Homeಮುಖಪುಟ‘ಶ್ರಮಜೀವಿಗಳು, ವೈರಾಗ್ಯ ಮತ್ತು ಮತಧರ್ಮ’: ‘ಜರ್ಮನ್ ರೈತ ಯುದ್ಧ’ ಪುಸ್ತಕದ ಆಯ್ದ ಭಾಗ

‘ಶ್ರಮಜೀವಿಗಳು, ವೈರಾಗ್ಯ ಮತ್ತು ಮತಧರ್ಮ’: ‘ಜರ್ಮನ್ ರೈತ ಯುದ್ಧ’ ಪುಸ್ತಕದ ಆಯ್ದ ಭಾಗ

- Advertisement -
- Advertisement -

ಕ್ರಿಯಾ ಮಾಧ್ಯಮ ಮತ್ತು ನವಕರ್ನಾಟಕ ಜಂಟಿಯಾಗಿ ಹಮ್ಮಿಕೊಂಡಿರುವ ‘ಏಂಗೆಲ್ಸ್-200 ಮಾಲಿಕೆ’ಯ ಲೇಖಕ ನಾ. ದಿವಾಕರ ಅವರು ಅನುವಾದಿಸಿರುವ ‘ಜರ್ಮನ್ ರೈತ ಯುದ್ಧ’ ಪುಸ್ತಕ ಬಿಡುಗಡೆ ಸೆಪ್ಟೆಂಬರ್ 21ರ ಬುಧವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಬಸವನಗುಡಿಯಲ್ಲಿರುವ ‘ಕ್ರಿಯಾ ಮಾಧ್ಯಮ ಪುಸ್ತಕ ಮಳಿಗೆ’ಯಲ್ಲಿ ನಡೆಯಲಿದೆ.

ಈ ಪುಸ್ತಕದ ಆಯ್ದ ಭಾಗ ನಾನುಗೌರಿ.ಕಾಂ ಓದುಗರಿಗಾಗಿ

ಕ್ಯಾಥೊಲಿಕ್ ಪಂಥದ ಧಾರ್ಮಿಕ ಅಧಃಪತನ, ಕ್ರಿಸ್ತನ ಮೂಲ ಬೋಧನೆಯಿಂದ ವ್ಯತ್ಯಯಗಳ ವಿರುದ್ಧ ಪ್ರೊಟೆಸ್ಟೆಂಟ್ ಪಂಥದ ಧಾರ್ಮಿಕ ಬಂಡಾಯ ಜರ್ಮನ್ ರೈತ ಯುದ್ಧದೊಂದಿಗೆ ತಳುಕು ಹಾಕಿಕೊಂಡಿತ್ತು. ಇದು ಕ್ಯಾಥೊಲಿಕ್ ಪಂಥ ಆಧಾರಭೂತವಾಗಿದ್ದ ಪಾಳೆಯಗಾರಿ ವ್ಯವಸ್ಥೆಯ ವಿರುದ್ಧ ಸೈದ್ಧಾಂತಿಕ ಸಮರವೂ ಆಗಿತ್ತು. ಪ್ರೊಟೆಸ್ಟೆಂಟ್ ಪಂಥದ ಪ್ರಮುಖ ಪ್ರತಿಪಾದಕರಾಗಿದ್ದ ಲೂಥರ್ ಮತ್ತು ಮುನ್ಸರ್ ನಡುವಿನ ರೈತ ಯುದ್ಧದ ಬಗೆಗಿನ ತೀವ್ರ ಭಿನ್ನಾಭಿಪ್ರಾಯಗಳು ಧರ್ಮಶಾಸ್ತ್ರೀಯ ಆಗಿದ್ದ ಅಲ್ಲದ್ದಷ್ಟೇ ಅಲ್ಲದೆ, ಆಗಿನ ಪಾಳೆಯಗಾರಿ ವ್ಯವಸ್ಥೆ ವಿರುದ್ಧ ಬಂಡೆದ್ದಿದ್ದ ವರ್ಗಗಳ ಭಿನ್ನ ಸೈದ್ಧಾಂತಿಕ ನಿಲುವುಗಳೂ ಆಗಿದ್ದವು.

ಈ ಕೃತಿಯಲ್ಲಿ, ಧಾರ್ಮಿಕ ಪಂಥಗಳು ಮತ್ತು ದುಡಿಯುವ ಜನರ ವಿಮೋಚನೆಯ ಆಶಯದ ಸಂಬಂಧಗಳ ಕುರಿತು ಶ್ರೀಮಂತವಾದ ವಿವರಣೆ ಮತ್ತು ವಿಶ್ಲೇಷಣೆಗಳು ದೊರೆಯುತ್ತವೆ. ರೈತ ಯುದ್ಧದಲ್ಲಿ ಮತ್ತು ಅದಕ್ಕೆ ಪೂರ್ವಭಾವಿ ಭೂಮಿಕೆ ಸಿದ್ಧ ಮಾಡುವುದರಲ್ಲಿ ’ಹಾನ್ಸ್ ದಿ ಪೈಪರ್, ಅನಾಬ್ಯಾಪ್ಟಿಸ್ಟ್, ಚಿಲಿಯಾಲಿಸ್ಟಿಕ್ ಮುಂತಾದ ಧಾರ್ಮಿಕ ಪಂಥಗಳ ಪಾತ್ರದ ಹಲವು ಆಯಾಮಗಳ ಶ್ರೀಮಂತವಾದ ವಿವರಣೆ ಮತ್ತು ವಿಶ್ಲೇಷಣೆಗಳು ಇಲ್ಲಿ ಕಾಣಸಿಗುತ್ತವೆ. ಇಂತಹ ಆಯ್ದ ಭಾಗಗಳು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹಸ್ಸೈಟ್ ಆಂದೋಲನವನ್ನು ಅಡಗಿಸಿ 50 ವರ್ಷಗಳ ನಂತರ ಜರ್ಮನಿಯ ರೈತರಲ್ಲಿ ಕ್ರಾಂತಿಕಾರಿ ಚೈತನ್ಯ ಮತ್ತೊಮ್ಮೆ ಚಿಗುರುತ್ತಿದ್ದ ಮುನ್ಸೂಚನೆ ದೊರೆತಿತ್ತು.

ದುಷ್ಟ ಆಡಳಿತ ವ್ಯವಸ್ಥೆ, ಅಪಾರ ಪ್ರಮಾಣದ ತೆರಿಗೆಗಳು, ಪಾವತಿಗಳು, ಒಳಜಗಳಗಳು, ಶತ್ರುತ್ವ, ಯುದ್ಧ, ಅಗ್ನಿ ಅವಘಡಗಳು, ಕೊಲೆ, ಸುಲಿಗೆ, ಸೆರೆವಾಸ ಹೀಗೆ ಹಲವಾರು ಕಾರಣಗಳಿಂದ ಆ ವೇಳೆಗಾಗಲೇ ಶಿಥಿಲವಾಗಿ ಕ್ಷೀಣಿಸುತ್ತಿದ್ದ ವಾರ್ಜ್‌ಬರ್ಗ್‌ನ ಬಿಷಪ್‌ಗಿರಿಯಲ್ಲಿ 1476ರ ಆರಂಭದ ದಿನಗಳಲ್ಲೇ ರೈತ ದಂಗೆಯ ಪಿತೂರಿಯ ಮೊದಲ ಸೂಚನೆಗಳು ಕಾಣಲಾರಂಭಿಸಿತ್ತು.

ಬಿಷಪ್‌ಗಳಿಂದ, ಪುರೋಹಿತರಿಂದ, ಕುಲೀನರಿಂದ ನಾಚಿಕೆಗೇಡು ರೀತಿಯ ಲೂಟಿಗೊಳಗಾಗಿದ್ದ ಈ ಪ್ರಾಂತ್ಯ ಆ ವೇಳೆಗಾಗಲೇ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಡ್ರಮ್ ಬಾರಿಸುವವನು ಮತ್ತು ’ಹಾನ್ಸ್ ದ ಪೈಪರ್’ ಎಂದೂ ಕರೆಯಲಾಗುತ್ತಿದ್ದ ಓರ್ವ ಯುವ ಕುರಿಗಾಹಿ ಮತ್ತು ಸಂಗೀತಗಾರ, ನಿಕ್ಲಾಸಾನ್ ಪ್ರಾಂತ್ಯದ ಹಾನ್ಸ್ ಬೋಹಿಯಮ್, ಒಬ್ಬ ಪ್ರವಾದಿಯ ರೂಪದಲ್ಲಿ ಹಠಾತ್ತನೆ ಟಾಬರ್‌ಗ್ರಂಡ್‌ನಲ್ಲಿ ಕಾಣಿಸಿಕೊಂಡಿದ್ದ. ತನ್ನ ಕನಸಿನಲ್ಲಿ ವರ್ಜಿನ್ (ಕನ್ಯೆ ಮೇರಿ) ಕಾಣಿಸಿಕೊಂಡಿದ್ದಳೆಂದೂ, ತನ್ನ ಡ್ರಮ್ ಸುಟ್ಟುಹಾಕಲು ಹೇಳಿದ್ದಳೆಂದೂ ಹೇಳುತ್ತಿದ್ದ. ಈತ, ವರ್ಜಿನ್ ತನಗೆ ನೃತ್ಯಗಳಲ್ಲಿ ಡ್ರಮ್ ಬಾರಿಸುವುದನ್ನಾಗಲೀ, ಇಂದ್ರಿಯಗಳನ್ನು ತೃಪ್ತಿಪಡಿಸುವ ಪಾಪದ ಕೆಲಸಗಳನ್ನಾಗಲೀ ಮಾಡಕೂಡದೆಂದೂ, ಜನರನ್ನು ಧ್ಯಾನದಲ್ಲಿ ತೊಡಗುವಂತೆ ಮಾಡಬೇಕೆಂದೂ ಹೇಳಿದ್ದಾಳೆ ಎಂದು ಸಾರ್ವಜನಿಕರ ಎದುರು ಹೇಳಿಕೊಳ್ಳುತ್ತಿದ್ದ. ಆ ಕಾರಣಕ್ಕಾಗಿಯೇ ಎಲ್ಲರೂ ಸಹ ತಮ್ಮ ಪಾಪ ಕೃತ್ಯಗಳನ್ನು ನಿಲ್ಲಿಸಿ, ಲೌಖಿಕ ಸುಖದ ಆಸೆಯನ್ನು ತೊರೆದು, ಎಲ್ಲ ಅಲಂಕಾರ ಆಭರಣಗಳನ್ನೂ ತ್ಯಜಿಸಿ, ನಿಕ್ಲಾಸಾನ್‌ನಲ್ಲಿರುವ ಮಡೋನಾಗೆ ತೀರ್ಥಯಾತ್ರೆ ಹೋಗುವ ಮೂಲಕ ಪ್ರಾಯಶ್ಚಿತ್ತ ಮಾಡುವಂತೆಯೂ ಉಪದೇಶಿಸಲಾರಂಭಿಸಿದ್ದ.

ಧರ್ಮದೊಡನೆ ಥಳಕು ಹಾಕಿಕೊಂಡ ಎಲ್ಲ ಮಧ್ಯಕಾಲೀನ ಬಂಡಾಯಗಳಲ್ಲೂ ಹಾಗೂ ಆಧುನಿಕ ಕಾಲಘಟ್ಟದ ಶ್ರಮಜೀವಿಗಳ ಎಲ್ಲ ಆಂದೋಲನಗಳ ಆರಂಭಿಕ ಹಂತದಲ್ಲೂ ಕಂಡುಬರುವಂತಹ ವೈರಾಗ್ಯದ ಧೋರಣೆ ಈ ಚಳುವಳಿಯ ಪೂರ್ವಸೂಚಕ ಬೆಳವಣಿಗೆಗಳಲ್ಲೂ ಕಾಣಬಹುದಿತ್ತು. ಈ ಸಂಯಮಪೂರ್ಣ ವರ್ತನೆ, ಜೀವನದ ಎಲ್ಲ ಸುಖಭೋಗಗಳನ್ನೂ ತ್ಯಜಿಸುವ ಒತ್ತಡ, ಆಳುವ ವರ್ಗಗಳ ನೀತಿಗಳಿಗೆ ವ್ಯತಿರಿಕ್ತವಾಗಿದ್ದ ಸಮಾನತೆಯ ಸರಳಜೀವನದ ನೀತಿಗಳಿಗೆ ಅನುಗುಣವಾಗಿತ್ತು. ಆದಾಗ್ಯೂ, ಇದೊಂದು ಸಂಕ್ರಮಣದ ಘಟ್ಟವಾಗಿತ್ತು. ಸಮಾಜದ ಕೆಳಸ್ತರದ ಜನರು ಒಂದು ಚಳುವಳಿಯನ್ನು ಆರಂಭಿಸಲು ಇದು ಅವಶ್ಯವೂ ಆಗಿತ್ತು. ಕ್ರಾಂತಿಕಾರಿ ಚೈತನ್ಯವನ್ನು ಹೆಚ್ಚಿಸಲು, ಸಮಾಜದ ಇತರ ಎಲ್ಲ ವರ್ಗಗಳಿಗೆ ಹೋಲಿಸಿದರೆ ತಮ್ಮ ಸ್ಥಾನಮಾನಗಳಲ್ಲಿದ್ದ ವ್ಯತ್ಯಯಗಳ ಬಗ್ಗೆ ಪ್ರಜ್ಞೆ ಮೂಡಿಸಲು, ಒಂದು ವರ್ಗವಾಗಿ ಕೇಂದ್ರೀಕೃತವಾಗಲು, ಕೆಳಸ್ತರದ ಸಮಾಜವು, ಪ್ರಚಲಿತ ಸಾಮಾಜಿಕ ವ್ಯವಸ್ಥೆಯೊಡನೆ ರಾಜಿಯಾಗುವ ಎಲ್ಲ ಅಂಶಗಳಿಂದಲೂ ಮುಕ್ತವಾಗುವುದು ಅತ್ಯವಶ್ಯವಾಗಿತ್ತು. ಅತ್ಯಂತ ಹೆಚ್ಚಿನ ಒತ್ತಡಗಳೂ ಅವಕಾಶ ವಂಚಿತರಾಗಿಸದ ಮಟ್ಟಕ್ಕೆ ತಮ್ಮ ದಾಸ್ಯ ಪರಿಸ್ಥಿತಿಯನ್ನು ಗರಿಷ್ಠವಾಗಿ ಅಸಹನೀಯವಾಗಿಸಲು, ಈ ಕೆಳಸ್ತರದ ಜನತೆ ತಮ್ಮ ಎಲ್ಲ ಸುಖಭೋಗಗಳನ್ನೂ ವರ್ಜಿಸುವುದು ಅನಿವಾರ್ಯವಾಗಿತ್ತು.

ಜನಸಾಮಾನ್ಯರ ಮತ್ತು ಶ್ರಮಜೀವಿಗಳ ವೈರಾಗ್ಯಕ್ಕೂ ಹಾಗೂ ಲೂಥರ್ ಬೋಧಿಸಿದ ಮಧ್ಯಮ ವರ್ಗಿಯ ನೈತಿಕತೆ ಮತ್ತು ಆಂಗ್ಲರ ನಿಷ್ಠುರ ನಿಯಮಿ (ಪ್ಯೂರಿಟನ್-ಇವರನ್ನು ಇನ್ನೂ ಮುಂದುವರೆದ ಸ್ವತಂತ್ರ ಬೋಧಕರ ಪಂಥದಿಂದ ಭಿನ್ನವಾಗಿ ಕಾಣಬೇಕು) ಮಧ್ಯಮ-ವರ್ಗೀಯ ವೈರಾಗ್ಯಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಇವೆರಡರ ನಡುವೆ ಆರಾಧನಾ ಮನೋಭಾವದಲ್ಲಿ ರೂಪುಗೊಳ್ಳುವ ಸ್ವರೂಪ ಮತ್ತು ವಸ್ತು ಸಹ ಭಿನ್ನವಾಗಿರುತ್ತದೆ. ಮಧ್ಯಮ-ವರ್ಗೀಯ ಮಿತವ್ಯಯವು ಮಧ್ಯಮ-ವರ್ಗೀಯ ವೈರಾಗ್ಯದ ಗುಟ್ಟು. ಆಧುನಿಕ ಉತ್ಪಾದಕ ಶಕ್ತಿಗಳು ಅಭಿವೃದ್ಧಿ ಹೊಂದಿದ ನಂತರದಲ್ಲಿ ಹೆಚ್ಚಿನ ವಸ್ತುಗಳನ್ನು ಉತ್ಪಾದಿಸತೊಡಗಿದಂತೆಲ್ಲಾ ಶ್ರಮಜೀವಿಗಳ ಮತ್ತು ಜನಸಾಮಾನ್ಯರ ವಿರಕ್ತ ಭಾವನೆ ತನ್ನ ಕ್ರಾಂತಿಕಾರಿ ಲಕ್ಷಣಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಆಗ ನಿಷ್ಠುರ ದೇಶಭಕ್ತಿಯ ಕಷ್ಟ ಸಹಿಷ್ಣುತೆಯೊಂದಿಗಿನ ಸಮಾನತೆಯ ಭಾವನೆಗಳು ಅತಿರೇಕ ಎನಿಸಿಬಿಡುತ್ತದೆ. ಮತ್ತೊಂದೆಡೆ ಸಮಾಜದಲ್ಲಿ ಶ್ರಮಜೀವಿಗಳ ಪಾತ್ರ ಮತ್ತು ಸ್ವತಃ ಶ್ರಮಜೀವಿಗಳೇ ಹೆಚ್ಚು ಕ್ರಾಂತಿಕಾರಿಗಳಾಗಿ ಪರಿಣಮಿಸುತ್ತಾರೆ. ಕ್ರಮೇಣ, ಜನಸಾಮಾನ್ಯರಲ್ಲಿ ವಿರಕ್ತ ಭಾವನೆ ಕ್ಷೀಣಿಸುತ್ತಾ ಹೋಗುತ್ತದೆ. ವಿರಕ್ತ ಭಾವನೆಗಳು ಇನ್ನೂ ಉಳಿದುಕೊಂಡಿರುವ ಪಂಥಗಳಲ್ಲಿ ಅದು ಬಂಡವಾಳಿಗ ಲೋಭಿತನಕ್ಕೆ ಎಡೆಮಾಡಿಕೊಡುತ್ತದೆ. ಅಥವಾ ಉಚ್ಚಮಟ್ಟದ ಸಾಧ್ವಿಕ ಮನೋಭಾವದಲ್ಲಿ ಪರ್ಯವಸಾನ ಹೊಂದುತ್ತದೆ. ಇದು ಸಹಜವಾಗಿಯೇ ಲೌಕಿಕಾಸಕ್ತಿಯ ಲೋಭಿತನದತ್ತ ಕೊಂಡೊಯ್ಯುತ್ತದೆ. ಮೇಲಾಗಿ ಶ್ರಮಜೀವಿಗಳಿಗೆ ವರ್ಜಿಸಲು ಅಥವಾ ತ್ಯಾಗ ಮಾಡಲು ಏನೂ ಇರುವುದಿಲ್ಲವಾದ್ದರಿಂದ ಈ ತ್ಯಾಗ ಮನೋಭಾವವನ್ನು ಅವರಿಗೆ ಬೋಧಿಸುವುದು ವ್ಯರ್ಥವಾಗುತ್ತದೆ.

‘ಹಾನ್ಸ್ ದ ಪೈಪರ್’ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನೀಡಿದ್ದ ಕರೆ ಹೆಚ್ಚಿನ ಜನರ ಸ್ಪಂದನೆ ಪಡೆದಿತ್ತು. ಬಂಡಾಯವನ್ನು ಬೋಧಿಸಿದ ಎಲ್ಲ ಬೋಧಕರೂ ಪಾಪಗಳ ವಿರುದ್ಧ ಕರೆ ನೀಡುತ್ತಲೇ ಆರಂಭಿಸಿದ್ದರು ಏಕೆಂದರೆ ಬಿರುಸಾದ ಪರಿಶ್ರಮ ಮತ್ತು ನಿತ್ಯ ಬದುಕಿನ ಎಲ್ಲ ಹವ್ಯಾಸಗಳನ್ನೂ ಒಮ್ಮೆಲೆ ವರ್ಜಿಸುವ ಮೂಲಕ ಮಾತ್ರವೇ ಅನೈಕ್ಯತೆಯಿಂದ ಕೂಡಿರುತ್ತಿದ್ದ, ಅಂಧ ಅನುಕರಣೆಯಲ್ಲೇ ಬೆಳೆದು ಬಂದಿದ್ದ ಚದುರಿಹೋಗಿದ್ದ ರೈತ ಸಮುದಾಯವನ್ನು ಒಗ್ಗಟ್ಟಾಗಿಸಲು ಸಾಧ್ಯವಾಗುತ್ತಿತ್ತು. ನಿಕ್ಲಾಸಾನ್‌ಗೆ ತೀರ್ಥಯಾತ್ರೆ ಹೋಗುವವರ ಸಂಖ್ಯೆ ಅಪಾರ ಸಂಖ್ಯೆಯಲ್ಲಿ ಬೆಳೆಯಿತು. ಈ ಮೆರವಣಿಗೆಯಲ್ಲಿ ಸೇರ್ಪಡೆಯಾದ ಜನರ ಸಂಖ್ಯೆ ಹೆಚ್ಚಾಗುತ್ತಲೇ ಹೋದಂತೆಲ್ಲಾ ಈ ಯುವ ಬಂಡಾಯಗಾರನು ತನ್ನ ಯೋಜನೆಗಳನ್ನು ಅನಾವರಣ ಗೊಳಿಸಲಾರಂಭಿಸಿದ್ದ. ಇನ್ನು ಮುಂದೆ ದೊರೆಗಳಾಗಲೀ, ಕುಲೀನರಾಗಲೀ ಇರಕೂಡದು ಎಂದು ನಿಕ್ಲಾಸಾನ್‌ನ ಮಡೋನ್ನಾ ತನಗೆ ಹೇಳಿದ್ದಾನೆಳೆಂದೂ, ಸಾಮ್ರಾಟನಾಗಲೀ, ರಾಜರಾಗಲೀ, ಪೋಪ್ ಆಗಲೀ, ಚರ್ಚ್ ಅಥವಾ ಇತರ ಅಧಿಕಾರ ಪೀಠಗಳಾಗಲೀ ಇರಕೂಡದು ಎಂದು ಭಗವಂತನು ಆಜ್ಞಾಪಿಸಿರುವನೆಂದೂ ಹೇಳುತ್ತಿದ್ದ. ಪ್ರತಿಯೊಬ್ಬರೂ ಪರಸ್ಪರ ಸೋದರರಂತೆಯೇ ಇರಬೇಕು, ತನ್ನದೇ ಶ್ರಮದಿಂದ ತನ್ನ ಅನ್ನ ಸಂಪಾದಿಸಬೇಕು, ತನ್ನ ನೆರೆಯವನಿಗಿಂತಲೂ ಹೆಚ್ಚಿನ ಸಂಪತ್ತನ್ನು ಹೊಂದಿರಬಾರದು ಎಂದು ಪೈಪರ್ ಬೋಧಿಸುತ್ತಿದ್ದ. ಎಲ್ಲ ತೆರಿಗೆಗಳು, ಭೂಮಿಯ ಬಾಡಿಗೆ, ಗೇಣಿ, ಜೀತಗಾರಿಕೆಯ ದುಡಿಮೆ, ಸುಂಕ ಮತ್ತು ಇತರ ಶುಲ್ಕಗಳು ಹಾಗೂ ವಿತರಣೆ – ಇವುಗಳನ್ನು ಶಾಶ್ವತವಾಗಿ ರದ್ದುಪಡಿಸಬೇಕು, ಎಲ್ಲೆಡೆ ಅರಣ್ಯ, ಜಲಸಂಪತ್ತು ಮತ್ತು ಹುಲ್ಲುಗಾವಲುಗಳು ಮುಕ್ತವಾಗಿರಬೇಕು ಎಂದು ಬೋಧಿಸುತ್ತಿದ್ದ.

ಈ ಹೊಸ ದೈವವಾಣಿಯನ್ನು ಜನರು ಸಂತೋಷದಿಂದ ಸ್ವೀಕರಿಸಿದರು. ಪ್ರವಾದಿಯ ಕೀರ್ತಿ ಮತ್ತು ‘ನಮ್ಮ ಮಾತೆಯ ಸಂದೇಶ’ ಎಲ್ಲೆಡೆ ಹರಡಿತ್ತು, ದೂರದ ಮೂಲೆಗಳಿಗೂ ತಲುಪಿತ್ತು. ಓಡನ್‌ವಾಲ್ಡ್, ಮೇನ್, ಕೋಚರ್, ಜಾಕ್ಸ್ಟ್, ಬವಾರಿಯಾ, ಸ್ವೇಬಿಯಾ ಮತ್ತು ರ್‍ಹೈನ್ ಪ್ರಾಂತ್ಯಗಳಿಂದಲೂ ಯಾತ್ರಾರ್ಥಿಗಳು ಬರಲಾರಂಭಿಸಿದ್ದರು. ಪೈಪರ್ ಹಲವಾರು ಪವಾಡಗಳನ್ನು ಮಾಡುತ್ತಿದ್ದಾನೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು. ಪ್ರವಾದಿಯ ಮುಂದೆ ಜನರು ಮಂಡಿಯೂರಿ ಶರಣಾಗತೊಡಗಿದ್ದರು. ಸಂತನ ಬಳಿ ಪ್ರಾರ್ಥಿಸುವಂತೆ ಪ್ರಾರ್ಥಿಸಲಾರಂಭಿಸಿದರು. ಅವಶೇಷಗಳಂತೆ ಕಾಪಾಡಲು ಅವನ ಟೊಪ್ಪಿಗೆಯ ತುಣುಕುಗಳನ್ನು ಪಡೆಯಲಾರಂಭಿಸಿದರು. ಪಾದ್ರಿಗಳು ಅವನ ವಿರುದ್ಧ ಹೋರಾಡಿದ್ದು ವ್ಯರ್ಥವಾಗಿತ್ತು. ಅವನ ಕನಸುಗಳು ಎಲ್ಲವೂ ಸೈತಾನನ ಭ್ರಮೆಗಳು, ಅವನ ಪವಾಡಗಳು ನರಕಸದೃಶ ವಂಚನೆ ಎಂದೆಲ್ಲಾ ಪುರೋಹಿತ ವರ್ಗ ಪ್ರಚಾರ ಮಾಡಿದ್ದರೂ ಫಲಕಾರಿಯಾಗಲಿಲ್ಲ. ಅವನ ಆರಾಧಕರ ಸಂಖ್ಯೆ ಅಪಾರ ಸಂಖ್ಯೆಯಲ್ಲಿ ಬೆಳೆಯುತ್ತಾ ಹೋಯಿತು. ಕ್ರಾಂತಿಕಾರಿ ಪಂಥ ಸಂಘಟಿಸಲು ಸಜ್ಜಾಯಿತು. ಕುರಿಗಾಹಿ ಬಂಡಾಯಗಾರನ ಭಾನುವಾರದ ಪ್ರಾರ್ಥನಾ ಸಭೆಗಳಲ್ಲಿ ಭಾಗವಹಿಸಲು ನಿಕ್ಲಾಸಾನ್‌ಗೆ 40 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಬರತೊಡಗಿದರು.

ಇದನ್ನೂ ಓದಿ: ಕ್ರಿಯಾ ಮಾಧ್ಯಮ ಪ್ರಕಟನೆಯ ‘ಜರ್ಮನ್ ರೈತ ಯುದ್ಧ’ – ಪುಸ್ತಕ ಬಿಡುಗಡೆ, ಉಪನ್ಯಾಸ, ಸಂವಾದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...