Homeಕರ್ನಾಟಕಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

- Advertisement -
- Advertisement -

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಇಬ್ಬರು ಧಾರ್ಮಿಕ ಮೂಲಭೂತವಾದಿಗಳು ರಾಜಸ್ಥಾನದಲ್ಲಿ ಹಿಂದೂ ಟೈಲರ್‌ ಒಬ್ಬರನ್ನು ಭೀಕರವಾಗಿ ಕೊಂದ ಘಟನೆಯ ಕುರಿತು, ಪಬ್ಲಿಕ್‌ ಟಿ.ವಿ. ನಡೆಸುತ್ತಿದ್ದ ಜನಾಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಹೀಗೆ ವಿಷಕಾರಿಯಾಗಿ ಮಾತನಾಡಿದ್ದಾರೆ. ಈ ಪ್ರಚೋದನೆಯನ್ನು ಕಟುವಾದ ಪದಗಳಿಂದ ಖಂಡಿಸಬೇಕಿದ್ದ ಪಬ್ಲಿಕ್‌ ಟಿ.ವಿ. ನಿರೂಪಕ ಅರುಣ್‌ ಬಡಿಗೇರ್‌ ನಗುನಗುತ್ತಾ ಪ್ರತಿಕ್ರಿಯೆ ನೀಡುತ್ತಾ, “ಹೀಗೆಲ್ಲ ಮಾತನಾಡಬಾರದು” ಎಂದು ಸಲಹೆ ನೀಡುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದಾವಣಗೆರೆಯಿಂದ ಪಬ್ಲಿಕ್ ಟಿ.ವಿ.ಗೆ ಕರೆ ಮಾಡಿದ್ದ ವೀರಣ್ಣ ಹಾಗೂ ನಿರೂಪಕ ಅರುಣ್‌ ಬಡಿಗೇರ್‌ ನಡುವಿನ ಸಂಭಾಷಣೆ ಹೀಗಿತ್ತು:

ವೀರಣ್ಣ: ಮುಸಲ್ಮಾನರಿಗೆ ಯಾವುದೇ ರೀತಿಯ ಬೆಂಬಲ ಕೊಡಬಾರದು. ಪಬ್ಲಿಕ್‌ ಟಿ.ವಿ.ಗೆ ಮುಸಲ್ಮಾರನ್ನು ಕರೆಸಿ ಇದು ಮಾಡುತ್ತೀರಲ್ಲ, ಅದನ್ನು ಬಿಡಬೇಕು.

ಅರುಣ್ ಬಡಿಗೇರ್‌: ಅವರನ್ನು ಕರೆಸಲೇಬಾರದು ಅಂತೀರಾ?

ಇದನ್ನೂ ಓದಿರಿ: ‘ಬಾಯಿಗೆ ಬಂದಿದ್ದು ಬರೀತೀರಾ?’: ಕೋಮುದ್ವೇಷದ ಸುದ್ದಿಗಾಗಿ ‘ಪಬ್ಲಿಕ್ ಟಿವಿ’ ಪತ್ರಕರ್ತನ ವಿರುದ್ದ ಡಿಸಿಪಿ ಕಿಡಿ

ವೀರಣ್ಣ: ಕರೆಸಲೇಬಾರದು ಅವರನ್ನು. ಅವರೊಂದು ಇವರೊಂದು ಹೇಳುತ್ತಾರೆ. ಅವರು ಬಾಲ ಬಿಚ್ಚದಂತೆ ನೋಡಿಕೊಳ್ಳಬೇಕು. ಅವರಿಗೆ ಸ್ಥಾನ ಮಾನ ಕೊಡಬಾರದು.

ಬಡಿಗೇರ್:  ಅವರು ಬಾಲ ಬಿಚ್ಚದಂತೆ ನೋಡಿಕೊಳ್ಳಬೇಕು.

ವೀರಣ್ಣ: ಅವರನ್ನು ಕರೆಸಲೇಬಾರದು. ಅವರಿಗೆ ಭಾರತ ದೇಶದಲ್ಲಿ ಯಾವುದೇ ಸ್ಥಾನಮಾನ ಕೊಡಬಾರದು. ಅನ್ನ ನೀರು ಹಾಕಿರುವವರು ನಾವು. ನಮ್ಮಮೇಲೆಯೇ ಬಾಲ ಬಿಚ್ಚುತ್ತಿದ್ದಾರೆ. ಫಸ್ಟ್‌ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಗುಂಡಿಕ್ಕಿ ಹೊಡೆದರೆ ಇವರೆಲ್ಲ ಸುಮ್ಮನಾಗುತ್ತಾರೆ.

(ಈ ಮಾತಿಗೆ ನಗುತ್ತಾ ಬಡಿಗೇರ್‌ ಪ್ರತಿಕ್ರಿಯೆ ನೀಡುತ್ತಾರೆ)

ಬಡಿಗೇರ್‌: ಸಾರ್‌, ನಾಯಕರ ವಿಚಾರದಲ್ಲಿ ಹಾಗೆಲ್ಲ ಮಾತನಾಡಬಾರದು. ಅವರ ಮೇಲೆ ಕೋಪ ಇದೆ ಎಂದು ಹೀಗೆಲ್ಲ ಹೇಳಬಾರದು. ಹಂತಕರಿಗೂ ನಿಮಗೂ ವ್ಯತ್ಯಾಸ ಏನಿದೆ?

ವೀರಣ್ಣ: ನಿನ್ನೆಯಿಂದ ಇವರ್‍ಯಾಕೆ ಮಾತನಾಡಿಲ್ಲ?

ಬಡಿಗೇರ್‌: ಭಿನ್ನಾಭಿಪ್ರಾಯ ಇರಲಿ. ಆದರೆ ನಮಗೂ ಅವರಿಗೂ ವ್ಯತ್ಯಾಸ ಇರುತ್ತದೆಯೇ? ತಮ್ಮ ಪಕ್ಷದಲ್ಲಿರುವ ವೋಟುಗಳಿಗೆ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹಾಗೆಂದು ಗುಂಡು ಹೊಡೆದು ಸಾಯಿಸಿ ಎಂದರೆ? ಇದು ಒಳ್ಳೆಯದಲ್ಲ.

ವೀರಣ್ಣ: ಒಂದು ಕಲ್ಲಂಗಡಿಯನ್ನು ಹೊಡೆದಿದ್ದಕ್ಕೆ ದಂಡ ಕಟ್ಟಿಸಲಿಲ್ಲವೇ?

ಬಡಿಗೇರ್‌: ಹೂಂ ಹೂಂ, ಹಾ… ಹಾ.. ಓಕೆ.

ವೀರಣ್ಣ: ಅವರ ಬೆಂಬಲದಿಂದಾಗಿಯೇ ನಿಗುರುತ್ತಿದ್ದಾರೆ.

ಬಡಿಗೇರ್‌: ಅವರನ್ನು ಬೆಂಬಲಿಸುವುದಕ್ಕಾಗಿಯೇ ಹೀಗೆ ಮಾಡುತ್ತಿದ್ದಾರೆ ಅಂತಾನಾ?

ವೀರಣ್ಣ: ಕರೆಕ್ಟ್‌ ಸರ್‌‌.

ಬಡಿಗೇರ್‌: ಓಕೆ ಓಕೆ

ವೀರಣ್ಣ: ಅವರನ್ನು ಫಸ್ಟ್‌ ನಿರ್ನಾಮ ಮಾಡಿದರೆ ಇವರೆಲ್ಲ ಪ್ಲಾಪ್‌ ಆಗುತ್ತಾರೆ.

ಬಡಿಗೇರ್‌: ಧನ್ಯವಾದಗಳು ವೀರಣ್ಣನವರೇ ನಮ್ಮ ಜೊತೆ ಮಾತನಾಡಿದ್ದಕ್ಕೆ…

(ಮುಂದಿನ ಕರೆಗೆ ಹೋಗುತ್ತಾರೆ)

ವರದಿಗಳಲ್ಲಿ ಪೂರ್ವಗ್ರಹ

ಕೋಮುದ್ವೇಷ ಪ್ರಕರಣಗಳಲ್ಲಿ ಮಾಧ್ಯಮಗಳು ಪಕ್ಷಪಾತಿಯಾಗಿ, ಪೂರ್ವಗ್ರಹ ಪೀಡಿತವಾಗಿ ವರದಿ ಮಾಡುವುದು ಇದು ಮೊದಲೇನಲ್ಲ. ಸುಳ್ಳುಗಳನ್ನು ವರದಿ ಮಾಡುವುದು ನಿಂತು ಹೋಗುವುದೂ ಇಲ್ಲ. ಯಾರೋ ಒಬ್ಬಾತ ಮಾಡುವ ತಪ್ಪನ್ನು ಇಡೀ ಸಮುದಾಯದ ತಲೆಗೆ ಕಟ್ಟುವ ಕೆಲಸವನ್ನು ಯಾವುದೇ ಮುಜುಗರವಿಲ್ಲದೆ ಮಾಧ್ಯಮಗಳು ಮಾಡುತ್ತಲೇ ಬಂದಿವೆ. ಅದು ರಾಜಸ್ಥಾನದ ಘಟನೆಯಲ್ಲೂ ಸಾಬೀತಾಗಿದೆ.

ಈ ಘಟನೆಯನ್ನು ಮುಸ್ಲಿಂ ಸಮುದಾಯ ಬಲವಾಗಿ ಖಂಡಿಸಿದೆ, ಕೊಲೆಗೈದವರನ್ನು ಗಲ್ಲಿಗೆ ಹಾಕುವಂತೆ ಒತ್ತಾಯಿಸಿದೆ. ಇಸ್ಲಾಂ ಯಾವುದೇ ಕಾರಣಕ್ಕೂ ಇಂತಹ ಕೃತ್ಯಕ್ಕೆ ಆಸ್ಪದ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರು ಘಟನೆಯನ್ನು ವಿರೋಧಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಆದಿಯಾಗಿ ಅನೇಕ ರಾಜಕಾರಣಗಳು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಎಡಪರ ಚಿಂತಕರು, ಬಲಪಂಥೀಯರು, ಪ್ರಗತಿಪರರು- ಎಲ್ಲರೂ ಈ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಆದರೂ ಮಾಧ್ಯಮಗಳಲ್ಲಿ ಮುಸ್ಲಿಂ ಸಮುದಾಯದ ಮೇಲೆ, ಬಿಜೆಪಿ ಹಾಗೂ ಸಂಘಪರಿವಾರೇತರ ನಾಯಕರ ಮೇಲೆ ವಿನಾಕಾರಣ ವಿಷಕಾರಲಾಗುತ್ತಿದೆ.

ಎಲ್ಲ ಜಾತಿ, ಜನಾಂಗದ ಜನರು ನೀಡುವ ತೆರಿಗೆಯಲ್ಲಿ ಸರ್ಕಾರಗಳು ನಡೆಯುತ್ತಿವೆ. ಆದರೆ ಕನಿಷ್ಠ ಸಾಂವಿಧಾನಿಕ ಕಾಳಜಿ ಇಲ್ಲದ ಮಾಧ್ಯಮಗಳು ಏಕಿಷ್ಟು ದ್ವೇಷವನ್ನು ಕಾರುತ್ತಿವೆ? ಘಟನೆಯನ್ನು ಎಲ್ಲ ವರ್ಗದ ಜನರು ಖಂಡಿಸಿದ್ದರೂ ಅದನ್ನು ಇಂಥವರು ಖಂಡಿಸಿಯೇ ಇಲ್ಲ ಎಂದು ಬಿಂಬಿಸುವ ಕೆಲಸವನ್ನು ಮಾಡುತ್ತಿರುವುದು ಏತಕ್ಕೆ? ಮಾಧ್ಯಮಗಳು ಈ ಸಾವಿನಲ್ಲಿ ರಾಜಕೀಯ ಹಿತಾಸಕ್ತಿ ಮೆರೆಯುತ್ತಿವೆಯೇ? ಎಂಬ ಪ್ರಶ್ನೆಗಳು ಎದ್ದಿವೆ.

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದ ವ್ಯಕ್ತಿಯ ಮಾತನ್ನು ಹೆಡ್‌ಲೈನ್‌ ಮಾಡಿ ಫೇಸ್‌ಬುಕ್‌ ಪೋಸ್ಟ್ ಮಾಡಿರುವ ಪಬ್ಲಿಕ್ ಟಿ.ವಿ. ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿರಿ: ವೈಯಕ್ತಿಕ ದ್ವೇಷದ ಪ್ರಕರಣಕ್ಕೆ ಕೋಮು ಆಯಾಮ ನೀಡಿ ‘ಮುಸ್ಲಿಂ ದ್ವೇಷ’ ಹರಡಿದ ದಿಗ್ವಿಜಯ & ಪಬ್ಲಿಕ್ ಟಿವಿ

“ಫೇಸ್ಬುಕ್ ಪೇಜ್‌ಗಳಲ್ಲಿ ತಲೆಕೆಟ್ಟವರಂತೆ ಕಾಮೆಂಟ್ ಮಾಡುವವರ ಅಭಿಪ್ರಾಯಗಳನ್ನೇ ಹೆಡ್ಲೈನ್ ಮಾಡುವ ಹಿಂದಿನ ಉದ್ದೇಶ ಏನಿತ್ತು? ಅಂತಾ harmful ಅಲ್ಲದ ಸಣ್ಣಪುಟ್ಟ ಪೋಸ್ಟ್‌ಗಳಿಗೂ ನೋಟೀಸ್ ಕೊಟ್ಟು ಬ್ಲಾಕ್ ಮಾಡುವ Facebook ಸಂಸ್ಥೆ community standard ನ್ನು ಉಲ್ಲಂಘಿಸಿದ ಅಡಿಯಲ್ಲಿ ನೋಟಿಸ್ ಯಾಕೆ ಜಾರಿ ಮಾಡಿಲ್ಲ? ಹೋಗಲಿ ಕಾಂಗ್ರೆಸ್ ಪಕ್ಷದ ಲೀಗಲ್ ಸೆಲ್ ಮತ್ತು IT Cell ಗಳು ನಿಜವಾಗಿಯೂ ಜೀವಂತವಾಗಿದ್ದಾವಾ? ಯಾವುದೇ ಪಕ್ಷದ ಮುಖಂಡರಾದರೂ ಈ ರೀತಿಯ ಹೆಡ್ಲೈನ್ ಕೊಟ್ಟು ಸಾರ್ವಜನಿಕವಾಗಿ ಎಂತಹ ಅಭಿಪ್ರಾಯ ಮೂಡಿಸುತ್ತಿದ್ದರೆ? ಇದರಿಂದ ಮುಂದಾಗಬಹುದಾದ ಅಪಾಯಗಳೇನು ಎಂಬ ಕನಿಷ್ಟ ಅರಿವಾದರೂ ಇದೆಯೇ? ಈ ಮೂಲಕ ಪಬ್ಲಿಕ್ ಟಿವಿ ಸಮಾಜಕ್ಕೆ ಯಾವ ಸಂದೇಶ ಕೊಡ್ತಿದೆ?” ಎಂದು ಸಾಮಾಜಿಕ ಕಾರ್ಯಕರ್ತ ಪ್ರಗತ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಮಾಧ್ಯಮದವರು ಇಂದು ಕಿರುಚುತ್ತಾ ಕೂಗುತ್ತಾ ಮತಾಂಧ ಶಕ್ತಿಗಳನ್ನು ಪ್ರೇರೇಪಿಸುವ ಕೆಲಸ ಮಾಡುತ್ತಿರುವುದಕ್ಕೆ ಸ್ಪಷ್ಟ ಉದಾರಹಣೆ ಇದು. ಸಮಾಜದ ಶಾಂತಿ ಕೆಡಿಸಲೆಂದೇ ಕೆಲ ಮಾಧ್ಯಮಗಳು ಇಂದು ಕೆಲಸ ನಿರ್ವಹಿಸುತ್ತಿರುವಂತಿದೆ. ಜನರು ತಪ್ಪು ಮಾತನಾಡಿದಾಗ ತಿದ್ದಬೇಕಾದ ಮಾಧ್ಯಮದವರು ಇಂತಹ ತಲೆ ಬರಹ ಕೊಟ್ಟಿರುವುದು ಅವರ ಹಿಂಸಾ ವಿರೋಧಿ ಕೌರ್ಯ ಮನಸ್ಥಿತಿಯನ್ನು ತೋರಿಸಿದೆ. ನಿಸ್ಸಂಶಯವಾಗಿ ಇದು ಮಾಧ್ಯಮ ಭಯೋತ್ಪಾದಕತೆ” ಎಂದು ಲೇಖಕಿ ಚೈತ್ರಿಕಾ ಹರ್ಗಿ ಅಭಿಪ್ರಾಯಪಟ್ಟಿದ್ದಾರೆ.

“ಹಿಂದೂ ಮುಸ್ಲಿಂ ಸಂಘರ್ಷದ ಸೂಕ್ಷ್ಮತೆ ಅರಿವಿದ್ದ ಮಾಧ್ಯಮ ಇಂತಹ ವಿಚಾರದಲ್ಲಿ ಜನಾಭಿಪ್ರಾಯ ಕೇಳುವ ಕೆಲಸ ಮಾಡಲ್ಲ. ತಲೆಕೆಟ್ಟ ಒಬ್ಬ ಹೀಗೆ ವಿರೋಧ ಪಕ್ಷದ ನಾಯಕರನ್ನು ಕೊಲ್ಲಬೇಕು ಎಂದು ಹೇಳಿದಾಗ ಆ ಕರೆ ಮಾಡಿದ ವ್ಯಕ್ತಿಗೆ ನೋಡಪ್ಪ ಹೀಗೆ ಹೇಳೋದು ಕಾನೂನಿನ ಉಲ್ಲಂಘನೆ, ಅದು ಮತ್ತಷ್ಟು ಸಂಘರ್ಷಕ್ಕೆ ಪ್ರಚೋದನೆ ಕೊಟ್ಟಂತೆ ಎಂದು ಮನವರಿಗೆ ಮಾಡಬೇಕಿತ್ತು. ಆದರೆ ಆತನ‌ ಹೇಳಿಕೆಯನ್ನೇ ಹೆಡ್ಡಿಂಗ್ ಹಾಕಿ ಪ್ರಸಾರ ಮಾಡುವ ಮೂಲಕ ಚಾನೆಲ್ ಆತನ ಹೇಳಿಕೆಗೆ ಬೆಂಬಲ ಸೂಚಿಸಿದೆ. ಈಗ ಈ ಚಾನೆಲ್ ವಿರುದ್ಧ ಪೊಲೀಸ್ ಇಲಾಖೆಯೇ ಕೇಸು ದಾಖಲಿಸಬೇಕು. ಕಾಂಗ್ರೆಸ್ ಕೂಡಾ ದೂರು ಕೊಡಬೇಕು. ಈ ನಾಯಕರ ಕೊಲೆ ಆದರೆ ಅದರ ಹೊಣೆ ರಂಗನಾಥ ಮತ್ತು ಬಡಿಗೇರ ಹೊರುತ್ತಾರೆಯೇ? ಹಿಂದೆ ಕಲಬುರ್ಗಿಯವರ ವಿಚಾರದಲ್ಲಿ ಮಾಧ್ಯಮಗಳ ವರದಿ ಕೊಲೆಗೆ ಪ್ರೇರಣೆ ನೀಡಿದ್ದವು ಎಂಬ ಆರೋಪ ಕೇಳಿಬಂದಿತ್ತು” ಎಂದು ಹಿರಿಯ ಪತ್ರಕರ್ತೆ ಹೇಮಾ ವೆಂಕಟ್‌‌ ಎಚ್ಚರಿಸಿದ್ದಾರೆ.

“ಕೆಲ ತಿಂಗಳ ಹಿಂದೆ ಅರುಣ್ ಬಡಿಗೇರ ಮತ್ತು ರಂಗನಾಥರ ವಿರುದ್ಧ ಜಾಮೀನುರಹಿತ ಸೆಕ್ಷನ್ ಅಡಿ FIR ದಾಖಲಾಗಿತ್ತು. ಅದರ ಕತೆ ಏನಾಯ್ತು? ಮುಸ್ಲಿಂ ವ್ಯಕ್ತಿಗಳು ಹಿಂದೂಗಳನ್ನು ಕೊಂದಾಗ ಕೆರಳುವ ಹಿಂದೂ ಸಮಾಜ, ಹಿಂದೂಗಳು ಮುಸ್ಲಿಮರ ಕೊಲೆ ಮಾಡಿದಾಗ ಅವರಿಗೆ ಷಹಬ್ಬಾಸ್ ಹೇಳುವುದು, ಸನ್ಮಾನ ಮಾಡುವುದನ್ನು ಯಾಕೆ ವಿರೋಧಿಸಲ್ಲ? ನರಗುಂದರ ಮುಸ್ಲಿಂ ಯುವಕನನ್ನು ಬಜರಂಗಿಗಳು ಕೊಂದರಲ್ಲ, ಧರ್ಮಸ್ಥಳದ ದಲಿತ ದಿನೇಶನನ್ನು ಬಜರಂಗಿಯೊಬ್ಬ ಕೊಂದನಲ್ಲ, ಬಜರಂಗಿ ಶಂಭೂಲಾಲ್ ಕೇಸರಿಶಾಲು, ನಾಮ‌ ಹಾಕೊಂಡು ಮುಸ್ಲಿಂ ಯುವಕನಿಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಅದರ ವಿಡಿಯೋ ಮಾಡಿ ಸಂಭ್ರಮಿಸಿದನಲ್ಲ ಆಗ ಟಿವಿಯವರು ಜನಾಭಿಪ್ರಾಯ ಕೇಳಿದರೇ? ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕೊಲೆಯಾದರೆ ಯಾರು ಜವಾಬ್ದಾರರು?” ಎಂದು ಪ್ರಶ್ನಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಳ್ಳಂಗಡಿ ಹೊಡೆದಾಗ ಬಾಯಿ ಬಡಿದುಕೊಂಡ ಬೋಳಿಮಕ್ಕಳು ,ಕನ್ಹಯ್ಯ ಕೊಲೆ ಆದಾಗ ಬಾಯಿ ಬಿಡದೇ ಇರೋ ಹಂದಿ ಮಕ್ಕಳನ್ನು ಇನ್ನೇನು ಮಾಡಬೇಕು ಬೇಸಡಿಕೆಗಳೇ

LEAVE A REPLY

Please enter your comment!
Please enter your name here

- Advertisment -

ಒಳ ಮೀಸಲಾತಿ ಮಸೂದೆ ವಾಪಸ್ ಕಳಿಸಿದ ರಾಜ್ಯಪಾಲರು : ಹೋರಾಟಗಾರರು ಏನಂದ್ರು?

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರಗೊಂಡ ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪವರ್ಗೀಕರಣ) ಮಸೂದೆಗೆ ಅಂಕಿತ ಹಾಕದೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಕೆಲವು ಸ್ಪಷ್ಟನೆಗಳನ್ನು ಕೇಳಿರುವ ರಾಜ್ಯಪಾಲರು, ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದು...

‘ಕೂಡಲೇ ಇರಾನ್‌ನಿಂದ ಹೊರಡಿ, ಸಹಾಯ ನಿರೀಕ್ಷಿಸಬೇಡಿ’: ತನ್ನ ಪ್ರಜೆಗಳಿಗೆ ಕರೆ ನೀಡಿದ ಅಮೆರಿಕ

ವಾಷಿಂಗ್ಟನ್: ಆಡಳಿತ ವಿರೋಧಿ ಪ್ರತಿಭಟನೆಯನ್ನು ಹತ್ತಿಕ್ಕಿ, ಪ್ರತಿಭಟನಕಾರರ ಸಾವಿಗೆ ಕಾರಣವಾಗುತ್ತಿರುವ ಇರಾನ್‌ ವಿರುದ್ಧ ದಾಳಿ ಮಾಡುವ ಬೆದರಿಕೆ ಹಾಕಿದ ಬೆನ್ನಲ್ಲೇ ತಮ್ಮ ದೇಶದ ನಾಗರಿಕರಿಗೆ ಇರಾನ್ ತೊರೆಯುವಂತೆ ಅಮೆರಿಕ ಸೂಚನೆ ನೀಡಿದೆ. ದೇಶಾದ್ಯಂತ ಪ್ರತಿಭಟನೆಗಳು,...

ಭಾರತ ಭೂದಾಳಿ ನಡೆಸಲು ಸಿದ್ಧವಾಗಿತ್ತು: ಆಪರೇಷನ್ ಸಿಂಧೂರ್ ಮುಂದುವರೆದಿದೆ ಎಂದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ 

ಮಂಗಳವಾರ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಆಪರೇಷನ್ ಸಿಂಧೂರ್ ಮುಂದುವರೆದಿದೆ ಎಂದು ಹೇಳಿದ್ದು, ಯಾವುದೇ ದುಸ್ಸಾಹಸವನ್ನು ಪರಿಣಾಮಕಾರಿಯಾಗಿ ನಿಭಾಯಿಸಲಾಗುವುದು ಎಂದು ಹೇಳಿದ್ದಾರೆ.  ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು...

ಕೊಪ್ಪಳ | ಸಂಪೂರ್ಣ ಮದ್ಯ ನಿಷೇಧಿಸಿ ತೀರ್ಮಾನ ತೆಗೆದುಕೊಂಡ ಗ್ರಾಮಸ್ಥರು : ಮದ್ಯದಂಗಡಿಗಳಿಗೆ ಶನಿವಾರದವರೆಗೆ ಗಡುವು

ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದಲ್ಲಿ ಸಂಪೂರ್ಣ ಮದ್ಯ ನಿಷೇಧಿಸಿ ಜನರು ಸರ್ವಾನುಮತದ ತೀರ್ಮಾನ ತೆಗೆದುಕೊಂಡಿದ್ದು, ಮದ್ಯದ ಅಂಗಡಿಗಳಿಗೆ ಮಾರಾಟ ಸ್ಥಗಿತಗೊಳಿಸಲು ಶನಿವಾರದವರೆಗೆ ಗಡುವು ವಿಧಿಸಿದ್ದಾರೆ. ಗ್ರಾಮದಲ್ಲಿ ಶಾಂತಿ, ನೆಮ್ಮದಿ, ಸಾಮಾಜಿಕ...

ವಿಬಿ-ಜಿ ರಾಮ್ ಜಿ ಕಾಯ್ದೆ ರದ್ದಾಗುವವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ

ನರೇಗಾ ಕಾಯ್ದೆ ಪುನ:ಸ್ಥಾಪನೆ ಆಗಿ ವಿಬಿ-ಜಿ ರಾಮ್ ಜಿ ಕಾಯ್ದೆ ರದ್ದಾಗುವವರೆಗೆ ನಮ್ಮ ಹೋರಾಟವನ್ನು ಮುಂದುವರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಕೆಪಿಸಿಸಿ ವತಿಯಿಂದ ಮಂಗಳವಾರ (ಜ.13) ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ...

ಪಶ್ಚಿಮ ಬಂಗಾಳ: ಸೋಮವಾರ ಪ್ರತ್ಯೇಕ ಸ್ಥಳಗಳಲ್ಲಿ ಎರಡು ಸಾವು: ಎಸ್‌ಐಆರ್ ಆತಂಕವೇ ಸಾವಿಗೆ ಕಾರಣ ಎಂದ ಕುಟುಂಬಗಳು 

ಪಶ್ಚಿಮ ಬಂಗಾಳದಲ್ಲಿ ಸೋಮವಾರ ಇಬ್ಬರು ಸಾವನ್ನಪ್ಪಿದ್ದು, ಉತ್ತರ ದಿನಾಜ್‌ಪುರದಲ್ಲಿ ಒಬ್ಬರು ಮತ್ತು ಉತ್ತರ 24 ಪರಗಣದಲ್ಲಿ ಮತ್ತೊಬ್ಬರು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಗೆ ಸಂಬಂಧಿಸಿದ ಆತಂಕವೇ ಅವರ ಸಾವಿಗೆ...

ಮರ್ಯಾದೆಗೇಡು ಹತ್ಯೆ : ಪ್ರೀತಿಸಿದ ಯುವಕನೊಂದಿಗೆ ತೆರಳಿದ್ದ ಬಾಲಕಿಯನ್ನು ಕೊಂದು ಮೃತದೇಹ ಸುಟ್ಟು ಹಾಕಿದ ಕುಟುಂಬಸ್ಥರು

ಪ್ರೀತಿಸಿದ ಯುವಕನೊಂದಿಗೆ ತೆರಳಿದ 16 ವರ್ಷದ ಬಾಲಕಿಯನ್ನು ಆಕೆಯ ಮನೆಯವರೇ ಕೊಂದು, ಮೃತದೇಹವನ್ನು ಸುಟ್ಟು ಹಾಕಿದ ಭೀಕರ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿಯ ಕುಟುಂಬಸ್ಥರು ಪ್ರಸ್ತುತ ಪರಾರಿಯಾಗಿದ್ದಾರೆ. ಅವರ ಮನೆಗೆ...

ಚುನಾವಣಾ ಪ್ರಚಾರದ ವೇಳೆ ಬ್ಯಾಗ್ ಮೇಲೆ ಪ್ಯಾಲೆಸ್ಟೀನಿಯನ್ ಧ್ವಜ: ಆರ್‌ಡಬ್ಲ್ಯೂಪಿಐ ಅಭ್ಯರ್ಥಿಗೆ ನೋಟಿಸ್ ಜಾರಿ ಮಾಡಿದ ಮುಂಬೈ ಪೊಲೀಸರು

ಮುಂಬೈ: ಮುನ್ಸಿಪಲ್ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ರೆವಲ್ಯೂಷನರಿ ವರ್ಕರ್ಸ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿಯೊಬ್ಬರು ತಮ್ಮ ಪ್ರಚಾರ ಕಾರ್ಯಕರ್ತರ ಬಳಿ ಹೊತ್ತೊಯ್ದಿದ್ದ ಬ್ಯಾಗ್ ಮೇಲೆ ಪ್ಯಾಲೆಸ್ಟೀನಿಯನ್ ಧ್ವಜ ಕಾಣಿಸಿಕೊಂಡಿದ್ದು, ಇದು ಮಾನವ ಹಕ್ಕುಗಳ...

ಇರಾನ್‌ನೊಂದಿಗೆ ವ್ಯವಹಾರ ನಡೆಸುವ ರಾಷ್ಟ್ರಗಳ ಮೇಲೆ ಶೇ. 25 ಸುಂಕ ವಿಧಿಸಿದ ಟ್ರಂಪ್

ಇರಾನ್ ಜೊತೆ ವ್ಯಾಪಾರ ನಡೆಸುವ ಯಾವುದೇ ದೇಶದ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ (ಜ.12) ಘೋಷಿಸಿದ್ದಾರೆ. "ತಕ್ಷಣದಿಂದಲೇ ಜಾರಿಗೆ ಬರುವಂತೆ, ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗೆ ವ್ಯವಹಾರ...

ಮಂಗಳೂರು | ಬಾಂಗ್ಲಾದೇಶಿಯೆಂದು ಆರೋಪಿಸಿ ವಲಸೆ ಕಾರ್ಮಿಕನ ಮೇಲೆ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಬಾಂಗ್ಲಾದೇಶಿ ಎಂದು ಆರೋಪಿಸಿ ಜಾರ್ಖಂಡ್ ಮೂಲದ ವಲಸೆ ಕಾರ್ಮಿಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಕೊಲೆ ಯತ್ನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರಿನ ಕಾವೂರು ಪೊಲೀಸರು ಸೋಮವಾರ (ಜ.12)...