Homeಕರ್ನಾಟಕಹಿಂದುತ್ವದ ಅಜೆಂಡಾಗಳಿಗೆ ಬಲಿಯಾಗುತ್ತಿರುವ ‘ಹಿಂದೂ’ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು

ಹಿಂದುತ್ವದ ಅಜೆಂಡಾಗಳಿಗೆ ಬಲಿಯಾಗುತ್ತಿರುವ ‘ಹಿಂದೂ’ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು

- Advertisement -
- Advertisement -

ಕಳೆದ ಆರೇಳು ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಸಂಬಂಧಿ ಗೊಂದಲಗಳು ಹೆಚ್ಚು ಬಾಧಿಸುತ್ತಿರುವುದು ಮತ್ತು ಮುಂದೆ ಬಾಧಿಸಲಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು. ಈಗಾಗಲೇ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ನಡುವೆ ದೊಡ್ಡ ಕಂದಕ ನಿರ್ಮಾಣವಾಗಿದೆ. ಈ ಅಸಮಾನತೆಯನ್ನು ಇಲ್ಲವಾಗಿಸಿವುದು ಶಿಕ್ಷಣ ಕ್ಷೇತ್ರದಲ್ಲಿ ನಡೆಯಬೇಕಿರುವ ಅಗತ್ಯದ ಕೆಲಸ. ಆದರೆ ದಿನೇ ದಿನೇ ಈ ಅಂತರ ಹೆಚ್ಚಾಗುತ್ತಲೇ ಇದೆ.

ರಾಜ್ಯದ ಯೂನಿವರ್ಸಿಟಿಗಳಿಂದ ಹೊರಗೆ ಬಂದ ತಕ್ಷಣ ಒಂದೋ ಉದ್ಯೋಗ ಅಥವಾ ಉನ್ನತ ಶಿಕ್ಷಣಕ್ಕೆ ಹೋಗಬೇಕು. ಆದರೆ ಈ ಎರಡಕ್ಕೂ ಬೇಕಾದ ಕೌಶಲ್ಯವನ್ನು ಹೊಂದಿರದೇ ಇದ್ದಾಗ ವಿದ್ಯಾರ್ಥಿಗಳು ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗಿ ಬರುತ್ತದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈಗಾಗಲೇ ದೇಶ ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿದೆ. ಆದರೆ ಉದ್ಯೋಗಗಳು ಇಲ್ಲವೆಂದಲ್ಲ. ಆದರೆ ಈ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯಗಳ ಕೊರತೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಇದೆ. ಅಲ್ಲದೇ ಈ ಕೌಶಲ್ಯಗಳನ್ನು ಬೋಧಿಸುವ ಪಠ್ಯ ಕ್ರಮವೂ ನಮ್ಮಲ್ಲಿ ಇಲ್ಲ.

ಇದನ್ನೂ ಓದಿ: ಶಾಲೆಗಳಲ್ಲಿ ಹಿಜಾಬ್‌‌‌‌ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಗ್ರಾಮೀಣ ಭಾಗದಲ್ಲಿ ಇರುವ ಖಾಸಗಿಯೂ ಸೇರಿದಂತೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡುವುದಿಲ್ಲ. ವಿದ್ಯಾರ್ಥಿಗಳನ್ನು ಬಿಡಿ, ಉಪನ್ಯಾಸಕರೂ ತರಗತಿ ಮುಗಿದ ಮೇಲೆ ಇಂಗ್ಲೀಷ್‌ನಲ್ಲಿ ಮಾತನಾಡುವುದಿಲ್ಲ. ತರಗತಿಯಲ್ಲಿ ಪಾಠ ಮಾಡಲು ಬಳಸುವ ಇಂಗ್ಲೀಷ್ ಕೂಡ ಉತ್ತಮವಾಗಿಲ್ಲ.
ಈ ವಿದ್ಯಾರ್ಥಿಗಳು ಉದ್ಯೋಗ ನಿಮಿತ್ತ ಉನ್ನತ ಸಂಸ್ಥೆಗಳಿಗೆ ಹೋಗುವಾಗ ಅವರ ಸಂವಹನ ಸಾಮರ್ಥ್ಯ ನೋಡಿ ಬಾಗಿಲನ್ನು ಮುಚ್ಚುತ್ತಾರೆ. ಇವರಲ್ಲಿ ಸ್ಕಿಲ್ ಇದ್ದೂ, ಜ್ಞಾನ ಇದ್ದರೂ ಅದನ್ನು ಹೊರಗೆ ಹಾಕುವ ‘Presentation Skill’ ನ ಕೊರತೆ ಇರುತ್ತದೆ.

ವಿಶ್ವವಿದ್ಯಾಲಯಲ್ಲಿ ಒಬ್ಬ ಪಿಎಚ್‌ಡಿ ವಿದ್ಯಾರ್ಥಿಯ ಮೌಖಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದೆ. ಆಕೆ ತನ್ನ ಪಿಪಿಟಿಯಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಹೆಸರನ್ನು ಉಲ್ಲೇಖ ಮಾಡಿದ್ದರು. ಪರೀಕ್ಷಕರು ಆಕೆಯಲ್ಲಿ ‘ಕಮಲಾದೇವಿ ಚಟ್ಟೋಪಾಧ್ಯಾಯ ಯಾರು?’ ಎಂದು ಕೇಳಿದರು. ನಾಲ್ಕೈದು ವರ್ಷ ಸಂಶೋಧನೆ ನಡೆಸಿರುವ ವಿದ್ಯಾರ್ಥಿಗೆ ಕಮಲಾದೇವಿ ಚಟ್ಟೋಪಾಧ್ಯಾಯ ಯಾರು ಎಂದೇ ಗೊತ್ತಿರಲಿಲ್ಲ! ಆದರೆ ಅವರ ಸಂಶೋಧನಾ ಪ್ರಬಂಧವನ್ನು ಪಿಎಚ್‌ಡಿ ಪದವಿಗೆ ಸ್ವೀಕರಿಸಲಾಯಿತು!

ಹಾಗಾದರೆ ನಮ್ಮ ವಿವಿಗಳಿಂದ ಹೊರಬರುವ ಸಂಶೋಧನೆಗಳ ಗುಣಮಟ್ಟ ಹೇಗಿರಬಹುದು? ಒಂದು ವೇಳೆ ಇದೇ ವಿದ್ಯಾರ್ಥಿಗಳು ಮುಂದೆ ಶಿಕ್ಷಕರಾದರು ಮಕ್ಕಳ ಗತಿ ಏನು?

ನಾನು ಎಂ.ಎ ಓದುವಾಗ ಸಂಶೋಧನ ವಿಧಾನಗಳ ಬಗ್ಗೆ ಇರುವ ಪಾಠ ಯಾವತ್ತೂ ನೆನಪಲ್ಲಿ ಉಳಿಯಲೇ ಇಲ್ಲ. ತರಗತಿಯ ವಿದ್ಯಾರ್ಥಿಗಳಿಗೆ ‘ಸಂಶೋಧನೆ ಎಂದರೇನು? ಸಂಶೋಧನೆ ಯಾಕೆ ಮಾಡಬೇಕು?’ ಎಂಬ ಅತ್ಯಂತ ಬೇಸಿಕ್ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದ ಹಾಗೆ ವಿದ್ಯಾರ್ಥಿಗಳನ್ನು ತಯಾರಿ ಮಾಡಲಾಗಿದೆ. ಹೀಗಿರುವ ವಿದ್ಯಾರ್ಥಿಗಳು ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಒಳಗೆ ಹೇಗೆ ಪ್ರವೇಶ ಪಡೆಯಲು ಸಾಧ್ಯ?

ದಿನೇ ದಿನೇ ಸಂಶೋಧನಾ ಕ್ಷೇತದಲ್ಲಿ ಹೊಸ ಹೊಸ ಬದಲಾವಣೆಗಳು ನಡೆಯುತ್ತಿವೆ. ಸಂಶೋಧನೆಯಲ್ಲಿ ಬಳಕೆಯಾಗುವ ಪರಿಭಾಷೆಗಳು ಬದಲಾಗುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಅನ್ವೇಷಣೆಗಳು ನಡೆಯುತ್ತಿವೆ. ಆದರೆ ಇದ್ಯಾವುದೂ ನಮ್ಮ ಮಕ್ಕಳ ಅರಿವಿಗೆ ಬರುತ್ತಿಲ್ಲ. ತರಗತಿಗಳು ಅಪ್ಡೇಟ್ ಆಗುತ್ತಿಲ್ಲ. ಶಿಕ್ಷಕರು ಹೊಸತನಕ್ಕೆ ತೆರೆದುಕೊಳ್ಳುತ್ತಿಲ್ಲ.

ಇದನ್ನೂ ಓದಿ: ಹಿಜಾಬ್ ವಿವಾದದ ಸುತ್ತ ದ್ವೇಷದ ಹುತ್ತ; ಹಿಂದುತ್ವದಲ್ಲಿ ಬಿರುಕು ಮತ್ತು ನಂಜಿನ ನೀರಡಿಕೆ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇರುವ ಒಂದು ಒಳ್ಳೆಯ ಅವಕಾಶ ಎಂದರೆ ಭಿನ್ನ ಭಾಷಿಲ ಮತ್ತು ಸಾಂಸ್ಕೃತಿಕ ವಲಯದಲ್ಲಿ ಬದುಕಲು ಇರುವ ಅವಕಾಶ. ನಾನು ಏಳೆಂಟು ಭಾಷೆಗಳಲ್ಲಿ ಮಾತನಾಡಬಲ್ಲೆ ಎಂಬುದು ತರಗತಿಯ ಹೊರಗೆ ಕಲಿತ ಪಾಠ. ಜಾತಿ, ಭಾಷಿಕ ಸಮುದಾಯಗಳು, ಗ್ರಾಮೀಣ ಬದುಕು, ಜಾನಪದ, ಸಮಾಜದ ಬೇರೆ ಬೇರೆ ಸ್ತರಗಳನ್ನು ಅರಿತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಮಾಜ ಶಾಸ್ತ್ರವನ್ನು ಅರಿಯಲು ಸುಲಭವಾಗುತ್ತದೆ. ಈ ವಿಚಾರದಲ್ಲಿ ನಗರ ಭಾಗದ ವಿದ್ಯಾರ್ಥಿಗಳು ಹಿಂದುಳಿಯುತ್ತಾರೆ.

ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಮುಖ್ಯವಾಗಿ ಇರಬೇಕಾದ ಅಂಶವೊಂದು ಇರುವುದಿಲ್ಲ. ಅದು ಲೋಕ ಜ್ಞಾನವನ್ನು ತಮ್ಮ ಶೈಕ್ಷಣಿಕ ಕೆಲಸದಲ್ಲಿ ಬಳಸಿಕೊಳ್ಳುವ ಕ್ರಮ ಗೊತ್ತಿರುವುದಿಲ್ಲ. ಇದನ್ನು ನೀಡಬೇಕಾದ ಕೆಲಸ ಶಿಕ್ಷಣ ಸಂಸ್ಥೆಗಳದ್ದು. ಅದಕ್ಕೆ ಬೇಕಾದ ಪರಿಭಾಷೆಗಳನ್ನು ಮಕ್ಕಳಿಗೆ ಹೇಳಿಕೊಡಬೇಕು.

ಈ ಎಲ್ಲಾ ಸಮಸ್ಯೆಗಳ ಮಧ್ಯೆ ಹಿಂದುತ್ವ ಶಿಕ್ಷಣ ಸಂಸ್ಥೆಗಳಲ್ಲಿ ತಂದಿಡುತ್ತಿರುವ ಗೊಂದಲಗಳು ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಬದುಕನ್ನು ಸಂಪೂರ್ಣವಾಗಿ ನಾಶ ಮಾಡಲು ಸಿದ್ದವಾಗಿದೆ.

ಕೇವಲ ಹಿಜಾಬ್ ಸಮಸ್ಯೆಯನ್ನೇ ತೆಗೆದುಕೊಳ್ಳೋಣ. ಇದು ಕೇವಲ ಭಿನ್ನ ಕೋಮಿನ ಮಕ್ಕಳ ಮಧ್ಯೆ ದ್ವೇಷವನ್ನು ಹುಟ್ಟಿಸಿದ್ದು ಮಾತ್ರವಲ್ಲ, ಅದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ಅಪಾಯಕ್ಕೆ ಒಡ್ಡಿದೆ.

ಇದನ್ನೂ ಓದಿ: ಹಿಂದುತ್ವ ರಾಜಕಾರಣ; ಹಿಜಾಬಿನ ಅಪರಾಧೀಕರಣ

1. ಹಿಂದುತ್ವ, ಹಿಜಾಬ್, ಜಟ್ಕಾ ಕಟ್, ಮಂದಿರ – ಮಸೀದಿ… ಇವೆಲ್ಲವೂ ಈ ಶತಮಾನದ ವಿದ್ಯಾರ್ಥಿ ಸಮುದಾಯವನ್ನು ತಮ್ಮ ಶೈಕ್ಷಣಿಕ ಜೀವನದ ಬಗ್ಗೆ ನಿರ್ಲಕ್ಷ್ಯ ತಾಳುವಂತೆ ಮಾಡಿದೆ. ಬಿಜೆಪಿ ಹಾಗೂ ಸಂಘ ಪರಿವಾರ ಹರಡುತ್ತಿರುವ ದ್ವೇಷದ ನರೆಟಿವ್‌ಗಳನ್ನು ಹಂಚಲು ಸ್ವತಂತ್ರ ಆಲೋಚನೆ ಮಾಡಬೇಕಾದ ವಿದ್ಯಾರ್ಥಿಗಳು ಬಳಕೆಯಾಗುತ್ತಿದ್ದಾರೆ.

2. ಸಮಾಜವನ್ನು ಅರ್ಥ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಾಮರ್ಥ್ಯ ಕಮ್ಮಿಯಾಗಿದೆ. ಹಿಂದುತ್ವ ಹೇಳಿಕೊಡುವ ಸಮಾಜ ವ್ಯವಸ್ಥೆ ಅಸ್ತಿತ್ವದಲ್ಲಿಯೇ ಇಲ್ಲ. ಅದು ಕಲಿಸುವ ಸಂಸ್ಕೃತಿ ನೆಲಮೂಲದ ಸಂಸ್ಕೃತಿಯೇ ಅಲ್ಲ. ಹೀಗಿರುವಾಗ ಇಸ್ಲಾಂ ಜೊತೆಗೆ ಎಂದೆಂದಿಗೂ ಬೆಸೆದುಕೊಳ್ಳುವ ನಾಥ ಪಂಥ, ದತ್ತ ಪಂಥಗಳು ನಮ್ಮ ಮಕ್ಕಳಿಗೆ ಅರ್ಥವಾಗದೆ ಹೋಗಬಹುದು.

3. ಭಾರತವನ್ನು ವೈವಿಧ್ಯತೆಯ ಕಾರಣಕ್ಕಾಗಿ ವಿಶಿಷ್ಟ ದೇಶ ಎಂದು ನಾವು ಪರಿಗಣಿಸುತ್ತೇವೆ. ಈ ವೈವಿಧ್ಯತೆಯನ್ನು ಅರಿಯದೆ, ಒಪ್ಪಿಕೊಳ್ಳದೇ ದೇಶವನ್ನು, ಸಂಸ್ಕೃತಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ!

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕಾರ್ಕಳ-ಹೆಬ್ರಿ: ಅಹಿಂಸೆಯ ಜೈನ ಕಾಶಿಯಲ್ಲಿ ಹಿಂಸೋನ್ಮಾದದ ಹಿಂದುತ್ವ ಕಾಳಗ!

4. ಹಿಜಾಬ್ ತಕರಾರಿನ ಜೊತೆ ಹುಟ್ಟಿಕೊಳ್ಳುವ ಅನ್ಯಮತ ದ್ವೇಷ, ಜಾತೀಯತೆ ಮಕ್ಕಳಿಗೆ ಭಿನ್ನ ಸಮುದಾಯಗಳ ಜೊತೆಗೆ ಬದುಕುವ ಸುವರ್ಣ ಅವಕಾಶ ಇಲ್ಲದಾಗಿತ್ತದೆ. ಈಗ ಮುಸ್ಲಿಂ ಮತ್ತು ಕ್ರೈಸ್ತ ವಿದ್ಯಾರ್ಥಿ ಜೊತೆಗೆ ಮಾತನಾಡದೆ ಇರುವ ಒಬ್ಬ ಹಿಂದೂ ವಿದ್ಯಾರ್ಥಿಗೆ ಬ್ಯಾರಿ ಭಾಷೆ, ಮಲಯಾಳಂ ಭಾಷೆ, ಕೊಂಕಣಿ ಭಾಷೆ ಕಲಿಯುವ ಅವಕಾಶ ತಪ್ಪಿ ಹೋಗುತ್ತದೆ.

5. ಒಬ್ಬ ಭಿನ್ನ ಸಂಸ್ಕೃತಿಯ, ಭಾಷಿಕ ಸ್ನೇಹಿತ ಇದ್ದರೆ ನಾವೊಂದು ಬೇರೆಯೇ ಸಂಸ್ಕೃತಿಯನ್ನು ತಿಳಿದುಕೊಂಡ ಹಾಗೆ. ದೇಶದ ‘ಆತ್ಮ’ ಕೂಡಾ ಇದುವೇ ಆಗಿದೆ.

6. ಕೋಮುವಾದ ಹೇಳುವ ಕಥನಗಳು ಎಲ್ಲವೂ ಮಕ್ಕಳ ಸ್ವತಂತ್ರ ಆಲೋಚನೆಯನ್ನು ನಾಶ ಮಾಡುತ್ತವೆ.
“ಮಂಗಳೂರಿನ ಬೆಳಿಯ ಪಲ್ಲಿ ಒಂದು ದೇವಸ್ಥಾನ” ಎಂದು ಹಿಂದುತ್ವ ಹೇಳಿದರೆ ನಮ್ಮ ವಿದ್ಯಾರ್ಥಿಗಳು ಅದನ್ನು ನಂಬಿದರೆ “ಹೌದಾ? ಆಗಿದ್ದರೆ ಅಲ್ಲಿ ಏನಿದೆ? ಅದರ ಇತಿಹಾಸ ಏನು….” ಈ ಯಾವ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಮಕ್ಕಳು ಯೋಚನೆ ಮಾಡದೆ ಒಪ್ಪಿಕೊಳ್ಳಬೇಕು ಎಂಬುದೇ ಕೋಮುವಾದದ ದೊಡ್ಡ ತಂತ್ರ! ಹೀಗಾದರೆ ಮಕ್ಕಳು ಶಿಕ್ಷಣ ಪಡೆದು ಮಾಡುವುದಾದರೂ ಏನನ್ನು?

5. ಮಕ್ಕಳಿಗೆ ಪಾಠ ಹೇಳುವ ಕ್ರಮ, ಪಠ್ಯ ಮಾತ್ರವಲ್ಲ ಶಿಕ್ಷಣ ಸಂಸ್ಥೆಗಳಲ್ಲಿಯೇ ಅನೇಕ ಸಮಸ್ಯೆಗಳು ಇವೆ. ತಮಗೆ ಪಾಠ ಮಾಡುತ್ತಿರುವ ಶೈಕ್ಷಣಿಕ ಹಿನ್ನಲೆ, ಬೋಧನೆಯ ಗುಣಮಟ್ಟ ಇದ್ಯಾವುದರ ಬಗ್ಗೆ ಮಕ್ಕಳು ಪ್ರಶ್ನೆ ಎತ್ತುತ್ತಿಲ್ಲ! ಸ್ಕಾಲರ್ ಶಿಪ್ ಇಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. ಯುಜಿಸಿಯು ಮಾನವಿಕ ವಿಭಾಗದ ಅನೇಕ ವಿಷಯಗಳಿಗೆ ಫೆಲೋಶಿಪ್ ಕಡಿಮೆ ಮಾಡಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಚಿಂತಿಸಲು ಹೋಗದ ಮಕ್ಕಳು ತಮ್ಮ ಪಕ್ಕ ಕೂರುವ ವಿದ್ಯಾರ್ಥಿನಿ ಹಾಕುವ ಹಿಜಾಬ್ ಅನ್ನು ಪ್ರಶ್ನೆ ಮಾಡುತ್ತಾರೆ!

ಇದನ್ನೂ ಓದಿ: ಭಗತ್ ಸಿಂಗ್ ಬದಲು ಹೆಡಗೇವಾರ್ ಪಾಠ; ಮಕ್ಕಳ ಮೇಲೆ ಹಿಂದುತ್ವದ ಪ್ರಯೋಗ

6. ಕೋಮುವಾದ ಉಡುಪಿ, ಸುಳ್ಯ, ಪುತ್ತೂರು….ಇಂಥ ಗ್ರಾಮೀಣ ಭಾಗದ ವಿದ್ಯಾರ್ಥಿಳನ್ನು ಹೆಚ್ಚು ಟಾರ್ಗೆಟ್ ಮಾಡುತ್ತವೆ. ಈ ಎಲ್ಲಾ ವಿದ್ಯಾರ್ಥಿಗಳು ಅತ್ಯಂತ ಬಡ, ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳು. ಇವರನ್ನು ಶಿಕ್ಷಣದ ಕಡೆ ಗಮನ ನೀಡದಂತೆ ಮಾಡಿ, ಸ್ವತಂತ್ರ ಚಿಂತನೆ ಮಾಡದ ಹಾಗೆ ಮಾಡಿ, ಪ್ರಶ್ನೆಗಳು ಹುಟ್ಟದ ಹಾಗೆ ಮಾಡಿ ಯಾವ ಸೃಜನಾತ್ಮಕ ಕೆಲಸದಲ್ಲೂ ತೊಡಗದ ಹಾಗೆ ಮಾಡುತ್ತಿದೆ.

7. ಕೋಮುವಾದ ಗ್ರಾಮೀಣ ಮತ್ತು ನಗರ ಕೇಂದ್ರಿತ ವಿದ್ಯಾರ್ಥಿಗಳ ನಡುವಿನ ಅಸಮಾನತೆಯನ್ನು ಹೆಚ್ಚು ಮಾಡುತ್ತಿದೆ. ಇದರ ಪರಿಣಾಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ.

ಒಟ್ಟಾರೆಯಾಗಿ, ಹೊಸ ಪಠ್ಯ ಪುಸ್ತಕ ವಿವಾದ ಸೇರಿದಂತೆ ಸಧ್ಯ ನಾಡಿನಲ್ಲಿ ನಡೆಯುತ್ತಿರುವ ಎಲ್ಲಾ ಗೊಂದಲಗಳು ಗ್ರಾಮೀಣ ಮಕ್ಕಳು ಬದುಕನ್ನು ನಾಶ ಮಾಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕೋಮುವಾದವನ್ನು ಸೃಷ್ಟಿ ಮಾಡೋರು ಅಶಿಕ್ಷಿತ ಸಂಘಟನೆ ಗಳ ಸದಸ್ಯರು , ಮೊದಲು ಅವರನ್ನು ಶಿಕ್ಷಿತರನ್ನಾಗಿ ಮಾಡಬೇಕು….. ಕಾನೂನಿನ ಸರಿಯಾದ ಬಳಕೆ ಯಾದರೆ ಸಂಘರ್ಷ ಗಳು ನಡೆಯುವುದಿಲ್ಲ.

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...