“ಮನವಿ ಕೊಟ್ಟಿದ್ದೀನಿ ಅಂತ ತೋರಿಸೋಕೆ ಒಂದು ಪೋಟೋ ಸರ್” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಸಂಸದ ಪ್ರತಾಪ ಸಿಂಹ ಅವರು ಪರದಾಡುತ್ತಿರುವ ವಿಡಿಯೊ ವೈರಲ್ ಆಗಿದೆ.
“ಅತಿ ಬುದ್ಧಿವಂತರ ಜೊತೆ ಕೆಲಸ ಮಾಡೋದು ಕಷ್ಟ” ಎಂದು ಪ್ರತಿಕ್ರಿಯೆ ನೀಡಿರುವ ಬಸವರಾಜ ಬೊಮ್ಮಾಯಿವರು ಕಡತವನ್ನು ಪಕ್ಕಕ್ಕಿಡುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಪ್ರತಾಪ್ ಸಿಂಹ ಅವರ ಅವಸ್ಥೆಗೆ ನೆಟ್ಟಿಗರು ಕಾಲೆಳೆದಿದ್ದಾರೆ. ಯಾವುದೇ ವಿದ್ಯಮಾನವಾದರೂ ಮಾಧ್ಯಮಗಳ ಮುಂದೆ ಬಂದು ಪ್ರತಿಕ್ರಿಯೆ ನೀಡುವ ಪ್ರತಾಪ್ ಸಿಂಹ ಅವರನ್ನು ಜನರು ಗೇಲಿ ಮಾಡಿದ್ದಾರೆ.
“ಅಲ್ರಿ ಪ್ರತಾಪ್ ಸಿಂಹ ಅವರೇ, ನೀವು ಮಾಧ್ಯಮಗಳ ಮುಂದೆ ಬಂದು ಏನೋ ದೊಡ್ಡ ಸಾಧನೆ ಅನ್ನುವಂತೆ ಟೀಕೆ ಮಾಡೋದು ನೋಡಿ ನೀವೊಬ್ಬರು ಬಿಜೆಪಿಯಲ್ಲಿ ದೊಡ್ಡ ಮಟ್ಟದ ನಾಯಕರಿರಬಹುದು ಎಂದು ಕೊಂಡಿದ್ದರು. ಆದ್ರೆ ಈ ವಿಡಿಯೋ ನೋಡಿದ ಮೇಲೆ ಗೊತ್ತಾಯಿತು ತಾವು ಬಿಜೆಪಿಯಲ್ಲಿ ಎನು ಅಂತ” ಎಂದು ಸಿದ್ದರಾಮಯ್ಯನವರ ಅಭಿಮಾನಿಗಳ ಪೇಜ್‌ನಲ್ಲಿ ಕಾಲು ಎಳೆಯಲಾಗಿದೆ.
ಇದನ್ನೂ ಓದಿರಿ: ದಲಿತನೆಂಬ ಕಾರಣಕ್ಕೆ ಮೂಲೆಗೆ ತಳ್ಳಲಾಗಿದೆ: ಯೋಗಿ ಸರ್ಕಾರದ ಮೊದಲ ವಿಕೆಟ್ ಪತನ
“ಪ್ರತಾಪ ಸಿಂಹ ಅಂದ್ರೆ ಭಾರಿ ಪ್ರಭಾವಿ ಸಂಸದ ಅಂತ ಆತನ ಬಿಲ್ಡಪ್ಪು ನೋಡಿ ತಿಳ್ಕೊಂಡಿದ್ದೆ. ಇಲ್ಲಿ ನೋಡಿದರೆ ಬೊಮ್ಮಾಯಿಯಂತಹ ದುರ್ಬಲ ಮುಖ್ಯಮಂತ್ರಿಯೇ ಸಿಂಹಗೆ ಕೂರಲು ಒಂದು ಕುರ್ಚಿ, ಜೊತೆಯಲ್ಲಿ ಪೋಟೋ ತೆಗೆಯಲೂ ಅವಕಾಶ ನೀಡದೆ ಅಬ್ಬೇಪಾರಿ ತರ ನಡೆಸಿಕೊಂಡಿದ್ದಾರೆ. ಲೋಕಸಭಾ ಸದಸ್ಯ ಅಂದರೆ ಪದನಿಮಿತ್ತವಾಗಿಯೇ ಅವರಿಗೊಂದು ಖುರ್ಚಿ, ಸ್ಥಾನಮಾನ, ಗೌರವ ಇರುತ್ತೆ. ಸಿಂಹ ಅವರ ಸ್ಥಿತಿ ಗ್ರಾಮ ಪಂಚಾಯತ್ ಸದಸ್ಯನಿಗಿಂತಲೂ ಕಡೆಯಾಗಿದೆ. ಸ್ವಾಭಿಮಾನ ಇರುವ ಯಾವುದೇ ಸಂಸದ ಇಂತಹ ಅವಮಾನ ಸಹಿಸುತ್ತಿರಲಿಲ್ಲ. ಇದಕ್ಕಿಂತ ಬೆತ್ತಲೆ ಜಗತ್ತು ಬರೆಯುತ್ತಾ ಇರಬಹುದಿತ್ತು” ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟಿದ್ದಾರೆ.


