ರಾಷ್ಟ್ರಧ್ವಜ ಬದಲಾವಣೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಜಾಕ್ಕೆ ಒತ್ತಾಯಿಸಿರುವ ಕಾಂಗ್ರೆಸ್ ಶಾಸಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಗುರುವಾರ (ಫೆ.17) ರಾತ್ರಿ ವಿಧಾನಸಭೆಯೊಳಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಇತರ ವಿರೋಧ ಪಕ್ಷದ ಶಾಸಕರು ಧರಣಿ ನಡೆಸಿ, ಘೋಷಣೆ ಕೂಗುತ್ತಿರುವ ದೃಶ್ಯಗಳು ಕಂಡು ಬಂದವು. ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
“ಕಾಂಗ್ರೆಸ್‌ನ ತ್ಯಾಗ, ಬಲಿದಾನಗಳಿಂದ ರೂಪುಗೊಂಡ ಈ ದೇಶದ ಗೌರವಕ್ಕೆ, ಘನತೆಗೆ, ಐಕ್ಯತೆಗೆ ಧಕ್ಕೆ ಬಂದರೆ ಕಾಂಗ್ರೆಸ್ ಪಕ್ಷ ಎಂದಿಗೂ ಕೈಕಟ್ಟಿ ಕೂರುವುದಿಲ್ಲ. ಬಿಜೆಪಿಯವರ ದೇಶದ್ರೋಹವನ್ನು, ದೇಶಕ್ಕೆ ಎಸಗುವ ಅವಮಾನವನ್ನು ನೋಡಿ ಸುಮ್ಮನಿರಲಾರೆವು. ಈಶ್ವರಪ್ಪನವರ ರಾಜೀನಾಮೆಗೆ ಆಗ್ರಹಿಸಿ ನಮ್ಮ ಅಹೋರಾತ್ರಿ ಧರಣಿ ಮುಂದುವರೆದಿದೆ”ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಸಂಪುಟದಿಂದ ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್ ಆಗ್ರಹ: ಸದನದಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ
It is a matter of pride in our country and of protecting it's honour and the dignity of the national flag.
How can the party that built India stand back and watch as others insult it? The dharna will continue until a sedition case is filed against @ikseshwarappa#DeshadrohiBJP pic.twitter.com/TQlte5NvPO— Karnataka Congress (@INCKarnataka) February 17, 2022
“ಅವರು ಸಂವಿಧಾನವನ್ನು ಬದಲಾಯಿಸಲು ಬಯಸುತ್ತಾರೆ. ಅವರು ರಾಷ್ಟ್ರಧ್ವಜವನ್ನು ಬದಲಾಯಿಸಲು ಬಯಸುತ್ತಾರೆ. ಸಚಿವರು ತಾವು ಹೇಳಿದ್ದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಅವರನ್ನು ಇನ್ನು ವಜಾ ಮಾಡಿಲ್ಲ. ಹಾಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ” ಎಂದು ಡಿ.ಕೆ ಶಿವಕುಮಾರ್ ಗುರುವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಂದೇ ಮಾತರಂ pic.twitter.com/zwPFPIbi3G
— DK Shivakumar (@DKShivakumar) February 17, 2022
“ಈಶ್ವರಪ್ಪ ದೇಶದ್ರೋಹ ಮಾಡಿದ್ದಾರೆ. ನಮ್ಮ ಹೆಮ್ಮೆ ಮತ್ತು ರಾಷ್ಟ್ರದ ಸಾರ್ವಭೌಮತ್ವದ ಪ್ರತೀಕವಾಗಿರುವ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ’’ ಎಂದು ಆರೋಪಿಸಿದ್ದ ಕಾಂಗ್ರೆಸ್, ನಾವು ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ನಾವು ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ತಿಳಿಸಿದ್ದರು.
’ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜ ಹಾರಿಸಲಾಗುವುದು, ತ್ರಿವರ್ಣ ಧ್ವಜದ ಬದಲು ಕೇಸರಿ ಧ್ವಜ ಹಾಕಲಾಗುವುದದು’ ಎಂದು ಈಶ್ವರಪ್ಪ ಫೆಬ್ರವರಿ 9 ರಂದು ಹೇಳಿಕೆ ನೀಡಿದ್ದರು. ಇದು ದೇಶದ್ರೋಹ ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿತ್ತು.
ಇದನ್ನೂ ಓದಿ: ಒಟ್ಟಿಗೆ ಕೈ ಕೈ ಹಿಡಿದು ಕಾಲೇಜಿಗೆ ಬಂದು ಸೌಹಾರ್ದತೆ ಸಾರಿದ ಉಡುಪಿ ವಿದ್ಯಾರ್ಥಿನಿಯರು: ಫೋಟೊ, ವಿಡಿಯೋ ವೈರಲ್


