇಳೋಕೆ ಶುರು ಮಾಡಿದಾಗ ನನಗೆ ಗಾಬರಿ ಆಯ್ತು… ಅವರು ಏರ್‍ಫೋರ್ಸ್‍ನ ಅಧಿಕಾರಿಗಳಿಗೆ ಹೇಳಿದರಂತೆ: ಮೋಡ ಇವೆ, ರೇಡಾರ್‍ನಿಂದ ತಪ್ಪಿಸಿಕೊಬಹುದು, ದಾಳಿ ಮಾಡಿಬಿಡಿ…(ಬಲಗೈಯಿಂದ 4-5 ಸಲ ಮೇಜು ಕುಟ್ಟುತ್ತ) ಪ್ರೈಮ್ ಮಿನಿಸ್ಟರ್ ಎಕ್ಸ್‍ಲೆಂಟ್! ಪ್ರೈಮ್ ಮಿನಿಸ್ಟರ್ ಆಫ್ ಇಂಡಿಯಾ ಎಕ್ಸ್‍ಲೆಂಟ್…..
(ಪ್ರೆಸ್: ವೈಯಕ್ತಿಕ ಟೀಕೆ ಕುರಿತಂತೆ)
ನೋಡಿ, ನನಗೆ ಮೋದಿಯವರ ಬಗ್ಗೆ, ಅವರ ತಂದೆ ತಾಯಿಯವರ ಬಗ್ಗೆ ಗೌರವವಿದೆ. ಅವರ ತಂದೆ ತಾಯಿ ರಾಜಕೀಯದಲ್ಲಿ ಇಲ್ಲ, ಆದರೆ ಅವರೂ ತಪ್ಪು ಮಾಡಿದ್ದರೆ, ಅದನ್ನು ನಾನು ಪ್ರಶ್ನಿಸಲು ಹೋಗುವುದಿಲ್ಲ… ನನ್ನ ಬಗ್ಗೆ, ನನ್ನ ಪರಿವಾರದ ಬಗ್ಗೆ, ನನ್ನ ತಂದೆ-ತಾಯಿ ಬಗ್ಗೆ ಟೀಕಿಸಿವುದು, ಕೆಟ್ಟದಾಗಿ ಮಾತಾಡುವುದು ಮೋದೀಜಿಯವರಿಗೆ ಬಿಟ್ಟಿದ್ದು… ಅವರು ಎಷ್ಟಾದರೂ ಟೀಕಿಸಲಿ…
(ಪ್ರೆಸ್: ವಿಪಕ್ಷವಾಗಿ ಕಾಂಗ್ರೆಸ್ ಪಾತ್ರದ ಕುರಿತು)
2014ರ ಸಂಸತ್‍ನಲ್ಲಿ ನಮಗೆ ತುಂಬ ಕಡಿಮೆ ಸೀಟು ಇದ್ದವು. ಆದರೆ ನಾನು ಖುಷಿಯಿಂದ, ಗರ್ವದಿಂದ ಹೇಳುತ್ತೇನೆ: ವಿಪಕ್ಷವಾಗಿ ಕಾಂಗ್ರೆಸ್ ಅತ್ಯುತ್ತಮ ಅಂದರೆ ‘ಎ’ ಗ್ರೇಡ್ ಮಟ್ಟದ ರಚನಾತ್ಮಕ ವಿರೋಧವನ್ನು ಮಾಡಿದೆ. ಮೋದೀಜಿ ತಪ್ಪಿಸಿಕೊಳ್ಳದಂತೆ ನಾವು ಶೇ 90ರಷ್ಟು ಬಾಗಿಲುಗಳನ್ನು ಮುಚ್ಚಿದ್ದೇವೆ….
ಮೋದಿಯವರಿಗೆ ದೊಡ್ಡ ಅವಕಾಶಗಳಿದ್ವು.. ಅವರಿಂದ ನಾವು ಉತ್ತಮ ಕೆಲಸ ನಿರೀಕ್ಷಿದ್ದೆವು.. ಜನರ ಸಮಸ್ಯೆಗಳನ್ನು ಅವರು ಅರ್ಥ ಮಾಡಿಕೊಳ್ಳಲೇ ಇಲ್ಲ. ಅವರು ಯಾವ ಪ್ರಪಂಚದಲ್ಲಿ ಇದ್ದಾರೋ? ಜನರು ಅವರನ್ನು ಪ್ರಧಾನಿ ಪಟ್ಟದಲ್ಲಿ ಕೂಡಿಸಿದ್ದು ಅವರ ಬೋಧನೆಗಳನ್ನು ಕೇಳುತ್ತ ಕೂಡಲಲ್ಲ. ಅವರು ಸಮಸ್ಯೆ ಬಗೆಹರಿಸಲು.. ನಿರುದ್ಯೋಗ, , ರೈತರ ಬಿಕ್ಕಟ್ಟು, ಆರ್ಥಿಕತೆಯ ಕುಸಿತ ಇದ್ಯಾವುದಕ್ಕೂ ಅವರು ಸ್ಪಂದಿಸಲೇ ಇಲ್ಲ… ನೋಟ್‍ಬ್ಯಾನ್, ಗಬ್ಬರ್‍ಸಿಂಗ್ ಟ್ಯಾಕ್ಸ್ ಮೂಲಕ ಅರ್ಥವ್ಯವಸ್ಥೆಯನ್ನು ಹಾಳು ಮಾಡಿದರು…
ನಾವು ಈ ಎಲ್ಲ ಸಮಸ್ಯೆ ಇಟ್ಟುಕೊಂಡು ದೇಶಾದ್ಯಂತ ಹೋರಾಟ ಮಾಡಿದ್ದೇವೆ. ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸಘಡಗಳಲ್ಲಿ ಅದರ ಪರಿಣಾಮ ನೀವು ನೋಡಿದ್ದೀರಿ.. ಈ ಚುನಾವಣೆಯಲ್ಲಿ ಮೇಲೆ ಹೇಳಿದ ಸಮಸ್ಯೆಗಳನ್ನು ಇಟ್ಟುಕೊಂಡೇ ನಾವು ಪ್ರಚಾರ ಮಾಡಿದ್ದೇವೆ…
ಇದನ್ನು ಓದಿರಿ ನರೇಂದ್ರ ಮೋದಿಯವರ ಮೀಟ್ ದಿ ಪ್ರೆಸ್ಸೂ ಕಾರ್ಟೂನುಗಳು
ಪ್ರೆಸ್: ಉತ್ತರ ಪ್ರದೇಶದಲ್ಲಿ ಮೈತ್ರಿ ಆಗದೇ ಇದ್ದುದರ ಕುರಿತು)
ಕೇಳಿ ಇಲ್ಲಿ. ಈ ಸಲ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ತನ್ನ ಸ್ಪೇಸ್‍ಗಾಗಿ ಹುಡುಕಾಡಿಲ್ಲ. ನಮ್ಮ ಮೊದಲ ಉದ್ದೇಶ ಮೋದಿಯನ್ನು ಸೋಲಿಸುವುದು… ಕಾಂಗ್ರೆಸ್ ನೀತಿಗಳನ್ನು ಜನರಿಗೆ ತಲುಪಿಸುವುದು… ಮುಂದಿನದು ಅಸೆಂಬ್ಲಿ ಚುನಾವಣೆ…
ಎಸ್‍ಪಿ-ಬಿಎಸ್‍ಪಿ ಮೈತ್ರಿಯನ್ನು ನಾವು ಸ್ವಾಗತಿಸಿದ್ದೇವೆ. ಮಾಯಾವತಿಯವರ ಬಗ್ಗೆ ನನಗೆ ಗೌರವವಿದೆ… ಮಾಯಾವತಿ, ಮಮತಾ ಬ್ಯಾನರ್ಜಿ, ನಾಯ್ಡು ಇವರ್ಯಾರೂ ಮೋದಿ ಬೆಂಬಲಿಸುವುದಿಲ್ಲ ಎಂಬ ಖಾತ್ರಿಯಿದೆ…
ಈ ಚುನಾವಣೆ ಆರೆಸ್ಸೆಸ್ ಬಿಜೆಪಿಗಳಿಂದ ನಮ್ಮ ಸಂವಿಧಾನ ರಕ್ಷಿಸಲು, ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಕಾಪಾಡಿಕೊಳ್ಳಲು ನಡೆದಿದೆ,, ಜನ ನಮಗೆ ಅವಕಾಶ ಕೊಡುತ್ತಾರೆ ಎಂಬ ನಂಬಿಕೆಯಿದೆ…
ಎಲ್ಲರಿಗೂ ಧನ್ಯವಾದ…(ಮತ್ತೆ ನಗುತ್ತ) ನಾನೀಗ ಪ್ರೆಸ್ ಮೀಟ್ ಚೆನ್ನಾಗಿ ಮಾಡ್ತಾ ಇದ್ದೀನಿ ಅಲ್ಲವಾ? ಹೌದಲ್ಲೋ ನೀವೇ ನೋಡಿದಿರಲ್ಲ ಈಗ.. ಅದಕ್ಕೆ ಯಾರು ಕಾರಣ? ನೀವೇ… ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ನೆರವಾಗಿದ್ದೀರಿ… ಥ್ಯಾಂಕ್ಸ್, ಆಲ್ ದಿ ಬೆಸ್ಟ್
ಇದನ್ನು ಓದಿರಿ ಇದಿಂನ ಅಮಿತ್ ಷಾ ಪತ್ರಿಕಾಗೋಷ್ಠಿಯಲ್ಲಿ ಒಂದೂ ಪ್ರಶ್ನೆಯನ್ನು ತೆಗೆದುಕೊಳ್ಳದ ಪ್ರಧಾನಿ


