Homeಅಂಕಣಗಳು"ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!"

“ನಮ್ಮ ರೈಲ್ವೆ ಬೋಗಿಗಳನ್ನ ನೋಡಿದ್ದೀರಾ!”

- Advertisement -
- Advertisement -

ನೀವು ನಮ್ಮ ರೈಲುಗಳನ್ನು ನೋಡಿದ್ದೀರಾ? ನೋಡದಿದ್ದರೆ ಈಗ ಸರಿಯಾಗಿ ನೋಡಿ. ಎಷ್ಟೇ ದಿನ ತೊಳೆಯದಿದ್ದರೂ ಧೂಳು ಕಾಣದಂತೆ ಕಡುನೀಲಿ ಬಣ್ಣ ಹೊದ್ದು ಸಂಚರಿಸುತ್ತಿದ್ದ ರೈಲುಗಳನ್ನ ಹಿಡಿದುಕೊಂಡು ಹಳದಿ ಬಣ್ಣ ಬಳಿದದ್ದೂ ಅಲ್ಲದೆ, ಅವುಗಳ ಮೇಲೆ ರಕ್ತ ಬಣ್ಣದ ಕೆಂಪು ಪಟ್ಟಿ ಎಳೆದು ಹದಗೆಡಿಸಿದ್ದು ಬಿಜೆಪಿ ಅವದಿಯಲ್ಲಿ. ಇದೂ ಹಾಳುಬಿದ್ದು ಹೋಗಲಿ, ಒಳಗೆ ಕುಳಿತು ಪ್ರಯಾಣ ಮಾಡುವವನಿಗೆ ರೈಲು ಯಾವ ಬಣ್ಣದಲ್ಲಿದ್ದರೇನು. ಆದರೆ ಈ ಹೊಸ ರೈಲು ಬೋಗಿ ನಿರ್ಮಾಪಕರಾದ ಮಂದಮತಿಗಳು ಕೂರಲಾಗದ ಒಂದು ಅನಾಹುತ ಮಾಡಿದ್ದಾರೆ. ಅದೇನೆಂದರೆ, ಸೀಟುಗಳ ಉದ್ದವನ್ನೇ ಕಮ್ಮಿ ಮಾಡಿರುವುದು. ಅದರಿಂದ ಸೀಟುಗಳು ತೊಡೆಗೆ ಒತ್ತಿ ಹಿಂಸೆ ಕೊಡುತ್ತವೆ. ಸರಿಯಾಗಿ ಕೂರಲು ಹೋದರೆ ಬೆನ್ನಿನ ಭಾಗದಲ್ಲಿ ನೋವು ಆರಂಭವಾಗುತ್ತದೆ. ಜನಕ್ಕೆ ತೊಂದರೆ ಕೊಡುವುದೆಂದರೆ ಇದೆ. ಎಷ್ಟೆ, ಆಗಲಿ ಇದು ಪ್ರಜಾಪೀಡಕ ಸರಕಾರ ಆದ್ದರಿಂದ ಈ ಹಿಂದಿನ ಸುಖಕರ ಪ್ರಯಾಣವೀಗ ಹಿಂಸಾಯಾನವಾಗಿದೆ. ರೈಲ್ವೆ ಇಲಾಖೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಹಿರಿಯ ನಾಗರಿಕರ ರಿಯಾಯಿತಿ ದರವನ್ನು ರದ್ದು ಮಾಡಿದೆ. ಸಾಮಾಜಿಕವಾಗಿ ಎಲ್ಲರ ತಾತ್ಸಾರಕ್ಕೆ ಗುರಿಯಾದ ವೃದ್ಧರು ರೈಲ್ವೆ ಕಳ್ಳರಿಂದಲೂ ಅವಕೃಪೆಗೊಳಗಾದರಲ್ಲಾ, ಥೂತ್ತೇರಿ.

***

ರೈಲ್ವೆ ಅವಾಂತರ ಇಷ್ಟಕ್ಕೆ ಮುಗಿಯಲಿಲ್ಲ. ಈ ರಾಷ್ಟ್ರದ ಮೇಲೆ ನಿಧಾನವಾಗಿ ಹಿಂದಿ ಹೇರುವ ಸಂಚು ರೂಪಿಸಿರುವ ಬಿಜೆಪಿಗಳು ರೈಲ್ವೆ ನಿಲ್ದಾಣದಲ್ಲಿ ಪ್ರಧಾನವಾಗಿದ್ದ ಕನ್ನಡ ಬೋರ್ಡಿನ ಬದಲು ಹಿಂದಿ ಬಳಸತೊಡಗಿದ್ದಾರೆ. ಒಟ್ಟು ರೈಲ್ವೆ ಬೋಗಿ ಮತ್ತು ನಿಲ್ದಾಣದಿಂದಲೇ ಕನ್ನಡವನ್ನ ಕೊನೆಗಾಣಿಸುತ್ತಿದ್ದಾರೆ. ಇನ್ನು ಬಿಜೆಪಿಗಳ ಇನ್ನೊಂದು ಸಂಚು ಆಶ್ಚರ್ಯ ಹುಟ್ಟಿಸಿದೆ. ಕೆಲ ರೈಲು ಬೋಗಿಗಳ ಹೊಟ್ಟೆಯ ಮೇಲೆ ದೀನದಯಾಳು ಬೋಗಿ ಎಂದು ಬರೆಯಲಾಗಿದೆ. ಈ ದಿನದಯಾಳಿಗೂ ರೈಲ್ವೆ ಬೋಗಿಗೂ ಏನು ಸಂಬಂಧ ಎಂಬುದು ಹೊಸ ತಲೆಮಾರಿಗೆ ತಿಳಿಯುತ್ತಿರುವುದು ಹೀಗೆ: ರೈಲ್ವೆ ಬೋಗಿಗಳು ಈ ರೂಪದಲ್ಲಿ ಇರಬೇಕಾದರೆ ದೀನದಯಾಳರೇ ಇಂತವನ್ನ ತಯಾರಿಸಿ ಹಳಿಗಳ ಮೇಲೆ ಕೂರಿಸಿರಬೇಕು ಅಥವ ರೈಲು ಕಂಡುಹಿಡಿದವರು ಇವರೇ ಇರಬೇಕು ಎಂದು ಅಂದಾಜು ಮಾಡುವ ಸಂಭವವಿದೆ. ಮುಂದೆ ಹರ್ಡಿಕರ್ ಹವಾನಿಯಂತ್ರಿಕ ಬೋಗಿ, ಗೋಳ್ವಾಲ್ಕರ್ ಇಂಜನ್, ಹೆಡೆಗೆವಾರ್ ಕೋಚ್, ವಾಜಪೇಯಿ ಮಹಿಳಾ ಬೋಗಿ ಇಂತಹ ಹೆಸರುಹೊತ್ತ ಬೋಗಿಗಳು ರೈಲ್ವೆ ಹಳಿಗಳ ಮೇಲೆ ಕಾಣಿಸಿಕೊಳ್ಳಹುದಂತಲ್ಲಾ, ಥೂತ್ತೇರಿ.

****

ಕರ್ನಾಟಕದ ಮಟ್ಟಿಗೆ ಈ ವಾರ ಎರಡು ಮಹಾ ಘಟನೆಗಳು ಸಂಭವಿಸಿವೆಯಲ್ಲಾ. ಆ ಎರಡೂ ಘಟನೆಗಳು ಶಿವಮೊಗ್ಗ ಜಿಲ್ಲೆಯ ಜೋಡೆತ್ತಿನಂತಿದ್ದ ಎಡೂರಪ್ಪ ಮತ್ತು ಈಶ್ವರಪ್ಪನವರಿಗೆ ಸಂಬಂಧಿಸಿದ್ದು. ಒಬ್ಬರು ರಾಜಕೀಯದ ರಾಡಿಯಿಂದ ಚುಕ್ತಾ ಆಗಲು ತೀರ್ಮಾನಿಸಿದರೆ ಮತ್ತೊಬ್ಬರು 40 ಪರೆಸೆಂಟ್ ಆಪಾದನೆ ಮಾಡಿ ಸಾವಾದ ಪ್ರಕರಣದಿಂದ ಚುಕ್ತವಾಗಿದ್ದಾರೆ. ಮೊದಲನೆಯದಾಗಿ ತಮ್ಮ ರಾಜಕಾರಣಕ್ಕೆ ಇತಿಶ್ರೀ ಹಾಡಿ, ತಾವು ನಿಂತ ನೆಲವನ್ನ ಮಗನಿಗೆ ಬಿಟ್ಟುಕೊಟ್ಟು ನಿರ್ಗಮಿಸುವ ನಿರ್ಧಾರ ತೆಗೆದುಕೊಂಡಿರುವ ಎಡೂರಪ್ಪನ ಬಗ್ಗೆ ಎಲ್ಲರಿಂದ ಅನುಕಂಪ ವ್ಯಕ್ತವಾಗಿದೆ. ಏಕೆಂದರೆ ಅವರೇ ಇದ್ದಿದ್ದರೆ ಈ ನಾಡು ಈ ರೂಪದ ಕ್ಷೋಭೆಗೆ ಒಳಗಾಗುತ್ತಿರಲಿಲ್ಲ. ಬೆನ್ನು ಮೂಳೆಯಿಲ್ಲದ ಬೊಮ್ಮಾಯಿಯವರಿಂದ ನಡೆದ ಅನಾಹುತಗಳಾವುವೂ ಅವರಿದ್ದರೆ ಸಂಭವಿಸುತ್ತಿರಲಿಲ್ಲ ಶಿಕಾರಿಪುರದಲ್ಲಿ ಮುಸ್ಲಿಮರ ಓಟನ್ನು ತೆಗೆದುಕೊಳ್ಳುತ್ತಿರುವ ಎಡೂರಪ್ಪ ಮುಸ್ಲಿಮರಿಗೂ ಇಷ್ಟವಾದ ವ್ಯಕ್ತಿಯಾಗಿದ್ದರು. ಎಡೂರಪ್ಪನ ಬಗ್ಗೆ ಇನ್ನೊಂದು ರೂಪದ ಅನುಕಂಪ ಯಾವುದೆಂದರೆ, ಮುಖ್ಯಮಂತ್ರಿ ಹುದ್ದೆಯನ್ನು ಘನತೆಯಿಂದ ನಿಭಾಯಿಸಲಾಗದೆ, ಬರೀ ಹಗರಣ, ವಿವಾದ ಮತ್ತು ಸ್ವಜನಪಕ್ಷಪಾತ, ಕಾರಾಗೃಹದ ಕೆಟ್ಟ ಕನಸು ಬರೀ ಇಂತದರಲ್ಲೇ ಅವರ ಅವಧಿ ಮುಗಿದಂತೆ ಕಾಣುತ್ತಿದೆ; ಇದನ್ನೆಲ್ಲಾ ಎಡೂರಪ್ಪ ಮಾತ್ರ ತಡೆದುಕೊಳ್ಳುವ ಶಕ್ತಿ ಪಡೆದಿದ್ದರಂತಲ್ಲಾ, ಥೂತ್ತೇರಿ.

*****

ಈ ಬಿಜೆಪಿ ಹಿಂದಿನಿಂದಲೂ ಧನವಂತರು, ಖ್ಯಾತಿವಂತರು ಮತ್ತು ತೋಳ್ಬಲದ ಮಂದಮತಿಗಳನ್ನ ಮನಸೋ ಇಚ್ಛೆ ಬಳಸಿಕೊಂಡು ಒಂದು ಹಂತದಲ್ಲಿ ಬಿಸಾಡಿ ನಡೆಯುತ್ತಿರುವುದು, ಅದರ ಅಜೆಂಡಾದಂತೆಯೇ ನಡೆದು ಬರುತ್ತಿದೆಯಂತಲ್ಲಾ. ಎಡೂರಪ್ಪನ ಮುಖಾಂತರ ಲಿಂಗಾಯತರು ಬಿಜೆಪಿಯ ಪಡಸಾಲೆಗೆ ಬರಬೇಕಿತ್ತು, ಅದೂ ಆಯ್ತು. ಇನ್ನವರ ಅಗತ್ಯವಿಲ್ಲ. ಇನ್ನ ಧನವಂತರಾಗಿ ಮೆರೆದ ರೆಡ್ಡಿಗಳು ಗಣಿಮಣ್ಣಿನಲ್ಲಿ ಮರೆಯಾದರು. ತೋಳ್ಬಲದ ಈಶ್ವರಪ್ಪನ ಕಾಲ ಇನ್ನೊಂದಿಷ್ಟು ದಿನ ನಡೆಯಬಹುದು. ಆದರೆ ನಲವತ್ತು ಪರಸೆಂಟ್ ಆರೋಪ ಮಾಡಿ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ. ಸಂತೋಷ್ ಪಾಟೀಲ್ ಈಶ್ವರಪ್ಪನವರ ಮೇಲೆ ಆರೋಪ ಹೊರಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಸರಕಾರದ ಪೊಲಿಸ್ ಪೇದೆಗಳು ಎಲ್ಲರ ನಿರೀಕ್ಷೆಯಂತೆ, ’ಪಾಪ ಧರ್ಮವಂತರು, ಸತ್ಯವಂತರು, ನೀತಿವಂತರೂ ಆದ ಈಶ್ವರಪ್ಪನವರಿಗೂ ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಯಾವುದೇ ಸಂಬಂಧವಿಲ್ಲ; ಅವರು ಬೆಳಗಾವಿ ಕಡೆಯವರು, ಈಶ್ವರಪ್ಪ ಶಿವಮೊಗ್ಗದವರು. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವುದು ಉಡುಪಿಯಲ್ಲಿ. ಹೇಗೆ ನೋಡಿದರೂ ಈ ಪ್ರಕರಣಕ್ಕೂ ಈಶ್ವರಪ್ಪರಿಗೂ ಕನಿಷ್ಟ ನಾನೂರು ಕಿಲೋಮೀಟರ್ ದೂರ. ಆದ್ದರಿಂದ ನಾವು ಮಾಡದೆ ಇದ್ದರೂ ಬಿ ರಿಪೋರ್ಟ್ ತಂತಾನೆ ರೂಪುಗೊಳ್ಳುತ್ತದೆ’ ಎಂದು ವಾದಿಸುತ್ತಿದ್ದಾರಂತಲ್ಲಾ, ಥೂತ್ತೇರಿ.


ಇದನ್ನೂ ಓದಿ: ಹೇಳದೆ ಮಾಡುವ ಉತ್ತಮ ಪ್ರಧಾನಿ ಮೋದಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...