ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಸ್ಥಳೀಯ ಬಿಜೆಪಿ ನಾಯಕರ ನೇತೃತ್ವದ ಗುಂಪು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದಿದೆ. ಘಟನೆಯ ನಂತರ ಬಿಜೆಪಿ ಜಿಲ್ಲಾಧ್ಯಕ್ಷ ಸೇರಿದಂತೆ ಸುಮಾರು 400ರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಘಟನೆಯು ಸೋಮವಾರ ರಾತ್ರಿ ನಡೆದಿದ್ದು, ಕಾಸ್‌ಗಂಜ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿರುವ ಭೂದೇವ್ ಅವರು ಗ್ರಾಮ ಪ್ರಧಾನ್ ಮೂಲಕ ರೈತರೊಬ್ಬರಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಇದನ್ನು ವಿರೋಧಿಸಿ ಭಾರತೀಯ ಕಿಸಾನ್ ಯೂನಿಯನ್ (ಸ್ವರಾಜ್) ರೈತ ಸಂಘದ ಕಾರ್ಯಕರ್ತರು ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾಗ ಕೆಲವು ಹೊರಗಿನ ಜನರು ಅಲ್ಲಿಗೆ ಬಂದಿದ್ದು, ನಂತರ ಘರ್ಷಣೆ ಉಂಟಾಗಿದೆ ಎಂದು ಪೊಲೀಸ್ ಉಪ ಮಹಾನಿರೀಕ್ಷಕ ದೀಪಕ್ ಕುಮಾರ್ ಮಂಗಳವಾರ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಘಟನೆಯನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, ರೈತರು ರಕ್ತದಲ್ಲಿ ಮುಳುಗಿರುವ ದೃಶ್ಯಗಳು ಮತ್ತು ಚಿತ್ರಗಳು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ‘ಶ್ರಮಜೀವಿಗಳು, ವೈರಾಗ್ಯ ಮತ್ತು ಮತಧರ್ಮ’: ‘ಜರ್ಮನ್ ರೈತ ಯುದ್ಧ’ ಪುಸ್ತಕದ ಆಯ್ದ ಭಾಗ
“ಆಸ್ಪತ್ರೆಗೆ ಕನಿಷ್ಠ 47 ಗಾಯಗೊಂಡ ಜನರು ದಾಖಲಾಗಿದ್ದಾರೆ” ಎಂದು ಕಾಸ್ಗಂಜ್‌ನ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಎಪಿ ಕಿಶೋರ್ ಹೇಳಿದ್ದಾರೆ. ಗಾಯಗೊಂಡ ಪ್ರಕರಣಗಳ ಸಂಖ್ಯೆ 100 ಕ್ಕಿಂತ ಹೆಚ್ಚು ಎಂದು ರೈತರೊಬ್ಬರು ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
CMO AP Kishore said, “Medical examination of 47 people was conducted in presence of senior administration and police officials. Sixteen of them had grievous injuries and were referred to a high medical centre in Aligarh.” pic.twitter.com/qvj0ejwwDj
— Deepak-Lavania (@dklavaniaTOI) September 28, 2022
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಪಿ. ಸಿಂಗ್ ಮತ್ತು ಪಕ್ಷದ ಕಿಸಾನ್ ಮೋರ್ಚಾ ಜಿಲ್ಲಾ ಮುಖ್ಯಸ್ಥ ದೇವೇಂದ್ರ ಸಿಂಗ್ ಲೋಧಿ ನೇತೃತ್ವದ ಜನರ ಗುಂಪು ಪೊಲೀಸ್ ಠಾಣೆಯೊಳಗೆ ರೈತರ ಮೇಲೆ ಲಾಠಿ ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಬಿಕೆಯು (ಸ್ವರಾಜ್) ರಾಷ್ಟ್ರೀಯ ಅಧ್ಯಕ್ಷ ಕುಲದೀಪ್ ಪಾಂಡೆ ಹೇಳಿದ್ದಾರೆ.
“100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸುಮಾರು 40 ರೈತರಿಗೆ ತಲೆಗೆ ಗಾಯಗಳು ಉಂಟಾಗಿವೆ. ಕೆಲವರು ಕಾಸ್ಗಂಜ್‌ನಲ್ಲಿ ಚಿಕಿತ್ಸೆ ಪಡೆದಿದ್ದು, ಇತರರನ್ನು ಅಲಿಗಢಕ್ಕೆ ಕಳುಹಿಸಲಾಗಿದೆ” ಎಂದು ಕುಲದೀಪ್ ಪಾಂಡೆ ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ: MSP ಸಿಗದುದ್ದಕ್ಕೆ ಮೋದಿ ಕಾರಣ ಎಂಬ ಪತ್ರ ಬರೆದಿಟ್ಟು ಸಾವಿಗೆ ಶರಣಾದ ರೈತ
ಒಟ್ಟು ಮೂರು ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಇದರಲ್ಲಿ 52 ಜನರನ್ನು ಗುರುತಿಸಲಾಗಿದ್ದು, 150 ಅಪರಿಚಿತ ರೈತರನ್ನು ಹೆಸರಿಸಲಾಗಿದೆ.
ಮತ್ತೊಂದು ಎಫ್‌ಐಆರ್ ಅನ್ನು ಬಿಜೆಪಿ ನಾಯಕ ಲೋಧಿ ಅವರು ಯೂನಿಯನ್ ಮುಖಂಡರು ಮತ್ತು 50 ಅಪರಿಚಿತರ ವಿರುದ್ಧ ದಾಖಲಿಸಿದ್ದಾರೆ. ಬಿಜೆಪಿಯ ಕೆ.ಪಿ. ಸಿಂಗ್, ಲೋಧಿ ಮತ್ತು ಇತರ 150 ಜನರ ವಿರುದ್ಧ ಬಿಕೆಯು (ಸ್ವರಾಜ್) ದೂರಿನ ಮೇರೆಗೆ ಕೂಡಾ ಎಫ್‌ಐಆರ್ ದಾಖಲಾಗಿದೆ.
ಬಿಕೆಯು (ಸ್ವರಾಜ್ಯ) ಮುಖಂಡ ಸುಜೀತ್ ಸತ್ಯದರ್ಶಿ ಮಾತನಾಡಿ, “ರೈತರ ಮೇಲಿನ ಹಲ್ಲೆ ಪೂರ್ವ ಯೋಜಿತವಾಗಿತ್ತು. ಬೆಳಗ್ಗೆಯಿಂದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದೆವು. ಸಂಜೆ ವೇಳೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ನಂತರ ಬಿಜೆಪಿ ಸದಸ್ಯರು ಪೊಲೀಸ್ ಠಾಣೆ ಮತ್ತು ನಮ್ಮ ಮೇಲೆ ದಾಳಿ ನಡೆಸಿದರು” ಎಂದು ಹೇಳಿದ್ದಾರೆ.
"A group of people led by BJP district president KP Singh and party's kisan morcha district head Devendra Singh Lodhi attacked the farmers inside the police station with sticks and rods". pic.twitter.com/HZDWMBZ7Zl
— Deepak-Lavania (@dklavaniaTOI) September 28, 2022
ಇದನ್ನೂ ಓದಿ: ಭರವಸೆಯಲ್ಲೇ ಉಳಿದ ‘ರೈತಮಿತ್ರ’ ನೇಮಕಾತಿ; ಕೃಷಿ ವಿದ್ಯಾರ್ಥಿಗಳ ಪ್ರತಿಭಟನೆ
“ಅಷ್ಟೆಲ್ಲೆ, ಪೊಲೀಸರು ನಮ್ಮ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಲಾಠಿಚಾರ್ಜ್ ಮಾಡಿದರು. ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯ ಪೊಲೀಸರೊಂದಿಗೆ ಸೇರಿ ಪ್ರತಿಭಟನಾ ಸ್ಥಳದ ಬಳಿಯ ರಸ್ತೆಯಲ್ಲಿ ರೈತರ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಸುಜೀತ್ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಕಾಸ್‌ಗಂಜ್ ಎಸ್‌ಪಿ ಬಿಬಿಜಿಟಿಎಸ್ ಮೂರ್ತಿ,‘‘ರೈತ ಸಂಘಕ್ಕೆ ಸಂಬಂಧಿಸಿದವರು ಪೊಲೀಸ್ ಠಾಣೆಯಲ್ಲೇ ಪ್ರತಿಭಟನೆ ನಡೆಸುತ್ತಿದ್ದರು. ಹಲವು ಬಾರಿ ಮನವೊಲಿಸಲು ಯತ್ನಿಸಿದರೂ ಪ್ರತಿಭಟನೆ ಕೈಬಿಡಲಿಲ್ಲ. ಸಂಜೆ ವೇಳೆಗೆ ಅವರು ಸ್ಥಳೀಯ ನಿವಾಸಿಗಳ ಗುಂಪಿನೊಂದಿಗೆ ವಾಗ್ವಾದ ನಡೆಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಪರಸ್ಪರ ಹಲ್ಲೆ ನಡೆಸುತ್ತಿರುವ ಜನರ ಮೇಲೆ ಲಾಠಿ ಚಾರ್ಜ್ ಮಾಡಬೇಕಾಯಿತು. ಸಂಪೂರ್ಣ ವಿಷಯವನ್ನು ವಿವರವಾಗಿ ತನಿಖೆ ನಡೆಸಲಾಗುತ್ತಿದೆ. ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ” ಎಂದು ಹೇಳಿದ್ದಾರೆ.
“ಹಿರಿಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ 47 ಜನರ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಅವರಲ್ಲಿ ಹದಿನಾರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಅಲಿಘರ್‌ನಲ್ಲಿರುವ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಕಳುಹಿಸಲಾಗಿದೆ” ಎಂದು ಸಿಎಂಒ ಕಿಶೋರ್ ತಿಳಿಸಿದ್ದಾರೆ.
ಇದನ್ನೂ ಓದಿ: ನಿರುದ್ಯೋಗದ ವಿರುದ್ಧ ಬೀದಿಗಿಳಿಯುತ್ತಿರುವ ರೈತರು: ದೆಹಲಿಯೆಲ್ಲೆಡೆ ಬಿಗಿ ಬಂದೋಬಸ್ತ್
“ರೈತ ಸಂಘದ ಕುಲದೀಪ್ ಪಾಂಡೆ ಅವರು ನಕಲಿ ರೈತ ಸಂಘವನ್ನು ನಡೆಸುತ್ತಿದ್ದಾರೆ. ಬಿಜೆಪಿ ಪಕ್ಷದ ಕಾರ್ಯಕರ್ತರ ವಿರುದ್ಧ ಅವರು ಮಾಡಿರುವ ಆರೋಪಗಳು ತಪ್ಪು” ಎಂದು ಬಿಜೆಪಿ ನಾಯಕ ಕೆ.ಪಿ. ಸಿಂಗ್ ಹೇಳಿದ್ದಾರೆ. “ಕುಲದೀಪ್ ವಿರುದ್ಧ 28 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ. ಅವರು ಸುಲಿಗೆಕೋರರಾಗಿದ್ದು, ರೈತರ ಹಿತಾಸಕ್ತಿಯೊಂದಿಗೆ ಯಾವುದೇ ಸಂಬಂಧವಿಲ್ಲ” ಎಂದು ಕಾಸ್‌ಗಂಜ್ ಶಾಸಕ ದೇವೇಂದ್ರ ಸಿಂಗ್ ರಜಪೂತ್ ಹೇಳಿದ್ದಾರೆ.


