Homeಮುಖಪುಟ97 ವಲಸೆ ಕಾರ್ಮಿಕರ ಸಾವು: ಮಾಹಿತಿ ಇಲ್ಲ ಎಂದು ಹೇಳಿ, ಈಗ ಮಾಹಿತಿ ನೀಡಿದ ಕೇಂದ್ರ...

97 ವಲಸೆ ಕಾರ್ಮಿಕರ ಸಾವು: ಮಾಹಿತಿ ಇಲ್ಲ ಎಂದು ಹೇಳಿ, ಈಗ ಮಾಹಿತಿ ನೀಡಿದ ಕೇಂದ್ರ ಸರ್ಕಾರ!!!

ರೈಲ್ವೆಯು ರಾಜ್ಯದ ವಿಷಯವಾಗಿದ್ದು, ಅದರಲ್ಲಿನ ಅಪರಾಧಗಳ ತಡೆಗಟ್ಟುವಿಕೆ, ಪ್ರಕರಣಗಳ ನೋಂದಣಿ, ರೈಲ್ವೆ ಆವರಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಚಾಲನೆಯಲ್ಲಿರುವ ರೈಲುಗಳಲ್ಲಿ ಅವುಗಳ ತನಿಖೆ ಮತ್ತು ನಿರ್ವಹಣೆಯು ರಾಜ್ಯ ಸರ್ಕಾರಗಳ ಶಾಸನಬದ್ಧ ಜವಾಬ್ದಾರಿಯಾಗಿದೆ- ಗೋಯಲ್

- Advertisement -
- Advertisement -

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗಾಗಿ ವ್ಯವಸ್ಥೆ ಮಾಡಿದ್ದ ಶ್ರಮಿಕ್ ವಿಶೇಷ ರೈಲುಗಳಲ್ಲಿ ಸುಮಾರು 97 ಜನ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಅಂಕಿಅಂಶಗಳನ್ನು ಸಲ್ಲಿಸಿದೆ.

ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯನ್ ಶುಕ್ರವಾರ ಸದಸನದಲ್ಲಿ ಕೇಳಿದ ಪ್ರಶ್ನೆಗೆ, ರೈಲ್ವೆ ಸಚಿವ ಪಿಯೂಷ್ ಗೋಯಲ್, ಲಿಖಿತ ಉತ್ತರದಲ್ಲಿ ಸಂಸತ್ತಿನ ಮೇಲ್ಮನೆಗೆ ಅಂಕಿಅಂಶಗಳನ್ನು ನೀಡಿದರು.

“ರಾಜ್ಯ ಪೊಲೀಸರು ಒದಗಿಸಿದ ಮಾಹಿತಿಯ ಆಧಾರದ ಮೇಲೆ, ಪ್ರಸ್ತುತ ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದಾಗ ಸೆಪ್ಟಂಬರ್,09,2020 ರವರೆಗೆ 97 ಜನರು ಸಾವನ್ನಪ್ಪಿದ್ದಾರೆ” ಎಂಬುದಾಗಿ ಸಚಿವರು ಹೇಳಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಕೊರೊನ ಸಂಕಟ: 100 ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಸಾವು RTIನಿಂದ ಬಹಿರಂಗ – ಮಾಹಿತಿಯೇ ಇಲ್ಲ ಎಂದ…

“ರಾಜ್ಯ ಪೊಲೀಸರು, Cr.PCಯ ಸೆಕ್ಷನ್ 174 ರ ಅಡಿಯಲ್ಲಿ ಈ ಸಾವುಗಳನ್ನು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆಯನ್ನು ಅನುಸರಿಸುತ್ತಾರೆ. ರಾಜ್ಯ ಪೊಲೀಸರು, 87 ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ” ಎಂದು ಸಚಿವರು ಹೇಳಿದರು.

“ಈವರೆಗೆ ಒಟ್ಟು 51 ಮರಣೋತ್ತರ ವರದಿಗಳನ್ನು ಆಯಾ ರಾಜ್ಯ ಪೊಲೀಸ್ ಪಡೆಗಳಿಂದ ಪಡೆಯಲಾಗಿದ್ದು, ಇದರಲ್ಲಿ, ಸಾವಿಗೆ ಕಾರಣ, ಹೃದಯ ಸ್ತಂಭನ/ಹೃದಯ ಕಾಯಿಲೆ/ಮೆದುಳಿನ ರಕ್ತಸ್ರಾವ/ಮೊದಲೇ ಅಸ್ತಿತ್ವದಲ್ಲಿರುವ ದೀರ್ಘಕಾಲದ ಕಾಯಿಲೆ/ದೀರ್ಘಕಾಲದ ಶ್ವಾಸಕೋಶದ ಕಾಯಿಲೆ/ದೀರ್ಘಕಾಲದ ಯಕೃತ್ತಿನ ಕಾಯಿಲೆ ಇತ್ಯಾದಿ, ಎಂದು ಕಂಡುಬಂದಿದೆ” ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಕೊರೊನಾ ಲಾಕ್‌ಡೌನ್; ವಲಸೆ ಕಾರ್ಮಿಕರ ಸಂಕಷ್ಟಕ್ಕೆ ಸುಳ್ಳುಸುದ್ಧಿಗಳೇ ಕಾರಣ: ಕೇಂದ್ರ ಸರ್ಕಾರ

ಅದಾಗ್ಯೂ “ಕೊರೊನಾ ಲಾಕ್‌ಡೌನ್ ವೇಳೆ ದೇಶದ ಹೆದ್ದಾರಿಗಳಲ್ಲಿ ರಕ್ತಸುರಿಸುತ್ತಾ ತಮ್ಮ ಮನೆಗೆ ಹೊರಟವರಲ್ಲಿ, ಮೃತಪಟ್ಟ ವಲಸಿಗರ ಕುರಿತು ತನ್ನ ಬಳಿ ಯಾವುದೇ ಮಾಹಿತಿ ಇಲ್ಲ, ಆದ್ದರಿಂದ ಮೃತಪಟ್ಟವರಿಗೆ ಪರಿಹಾರ ಒದಗಿಸುವ ಪ್ರಶ್ನೆಯು ಏಳುವುದಿಲ್ಲ” ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸಂಸತ್ತಿಗೆ ಈ ಹಿಂದೆ ತಿಳಿಸಿತ್ತು.

ಲಾಕ್‌ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಮರಳಿಸಲು ಶ್ರಮಿಕ್ ವಿಶೇಷ ರೈಲುಗಳು ಮೇ 1 ರಂದು ಕಾರ್ಯಾಚರಣೆ ಆರಂಭಿಸಿದ್ದವು.

ಒಟ್ಟಾರೆಯಾಗಿ, 4,621 ಶ್ರಮಿಕ್ ವಿಶೇಷ ರೈಲುಗಳು ಮೇ 1 ಮತ್ತು ಆಗಸ್ಟ್ 31 ರ ನಡುವೆ ಸಂಚರಿಸಿದ್ದು, 6,319,000 ಪ್ರಯಾಣಿಕರನ್ನು ತಮ್ಮ ರಾಜ್ಯಗಳಿಗೆ ಕರೆದೊಯ್ಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಉತ್ತರಪ್ರದೇಶ: ತುತ್ತು ಅನ್ನಕ್ಕಾಗಿ ತಾಯಿ-ಹೆಂಡತಿಯ ಮಾಂಗಲ್ಯ ಮಾರಿದ ವಲಸೆ ಕಾರ್ಮಿಕ; ಇದು ಇವನೊಬ್ಬನ ಕಥೆಯಲ್ಲ!

“ರೈಲ್ವೆಯು ರಾಜ್ಯದ ವಿಷಯವಾಗಿದ್ದು, ಅದರಲ್ಲಿನ ಅಪರಾಧಗಳ ತಡೆಗಟ್ಟುವಿಕೆ, ಪ್ರಕರಣಗಳ ನೋಂದಣಿ, ರೈಲ್ವೆ ಆವರಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಚಾಲನೆಯಲ್ಲಿರುವ ರೈಲುಗಳಲ್ಲಿ ಅವುಗಳ ತನಿಖೆ ಮತ್ತು ನಿರ್ವಹಣೆಯು ರಾಜ್ಯ ಸರ್ಕಾರಗಳ ಶಾಸನಬದ್ಧ ಜವಾಬ್ದಾರಿಯಾಗಿದೆ” ಗೋಯಲ್ ಹೇಳಿದರು.

ಕೇಂದ್ರ ಸರ್ಕಾರವು ಕೇವಲ ಕೆಲವೆ ಗಂಟೆಗಳ ಅಂತರದಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ ಪರಿಣಾಮದಿಂದಾಗಿ ಕೋಟ್ಯಾಂತರ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿ ತಮ್ಮ ಊರುಗಳಿಗೆ ತಲುಪಲು ಹರಸಾಹಸ ಪಡುವಂತಾಗಿತ್ತು.

ಇದನ್ನೂ ಓದಿ:  ಶ್ರಮಿಕ್ ರೈಲುಗಳಲ್ಲಿ ವಲಸೆ ಕಾರ್ಮಿಕರ ಸಾವು: ಫ್ಯಾಕ್ಟ್‌ಚೆಕ್ ಮಾಡುವ ಪಿಐಬಿ ಸತ್ಯ ಮರೆಮಾಚಿತೆ?

ಇದರ ನಂತರ ದೇಶದ ಮಹಾವಲಸೆ ಪ್ರಾರಂಭವಾಗಿ ನೂರಾರು ಮಂದಿ ವಲಸೆ ಕಾರ್ಮಿಕರು ದೇಶದ ಹೆದ್ದಾರಿಗಳಲ್ಲಿ, ರೈಲುಗಳಲ್ಲಿ, ರೈಲಿನ ಹಳಿಗಳಲ್ಲಿ, ಅಫಘಾತ, ದಣಿವು ಹಾಗೂ ಹಸಿವಿನಿಂದ ಪ್ರಾಣ ಬಿಡುವಂತಾಯಿತು.

ಭಾರತೀಯ ರೈಲ್ವೆ 70 ವಿಭಾಗಗಳು, 18 ವಲಯಗಳಲ್ಲಿ ಹರಡಿಕೊಂಡಿದೆ. ಈ ಪೈಕಿ 14 ವಿಭಾಗಗಳು ಮಾಹಿತಿ ನೀಡಿವೆ. ಭಾರತೀಯ ರೈಲ್ವೆಯ 18 ವಲಯಗಳಲ್ಲಿ 80 ಮಂದಿ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಶ್ರಮಿಕ ರೈಲುಗಳಲ್ಲಿ ಪ್ರಯಾಣಿಸುವ ವೇಳೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ಹಕ್ಕಿನಡಿ ಸಂಗ್ರಹಿಸಿರುವ ದಾಖಲೆಗಳನ್ನು ಉಲ್ಲೇಖಿಸಿ ತಿಳಿಸಿದೆ.

ಇದನ್ನೂ ಓದಿ:  ಎಲ್ಲಾ ವಲಸೆ ಕಾರ್ಮಿಕರು ತಮ್ಮೂರು ತಲುಪಿದ್ದಾರೆಯೇ? ಎಷ್ಟು ಜನ ಉಳಿದುಕೊಂಡಿದ್ದಾರೆ? ಇಲ್ಲಿದೆ ಮಾಹಿತಿ

ರೈಲ್ವೆ ಸಂರಕ್ಷಣಾ ದಳ ವಲಸೆ ಕಾರ್ಮಿಕರ ಸಾವುಗಳ ನೋಂದಣಿ ಮಾಡಿಕೊಂಡಿದೆ ಮತ್ತುಸಂಬಂಧಪಟ್ಟ ರೈಲ್ವೆ ವಲಯ ಮತ್ತು ವಿಭಾಗಗಳಿಗೆ ಮಾಹಿತಿಯನ್ನು ರವಾನೆ ಮಾಡಿದೆ ಎಂದು ವರದಿ ಹೇಳಿದೆ. ಕೊರೊನ ಸೋಂಕಿನಿಂದ ಹಲವು ಮಂದಿ ವಲಸೆ ಕಾರ್ಮಿಕರು ಬಳಲುತ್ತಿದ್ದರು. ಜ್ವರ, ಕಫ, ವಾಂತಿಯಿಂದಾಗಿ ಅವರ ಸ್ಥಿತಿ ಕ್ಷೀನಿಸಿತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ.

ಈಸ್ಟ್-ಸೆಂಟ್ರಲ್ ರೈಲ್ವೆಯ ದೀನ್ ದಯಾಳ್ ಉಪಾಧ್ಯ ರೈಲ್ವಿನಲ್ಲಿ ಮೇ1, 2020ರಂದು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ  5 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೂವರು ಮಹಿಳೆಯರು, ಓರ್ವ ಪುರುಷ ಮತ್ತು ಓರ್ವ ಮಗು ಇದರಲ್ಲಿ ಸೇರಿದೆ. ಭರಸವಾಲ್ ವಿಭಾಗದಲ್ಲಿ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 6 ಮಂದಿ ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಇವರೆಲ್ಲರೂ 22 ರಿಂದ 27 ವರ್ಷ ಒಳಗಿನ ಯುವ ಕಾರ್ಮಿಕರು ಎಂಬುದನ್ನು ಬೊಟ್ಟುಮಾಡಲಾಗಿದೆ.

ಇದನ್ನೂ ಓದಿ:  ರೈಲುಗಳಲ್ಲಿ ವಲಸೆ ಕಾರ್ಮಿಕರ ಸಾವು ಸಣ್ಣ ಘಟನೆ: ಬಂಗಾಳ BJP ಅಧ್ಯಕ್ಷ ದಿಲೀಪ್ ಘೋಷ್

ಕೊರೊನ-ಲಾಕ್ ಡೌನ್ ಸಂದರ್ಭದಲ್ಲಿ ಹಸಿವಿನಿಂದ 216 ಮಂದಿ ಸಾವನ್ನಪ್ಪಿದ್ದರೆ, ರಸ್ತೆ-ರೈಲು ಅಪಘಾತದಲ್ಲಿ 20 ಮಂದಿ ಮೃತಪಟ್ಟಿದ್ದಾರೆ. 133 ಮಂದಿ ಆತ್ಮಹತ್ಯ ಮಾಡಿಕೊಂಡಿದ್ದಾರೆ. ಕ್ವಾರಂಟೈನ್  ಕೇಂದ್ರದಲ್ಲಿ 49 ಮಂದಿ ಮರಣ ಹೊಂದಿದ್ದಾರೆ. ಲಾಕ್‌ಡೌನ್ ಅಪರಾಧದಲ್ಲಿ 18 ಮಂದಿ, ಪೊಲೀಸರ ಹಿಂಸೆಯಿಂದ 12 ಮಂದಿ, ಮಧ್ಯ ನಿಲ್ಲಿಸಿದ್ದರಿಂದ 49 ಮಂದಿ, ಇತರೆ ಕಾರಣಗಳಿಗಾಗಿ 113 ಮಂದಿ ಸೇರಿ 297 ಮಂದಿ ಸಾವು ಕಂಡಿದ್ದಾರೆ.

ವಿಶೇಷವೆಂದರೆ ಕೊರೊನ ಸೋಂಕಿನ ಭಯದಿಂದ, ಏಕಾಂತ, ಪ್ರಯಾಣ ನಿರ್ಬಂಧ, ಮನೆಗಳಿಗೆ ತಲುಪಲು ಸಾಧ್ಯವಾಗದೇ ಇರುವ ಕಾರಣದಿಂದ 133 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 96 ಮಂದಿ ವಲಸೆ ಕಾರ್ಮಿಕರು ಸಾವಿನ್ನಪ್ಪಿರುವುದು ಮತ್ತು ಕ್ವಾರಂಟೈನ್ ಕೇಂದ್ರಗಳಲ್ಲೇ 49 ಮಂದಿ ಮೃತಪಟ್ಟಿರುವುದು ಕೊರೊನ ಸಂಬಂಧಿತ ಸಾವುಗಳಾಗಿವೆ ಎಂದು ವೈರ್ ವರದಿ ಮಾಡಿದೆ.


ಇದನ್ನೂ ಓದಿ: ಶ್ರಮಿಕ್ ರೈಲುಗಳಲ್ಲಿ ಕಳೆದ 48 ಗಂಟೆಗಳಲ್ಲಿ 9 ವಲಸೆ ಕಾರ್ಮಿಕರು ಮೃತ : ಕೇಂದ್ರದ ವಿರುದ್ಧ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಇರಾನ್‌ಗೆ ಅಮೆರಿಕನ್ನರ ವಿರುದ್ಧ ಯಾವುದೇ ದ್ವೇಷವಿಲ್ಲ’: ಅಮೆರಿಕದ ಸಾರ್ವಜನಿಕರಿಗೆ ‘ಮುಕ್ತ ಪತ್ರ’ ಬರೆದ ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್

ಪಶ್ಚಿಮ ಏಷ್ಯಾ ಸಂಘರ್ಷ ತೀವ್ರವಾಗುತ್ತಿರುವಾಗಲೇ ಅಮೆರಿಕ ಸಾರ್ವಜನಿಕರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿರುವ ಇರಾನ್ ಅಧ್ಯಕ್ಷ ಮಸೌದ್ ಪಜೆಶ್ಕಿಯಾನ್, ಅಮೆರಿಕನ್ನರ ವಿರುದ್ಧ ಇರಾನ್ ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಆದರೆ  ಜಾಗತಿಕ ನಿರೂಪಣೆಗಳಲ್ಲಿ...

ಬಿಜು ಪಟ್ನಾಯಕ್ ವಿರುದ್ಧ ಹೇಳಿಕೆ : ಬೇಷರತ್ ಕ್ಷಮೆಯಾಚಿಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ನೀಡಿದ ಹೇಳಿಕೆ ವಿರುದ್ದ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ (ಏ.1) ಬೇಷರತ್ ಕ್ಷಮೆಯಾಚಿಸಿದ್ದಾರೆ. "ಬಿಜು ಬಾಬು...

ಮಹಾರಾಷ್ಟ್ರ: ‘ನಿನ್ನ ಮಗಳನ್ನು ನನ್ನ ಬಳಿ ಕಳುಹಿಸು’; ಬಂಧಿತ ಮಹಿಳಾ ಆರೋಪಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಅಮಾನತು 

ಮಹಾರಾಷ್ಟ್ರ: ಅಕೋಲಾದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಕಸ್ಟಡಿಯಲ್ಲಿರುವ ಮಹಿಳೆಯೊಬ್ಬರಿಂದ ಲೈಂಗಿಕ ಕಿರುಕುಳಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಆಕೆಯ ಮಗಳನ್ನು ತನ್ನ ಬಳಿಗೆ ಕಳುಹಿಸುವಂತೆ ಕೇಳಿದ್ದಕ್ಕಾಗಿ ಸಹಾಯಕ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಒಬ್ಬರನ್ನು ಅಮಾನತುಗೊಳಿಸಲಾಗಿದೆ.  80...

ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ : 8 ಮಹಿಳಾ ಕಾರ್ಮಿಕರು ಸಾವು

ವೇಗವಾಗಿ ಬಂದ ಟ್ರಕ್ ಟೆಂಪೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಹಿಳಾ ಕಾರ್ಮಿಕರು ಸಾವನ್ನಪ್ಪಿ, ಮೂವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ನಾಗ್ಪುರ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ (ಏ.1) ಸಂಜೆ ನಡೆದಿದೆ. ಎಕ್ಸ್‌ಪ್ರೆಸ್‌ವೇಯ...

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...