Homeಮುಖಪುಟ40% ಕಮಿಷನ್ ಹಗರಣದ ಆರೋಪ: ಕೆ.ಎಸ್ ಈಶ್ವರಪ್ಪರಿಗೆ ಕ್ಲಿನ್ ಚಿಟ್ ನೀಡಿದ ಉಡುಪಿ ಪೊಲೀಸ್

40% ಕಮಿಷನ್ ಹಗರಣದ ಆರೋಪ: ಕೆ.ಎಸ್ ಈಶ್ವರಪ್ಪರಿಗೆ ಕ್ಲಿನ್ ಚಿಟ್ ನೀಡಿದ ಉಡುಪಿ ಪೊಲೀಸ್

- Advertisement -
- Advertisement -

ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಸಚಿವ ಕೆ.ಎಸ್ ಈಶ್ವರಪ್ಪ 40% ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಪೊಲೀಸರು ಕೆ.ಎಸ್ ಈಶ್ವರಪ್ಪರಿಗೆ ಕ್ಲಿನ್ ಚಿಟ್ ನೀಡಿದ್ದಾರೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ನನ್ನ ಸಾವಿಗೆ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪನವರೆ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟು ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಉಡುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಇದೀಗ ಬಿ ರಿಪೋರ್ಟ್ ಸಲ್ಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸುವ ಮಾಜಿ ಸಚಿವ ಈಶ್ವರಪ್ಪನವರು, “ನಮ್ಮ ಎಲ್ಲಾ ಹಿರಿಯರು, ನಮ್ಮ ಕಾರ್ಯಕರ್ತರು ನೋವಿನಿಂದ ಫೋನ್ ಮಾಡಿ ಮಾತನಾಡುತ್ತಿದ್ದರು. ಹೊರಬರುತ್ತೀರಿ ಎಂದು ಧೈರ್ಯ ತುಂಬುತ್ತಿದ್ದರು. ಇಡೀ ರಾಜ್ಯದ ಎಲ್ಲಾ ಸಾಧು-ಸಂತರು ನಮ್ಮ ಮನೆಗೆ ಬಂದು ಆರ್ಶಿವಾದ ಮಾಡಿ ನಿಮಗೆ ಏನೂ ತೊಂದರೆ ಆಗುವುದಿಲ್ಲ, ಇದರಿಂದ ನೀವು ಹೊರಬರುತ್ತೀರಿ ಎಂದು ಹೇಳಿದ್ದರು. ಅವರಿಗೆ ಧನ್ಯವಾದಗಳು” ಎಂದಿದ್ದಾರೆ.

ನನ್ನಿಂದ ನನ್ನ ಪಕ್ಷದ ಮತ್ತು ನಮ್ಮ ಸರ್ಕಾರದ, ಕೇಂದ್ರದ ನಮ್ಮ ನಾಯಕರು ಒಂದು ರೀತಿಯ ಮುಜುಗರದಲ್ಲಿದ್ದರು. ಇವತ್ತಿನ ಈ ವರದಿಯಿಂದ ಅವರು ಮುಜುಗರದಿಂದ ಮುಕ್ತರಾಗಿದ್ದಾರೆ. ಇದೇ ರೀತಿಯ ವರದಿ ಬರುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು, ಇದರಿಂದ ನನಗೆ ಸಂತಸವಾಗಿದೆ ಎಂದು ಈಶ್ವರಪ್ಪನವರು ತಿಳಿಸಿದ್ದಾರೆ.

ಸದ್ಯ ಪೊಲೀಸರು ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ನೀಡಿರುವುದರಿಂದ ಅವರು ಮತ್ತೆ ಸಚಿವ ಸಂಪುಟಕ್ಕೆ ಸೇರುತ್ತಾರೆ ಎಂಬು ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: ಅಗತ್ಯವಿದ್ದರಷ್ಟೆ ಈಶ್ವರಪ್ಪರನ್ನು ಪೊಲೀಸರು ಬಂಧಿಸಲಿದ್ದಾರೆ: ಸಿಎಂ ಬೊಮ್ಮಾಯಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದ್ದು, ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...