Homeಮುಖಪುಟವಿಮರ್ಶಾತ್ಮಕ ಚಿಂತನೆ (Critical thinking) ಪ್ರಾರಂಭಿಸಲು ಒಂದು ಸರಳ ವಿಧಾನ ಇಲ್ಲಿದೆ

ವಿಮರ್ಶಾತ್ಮಕ ಚಿಂತನೆ (Critical thinking) ಪ್ರಾರಂಭಿಸಲು ಒಂದು ಸರಳ ವಿಧಾನ ಇಲ್ಲಿದೆ

- Advertisement -
- Advertisement -

ಜೀವನ ಕಲೆಗಳು : ಅಂಕಣ – 10

ವಿಮರ್ಶಾತ್ಮಕ ಚಿಂತನೆ

ಸ್ಪಷ್ಟ ಮತ್ತು ತರ್ಕಬದ್ಧವಾಗಿ ಯೋಚಿಸುವ ಕಲೆಯನ್ನು ವಿಮರ್ಶಾತ್ಮಕ ಚಿಂತನೆ ಎಂದು ಕರೆಯಬಹುದು. ಯೋಚನೆಯ ಒಂದೊಂದು ಭಾಗಗಳನ್ನು ಅಥವಾ ಯೋಚನೆ/ಹೇಳಿಕೆ/ವಾದಗಳ ನಡುವಿನ ಕೊಂಡಿಯನ್ನು ಬೇರೆ ಬೇರೆ ಪಾರ್ಶ್ವದಿಂದ ತರ್ಕಬದ್ಧವಾಗಿ ವಿಶ್ಲೇಷಿಸಿ, ಅರ್ಥಮಾಡಿಕೊಂಡು, ಅದರ ಆಧಾರದ ಮೇಲೆ ಒಂದು ನಿರ್ಧಾರಕ್ಕೆ ಬರುವುದು ವಿಮರ್ಶಾತ್ಮಕ ಚಿಂತನೆ. ಇತ್ತೀಚಿನ ದಿನಗಳಲ್ಲಿ ಇದರ ಪ್ರಯೋಗವನ್ನು ಅಪ-ಪ್ರಚಾರ (ಫೇಕ್-ನ್ಯೂಸ್) ಗುರುತಿಸಲು ಬಳಸಬಹುದು. ವಿವಿಧ ಮೂಲಗಳಿಂದ ದಿನನಿತ್ಯ ಬರುವ ಮಾಹಿತಿಯ ಮಹಾಪೂರದ ಮೂಕ ಪ್ರೇಕ್ಷಕ/ವಾಚಕ/ಸಂವಾಹಕರಾಗದೆ, ಸತ್ಯಾಸತ್ಯತೆಯನ್ನು ಅರಿಯುವ ವಿವೇಕವೇ ವಿಮರ್ಶಾತ್ಮಕ ಚಿಂತನೆ. ಇದಕ್ಕೆ ಅನೇಕ ಪೂರಕ ಕಲೆಗಳು ಇರಬೇಕು, ಉದಾ: ಅವಲೋಕನ, ವಿಶ್ಲೇಷಣ, ಗ್ರಹಣಶಕ್ತಿ, ವ್ಯಕ್ತಪಡಿಸುವಿಕೆ, ಊಹೆ, ವಿವರಣೆ, ಪ್ರಯೋಗ, ಇತ್ಯಾದಿ. ಇದನ್ನು ವ್ಯಕ್ತಿಯ ಜಾಣತನ ಎಂದರೂ ಸರಿ.

ವಿಮರ್ಶಾತ್ಮಕ ಚಿಂತನೆಯುಳ್ಳ ವ್ಯಕ್ತಿ:

·         ವಿವಿಧ ಯೋಚನೆ/ಹೇಳಿಕೆಗಳ ಪರಸ್ಪರ ಸಂಬಂಧವನ್ನು ಅರ್ಥ ಮಾಡಿಕೊಳ್ಳುವರು.

·         ಈ ವಿವಿಧ ಯೋಚನೆ/ಹೇಳಿಕೆ/ವಾದಗಳ ಮಹತ್ವ/ಸಂಗತವನ್ನು ಇತ್ಯರ್ಥಮಾಡಬಲ್ಲರು.

·         ಅವಶ್ಯಕತೆಗೆ ಬೇಕಾದಷ್ಟು ಮಾಹಿತಿಯನ್ನು ಕಲೆಹಾಕಬಲ್ಲರು.

·         ಪರ/ವಿರುದ್ಧ ವಾದಗಳನ್ನು ಗುರುತಿಸಿ/ಸೃಷ್ಟಿಸಿ/ಅವಲೋಕಿಸಬಲ್ಲರು.

·         ವಾದದಲ್ಲಿ ಇರುವ ಅಸಮರ್ಥತೆ, ತರ್ಕದ ಕೊರತೆಯನ್ನು ಗುರುತಿಸಬಲ್ಲರು.

·         ತಮ್ಮ ಸ್ವಂತ ಅರ್ಥೈಸುವಿಕೆ ಅಥವಾ ವಾದ/ನಂಬಿಕೆ/ಮೌಲ್ಯವನ್ನು ಸಮರ್ಥಿಸಿಕೊಳ್ಳಬಲ್ಲರು.

·         ಸಮಸ್ಯೆಯನ್ನು ಸ್ಥಿರ ಮತ್ತು ವ್ಯವಸ್ಥಿತ ರೀತಿಯಲ್ಲಿ ಎದುರಿಸಬಲ್ಲರು.

·         ವಿಮರ್ಶಾತ್ಮಕ ರೀತಿಯಲ್ಲಿ ಯೋಚಿಸಿ, ಸಮಸ್ಯೆಗೆ ಉತ್ತಮ ಪರಿಹಾರ ದೊರಕಿಸಿಕೊಡಬಲ್ಲರು.

ಎಡ್ವರ್ಡ್ ಡಿ. ಬೋನೋ ಅವರ “ಆರು ಯೋಚಿಸುವ ಟೋಪಿಗಳು” (ಸಿಕ್ಸ್ ಥಿಂಕಿಂಗ್ ಹ್ಯಾಟ್ಸ್) ಎಂಬ ಮಾದರಿ (ಮಾಡಲ್)ವ್ಯಕ್ತಿಯ ಮತ್ತು ಗುಂಪಿನ ವಿಮರ್ಶಾತ್ಮಕ ಚಿಂತನೆಗೆ ಸಹಕಾರಿಯಾಗಿರುತ್ತದೆ. ಇದರ ಪ್ರಕಾರ ಯೋಚಿಸುವವರು ತಮ್ಮ ಬುದ್ಧಿಯನ್ನು ಶಕ್ತಿಶಾಲಿ ಅಸ್ತ್ರವನ್ನಾಗಿ ಬಳಸಿ, ಗಮನವನ್ನು ಕೇಂದ್ರೀಕರಿಸಿ, ತಕ್ಕ ನಿರ್ಧಾರಕ್ಕೆ ಬರಬಹುದು. ಪ್ರತಿಯೊಂದು ಟೋಪಿಗೂ ಬೇರೆ-ಬೇರೆ ಬಣ್ಣ ಕೊಡಲಾಗಿದ್ದು ಪ್ರತಿಯೊಂದು ಬಣ್ಣ ಒಂದು ನಿರ್ದಿಷ್ಟ ಯೋಚನಾ ಲಹರಿ/ವಾದವನ್ನು ಉತ್ತೇಜಿಸುತ್ತದೆ. ಟೋಪಿ ಬದಲಾಯಿಸಿ ಇನ್ನೊಂದು ರೀತಿಯಲ್ಲಿ ಯೋಚಿಸಿ ಅಥವಾ ಚರ್ಚಿಸಬಹುದು, ಇದರಿಂದ ವಿವಿಧ ಪಾರ್ಶ್ವಗಳ ದರ್ಶನವೂ ಆಗುತ್ತದೆ, ಏಕೆಂದರೆ ಪ್ರತಿಯೊಂದು ವಾದ/ಪಕ್ಷವೂ ಅಷ್ಟೇ ಮಹತ್ವದ್ದಾಗಿರುತ್ತದೆ.

ಬಿಳಿ ಟೋಪಿ:ಇದನ್ನು ಧರಿಸಿ ನೀವು ಇರುವ ಮಾಹಿತಿ/ತಥ್ಯವನ್ನು ಗಮನದಲ್ಲಿಟ್ಟುಕೊಂಡು, ವಿಶ್ಲೇಷಿಸಿ, ಹಿಂದಿನ ಆಗು-ಹೋಗುಗಳನ್ನು ಪರಿಗಣಿಸಿ, ಮಾಹಿತಿಯಲ್ಲಿ ಇರುವ ಕೊರತೆಯನ್ನು ಭರಿಸಿಕೊಂಡು ಅಥವಾ ಅದಕ್ಕೆ ಪರ್ಯಾಯ ಹುಡುಕಿಕೊಂಡು, ಯಾವ ನಿರ್ಧಾರಕ್ಕೆ ಬರಬಹುದು ಎಂದು ಯೋಚಿಸಬಹುದು.

ಕೆಂಪು ಟೋಪಿ:ಇದನ್ನು ಧರಿಸಿ ಸಮಸ್ಯೆಗಳತ್ತ ನಿಮ್ಮ ಒಳಗಿನ ಅನಿಸಿಕೆ, ಭಾವನೆಗಳನ್ನು ಬಳಸಿ ಯೋಚಿಸಿ. ಹಾಗೇ ಇತರರು ಹೇಗೆ ಭಾವನಾತ್ಮಕವಾಗಿ ಮತ್ತು ನಿಮ್ಮ ತರ್ಕದ ಬಗ್ಗೆ ಸರಿಯಾಗಿ ಗೊತ್ತಿಲ್ಲದವರು ಹೇಗೆ ಸ್ಪಂದಿಸಬಹುದು ಎಂಬುದನ್ನು ಯೋಚಿಸಿ.

ನೀಲಿ ಟೋಪಿ:ಇದನ್ನು ಧರಿಸಿ ನೀವು ಪ್ರಕ್ರಿಯೆಯಲ್ಲಿರುವ ನಿಯಂತ್ರಣದಿಂದ ಹತೋಟಿಯ ಕೆಲಸ ಮಾಡಬಹುದು. ಯೋಚನೆ ತಂಡದ ಮುಖ್ಯಸ್ಥ ಇದನ್ನು ಬಳಸಿ ಹೊಸ ಯೋಚನೆಗೆ ಕರೆ ನೀಡಬಹುದು ಅಥವಾ ಯೋಚನೆಗಳು ದಾರಿ ತಪ್ಪಿ ಹೋಗುವುದನ್ನು ತಡೆಯಬಹುದು.

ಹಸಿರು ಟೋಪಿ:ಇದನ್ನು ಧರಿಸಿ ನೀವು ಸೃಜನಶೀಲತೆಯಿಂದ ಯೋಚಿಸಬಹುದು. ಇದರಿಂದ ನೀವು ಹೊಸ ಅಥವಾ ಹಳೆಯ ಸಮಸ್ಯೆಗೆ ಹೊಸ ರೀತಿಯ ಪರಿಹಾರ ಕಂಡು ಹಿಡಿಯಬಹುದು. ಇದು ಮುಕ್ತ ಯೋಚನೆಗೆ ಸಹಕಾರಿಯಾಗಿದ್ದು, ಇದರ ಬಗ್ಗೆ ಹೆಚ್ಚಿನ ವಿವಾದ ಇರುವುದಿಲ್ಲ.

ಹಳದಿ ಟೋಪಿ:ಇದನ್ನು ಧರಿಸಿ ನೀವು ಧನಾತ್ಮಕವಾಗಿ ಯೋಚಿಸಬಹುದು. ಇದು ಸಕರಾತ್ಮಕ ದೃಷ್ಟಿಕೋಣವಾಗಿರುವುದರಿಂಡ ಎಲ್ಲಾ ವಿಧವಾದ ಪ್ರಯೋಜನ ಮತ್ತು ಲಾಭಗಳ ಬಗ್ಗೆ ಯೋಚಿಸಬಹುದು. ಇದು ನಿಮ್ಮನ್ನು ಕಷ್ಟಕಾಲದಲ್ಲೂ ಮುಂದೆ ಹೋಗಲು ಪ್ರೇರೇಪಿಸುತ್ತದೆ.

ಕರಿ ಟೋಪಿ:ಇದನ್ನು ಧರಿಸಿ ನಿರ್ಧಾರದ ಬಗ್ಗೆ ಜಾಗೃತೆಯಿಂದ ಮತ್ತು ರಕ್ಷಣೆಯ ದೃಷ್ಟಿಯಿಂದ ಎಲ್ಲಾ ಋಣಾತ್ಮಕ ಪರಿಣಾಮ, ಅನಿಸಿಕೆಗಳ ಬಗ್ಗೆ ಯೋಚಿಸಿ. ಯಾವುದು ನಡೆಯಲಾರದು ಎಂದು ಯೋಚಿಸಿ ಅದರಲ್ಲಿರುವ ಋಣಾತ್ಮಕ ಅಂಶಗಳನ್ನು ಗುರುತಿಸಿ. ಇದರಿಂದ ಅವುಗಳನ್ನು ಬದಲಾಯಿಸಲು, ಹೋಗಲಾಡಿಸಲು ಅಥವಾ ಎದುರಿಸಲು ಪರ್ಯಾಯ ಮಾರ್ಗ ಹುಡುಕಲು ನೆರವಾಗುತ್ತದೆ. ಕರಿ ಟೋಪಿ ನಿಮ್ಮ ಕೆಲಸವನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ ಆದರೆ ಬಿದ್ದಲ್ಲಿ ಏಳುವುದಕ್ಕೆ ಸಹಕಾರಿಯಾಗಿರುತ್ತದೆ. ಇದು ನಿಮ್ಮ ಯೋಜನೆಯ ಅತ್ಯಂತ ಮಹತ್ವದ ಟೋಪಿ ಏಕೆಂದರೆ ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವವರು ರಸ್ತೆಯ ಅಡೆತಡೆಗಳನ್ನು ನಿರ್ಲಕ್ಷಿಸಿರುತ್ತಾರೆ ಮತ್ತು ಅದಕ್ಕೆ ತಯಾರಿ ನಡೆಸಿರುವುದಿಲ್ಲ.

ವಿಮರ್ಶಾತ್ಮಕ ಚಿಂತನೆ ಪ್ರಾರಂಭಿಸಲು ಒಂದು ಸರಳ ವಿಧಾನ ಪ್ರಯೋಗಿಸಿ ನೋಡಿ:

ಯಾರಾದರೂ ನಿಮಗೆ ಇತ್ತೀಚೆಗೆ ಹೇಳಿದ ಮಾಹಿತಿ/ಹೇಳಿಕೆ ನೆನಪಿಸಿಕೊಳ್ಳಿ. ನಂತರ ಕೆಳಗಿನ ಪ್ರಶ್ನೆ ಸಾಲಾಗಿ ಕೇಳಿ ಮತ್ತು ಉತ್ತರಿಸಿಕೊಳ್ಳಿ.

ಯಾರು ಹೇಳಿದರು?
ನಿಮಗೆ ಅವರು ತಿಳಿದವರೇ? ಅಧಿಕಾರಯುಕ್ತ ಸ್ಥಾನದಲ್ಲಿ ಇರುವವರೇ? ಯಾರು ಹೇಳಿದರು ಎಂಬುದು ಮಹತ್ವವೇ?

ಏನು ಹೇಳಿದರು?
ಅವರು ನಿಮಗೆ ತಥ್ಯಗಳನ್ನು ಅಥವಾ ಅಭಿಪ್ರಾಯವನ್ನು ತಿಳಿಸಿದರೇ? ಎಲ್ಲಾ ವಿಷಯಗಳನ್ನು ತಿಳಿಸಿದರೋ ಥವಾ ಕೆಲವನ್ನು ತಿಳಿಸದೇ ಬಿಟ್ಟರೇ?

ಎಲ್ಲಿ ಹೇಳಿದರು?
ಸಾರ್ವಜನಿಕವಾಗಿಯೋ ಅಥವಾ ಖಾಸಗಿಯಾಗಿಯೋ? ಇತರರು ಅದಕ್ಕೆ ಪ್ರತಿಕ್ರಯಿಸಲು ಅಥವಾ ಬೇರೆ ಕಡೆಯ ಚಿತ್ರಣ ನೀಡಲು ಅವಕಾಶವಿತ್ತೇ?

ಯಾವಾಗ ಹೇಳಿದರು?
ಯಾವುದೇ ಒಂದು ಮುಖ್ಯ ಸಂದರ್ಭದ ಮುಂಚೆಯೋ, ಮಧ್ಯದಲ್ಲಿಯೋ ಅಥವಾ ನಂತರವೋ? ಸಮಯ ವಿಷಯಕ್ಕೆ ಅಷ್ಟು ಮಹತ್ವವೇ?

ಯಾಕೆ ಹೇಳಿದರು?
ಅವರ ಅಭಿಪ್ರಾಯ ನೀಡುವುದಕ್ಕೆ ಕಾರಣ ತಿಳಿಸಿದರೇ? ಇನ್ಯಾರನ್ನಾದರೂ ಚೆನ್ನಾಗಿ ಅಥವಾ ಕೆಟ್ಟದಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದರೇ?

ಹೇಗೆ ಹೇಳಿದರು?
ಹೇಳುವಾಗ ಅವರು ಸಂತೋಷದಿಂದ ಅಥವಾ ದುಃಖದಲ್ಲಿ ಅಥವಾ ಕೋಪದಲ್ಲಿ ಅಥವಾ ಅನ್ಯಮನಸ್ಕರಾಗಿ ಇದ್ದರೇ? ಅವರು ಹೇಳಿದ್ದು ನಿಮಗೆ ಅರ್ಥವಾಯಿತೇ?

ಈ ಪ್ರಶ್ನೋತ್ತರಗಳ ನಂತರ ನಿಮಗೆ ವಿಮರ್ಶಾತ್ಮಕ ಚಿಂತನೆ ಏನು, ಹೇಗೆ ಎನ್ನುವುದು ಸಂಪೂರ್ಣ ಮನವರಿಕೆಯಾಗಿರಬಹುದು ಎಂದು ತಿಳಿದಿದ್ದೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...