Homeಕರ್ನಾಟಕಬೀಬಿ ಮುಸ್ಕಾನ್‌ ಘೋಷಣೆ: ಒಂದೆಡೆ RSS ಮುಸ್ಲಿಂ ಘಟಕದ ಬೆಂಬಲ, ಇನ್ನೊಂದೆಡೆ RSS ಮುಖಂಡರ ಖಂಡನೆ

ಬೀಬಿ ಮುಸ್ಕಾನ್‌ ಘೋಷಣೆ: ಒಂದೆಡೆ RSS ಮುಸ್ಲಿಂ ಘಟಕದ ಬೆಂಬಲ, ಇನ್ನೊಂದೆಡೆ RSS ಮುಖಂಡರ ಖಂಡನೆ

- Advertisement -
- Advertisement -

ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್- ಕೇಸರಿ ವಿವಾದದಲ್ಲಿ ಮುನ್ನೆಲೆಗೆ ಬಂದ ಮುಸ್ಲಿಂ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್‌ಗೆ ಆರ್‌ಎಸ್‌ಎಸ್‌ನ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ಬೆಂಬಲ ನೀಡಿದೆ. ಆದರೆ, ಇದೆ ಆರ್‌ಎಸ್‌ಎಸ್‌ನ ಮುಖಂಡರೊಬ್ಬರು ಆಕೆಯನ್ನು ಖಂಡಿಸಿ ಹೇಳಿಕೆ ನೀಡಿದ್ದಾರೆ.

‘ಪರ್ದಾ’ ಭಾರತೀಯ ಸಂಸ್ಕೃತಿಯ ಭಾಗ ಎಂದು ಹೇಳುವ ಮೂಲಕ ಮಂಡ್ಯದ ಕಾಲೇಜಿನಲ್ಲಿ ಯುವಕರು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿದಕ್ಕೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್‌ ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್‌ ಖಾನ್‌ಗೆ ಆರ್‌ಎಸ್‌ಎಸ್‌ನ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ಬೆಂಬಲ ನೀಡಿದೆ.

“ಬೀಬಿ ಮುಸ್ಕಾನ್ ಖಾನ್‌ ನಮ್ಮ ಸಮುದಾಯದ ಮಗಳು ಮತ್ತು ಸಹೋದರಿ, ಈ ಬಿಕ್ಕಟ್ಟಿನ ಸಮಯದಲ್ಲಿ ನಾವು ಅವರ ಪರ ನಿಲ್ಲುತ್ತೇವೆ” ಎಂದು ಎಂಆರ್‌ಎಂನ ಪ್ರಾಂತ ಸಂಚಾಲಕ ಅನಿಲ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಪಿಟಿಐಗೆ ನೀಡಿರುವ ಹೇಳಿಕೆಯಲ್ಲಿ, “ಹಿಂದೂ ಸಂಸ್ಕೃತಿಯು ಮಹಿಳೆಯರಿಗೆ ಗೌರವವನ್ನು ಕಲಿಸುತ್ತದೆ. ಆದರೆ, ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿ, ಆ ವಿದ್ಯಾರ್ಥಿನಿಯನ್ನು ಬೆದರಿಸಲು ಪ್ರಯತ್ನಿಸಿದ್ದು ತಪ್ಪು. ದೇಶದ ಸಂವಿಧಾನವು ಹೆಣ್ಣು ಮಗುವಿಗೆ ಹಿಜಾಬ್ ಧರಿಸುವ ಹಕ್ಕನ್ನು ನೀಡಿದೆ. ಬಾಲಕಿ ತಾನು ಓದುತ್ತಿರುವ ಸಂಸ್ಥೆಯ ಯಾವುದೇ ವಸ್ತ್ರ ಸಂಹಿತಿಯನ್ನು ಉಲ್ಲಂಘಿಸಿದ್ದರೆ ಮಾತ್ರ ಸಂಸ್ಥೆ ಆಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರದ ವೈಫಲ್ಯವನ್ನು ಹಿಜಾಬ್ ಮತ್ತು ಕೇಸರಿ ಶಾಲುಗಳ ಹಿಂದೆ ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ: ಕರ್ನಾಟಕ ಜನಶಕ್ತಿ

“ಹಿಜಾಬ್ ಭಾರತೀಯ ಸಂಸ್ಕೃತಿ ಮತ್ತು ನಮ್ಮ ಸಮಾಜದ ಒಂದು ಭಾಗವಾದ ‘ಪರ್ದಾ’ ಆಗಿದೆ. ನಮ್ಮ ಸಮಾಜದಲ್ಲಿ ಹಿಂದೂ ಮಹಿಳೆಯರು ಕೂಡ ವ್ಯಕ್ತಿಗೆ ಅನುಗುಣವಾಗಿ ‘ಪರ್ದಾ’ ಧರಿಸುತ್ತಾರೆ. ಹಿಂದೂ ಮಹಿಳೆಯರು ತಮ್ಮ ಡ್ರೆಸ್ ಕೋಡ್ ಅನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಾಗಿದ್ದರೆ, ಇದು ಬೀಬಿ ಮುಸ್ಕಾನ್ ಅವರಿಗೂ ಅನ್ವಯಿಸುತ್ತದೆ’ ಎಂದಿದ್ದಾರೆ.

“ಮುಸ್ಲಿಮರು ನಮ್ಮ ಸಹೋದರರು. ಎರಡೂ ಸಮುದಾಯಗಳ ಡಿಎನ್ಎ ಒಂದೇ ಎಂದು ನಮ್ಮ ಸಂಘದ ಮುಖಂಡರು (sarsangh chalak) ಹೇಳಿದ್ದಾರೆ. ಹಾಗಾಗಿ ಮುಸ್ಲಿಮರನ್ನು ತಮ್ಮ ಸಹೋದರ ಸಹೋದರಿಯರಂತೆ ಸ್ವೀಕರಿಸುವಂತೆ ಹಿಂದೂ ಸಮುದಾಯದ ಎಲ್ಲ ಸದಸ್ಯರಿಗೆ ನಾನು ಮನವಿ ಮಾಡುತ್ತೇನೆ” ಎಂದು ಅನಿಲ್ ಸಿಂಗ್ ಹೇಳಿದ್ದಾರೆ.

ಇತ್ತ, ಇದೆ ಘಟನೆಗೆ ತದ್ವಿರುದ್ಧ ಪ್ರತಿಕ್ರಿಯೆ ನೀಡಿರುವ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್, ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಖಾನ್ ಅವರನ್ನು ಖಂಡಿಸಿದ್ದು, ರಾಜ್ಯದಲ್ಲಿ ಶಾಂತಿ ಕದಡಲು ಸಂಚು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: BREAKING News| ಹಿಜಾಬ್‌: ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿ

“ಯಾವಾಗಲೂ ಜೀನ್ಸ್ ಧರಿಸುವ ಮುಸ್ಕಾನ್ ಖಾನ್, ರಾಜ್ಯದಲ್ಲಿನ ಶಾಂತಿಯುತ ವಾತಾವರಣವನ್ನು ಕದಡುವ ಪಿತೂರಿಯ ಭಾಗವಾಗಿ ಹಿಜಾಬ್ ಧರಿಸಿ ಪ್ರತಿಭಟಿಸಿದ್ದಾರೆ” ಎಂದು ಆರ್‌ಎಸ್‌ಎಸ್ ನಾಯಕ ಹೇಳಿದ್ದಾರೆ.

“ಮುಸ್ಕಾನ್ ಖಾನ್ ಯಾವಾಗಲೂ ಜೀನ್ಸ್ ಧರಿಸುತ್ತಾರೆ. ಅವರಿ ಇಂತಹ ಪಿತೂರಿ ಮಾಡಿದ್ದಾರೆ, ಇದು ಖಂಡನೀಯ. ಅವರು ಶಾಂತಿಯುತ ವಾತಾವರಣವನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಕೆಲವು ಉಗ್ರಗಾಮಿಗಳು ಈ ಹೆಣ್ಣುಮಕ್ಕಳನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಇಂದ್ರೇಶ್ ಕುಮಾರ್ ‌ಆರೋಪಿಸಿದ್ದಾರೆ.

ಮಂಡ್ಯ ಪಿಇಎಸ್‌ ಕಾಲೇಜಿನಲ್ಲಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಕೆಲವು ಕೇಸರಿ ಶಾಲುಧಾರಿಗಳು, ಬುರ್ಖಾ ಧರಿಸಿ ಕಾಲೇಜು ಆವರಣಕ್ಕೆ ಬಂದ ಬೀಬಿ ಮುಸ್ಕಾನ್‌ ಅವರನ್ನು ಕಂಡ ಕೂಡಲೇ ಜೈ ಶ್ರೀರಾಮ್ ಘೋಷಣೆ ಕೂಗಿ ಹಿಂಬಾಲಿಸಿದ್ದರು. ಇದಕ್ಕೆ ತಕ್ಷಣದ ಪ್ರತಿಕ್ರಿಯೆಯಾಗಿ ಆಕೆ ಅಲ್ಲಾ ಹು ಅಕ್ಬರ್‌ ಘೋಷಣೆ ಕೂಗಿದ್ದರು. ಆಕೆಯ ಪ್ರತಿರೋಧ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.


ಇದನ್ನೂ ಓದಿ: Hijab Live | ಹಿಜಾಬ್‌ ಲೈವ್‌ | ವಿಚಾರಣೆ ಸೋಮವಾರಕ್ಕೆ ಮುಂದೂಡಿದ ಹೈಕೋರ್ಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ದೀರ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...