ದೇಶದಲ್ಲಿ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ಐದು ದಿನಗಳಿಂದ ವರದಿಯಾಗುತ್ತಿದ್ದ ಮೂರು ಲಕ್ಷಕ್ಕೂ ಹೆಚ್ಚು ಪ್ರಕರಣಗಳ ಸರಣಿ ಮುಗಿದೆ. ಕಳೆದ 24 ಗಂಟೆಗಳಲ್ಲಿ 2,55,874 ಹೊಸ ಪ್ರಕರಣಗಳು ದಾಖಲಾಗಿವೆ. ಇದು ನಿನ್ನೆಯ (ಜ.24) 3.06 ಲಕ್ಷ ಪ್ರಕರಣಗಳಿಗಿಂತ ಶೇಕಡಾ 16.39 ಕಡಿಮೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 614 ಕೊರೊನಾ ಸಂಬಂಧಿತ ಸಾವುಗಳು ವರದಿಯಾಗಿವೆ. ಕೊರೊನಾ ಪಾಸಿಟಿವಿಟಿ ದರ ಶೇಕಡಾ 15.52 ಕ್ಕೆ ಇಳಿದಿದೆ. ಆದರೆ ಸಾಪ್ತಾಹಿಕ ಪಾಸಿಟಿವಿಟಿ ದರವು ಶೇಕಡಾ 17.17 ನಲ್ಲಿದೆ. ದೇಶದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಕವರೇಜ್ 162.92 ಕೋಟಿ ಪ್ರಮಾಣವನ್ನು ದಾಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮಹಾರಾಷ್ಟ್ರದಲ್ಲಿ 28,286 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 75,35,511 ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ 2,000 ಸೋಂಕಿತರು ದಾಖಲಾಗಿದ್ದಾರೆ. ಆದರೆ, ಸುಮಾರು ಒಂದು ತಿಂಗಳಲ್ಲಿ ನಗರದಲ್ಲಿ ವರದಿಯಾದ ಕಡಿಮೆ ದೈನಂದಿನ ಪ್ರಕರಣಗಳಾಗಿವೆ.
ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಾದರೂ, ಲಸಿಕೆ ಕಾರಣಕ್ಕೆ ಸಾವು ನೋವು ಕಡಿಮೆಯಾಗಿದೆ: ICMR ಮುಖ್ಯಸ್ಥ
ದೆಹಲಿಯಲ್ಲಿ 5,760 ಹೊಸ ಕೇಸಸ್ ವರದಿಯಾಗಿವೆ. ದೈನಂದಿನ ಅಂಕಿ ಅಂಶಗಳಲ್ಲಿ ಶೇಕಡಾ 37 ರಷ್ಟು ಕಡಿಮೆಯಾಗಿದೆ. 11.79 ಪ್ರತಿಶತದಲ್ಲಿ, ಸಕಾರಾತ್ಮಕತೆಯ ದರವು ಹಿಂದಿನ ದಿನಕ್ಕೆ ಹೋಲಿಸಿದರೆ 13.3 ಪ್ರತಿಶತದಷ್ಟು ಇಳಿಕೆ ಕಂಡಿದೆ. ಜನವರಿ 13 ರಂದು ಗರಿಷ್ಠ 28,867 ದೈನಂದಿನ ಪ್ರಕರಣಗಳು ವರದಿಯಾದ ನಂತರ ರಾಷ್ಟ್ರೀಯ ರಾಜಧಾನಿಯಲ್ಲಿ ದೈನಂದಿನ ಸೋಂಕಿನ ಪ್ರಮಾಣ ಇಳಿಮುಖವಾಗಿದೆ.
ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಅನ್ನು ತೆಗೆದುಹಾಕಿದ ಮೂರು ದಿನಗಳ ನಂತರ ಕಳೆದ 24 ಗಂಟೆಗಳಲ್ಲಿ 46,426 ಕೋವಿಡ್ ಪ್ರಕರಣಗಳು ವರದಿ ಮಾಡಿದೆ. ಬೆಂಗಳೂರಿನಲ್ಲಿ ಒಂದೇ ದಿನ 21,569 ಕೇಸಸ್ ವರದಿಯಾಗಿವೆ.
Active cases stabilize as discharges increase significantly:
◾New cases in State: 46,426
◾New cases in B'lore: 21,569
◾Positivity rate in State: 32.95%
◾Discharges: 41,703
◾Active cases State: 3,62,487 (B'lore- 226k)
◾Deaths:32 (B'lore- 09)
◾Tests: 1,40,884#COVID— Dr Sudhakar K (@mla_sudhakar) January 24, 2022
ದೇಶದಲ್ಲಿ ವಯಸ್ಕರು ಕನಿಷ್ಠ 72 ಪ್ರತಿಶತದಷ್ಟು ಜನರು ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ಆದರೆ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇಕಡಾ 52 ರಷ್ಟು ಮಂದಿ ತಮ್ಮ ಮೊದಲ ಡೋಸ್ ಪಡೆದಿದ್ದಾರೆ ಎಂದು ಸಚಿವಾಯಲ ತಿಳಿಸಿದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಅಭಿವೃದ್ಧಿಗೆ ಒಂದು ಪೈಸೆಯು ಕೊಡದ ಪಿಎಂ ಕೇರ್!


