Homeಮುಖಪುಟಮಹಾರಾಷ್ಟ್ರ: MSP ಸಿಗದುದ್ದಕ್ಕೆ ಮೋದಿ ಕಾರಣ ಎಂಬ ಪತ್ರ ಬರೆದಿಟ್ಟು ಸಾವಿಗೆ ಶರಣಾದ ರೈತ

ಮಹಾರಾಷ್ಟ್ರ: MSP ಸಿಗದುದ್ದಕ್ಕೆ ಮೋದಿ ಕಾರಣ ಎಂಬ ಪತ್ರ ಬರೆದಿಟ್ಟು ಸಾವಿಗೆ ಶರಣಾದ ರೈತ

- Advertisement -
- Advertisement -

ಈರುಳ್ಳಿ ಬೆಳೆಗೆ ಕನಿಷ್ಟ ಬೆಂಬಲ ಬೆಲೆ (MSP) ಸಿಗದುದ್ದಕ್ಕೆ ನರೇಂದ್ರ ಮೋದಿಯವರ ನಿರ್ಲಕ್ಷ್ಯವೆ ಕಾರಣ. ಹಾಗಾಗಿ ನನ್ನ ಸಾವಿಗೆ ಮೋದಿಯವರೆ ಹೊಣೆ ಎಂದು ಪತ್ರ ಬರೆದಿಟ್ಟು 42 ವರ್ಷದ ರೈತನೊಬ್ಬ ಸಾವಿಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಸಂಭವಿಸಿದೆ.

ದಶರಥ್ ಕೇದಾರಿ ಎಂಬ ರೈತ ಮೊದಲು ಸೋಯಾಬಿನ್ ಮತ್ತು ಟಮ್ಯಾಟೊ ಬೆಳೆದಿದ್ದರು. ಆದರೆ ಮಳೆಯಿಂದಾಗಿ ಬೆಳೆ ನಾಶವಾಗಿ ನಷ್ಟ ಅನುಭವಿಸಿದ್ದರು. ಈ ಭಾರಿ 2 ಲಕ್ಷ ರೂ ಮೌಲ್ಯದ ಈರುಳ್ಳಿ ಬೆಳೆದಿದ್ದರು. ಆದರೆ ಅದಕ್ಕೂ ನಿರೀಕ್ಷಿಸಿದ ಬೆಲೆ ಸಿಗದ ಕಾರಣ ಶನಿವಾರ ಕೀಟನಾಶಕ ಸೇವಿಸಿ, ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಬೆಳೆ ಬೆಳೆಯುವುದಕ್ಕಾಗಿ ಆ ರೈತ ಸಹಕಾರಿ ಸಂಘದಲ್ಲಿ ಸಾಕಷ್ಟು ಸಾಲ ಮಾಡಿದ್ದರು. ಈರುಳ್ಳಿಯಂತಹ ಬೆಲೆಗಳಿಗೆ ಪ್ರಧಾನಿ ಮೋದಿಯವರು MSP ನೀಡಬೇಕು. ಕೃಷಿ ಎಂಬುದು ರೈತರ ಪಾಲಿಗೆ ಜೂಜಾಟವಾಗಿದೆ ಎಂದು ಆತ್ಮಹತ್ಯೆ ಪತ್ರದಲ್ಲಿ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನರೇಂದ್ರ ಮೋದಿಯವರೆ, ನಿಮ್ಮ ನಿಷ್ಕ್ರಿಯತೆಯಿಂದಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ದಯವಿಟ್ಟು ನಮ್ಮ ಪಾಲಿನ ನ್ಯಾಯಯುತ ಬೆಲೆ ನೀಡಿ ಎಂದು ಮರಾಠಿ ಭಾಷೆಯಲ್ಲಿ ಆತ್ಮಹತ್ಯೆ ಪತ್ರ ಬರೆಯಲಾಗಿದೆ. ಅಲ್ಲದೆ ಸಹಿ ಮಾಡಿದ ನಂತರ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಷಯಗಳನ್ನು ತಿಳಿಸಲಾಗಿದೆ.

ಅವರ ಬಟ್ಟೆಯಲ್ಲಿದ್ದ ಆತ್ಮಹತ್ಯೆ ಪತ್ರವನ್ನು ಸಂಬಂಧಿಗಳು ನೀಡಿದ್ದಾರೆ. ಆತ್ಮಹತ್ಯೆ ಪತ್ರದಲ್ಲಿ ಸಮರ್ಪಕ ಬೆಲೆ ನೀಡದಿರುವುದಕ್ಕೆ ರಾಜ್ಯ ಸರ್ಕಾರವನ್ನು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ. ಅದನ್ನು ಕೈಬರಹ ತಜ್ಞರಿಗೆ ಕಳಿಸಿಕೊಡಲಾಗುವುದು ಎಂದು ಪೊಲೀಸ್ ಅಧಿಕಾರಿ ಕ್ಷೀರಸಾಗರ್ ತಿಳಿಸಿದ್ದಾರೆ.

ಮಹಾರಾಷ್ಟ್ರದ ವಸಂತರಾವ್ ನಾಯಕ್ ಶೆಟ್ಟಿ ಸ್ವಾವಲಂಬನ್ ಮಿಷನ್ ಅಧ್ಯಕ್ಷ ಮತ್ತು ಶಿವಸೇನೆಯ ವಕ್ತಾರ ಕಿಶೋರ್ ತಿವಾರಿ ಅವರು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಯಲು ಮತ್ತು ಪುಣೆಯ ಮೃತ ರೈತ ದಶರಥ್ ಕೇದಾರಿ ಅವರ ಗ್ರಾಮಕ್ಕೆ ಭೇಟಿ ನೀಡಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.

“ಮಹಾರಾಷ್ಟ್ರದಾದ್ಯಂತ ಕೃಷಿ ಬಿಕ್ಕಟ್ಟು, ಸಂಕಷ್ಟ ಮತ್ತು ಖಿನ್ನತೆಯನ್ನು ನಿಭಾಯಿಸುವಲ್ಲಿ ಸರ್ಕಾರದ ನೀತಿಗಳು ವಿಫಲವಾಗಿವೆ. ಈಗ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಯಲು ಕೇಂದ್ರ ಸರ್ಕಾರದಿಂದ ತುರ್ತು ಕ್ರಮಗಳ ಅಗತ್ಯವಿದೆ” ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಸಚಿವನ ವಜಾಕ್ಕೆ ಆಗ್ರಹಿಸಿ 75 ಗಂಟೆಗಳ ಧರಣಿ ಆರಂಭ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...