Homeಎಕಾನಮಿಸದೃಢ ದೇಶ ನಿರ್ಮಿಸಲು, ಬಲವಾದ ರಾಜ್ಯಗಳು, ಶಕ್ತಿಯುತವಾದ ಸ್ಥಳೀಯ ಸರ್ಕಾರಗಳು ಕೂಡ ಅತ್ಯಂತ ಅವಶ್ಯಕ -...

ಸದೃಢ ದೇಶ ನಿರ್ಮಿಸಲು, ಬಲವಾದ ರಾಜ್ಯಗಳು, ಶಕ್ತಿಯುತವಾದ ಸ್ಥಳೀಯ ಸರ್ಕಾರಗಳು ಕೂಡ ಅತ್ಯಂತ ಅವಶ್ಯಕ – ಪಿಣರಾಯಿ ವಿಜಯ್

ಸಹಕಾರ ಒಕ್ಕೂಟ ಅರ್ಥವತ್ತಾಗಿ ಜಾರಿಯಾಗಬೇಕಾದರೆ ಸಂವಿಧಾನದಲ್ಲಿ ನಿರ್ಧಿಷ್ಟಪಡಿಸಲಾದ ರೀತಿಯಲ್ಲಿ ಅಧಿಕಾರ ವಿಕೇಂದ್ರಿಕರಣ ಮುಖ್ಯ

- Advertisement -
- Advertisement -

ಜೂನ್‍ನಲ್ಲಿ ದೆಹಲಿಯಲ್ಲಿ ನಡೆದ ನೀತಿ ಆಯೋಗ ಆಡಳಿತ ಮಂಡಳಿ ಸಭೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ರವರು ಮಾಡಿದ ಭಾಷಣವನ್ನು ಅನಿಲ್ ಕುಮಾರ್ ಚಿಕ್ಕದಾಳವಟ್ಟರವರು ಕನ್ನಡಕ್ಕೆ ಅನುವಾದಿಸಿದ್ದಾರೆ.

ನೀತಿ ಆಯೋಗ ಆಡಳಿತ ಮಂಡಳಿ, ಅದರ ಸದಸ್ಯರಾದ ಭಾರತದೇಶದ ಜನಪ್ರತಿನಿಧಿಗಳಿಗೆ ನಾನು ಕೆಲವು ಪ್ರಮುಖವಾದ ಅಂಶಗಳನ್ನು ಗಮನಕ್ಕೆ ತರಬೇಕೆಂದುಕೊಂಡಿದ್ದೇನೆ. ಅದೇ ರೀತಿ, ಈ ಅಂಶಗಳಿಗಿರುವ ಆದ್ಯತೆಯ ಮೂಲಕ ಒಕ್ಕೂಟ ಸ್ಫೂರ್ತಿಯನ್ನು ಕಾಪಾಡಬೇಕೆಂಬ ವಿಸ್ತೃತವಾದ ಉಪಯೋಗವನ್ನು ಆಶಿಸಿ ಉಪಯುಕ್ತವಾದ ಚರ್ಚೆ ನಡೆಯಬೇಕೆಂದು ಬಯಸುತ್ತೇನೆ.

ಸಹಕಾರ ಒಕ್ಕೂಟದ ಸ್ಫೂರ್ತಿಯ ಬಗ್ಗೆ ನಾವು ಸಾಮಾನ್ಯವಾಗಿ ಮಾತನಾಡುತ್ತೆವೆ. ಒಂದು ಸಾಮೂಹಿಕ ಉಪಯೋಗಕ್ಕೆ ಸಂಬಂಧಿಸಿದ ಅಂಶದ ಮೇಲೆ ನಿರ್ಣಯ ತೆದೆದುಕೊಳ್ಳಬೇಕಾದಾಗ ಸರ್ಕಾರವನ್ನು ಪ್ರತಿನಿಧಿಸುವ ಎಲ್ಲಾ ಆಡಳಿತ ಶಾಖೆಗಳನ್ನು ಪಾಲುದಾರರನ್ನಾಗಿ ಮಾಡಬೇಕೆನ್ನುವುದೇ ಸಹಕಾರ ಒಕ್ಕೂಟದ ಸ್ಪೂರ್ತಿಯ ಉದ್ದೇಶವಾಗಿದೆ. ‘ನಮ್ಮ ಆಚರಣೆ ಅದಕ್ಕೆ ಅನುಗುಣವಾಗಿ ಇದಿಯಾ?’ ಎಂದು ವಿಮರ್ಶಾತ್ಮಕವಾಗಿ ಪರಿಶೀಲಿಸಬೇಕು. ಸಹಕಾರ ಒಕ್ಕೂಟ ನೀತಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತಿಲ್ಲ.

15ನೇ ಹಣಕಾಸು ಯೋಜನೆ ತನ್ನ ಶಿಫಾರಸ್ಸುಗಳನ್ನು ತಯಾರು ಮಾಡುವ ಕೆಲಸದಲ್ಲಿದೆ. ಷೆಡ್ಯೂಲ್ ಪ್ರಕಾರ 2019ರ ಅಕ್ಟೋಬರ್ ಕೊನೆಗೆ ಅಂತಿಮ ರೂಪ ಪಡೆಯಬಹುದು. ಹಣಕಾಸು ಆಯೋಗ ಪ್ರತಿಪಾದಿಸಿದ ಕೆಲವು ಅಂಶಗಳ ಮೇಲೆ ಕೇರಳವನ್ನೊಳಗೊಂಡಂತೆ ಇತರೆ ರಾಜ್ಯಗಳೂ ನ್ಯಾಯಯುತವಾದ ಸಂದೇಹಗಳನ್ನು ವ್ಯಕ್ತಪಡಿಸಿವೆ. ಅವುಗಳ ಮೇಲೆ ಆದಷ್ಟು ಬೇಗ ಚರ್ಚಿಸಬೇಕಿದೆ.

ಇಲ್ಲಿ ಮತ್ತೊಂದು ವಿಷಯದ ಬಗ್ಗೆ ಕೂಡ ಪ್ರಸ್ತಾಪಿಸುವ ಅವಶ್ಯಕತೆ ಇದೆ, ಎಂದಿನಿಂದ ರಾಷ್ಟ್ರೀಯ ಮಟ್ಟದಲ್ಲಿ ಪಂಚವಾರ್ಷಿಕ ಯೋಜನೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತೋ, ಆಗಿನಿಂದ ಕಳೆದ ಬಾರಿಯ ರೀತಿಯಲ್ಲೇ ಗಾಡ್ಗಿಲ್ ಫಾರ್ಮುಲಾ ಪ್ರಕಾರ ರಾಜ್ಯಗಳಿಗೆ ಅವರ ಯೋಜನೆ ಜಾರಿಗೊಳಿಸಲು ಸಿಗಬೇಕಾದ ಅನುದಾನ ನಿಂತುಹೊಯಿತು. ಮತ್ತು ಕೇಂದ್ರ ಸರ್ಕಾರವು ಪ್ರಮುಖವೆಂದು ಭಾವಿಸಿ ಪ್ರವೇಶಿಸಿದ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ರಾಜ್ಯಗಳ ಪಾಲು ಸರಾಸರಿ 25% ರಿಂದ ಒಂದೇ ಭಾರಿಗೆ 40% ಹೆಚ್ಚಾಗಿದೆ. ಇದರಿಂದ ರಾಜ್ಯ ಸರ್ಕಾರಗಳಿಗೆ ಆರ್ಥಿಕ ಹೊಂದಾಣಿಕೆ ಕಡಿಮೆಯಾಗಿ ಹೋಗಿದೆ. ಒಂದು ಸಮನ್ವಯಕವಾಗಿ ನೀತಿ ಆಯೋಗ ಕಳೆದ ನಾಲ್ಕು ವರ್ಷಗಳಲ್ಲಿ ತನ್ನ ಪಾತ್ರವನ್ನು ಆಶಿಸಿದ ರೀತಿಯಲ್ಲಿ ಪೋಷಿಸಿಲ್ಲ. ಯೋಜನಾ ಆಯೋಗಕ್ಕೆ ನೀತಿ ಆಯೋಗ ಸರಿಯಾದ ಬದಲಿಯಲ್ಲ ಎಂಬ ಆಲೋಚನೆ ಕ್ರಮವಾಗಿ ಬಲವಾಗುತ್ತಿದೆ.

ಕೇರಳ ರಾಜ್ಯದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಮುಂದುವರೆಸುತ್ತಿದ್ದೇವೆ. ಪ್ರಸ್ತುತ 13ನೇ ಪಂಚವಾರ್ಷಿಕ ಯೋಜನೆಯ ಮೂಲಕ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿದ್ದೇವೆ. ಯೋಜನಾ ಆಯೋಗವನ್ನು ನೀತಿ ಆಯೋಗವನ್ನಾಗಿ ಬದಲಿಸಿದ ಕಾರಣ ಕೇರಳದಂತಹ ರಾಜ್ಯಗಳು ತಮ್ಮ ರಾಜ್ಯ ಪಂಚವಾರ್ಷಿಕ ಯೋಜನಾ ವಿಧಾನವನ್ನು ಮುಂದುವರೆಸಲು ಅವಶ್ಯಕವಾದ ನಿಧಿಗಳ ಕೊರತೆ ಉಂಟಾಗಿದೆ. ಇದು ಒಂದು ಅನಾನೂಕೂಲ ಪ್ರಭಾವವನ್ನು ತೋರಿದೆ. ನಮ್ಮ ಫೆಡರಲ್ ವ್ಯವಸ್ಥೆಯಲ್ಲಿ ಇನ್ನೂ ಅಪರಿಷ್ಕೃತವಾಗಿರುವ ಅಂಶಗಳಲ್ಲಿ ಇವು ಕೆಲವು ಮಾತ್ರವೇ. ಇನ್ನು ನೀತಿ ಆಯೋಗ ಸಮಾವೇಶದ ಅಜೆಂಡಾ ಅಂಶಗಳನ್ನು ಪ್ರಸ್ತಾಪಿಸುವೆ.

ಮಳೆಯ ನೀರಿನ ಸಂರಕ್ಷಣೆ

ಕುಡಿಯುವ ನೀರಿನ ಕೊರತೆ ನೀಗಿಸಲು ಮಳೆ ನೀರಿನ ಸಂರಕ್ಷಣೆ ಬಹಳ ಮುಖ್ಯವಾದದ್ದು. ಆದ್ದರಿಂದಲೇ ರಾಜ್ಯ ಸರ್ಕಾರದ ಸಂಸ್ಥೆಗಳು, ಸ್ಥಳೀಯ ಸರ್ಕಾರಗಳು, ಪ್ರಜೆಗಳನ್ನು ಇದರಲ್ಲಿ ಸಹಭಾಗಿಗಳನ್ನಾಗಿಸುತ್ತದೆ. ಕೇರಳ ರಾಜ್ಯಾಭಿವೃದ್ದಿಗಾಗಿ ಸರ್ಕಾರ ನಾಲ್ಕು ವಲಯಗಳನ್ನು ಆಯ್ಕೆ ಮಾಡಿಕೊಂಡಿದೆ. ಅದರಲ್ಲಿ ‘ಹಸಿರು ಕೇರಳ’ ಹೆಸರಿನಲ್ಲಿ ತಯಾರಾದ ‘ಗ್ರೀನ್ ಮಿಷನ್’ ಕೂಡ ಒಂದು. ಜಲ ಮೂಲಗಳನ್ನು ಸಂರಕ್ಷಿಸುವುದು, ಶುಚಿಗೊಳಿಸುವುದು, ಸರಬರಾಜು ಮಾಡುವುದು ಈ ಮಿಷನ್ ಉದ್ದೇಶ. ಉಳಿದ ಮೂರು ಗುರಿಗಳು ಆರೋಗ್ಯ, ಶಿಕ್ಷಣ, ಗೃಹ ನಿರ್ಮಾಣಗಳಲ್ಲಿ ಅಭಿವೃದ್ಧಿ. ಇವುಗಳಿಗಾಗಿ ಆರ್ಥಿಕ ಸಂಪನ್ಮೂಲಗಳನ್ನು ಕಲ್ಪಿಸುವುದು. ನೀರಿನ ಸಂರಕ್ಷಣೆ, ಸರಬರಾಜು, ಬಳಕೆಯನ್ನು ಮೇಲ್ವಿಚಾರಣೆ ಮಾಡಲು ಕೇರಳದಲ್ಲಿ ಬಲವಾದ ಕಾನೂನುಗಳು ಇವೆ. ನೀರಿನ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಭತ್ತ ಬೆಳೆಯಲು ಪ್ರತ್ಯೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ.

ಬರ ಪರಿಸ್ಥಿತಿ – ಸಹಾಯಕ ಕ್ರಮಗಳು

ಬರ ಪರಿಸ್ಥಿತಿಯನ್ನು ಎದುರಿಸಲು ಒಂದು ಕಡೆ ಆರ್ಥಿಕ ಉಳಿತಾಯದ ಕ್ರಮಗಳನ್ನು ಪಾಲಿಸುವ ಜೊತೆಗೆ ಮತ್ತೊಂದು ಕಡೆ ಬೇಡಿಕೆ ಆಧಾರಿತ ಉದ್ಯೋಗ ಕಾರ್ಯಕ್ರಮಗಳಿಗೆ ಖರ್ಚು ಮಾಡುವುದಕ್ಕೆ ಯಾವುದಕ್ಕೂ ಹಿಂಜರಿಯಬಾರದು. ಇದಕ್ಕೆ ನಿಮ್ಮೆಲ್ಲರ ಬೆಂಬಲ ಇರುತ್ತದೆಂದು ಭಾವಿಸುತ್ತಿದ್ದೇನೆ. ಬರದ ಸಮಯದಲ್ಲಿ ಲಾಭದಾಯಕವಾದ ಉದ್ಯೋಗ ಇಲ್ಲದೇ ಹೋಗುವುದು, ಬೇಡಿಕೆಯನ್ನು ಮಂದಗೊಳಿಸುವುದರಿಂದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಕುಂಠಿತಗೊಳ್ಳಲು ದಾರಿಯಾಗುತ್ತದೆ. ಸಮಾಜ ಶ್ರೇಯಸ್ಸಿನ ದೃಷ್ಟಿಯಿಂದ ಇದನ್ನ ನಾವು ನಿವಾರಿಸಲು ಪ್ರಯತ್ನಿಸಬೇಕು.

2018- 19ರಲ್ಲಿ ನೈರುತ್ಯ ಮಾರುತಗಳ ಸಮಯದಲ್ಲಿ, ಆನಂತರವು ಸಹ ಕೇರಳದಲ್ಲಿ ಅಸಾಧಾರಣವಾದ ಪ್ರವಾಹಗಳನ್ನು ಎದುರಿಸಿದೆ. ಆದರೆ ಈಶಾನ್ಯ ಮಾರುತಗಳ ಸಮಯದಲ್ಲಿ ಎಂದಿಗಿಂತ 3.34% ರಷ್ಟು ಕಡಿಮೆ ಮಳೆಯ ಪ್ರಮಾಣ ನಮೂದಾಗಿದೆ. ಬೇಸಿಗೆ ಉಷ್ಣಾಂಶ ಸಾಧಾರಣಕ್ಕಿಂತ ಹೆಚ್ಚಾಗಿರುವುದು, ಮಳೆಗಾಲದಲ್ಲಿ ಮಳೆ ತಡವಾದ್ದರಿಂದ ರಾಜ್ಯದಲ್ಲಿ ಅನೇಕ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಏರ್ಪಟ್ಟಿತು. ಸ್ಥಳೀಯಾಡಳಿತ ಯಂತ್ರಾಂಗಗಳು ಕುಡಿಯುವ ನೀರು ಅಭಾವವಿರುವ ಪ್ರಾಂತ್ಯಗಳನ್ನು ಗುರುತಿಸಿ ನೀರಿನ ಸರಬರಾಜು ಸಕ್ರಮವಾಗಿ ನಡೆಯುವ ಹಾಗೆ ಸಿದ್ಧತೆಗಳು ಮಾಡಿದೆವು.

ನಿರೀಕ್ಷೆಗಳ ಜಿಲ್ಲಾ ಕಾರ್ಯಕ್ರಮ: ವಿಜಯಗಳು, ಸವಾಲುಗಳು

ದೇಶದಲ್ಲಿ ಅತ್ಯುತ್ತಮ ಪಲಿತಾಂಶಗಳು ಸಾಧಿಸಿದ ರಾಜ್ಯಗಳ ಜೊತೆ ಹೋಲಿಸಿದಾಗ ಕೆಲವು ಜಿಲ್ಲೆಗಳು ಸಾಮಾಜಿಕ, ಆರ್ಥಿಕ ಸೂಚಿಯಲ್ಲಿ ಹಿಂದುಳಿದಿವೆ. ಇಂತಹ ಜಿಲ್ಲೆಗಳ ಅಭಿವೃದ್ದಿಗೆ ಯೋಜನೆ ರೂಪಿಸಿ ಆಗಿಂದಾಗ್ಗೆ ಮೇಲ್ವಿಚಾರಣೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ. ಕೇಂದ್ರ –ರಾಜ್ಯ ಯೋಜನೆಗಳ ಪ್ರಭಾವ ಈ ಜಿಲ್ಲೆಗಳ ಮೇಲೆ ಯಾವ ರೀತಿಯಲ್ಲಿ ಇದೆ ಎಂದು ಅಂದಾಜು ಮಾಡಬೇಕು. ಎಲ್ಲಾ ಎಲ್ಲಾ ಸವಾಲುಗಳಿಗೂ ಒಂದೇ ರೀತಿಯಾದ ಕೇಂದ್ರ ಯೋಜನೆಗಳು ಪರ್ಯಾಯವನ್ನು ತೋರಿಸುವುದಿಲ್ಲ. ಇದು ಸಹಕಾರ ಒಕ್ಕೂಟ ಪ್ರಾಥಮಿಕ ಸೂತ್ರಗಳಿಗೆ ವಿರುಧ್ಧವೆಂದು ಕೇರಳ ರಾಜ್ಯ ಭಾವಿಸುತ್ತದೆ. ಕೇಂದ್ರದ ಯೋಜನೆಗಳ ಜಾರಿಗಾಗಿ ರಾಜ್ಯಗಳಿಗೆ ಕೇಂದ್ರಸರ್ಕಾರ ಮಾಡುವ ಹಂಚಿಕೆಗಳನ್ನು ದಾನಧರ್ಮವಾಗಿ ಪರಿಗಣಿಸಬಾರದು. ಇವುಗಳ ಜಾರಿಗಾಗಿ ರಾಜ್ಯಗಳು ಕೂಡ ತಮ್ಮ ಪಾಲು ಭರಿಸುತ್ತಿವೆ. ಸಂವಿಧಾನದಲ್ಲಿನ ನಿರ್ದೇಶನಾ ತತ್ವಗಳ ಸರಿಯಾದ ಜಾರಿಗೆ ಕೇಂದ್ರಸರ್ಕಾರ ಎಲ್ಲಾ ರೀತಿಯಲ್ಲೂ ಜವಾಬ್ದಾರಿವಹಿಸಿ ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ರಾಜ್ಯಸರ್ಕಾರಗಳು, ಸ್ಥಳೀಯ ಸಂಸ್ಥೆಗಳಿಗೆ ತನ್ನ ನಿರ್ಮಾಣದಲ್ಲಿ ಕೆಳಮಟ್ಟದ ಸ್ಥಾನದಲ್ಲಿ ಪರಿಗಣಿಸುವುದು ಸರಿಯಲ್ಲ. ಇದು ಸಹಕಾರ ಒಕ್ಕೂಟದ ಗುರಿ, ಸಮಗ್ರತೆಗೂ ಕೂಡ ಒಳ್ಳೆಯದಲ್ಲ.

ರಾಜ್ಯಪಟ್ಟಿಯಲ್ಲಿರುವ ಅಂಶಗಳ ಮೇಲೆ ಕೇಂದ್ರ ಖರ್ಚನ್ನು ಕ್ರಮವಾಗಿ ಬೆಳೆಸುತ್ತಾ ಹೋಗುತ್ತಿದೆ. ಇದರಿಂದ ಕಲ್ಯಾಣ ಯೋಜನೆಗಳು ಕೆಲವೇ ವಲಯಗಳಿಗೆ ಸೀಮಿತವಾಗುತ್ತವೆ. ಆರ್ಥಿಕ ಕಾರಣಗಳ ದೃಷ್ಟಿಯಿಂದ ನೋಡಿದಾಗ ರಾಜ್ಯ, ಸ್ಥಳೀಯ ಸರ್ಕಾರಗಳು ಈ ಯೋಜನೆಗಳ ಜಾರಿಯನ್ನು ಮತ್ತಷ್ಟು ಸಮರ್ಥವಾಗಿ ಮಾಡುತ್ತವೆ. ಅಷ್ಟೇ ಅಲ್ಲದೇ ಯೋಜನೆಗಳೆಲ್ಲ ಕೇಂದ್ರಿಕೃತವಾಗುವುದರಿಂದ ಸಾಮಾಜಿಕ, ಆರ್ಥಿಕ ವಲಯಗಳ ಜಾರಿಗೆ ರಾಜ್ಯಗಳಿಗೆ ಬೇಕಾದಷ್ಟು ನಮ್ಯತೆಯಿಂದ ಇರಲಾಗುತ್ತಿಲ್ಲ. ಸ್ಥಳಿಯ ಸಂಸ್ಥೆಗಳು ತಮ್ಮ ಜನರಿಗೆ ಸೇವೆಗಳನ್ನು ತಲುಪಿಸುವ ಕ್ರಮದಲ್ಲಿ ನೂತನ ಪದ್ಧತಿಗಳು ಪಾಲಿಸಲಾಗುತ್ತಿಲ್ಲ.

ಒಂದು ಜಿಲ್ಲೆ ಅಥವಾ ಸ್ಥಳೀಯ ಆಡಳಿತದಲ್ಲಿ ಅದರ ಅವಶ್ಯಕತೆಗಳು, ಆಕಾಂಕ್ಷೆಗಳು ಸಕ್ರಮವಾಗಿ ನೆರವೇರಬೇಕೆಂದರೆ ಅಧಿಕಾರ ಪ್ರಜಾತಾಂತ್ರಿಕವಾಗಿ ವೀಕೆಂದ್ರಿಕರಿಸುವುದೇ ಸರಿಯಾದ ಮಾರ್ಗ. ಸಂವಿಧಾನದಲ್ಲಿನ 73, 74ನೇ ತಿದ್ದುಪಡಿಗಳು ಹೇಳುತ್ತಿರುವುದಿದೆ. ಆದ್ದರಿಂದ ದೇಶದಲ್ಲಿನ ಎಲ್ಲಾ ರಾಜ್ಯಗಳಲ್ಲಿನ ಆಶಾವಾದಿ ಜಿಲ್ಲೆಗಳಲ್ಲಿ ನಿರ್ಧೇಶಿಸಿಕೊಂಡ ಗುರಿಗಳನ್ನು ತಲುಪಲು ಗಂಭೀರವಾಗಿ ಶ್ರಮಿಸಬೇಕಾಗಿದೆ. ರಾಜ್ಯ ಸರ್ಕಾರ ಆಡಳಿತ ವ್ಯವಹಾರಗಳಲ್ಲಿ ಕೇಂದ್ರ ಸರ್ಕಾರ ಮಿತಿಮೀರಿದ ಹಸ್ತಕ್ಷೇಪ ಮಾಡುವದು ನಮ್ಮ ಒಕ್ಕೂಟ ವ್ಯವಸ್ಥೆಯನ್ನು, ಸ್ಪೂರ್ತಿಯನ್ನು ಬಲಹೀನಗೊಳಿಸುತ್ತಿದೆ. ಈ ವಿಷಯವನ್ನು ನೀತಿ ಆಯೋಗ ಆಡಳಿತ ಮಂಡಳಿ ನಿರ್ಲಕ್ಷಿಸಬಾರದು.

ವ್ಯವಸಾಯ ಉತ್ಪನ್ನಗಳ ಮಾರಾಟದಲ್ಲಿ ಸುಧಾರಣೆಗಳು

ವ್ಯವಸಾಯ ರಂಗದಲ್ಲಿ ಬದಲಾವಣೆಗಳು _ ವ್ಯವಸ್ಥಿತ ಸುಧಾರಣೆಗಳ ನೇಪಥ್ಯದಲ್ಲಿ(1) ವ್ಯವಸಾಯ ಉತ್ಪನ್ನಗಳ ಮಾರುಕಟ್ಟೆ ಸಮಿತಿ(ಎ.ಪಿ.ಎಮ್.ಸಿ) ಕಾಯ್ದೆ (2) ನಿತ್ಯಾವಸರ ವಸ್ತುಗಳ ಕಾಯ್ದೆ – 1955 ಮೇಲೆ ಕೇಂದ್ರಿಕರಿಸಬೇಕು. ಸಂವಿಧಾನದ 7ನೇ ಷೆಡ್ಯೂಲ್ ಪ್ರಕಾರ ರಾಜ್ಯಗಳ ಪ್ರಾಧಾನ್ಯತೆಯ ರಂಗದಲ್ಲಿ ಇದು ಕೂಡ ಒಂದು. ಇದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರಗಳಿಗೆ ಸ್ವಂತ ಕಾಯ್ದೆಗಳು ಇವೆ. ಈಗ ಎಲ್ಲಾ ರಾಜ್ಯಗಳಿಗೂ ಒಂದೇ ರೀತಿಯಲ್ಲಿ ವರ್ತಿಸುವ ವಿಧವಾಗಿ ಹೊಸ ಮಸೂದೆ ಮಾದರಿ ಕಾನೂನು – 2017ನ್ನು ನಮಗೆ ನೀಡಿದ್ದಾರೆ. ನಾನು ಕೆಲವು ಅಂಶಗಳನ್ನು ಪ್ರಸ್ತಾಪಿಸುತ್ತೇನೆ. ‘ಡ್ರಾಪ್ಟ್ ಮಾಡೆಲ್ ಕಾನೂನು’ ದೃಷ್ಟಿಯೆಲ್ಲಾ ಕಾರ್ಪೋರೇಟ್ ವ್ಯವಸಾಯದ ಮೇಲೆ ಕೇಂದ್ರಿಕರಿಸಿದೆ ಎಂದು ತಿಳಿಯುತ್ತಿದೆ. ರೈತರ ಆದಾಯ ಹೆಚ್ಚಾಗುತ್ತದೆ ಎಂಬ ನೆಪದಿಂದ ರೈತರ ಭವಿಷ್ಯತ್ತನ್ನು ನೇರವಾಗಿ ವಾಣಿಜ್ಯ ಸಂಸ್ಥೆಗಳ ಅಧೀನಕ್ಕೆ ತಳ್ಳುವ ವಿಧಾನದಲ್ಲಿ ಇದೆ.

ಚೌಕಾಸಿ ಮಾಡಲಾಗುವ ಶಕ್ತಿಯಲ್ಲಿನ ಸಮಾನತೆ, ಕಾರ್ಪೋರೇಟ್ ಸಂಸ್ಥೆಗಳ ಏಕಸ್ವಾಮ್ಯವಿರುವ ಈ ಸಮಾಜದಲ್ಲಿ ಎಲ್ಲಾ ವ್ಯವಹಾರಗಳಲ್ಲೂ ದರೋಡೆ ಮತ್ತಷ್ಟು ಹೆಚ್ಚಾಗುತ್ತದೆ. ಪ್ರಜೆಗಳ ಪಾಲುದಾರಿಕೆ, ಸಹಕಾರೋದ್ಯಮವು, ಸರ್ಕಾರದ ಹಸ್ತಕ್ಷೇಪದಿಂದ ಉತ್ಫನ್ನಗಳ ಕೈಗೆಟುಕುವ ಬೆಲೆಗಳಿಗೆ ನಿಗಧಿಗೊಳಿಸಲು ಸಾಧ್ಯವೆಂದು ನಮ್ಮ ರಾಜ್ಯ ಸರ್ಕಾರ ನಿರೂಪಿಸಿದೆ. ರೈತರಿಗೆ ಕನಿಷ್ಟ ಬೆಂಬಲ ಬೆಲೆಗಳನ್ನು ನೀಡಿ ಭರವಸೆ ಕಲ್ಪಿಸುವ ಮೂಲಕ ಭತ್ತ ಶೇಖರಣೆ ಸಮರ್ಥವಾಗಿ ನಡೆಯಿತು. ಈ ವಿಷಯದಲ್ಲಿ ನಾವು ವಿಶಾಲ ದೃಷ್ಟಿಯಿಂದ ಇರಬೇಕಿದೆ. ಪ್ರಜೆಗಳ ಮನ್ನಣೆ ಹೊಂದಿದ ಪದ್ದತಿಗಳು ಅನುಭವಗಳಿಂದ ನಾವು ಪಾಠ ಕಲಿಯಬೇಕಿದೆ.

ದಿನಬಳಕೆಯ ವಸ್ತುಗಳು, ಸರಕುಗಳ ಸಂಗ್ರಹದ ಮೇಲೆ ನಿಯಂತ್ರಣವನ್ನು ಜಾರಿ ಮಾಡುತ್ತಾ ‘ ನಿತ್ಯಾವಸರ ವಸ್ತುಗಳ ಕಾನೂನು – 1955’ ತೆಗೆದುಕೊಂಡು ಬರಲಾಗಿದೆ. ಸರಕುಗಳನ್ನು ಅಧಿಕ ಮೊತ್ತದಲ್ಲಿ ಸಂಗ್ರಹಿಸುವುದರಿಂದ ಸರಬರಾಜು ಕಡಿಮೆಯಾಗಿ ಬೆಲೆಗಳು ಕೃತಕವಾಗಿ ಏರುತ್ತವೆ. ಆದ್ದರಿಂದಲೇ ಈ ಕಾನೂನಿನ ಪರಿಮಿತಿಗೆ ಮೀರಿದ ಸರಕು ಸಂಗ್ರಹವನ್ನು ನಿಷೇದಿಸಿದೆ. ಹೊಸ ಮಾದರಿ ಕಾನೂನು ಇದಕ್ಕೆ ಭಿನ್ನವಾಗಿ ವ್ಯವಸಾಯ ಉತ್ಪನ್ನಗಳನ್ನು ದೊಡ್ಡ ಮೊತ್ತದಲ್ಲಿ ಸಂಗ್ರಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತಿದೆ. ಆದ್ದರಿಂದಲೇ ನಿತ್ಯಾವಸರ ವಸ್ತುಗಳ ಕಾನೂನಿನಲ್ಲಿ ಸಂಗ್ರಹ ಪರಿಮಿತಿಯಿಂದ ವ್ಯವಾಸಾಯ ಉತ್ಪನ್ನಗಳನ್ನು ವಿನಾಯಿತಿ ಕೊಡಬೇಕೆಂದು ಇದರಲ್ಲಿ ಪ್ರತಿಪಾದಿಸಲಾಗಿದೆ. ವ್ಯವಸಾಯ ಉತ್ಪನ್ನಗಳ ಸಂಗ್ರಹ ಪರಿಮಿತಿಯನ್ನು ಸಡಲಿಸಿದ್ದೇ ಆದರೆ ಅದನ್ನು ವ್ಯಾಪಾರಸ್ಥರ ದುರ್ವಿನಿಯೋಗ ಮಾಡುವ ಅವಕಾಶವಿದೆ. ಮಾರುಕಟ್ಟೆಯಲ್ಲಿ ಬೆಲೆಗಳನ್ನು ಹೆಚ್ಚಿಸಲು ಸರಕುಗಳನ್ನು ಬಚ್ಚಿಡುತ್ತಾರೆ. ಇಂದಿಗೂ ನಮ್ಮ ದೇಶದಲ್ಲಿ ಆಹಾರ ಧಾನ್ಯಗಳ, ಇತರೆ ನಿತ್ಯವಸರ ವಸ್ತುಗಳ ಬೆಲೆಗಳ ಏರಿಕೆ ಬಹಳ ಸಹಜವಾದ ವಿಷಯವಾಗಿ ನೋಡಲಾಗುತ್ತಿದೆ. ವಿನಿಯೋಗದಾರರನ್ನು ಪ್ರತ್ಯೇಕಿಸಿ ಸಮಾಜದಲ್ಲಿನ ಬಡವ, ಅತ್ಯಂತ ದಯಾನೀಯ ಸ್ಥಿತಿಯಲ್ಲಿರುವ ಪ್ರಜೆಗಳನ್ನು ಬೆಲೆ ಏರಿಕೆಯಿಂದ ಕಾಪಾಡುವುದಕ್ಕೋಸ್ಕರ , ಮಾರುಕಟ್ಟೆಯನ್ನು ರಕ್ಷಿಸುವುದಕ್ಕೋಸ್ಕರ ಸರ್ಕಾರ ಅವಶ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

ಅರ್ಥವತ್ತಾದ ಸಹಕಾರ ಒಕ್ಕೂಟ

ಸಹಕಾರ ಒಕ್ಕೂಟ ಅರ್ಥವತ್ತಾಗಿ ಜಾರಿಯಾಗಬೇಕಾದರೆ ಸಂವಿಧಾನದಲ್ಲಿ ನಿರ್ಧಿಷ್ಟಪಡಿಸಲಾದ ರೀತಿಯಲ್ಲಿ ಅಧಿಕಾರ ವಿಕೇಂದ್ರಿಕರಣ ಮುಖ್ಯ. ಸಾಮಾಜಿಕ ವಲಯಗಳಲ್ಲಿ ತಮ್ಮ ಜವ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ರಾಜ್ಯಗಳಿಗೆ ಆರ್ಥಿಕ ನಮ್ಯತೆ ಇರಬೇಕು. ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸಬಹುದೆಂದು ಕೇರಳ ಸರ್ಕಾರ ವಿಶ್ವಾಸಿಸುತ್ತದೆ. ಬಡ್ಜೆಟ್‍ನಲ್ಲಿ ಕೊರತೆಯನ್ನು ತುಂಬಿಸಲು ಯಾಂತ್ರಿಕವಾದ ವಿಧಾನಗಳನ್ನು ಅನುಸರಿಸುವುದರಿಂದ ಆ ಸ್ಪೂರ್ತಿ ನಿರುತ್ಸಾಹಪಡುತ್ತದೆ. ಆಯಾ ರಾಜ್ಯಗಳ ಪ್ರತ್ಯೇಕ ಪರಿಸ್ಥಿಗಳು, ವಾಸ್ತವಗಳಿಗೆ ಅನುಗುಣವಾಗಿ ಆರ್ಥಿಕ ಕೊರತೆಯನ್ನು ಅತಿಕ್ರಮಿಸಲು ಗುರಿಗಳನ್ನು ನಿರ್ಧೇಶಿಕೊಳ್ಳಬೇಕಿದೆ. ಆರ್ಥಿಕ ವಿಧಾನಗಳಲ್ಲಿ ಕಠಿಣವಾದ ನಿರ್ಣಯಗಳಿಂದ 2018ರಲ್ಲಿ ಪ್ರವಾಹಗಳ ಸಮಯದಲ್ಲಿ ನಾವು ಇತರೆ ದೇಶಗಳಿಂದ ಆರ್ಥಿಕ ಸಹಕಾರವನ್ನು ತೆಗೆದುಕೊಳ್ಳಲಾಗಲಿಲ್ಲ.

15ನೇ ಹಣಕಾಸು ಆಯೋಗ ಸೂಚನೆಯ ಪ್ರಕಾರ ಕೆಲವು ಆದ್ಯತಾ ವಲಯಗಳಲ್ಲಿ ರಾಜ್ಯಗಳ ಅವಶ್ಯಕತೆಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಒಂದು ಬಲವಾದ ದೇಶವನ್ನು ನಿರ್ಮಿಸಲು, ಬಲವಾದ ಕೇಂದ್ರದ ಜೊತೆಗೆ ಬಲವಾದ ರಾಜ್ಯಗಳು, ಶಕ್ತಿಯುತವಾದ ಸ್ಥಳೀಯ ಸರ್ಕಾರಗಳು ಕೂಡ ಅತ್ಯಂತ ಅವಶ್ಯಕ.

ಇಂತಹ ಸಮಾವೇಶಗಳಿಗೆ ಅಜೆಂಡಾ ನಿರ್ಣಯಿಸುವಾಗ ಮುಖ್ಯಮಂತ್ರಿಗಳನ್ನು ಸಹ ಸಂಪರ್ಕಿಸಬೇಕು. ಸಂವಿಧಾನಿಕ ಸಂಸ್ಥೆಗಳನ್ನು, ಅಂತರಾಷ್ಟ್ರೀಯ ಕೌನ್ಸಿಲ್‍ನ್ನು ಮತ್ತೆ ಶಕ್ತಿಯುತವಾಗಿ ತಯಾರುಮಾಡಬೇಕೆಂದು, ಮುಖ್ಯಮಂತ್ರಿಗಳು ಪ್ರತಿಪಾಧಿಸಿದ ಮುಖ್ಯವಾದ ಅಂಶಗಳ ಮೇಲೆಯೂ ಸಹ ಚರ್ಚೆ ಜರುಗಿಸಬೇಕೆಂದು ಸೂಚಿಸುತ್ತಾ ನಾನು ಮುಗಿಸುತ್ತೇನೆ. ಸಹಕಾರ ಒಕ್ಕೂಟ ನಿರ್ಮಾಣವನ್ನು, ಅದರ ಉದ್ದೇಶವನ್ನು ಕಾಪಾಡುವುದೇ ನಮ್ಮ ಮುಖ್ಯ ಕರ್ತವ್ಯ.

ಕೃಪೆ: ಪ್ರಜಾಶಕ್ತಿ ದಿನಪತ್ರಿಕೆ ತೆಲುಗು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...