Homeಕರ್ನಾಟಕಭಾರತದ ರಾಷ್ಟ್ರಪತಿ ‘ಸೆರಗು’ ಧರಿಸುತ್ತಾರೆ, ಅದು ಪಿಎಫ್‌ಐನ ಪಿತೂರಿಯೇ?: ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ

ಭಾರತದ ರಾಷ್ಟ್ರಪತಿ ‘ಸೆರಗು’ ಧರಿಸುತ್ತಾರೆ, ಅದು ಪಿಎಫ್‌ಐನ ಪಿತೂರಿಯೇ?: ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ

- Advertisement -
- Advertisement -

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ‘ಸೆರಗು’ ಧರಿಸುತ್ತಿದ್ದರು, ಭಾರತದ ರಾಷ್ಟ್ರಪತಿ ಕೂಡ ಸೆರಗು ಧರಿಸುತ್ತಾರೆ, ಇದು ಭಾರತದ ಸಂಸ್ಕೃತಿಯಾಗಿದ್ದು, ‘ಘೂಂಘಾಟ್’ ಪಿಎಫ್‌ಐನ ಪಿತೂರಿಯೇ? ಹಿಜಾಬ್ ಇರಲಿ, ಸೆರಗು ಇರಲಿ, ಎಲ್ಲವೂ ಒಂದೇ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಂಗಳವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ, “ಇಂದಿರಾ ಗಾಂಧಿಯ ತಲೆಯ ಮೇಲೆ ಸೆರಗಿತ್ತು, ಭಾರತದ ರಾಷ್ಟ್ರಪತಿಯ ತಲೆಯ ಮೇಲೆ ಸೆರಗು ಇತ್ತು. ಅವರ ತಲೆಯಲ್ಲಿ ಇದ್ದ ‘ಘೂಂಘಟ್‌’ ಪಿಎಫ್‌ಐಯ ಪಿತೂರಿಯೆ?” ಎಂದು ಅವರು ಪ್ರಶ್ನಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನೀವು ಏನೇನೋ ಹೇಳುತ್ತಾ ಇದ್ದೀರಿ. ಇವೆಲ್ಲವೂ ಭಾರತೀಯ ಸಂಸ್ಕೃತಿಯಾಗಿದೆ. ತಲೆಯ ಮೇಲೆ ಸೆರಗು ಹಾಕುವುದು, ದುಪ್ಪಟ್ಟ ಹಾಕುವುದು ಭಾರತದ ಸಂಸ್ಕೃತಿ ಮತ್ತು ಇತಿಹಾಸವಾಗಿದೆ” ಎಂದು ಸಿಎಂ ಇಬ್ರಾಹಿಂ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಹಿಜಾಬ್‌ಗೆ ಅವಕಾಶವಿಲ್ಲದೆ ಮಂಗಳೂರು ವಿವಿಯ ಶೇ.16ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಡ್ರಾಪ್‌ಔಟ್

“ಕಿತ್ತೂರು ರಾಣಿ ಚೆನ್ನಮ್ಮಾ ಅವರ ತಲೆಯಲ್ಲಿ ಇದ್ದ ವಸ್ತ್ರವನ್ನು ನೀವು ಹಿಜಾಬ್ ಹೇಳಿ ಅಥವಾ ಸೆರಗು ಎಂದು ಹೇಳಿ, ಆದರೆ ಅವರೆಡೂ ಒಂದೇ ಆಗಿದೆ. ನೀರನ್ನು ಹಿಂದಿಯಲ್ಲಿ ಪಾನಿ ಎನ್ನುತ್ತಾರೆ, ಇಂಗ್ಲಿಷ್‌ನಲ್ಲಿ ವಾಟರ್‌ ಎಂದು ಹೇಳುತ್ತಾರೆ. ವಾಟರ್‌ ಎಂದ ಕೂಡಲೆ ಅದು ಬ್ರಿಟೀಷರದ್ದು ಆಗುವುದಿಲ್ಲ” ಎಂದು ಅವರು ಹೇಳಿದರು.

“ಯಾವುದೆ ಭಾಷೆಯಲ್ಲಿ ಕರೆದರೂ ನೀರು ನೀರೇ ಆಗಿರುತ್ತದೆ. ಭಾಷೆಯ ಆಧಾರದಲ್ಲಿ ಅದರ ಹೆಸರು ಮಾತ್ರ ಬದಲಾಗುತ್ತದೆ. ಅದಕ್ಕೆ ನೀವು ಜಾತಿಯ ಹೆಸರು ಯಾಕೆ ನೀಡುತ್ತೀರಿ?” ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದೀರಿ.

ಇದನ್ನೂ ಓದಿ: ಹಿಜಾಬ್ ಇತರರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಿಲ್ಲ: ಸುಪ್ರೀಂನಲ್ಲಿ ದುಶ್ಯಂತ್ ದವೆ ವಾದ

ಶಾಲೆಯಲ್ಲಿ ಹಿಜಾಬ್ ಧರಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ ತೀರ್ಪು ನೀಡಿದ ನಂತರ ಮುಸ್ಲಿಂ ವಿದ್ಯಾರ್ಥಿನಿಯರು, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ ನಡೆಸುತ್ತಿದ್ದು, ವಿದ್ಯಾರ್ಥಿನಿಯರ ವಾದಗಳು ಇಂದು ಮುಗಿದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...