Homeಅಂಕಣಗಳುಹಂಪಿ ವಿಶ್ವವಿದ್ಯಾಲಯ ಘನತೆ, ವೈಚಾರಿಕತೆಯ ಅಳಿವು-ಉಳಿವು

ಹಂಪಿ ವಿಶ್ವವಿದ್ಯಾಲಯ ಘನತೆ, ವೈಚಾರಿಕತೆಯ ಅಳಿವು-ಉಳಿವು

- Advertisement -
- Advertisement -

ಬಿ. ಶ್ರೀಪಾದ ಬಟ್ |

ಹಂಪಿ ವಿಶ್ವವಿದ್ಯಾಲಯದಲ್ಲಿನ ಇತ್ತೀಚಿನ ವಿವಾದವನ್ನು ಗಮನಿಸಿದಾಗ ಅಲ್ಲಿನ ಕುಲಪತಿಗಳಾದ ಮಲ್ಲಿಕಾ ಘಂಟಿಯವರಿಗೆ ಯಾರು ವಿದ್ಯಾಸಾದಕರು, ಯಾರು ವಿ

ದ್ವಂಸಕರು ಎಂಬುದರ ಅರಿವು ಇಲ್ಲದೆ ಹೋಯಿತೆ ಎನ್ನುವ ಪ್ರಶ್ನೆ ಮೂಡುತ್ತದೆ. ವಿಶಯವೇನೆಂದರೆ ಕನ್ನಡ ವಿವಿಯ ನುಡಿಹಬ್ಬದ ಪ್ರಯುಕ್ತ ಡಿಸೆಂಬರ್ 31, 2018-ಜನವರಿ 1, 2019 ರಂದು ಆಯೋಜಿಸಲಾಗಿದ್ದ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಬಕ್ಕೆ ಸುಳ್ಳು ಬಿತ್ತಿ ದ್ವೇಶವನ್ನು ಬೆಳೆಸಿದ ಪತ್ರಕರ್ತ ವಿಶ್ವೇಶ್ವರ ಭಟ್ಟರನ್ನು ಅತಿಥಿಗಳನ್ನಾಗಿ ಕರೆದಿದ್ದು ಇಡೀ ವಿವಾದದ ಕೇಂದ್ರವಾಗಿದೆ. ಸದರಿ ಪತ್ರಕರ್ತರನ್ನು ಯಾವ ಅರ್ಹತೆಯ ಮೇಲೆ ಆಹ್ವಾನಿಸಿದ್ದೀರಿ ಎಂದು ಪ್ರಜ್ನಾವಂತರು ಪ್ರಶ್ನಿಸಿ

ಹಂಪಿ ವಿಶ್ವವಿದ್ಯಾಲಯ

ದ್ದಾರೆ. ಏಕೆಂದರೆ ವಿಶ್ವೇಶ್ವರ ಭಟ್ಟ ಎನ್ನುವ ಪತ್ರಕರ್ತ ಕನ್ನಡ ಪತ್ರಿಕೋದ್ಯಮವನ್ನು ಅದೋಗತಿಗಿಳಿಸಿದ, ಮಹಿಳೆಯರ ಕುರಿತು ಅತ್ಯಂತ ಕೀಳು ಮಟ್ಟದಲ್ಲಿ, ತುಚ್ಚವಾಗಿ ಬರೆದಂತಹ ವ್ಯಕ್ತಿ. ಹಿಂದುತ್ವ ಮತಾಂದತೆಯ ವಿಶವನ್ನು ತ

ನ್ನ ಪತ್ರಿಕೆಯಲ್ಲಿ ದಿನನಿತ್ಯ ಪ್ರಚಾರ ಮಾಡಿದ, ಆ ಮೂಲಕ ಸಮಾಜದ ಸ್ವಾಸ್ಥ್ಯ ಕೆಡೆಸಿದ ಈ ಭಟ್ಟರನ್ನು ವಿಶಭಟ್ಟ ಎಂದು ಅಡ್ಡ ಹೆಸರಿನಿಂದ ಕರೆಯುತ್ತಾರೆ. ಈ ಮುಂಚೆ ಕನ್ನಡ ವಿವಿಯ ಕುಲಪತಿಗಳಾಗಿದ್ದ ಎಂ.ಎಂ. ಕಲ್ಬುರ್ಗಿಯವರ ವಿರುದ್ದ ಸುಳ್ಳುಗಳನ್ನು ಅಪಪ್ರಚಾರ ಮಾಡಲು ತಾನು ಸಂಪಾದಕನಾಗಿದ್ದ ದಿನಪತ್ರಿಕೆ ಮತ್ತು ಟಿವಿ ಚಾನಲ್ ನಲ್ಲಿ ಮತಾಂದರಿಗೆ ಸಂಪೂರ್ಣ ಅವಕಾಶವನ್ನು ಕೊಟ್ಟ ಈ ವಿ.ಭಟ್ಟರಿಗೆ ಸಂವಿದಾನ ಮೇಲೆಯೂ ಗೌರವವಿಲ್ಲ. ಸಂವಿದಾನದ ನೀತಿಸಂಹಿತೆಗಳಿಗೆ ಬದ್ದರಾಗಿ ಕಾರ್ಯನಿರ್ವಹಿಸುತ್ತಿರುವ ಹಂಪಿ ವಿವಿಯು ಸಂವಿದಾನ ವಿರೋದಿಯಾದಂತಹ ವಿಶ್ವೇಶ್ವರ ಭಟ್ಟರನ್ನು ಅತಿಥಿಯನ್ನಾಗಿ ಆಯ್ಕೆ ಮಾಡುವುದು ಸಹ ಪ್ರಜಾತಾಂತ್ರಿಕ ವಿರೋದಿ ಎನಿಸಿಕೊಳ್ಳುತ್ತದೆ

ಆದರೆ ಮಲ್ಲಿಕಾ ಘಂಟಿಯವರು ಸಿಂಡಿಕೇಟ್ ಸದಸ್ಯರ ಸಬೆ ನಡೆಸದೆ, ಹಿರಿಯ ಪ್ರಾದ್ಯಾಪಕರೊಂದಿಗೆ ಸಮಾಲೋಚಿಸದೆ ಏಕಪಕ್ಷೀಯವಾಗಿ ಈ ನಿರ್ಣಯವನ್ನು ತೆಗೆದುಕೊಂಡರು ಎಂದು ಹೇಳಲಾಗುತ್ತಿದೆ. ಸ್ವತಃ ಉಪಕುಲಪತಿಗಳೆ ಒಂದೆಡೆ ಇದು ನನ್ನ ನಿರ್ದಾರ ಎಂದು ಹೇಳಿದ್ದಾರೆ. ಅಕ್ಕ ಮಹಾದೇವಿ “ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕಡೆಂತಯ್ಯ, ಬೆಟ್ಟದ ತುದಿಯ ಮೆಟ್ಟಲೆಂದು ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಯ್ಯ” ಎಂದು ಕೇಳುತ್ತಾಳೆ. ಪ್ರಜ್ನಾವಂತರು ಇದೇ ಪ್ರಶ್ನೆಯನ್ನು ಇಂದು ಕುಲಪತಿಗಳಿಗೆ ಕೇಳುತ್ತಿದ್ದಾರೆ.

ವಿವಿಯ ಆಡಳಿತ ಮಂಡಳಿ ಮತ್ತು ಕುಲಪತಿಗಳ ಈ ಆಯ್ಕೆಯನ್ನು ವಿರೋದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋದ ವ್ಯಕ್ತವಾಯಿತು. ಸಾಹಿತಿ, ಲೇಖಕ, ಪತ್ರಕರ್ತರು, ಹೋರಾಟಗಾರರು ವಿಶ್ವೇಶ್ವರ ಬಟ್ಟರಂತಹ ಜೀವವಿರೋದಿ ಪತ್ರಕರ್ತರನ್ನು ಆಹ್ವಾನಿಸಿದ್ದನ್ನು ಸಾಮೂಹಿಕವಾಗಿ ಖಂಡಿಸಿ ಪತ್ರವನ್ನು ಬರೆದರು. ವಿವಿಯ ಈ ನಡೆಯು ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗುತ್ತದೆ ಮತ್ತು ವಿದ್ಯಾರ್ಥಿಗಳಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ವಿಶ್ವೇಶ್ವರ ಭಟ್ಟರ ಆಯ್ಕೆಯ ಈ ನಿರ್ದಾರವನ್ನ ಕೈಬಿಡಬೇಕು ಎಂದು ಆಗ್ರಹಿಸಿದರು. ಕವಿಗಳಿಗೆ ಕವಿ-ಕಾವ್ಯ ಗೋಶ್ಟಿಯಲ್ಲಿ ಬಾಗವಹಿಸಬಾರದೆಂದು ಮನವಿಯನ್ನು ಸಹ ಮಾಡಲಾಯಿತು.

ಮಲ್ಲಿಕಾ ಘಂಟಿ

ಕವಿ, ಲೇಖಕರಾದ ಲಕ್ಷ್ಮೀಪತಿ ಕೋಲಾರ, ಹನುಮಂತ ಹಾಲಗೇರಿ, ಕೆ.ಪಿ.ನಟರಾಜ, ರಮೇಶ್ ಗಬ್ಬೂರು, ಜಾಜಿ ದೇವೆಂದ್ರಪ್ಪ, ಅರುಣ್ ಜೋಳದ ಕೂಡ್ಲಿಗಿ ಅವರು ಕವಿಗೋಶ್ಟಿಯಲ್ಲಿ ಭಾಗವಹಿಸದಿರಲು ನಿರ್ದರಿಸಿದರು.

ಹಂಪಿ ವಿವಿಯ ಬಯಲು ಚಿಂತನ ಸಂಶೋದನ ವಿದ್ಯಾರ್ಥಿ ಬಳಗದವರು ಕುಲಪತಿ ಕಚೇರಿ ಎದುರು ಪ್ರತಿಬಟಿಸಿದರು. ಮುಂದೊದಗಬಹುದಾದ ಯಾವುದೇ ವ್ಯತಿರಿಕ್ತ ಪರಿಣಾಮಗಳನ್ನು ಲೆಕ್ಕಿಸದೆ ನ್ಯಾಯದ ಪರವಾಗಿ ಬೆಂಬಲಿಸಿದ ಅಲ್ಲಿನ ಸ್ನಾತಕೋತ್ತರ, ಸಂಶೋದನ ವಿದ್ಯಾರ್ಥಿಗಳ ಈ ದಿಟ್ಟತೆ ಇಡೀ ವಿವಾದಕ್ಕೆ ಹೊಸ ತಿರುವನ್ನು ತಂದಿತು. ಮೌನವಾಗಿದ್ದೀರಿ ಯಾಕೆ ಎನ್ನುವ ಪ್ರಶ್ನೆಗೆ ಗುರಿಯಾಗಿದ್ದ ವಿ.ವಿ.ಯ ಪ್ರಾದ್ಯಾಪಕರು ಕುಲಪತಿಗಳ ಏಕಪಕ್ಷೀಯ ನಿರ್ದಾರದ ವಿರುದ್ದ ತಮ್ಮ ಪ್ರತಿಭಟನೆ ದಾಖಲಿಸಿದರು. (ಆದರೆ ಕೆಲ ಪ್ರಾದ್ಯಾಪಕರು ವಿ.ಭಟ್ಟನನ್ನು ಆಹ್ವಾನಿಸಿದ್ದು ಗೊತ್ತಾದ ತಕ್ಷಣ ಕುಲಪತಿಗಳಿಗೆ ತಮ್ಮ ವಿರೋದವನ್ನು ವ್ಯಕ್ತಪಡಿಸಿದ್ದರು)

ಮೇಲಿನ ಎಲ್ಲಾ ಒತ್ತಡಗಳಿಗೆ ಮಣಿದ ಮಲ್ಲಿಕಾ ಘಂಟಿಯವರು ಎರಡು ದಿನದ ಸಮಾರೋಪ ಸಮಾರಂಬವನ್ನೆ ರದ್ದುಗೊಳಿಸಲಾಗಿದೆ ಎಂದು ಪ್ರಕಟಿಸಿದರು. ಆದರೂ ಸಹ ತಮ್ಮದೇನು ತಪ್ಪಿಲ್ಲ ಎಂಬಂತೆ ವಿ.ಭಟ್ಟರನ್ನು ಕರೆಸುವ ತಮ್ಮ ನಿರ್ದಾರವನ್ನು ಪದೆ ಪದೆ ಸಮರ್ಥಿಸಿಕೊಂಡರು. ಈ ಸಮರ್ಥನೆಯ ಭರದಲ್ಲಿ ಇಡೀ ವಿವಾದವನ್ನು ಎಡಪಂಥೀಯ ವರ್ಸಸ್ ಬಲಪಂಥೀಯ ಎಂದು ಶರಾ ಬರೆದುಬಿಟ್ಟರು. ತಮ್ಮ ಈ ಹತಾಶ ಹೇಳಿಕೆಯ ಮೂಲಕ ಜನತೆಯನ್ನು ತಪ್ಪು ದಾರಿಗೆಳೆಯುವ ಪ್ರಯತ್ನವನ್ನು ಮಾಡಿದರು. ಆದರೆ ಪತ್ರಕರ್ತ ವೇಶದ ಒಬ್ಬ ಜೀವವಿರೋದಿ ವ್ಯಕ್ತಿಯನ್ನು ಹಂಪಿ ವಿವಿಯಂತಹ ಉನ್ನತ ಶಿಕ್ಷಣ ಸಂಸ್ಥೆಗೆ ಅತಿಥಿಯಾಗಿ ಆಹ್ವಾನಿಸುವುದರ ವಿರುದ್ದ ಮಾತ್ರ ಇಲ್ಲಿ ಪ್ರತಿಬಟನೆ ಇತ್ತು ಹೊರತಾಗಿ ಯಾವುದೆ ಸಿದ್ದಾಂತಗಳ ನಡುವಿನ ಜಗಳವಂತೂ ಅಲ್ಲವೆ ಅಲ್ಲ . ಕನ್ನಡ ವಿವಿಯ ಘನತೆ ಮತ್ತು ವೈಚಾರಿಕ ಪರಂಪರೆಯನ್ನು ಕಾಪಾಡುವ ಕಳಕಳಿಯೂ ಇಲ್ಲಿನ ಪ್ರಜ್ನಾವಂತರ ಪ್ರತಿಭಟನೆಯ ಮೂಲ ಆಶಯವಾಗಿತ್ತು. ಮುಂದಿನ ಪೀಳಿಗೆಗೆ ಕನ್ನಡ ವಿವಿ ಒಂದು ಅರ್ಥಪೂರ್ಣ ಮಾದರಿಯಾಗಿರಬೇಕು ಎಂಬುದೆ ಈ ಪ್ರತಿರೋದದ ಪ್ರಜ್ನೆಯಾಗಿತ್ತು. ಬಲಪಂಥೀಯರನ್ನು ಕರೆಸುವುದಕ್ಕೆ ಯಾವುದೆ ಬಗೆಯ ವಿರೋದ ವ್ಯಕ್ತಪಡಿಸುವುದು ಪ್ರಜಾಪ್ರಬುತ್ವ ವಿರೋದಿ ನಡವಳಿಕೆಯಾಗುತ್ತದೆ ಎನ್ನುವ ಸ್ಪಶ್ಟ ತಿಳುವಳಿಕೆ ಮೇಲಿನ ಪ್ರಜ್ನಾವಂತರಿಗಿದೆ. ಮತ್ತು ಇಂತಹ ಫ್ಯಾಸಿಸ್ಟ್ ವರ್ತನೆಯನ್ನು ಕಾಲಕಾಲಕ್ಕೆ ಖಂಡಿಸುತ್ತಲೆ ಬಂದಿದ್ದಾರೆ.

ಕಡೆಗೂ ಕಾಡುವುದೇನೆಂದರೆ “ಎಲ್ಲಾ ಬಿಟ್ಟ ಮಗ ಭಂಗಿ ಯಾಕೆ ನೆಟ್ಟ” ??

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...