Homeಅಂತರಾಷ್ಟ್ರೀಯBBC ಮೇಲೆ ಐಟಿ ದಾಳಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿ ವರ್ಚಸ್ಸಿಗೆ ಧಕ್ಕೆ

BBC ಮೇಲೆ ಐಟಿ ದಾಳಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿ ವರ್ಚಸ್ಸಿಗೆ ಧಕ್ಕೆ

ನ್ಯಾಯಾಂಗ ಮತ್ತು ಮಾಧ್ಯಮಗಳಂತ ಪ್ರಜಾಪ್ರಭುತ್ವ ಸಂಸ್ಥೆಗಳ ಕುಸಿತವು ಮೋದಿ ಆಡಳಿತದ ಪರಿಣಾಮ ಎಂದೇ ಎಲ್ಲಾ ಜಾಗತಿಕ ಮಾಧ್ಯಮ ವೇದಿಕೆಗಳು ಹೇಳುತ್ತಿವೆ.

- Advertisement -
- Advertisement -

ಐಟಿ ಇಲಾಖೆ ಅಧಿಕಾರಿಗಳು ಸಮೀಕ್ಷೆಯ ಹೆಸರಿನಲ್ಲಿ ದೆಹಲಿ ಮತ್ತು ಮುಂಬೈನಲ್ಲಿರುವ BBC ಕಚೇರಿಗಳ ಮೇಲೆ ದಾಳಿ ನಡೆಸಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಇದ್ದ ಇಮೇಜ್‌ಗೆ ಧಕ್ಕೆಯಾಗಿದೆ. ಏಕೆಂದರೆ ಈ ದಾಳಿಯನ್ನು ಹಲವು ರಾಷ್ಟ್ರಗಳು ಖಂಡಿಸಿವೆ. ಗುಜರಾತ್ ಹತ್ಯಾಕಾಂಡ ಮತ್ತು ಅದರಲ್ಲಿ ಮೋದಿ ಪಾತ್ರದ ಕುರಿತಾದ ವಿಚಾರವನ್ನು BBC ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ. ಹಾಗಾಗಿ ಇದು ಪ್ರತಿಕಾರದ ದಾಳಿ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಇಂಗ್ಲೆಂಡ್‌ನ ವಿದೇಶಾಂಗ ಕಚೇರಿಯ ವರದಿಯನ್ನು ಉಲ್ಲೇಖಿಸಿರುವ BBCಯ ಸಾಕ್ಷ್ಯಚಿತ್ರವು, 2002ರಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮುಸ್ಲಿಮರ ಮೇಲೆ ನಡೆದ ಹತ್ಯಾಕಾಂಡಕ್ಕೆ ಅವರೇ ಹೊಣೆಗಾರರು ಎಂಬುದಾಗಿ ತೋರಿಸಲಾಗಿದೆ. ಈ ಸಾಕ್ಷ್ಯಚಿತ್ರವನ್ನು ಕಳೆದ ತಿಂಗಳು ಮೋದಿ ನೇತೃತ್ವದ ಸರ್ಕಾರವು ಭಾರತ ದೇಶದಲ್ಲಿ ನಿರ್ಬಂಧಿಸಿತ್ತು. ಈ ವಿವಾದ ತಾರಕಕ್ಕೇರುತ್ತಿರುವಾಗಲೇ ಸರ್ಕಾರ ಐಟಿ ಇಲಾಖೆಯ ಮೂಲಕ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸಿದೆ.

ಈ ರೀತಿ ಮಾಧ್ಯಮ ಸಂಸ್ಥೆಗಳ ಮೇಲೆ ದಾಳಿ ನಡೆಯುತ್ತಿರುವುದು ಮೊದಲೇನಲ್ಲ, 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದಾಗಿನಿಂದ ಸರ್ಕಾರದ ಕ್ರಮಗಳನ್ನು ಟೀಕಿಸಿದ ಅನೇಕ ಭಾರತೀಯ ಮಾಧ್ಯಮ ಸಂಸ್ಥೆಗಳ ಮೇಲೆ ಇದೇ ರೀತಿ ದಾಳಿ ಮಾಡಲಾಗಿದೆ. ಅಷ್ಟೇ ಅಲ್ಲದೇ ವಿವಿಧ ರೀತಿಯಲ್ಲಿ ಬೆದರಿಕೆಗಳನ್ನು ಹಾಕಲಾಗಿದೆ. ‘ಐಟಿ ಸಮೀಕ್ಷೆಗಳಿಂದ’ 2019ರಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಮತ್ತು 2022 ರಲ್ಲಿ ಆಕ್ಸ್‌ಫ್ಯಾಮ್ ಇಂಡಿಯಾದಂತಹ ಅಂತರಾಷ್ಟ್ರೀಯ ಸಂಸ್ಥೆಗಳನ್ನು ಸಹ ಉಳಿಸಲಾಗಿಲ್ಲ. ಟ್ವಿಟರ್ ಸಂಸ್ಥೆಯು ಮೇ 2021ರಲ್ಲಿ  ಬಿಜೆಪಿ ವಕ್ತಾರರ ಟ್ವೀಟ್‌ಗಳಿಗೆ ‘ತಿರುಚಿದ ಸುದ್ದಿ’ (manipulated media) ಎಂಬ ಟ್ಯಾಗ್ ಹಾಕಿ ಅದು ತಪ್ಪು ಮಾಹಿತಿ ಎಂಬ ಅಡಿಟಿಪ್ಪಣಿ ಹಾಕಿತ್ತು. ನಂತರ  ದೆಹಲಿ ಮತ್ತು ಗುರ್ಗಾಂವ್‌ನಲ್ಲಿನ ಟ್ವಿಟರ್ ಕಚೇರಿಗಳ ಮೇಲೆಯೇ ಪೋಲೀಸ್ ದಾಳಿಗಳು ನಡೆದಿವೆ. ಆದ್ದರಿಂದ BBC ಮೇಲಿನ ಈ ‘ಐ-ಟಿ ಸಮೀಕ್ಷೆ’ (ದಾಳಿ) ಸ್ವತಂತ್ರ ಮಾಧ್ಯಮಗಳ ಮೇಲಿನ ಮೊದಲ ದಾಳಿಯಲ್ಲ.

IT ಇಲಾಖೆಯ ಕ್ರಮವನ್ನು ಭಾರತದ ವಿರೋಧ ಪಕ್ಷಗಳು ”ವಿಮರ್ಶಾತ್ಮಕ ಧ್ವನಿಗಳ ಕತ್ತು ಹಿಸುಕುವ ಲಜ್ಜೆಗೆಟ್ಟ ಮತ್ತು ಕ್ಷಮೆಯಿಲ್ಲದ ಪ್ರತೀಕಾರ”, ”ಅಘೋಷಿತ ತುರ್ತುಸ್ಥಿತಿ”, ”ಟೆಲಿವಿಷನ್ ಚಾನೆಲ್‌ನ್ನು ಬೆದರಿಸುವ ಮತ್ತು ಕಿರುಕುಳ ನೀಡುವ ಪ್ರಯತ್ನ” ಎಂದು ವಾಗ್ದಾಳಿ ನಡೆಸಿವೆ. ಅಷ್ಟೇ ಅಲ್ಲದೇ, ಪ್ರೇಮಿಗಳ ದಿನದ ‘ಸಮೀಕ್ಷೆಗಳು’ ಎಂದು ಕೂಡ ವಿರೋಧ ಪಕ್ಷಗಳು ವ್ಯಂಗ್ಯವಾಗಿ ಟೀಕಿಸಿವೆ.

ಮೋದಿ ಸರ್ಕಾರ ಇಂತಹ ಪ್ರತಿಕಾರದ ಕ್ರಮಕ್ಕೆ ಕೈಹಾಕಿದ್ದು ಏಕೆ? ಅಥವಾ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳು ಆಡಳಿತ ಪಕ್ಷದ ವಿರುದ್ಧ ಸುದ್ದಿ ಅಥವಾ ವಿಶ್ಲೇಷಣೆ ಮಾಡಬಾರದೇ? ಬಿಜೆಪಿಯ ಕೋಮುವಾದಿ ಸಿದ್ಧಾಂತ ಮತ್ತು 2002ರ ಗುಜರಾತ್ ಗಲಭೆಯಲ್ಲಿ ಮೋದಿ ಪಾತ್ರದ ಬಗ್ಗೆ BBC ಸಾಕ್ಷ್ಯಚಿತ್ರದ ಟೀಕೆಯು, ಚುನಾವಣಾ ಪ್ರಚಾರದ ಸಮಯದಲ್ಲಿ ಮೋದಿ ಹಾಗೂ ಬಿಜೆಪಿ ಪಕ್ಷದ ಗೌರವಕ್ಕೆ ಧಕ್ಕೆ ತಂದಿದೆ. ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಬಿಬಿಸಿಯ ಬೆನ್ನಿಗೆ ನಿಂತಿದ್ದಕ್ಕೆ, ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಬಿಬಿಸಿಯನ್ನು ಬಿಜೆಪಿ ”ಅತ್ಯಂತ ಭ್ರಷ್ಟ ಸಂಸ್ಥೆ” ಎಂದಿದೆ. ಅಷ್ಟೇ ಅಲ್ಲದೇ, ಬಿಬಿಸಿ ”ಪತ್ರಿಕೋದ್ಯಮದ ಸೋಗಿನಲ್ಲಿ ದುರುದ್ದೇಶದಿಂದ ಪ್ರಚಾರ ಮಾಡುತ್ತಿದೆ” ಎಂದು ಆರೋಪಿಸಿದೆ.

ರಾಜಕೀಯ ಎನ್ನುವುದು ಗ್ರಹಿಕೆಗೆ ಸಂಬಂಧಿಸಿದ್ದು ಎಂಬುದು ಮೋದಿಗಿಂತ ಚೆನ್ನಾಗಿ ಯಾರಿಗೂ ತಿಳಿದಿಲ್ಲ. ಬಹುಶಃ ಅವರು ಬಿಬಿಸಿಗೆ ‘ನನ್ನನ್ನು ಹೆದರಿಸಲು ಸಾಧ್ಯವಿಲ್ಲ’ ಎಂಬುದನ್ನು ತೋರಿಸಲು ದಾಳಿ ನಡೆಸಿದ್ದಾರೆ. ಇದು ಅವರ ಪೌರುಷದ ಇಮೇಜ್‌ಅನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಅವರು ಭಾವಿಸಿರಬಹುದು.

ಆದರೆ ಇವರ ಈ ಪೌರುಷದ ನಡೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವುದಿಲ್ಲ. 2002ರ ಗಲಭೆಯ ನಂತರ ಹಲವಾರು ಪಾಶ್ಚಿಮಾತ್ಯ ದೇಶಗಳು ಅವರ ಮೇಲೆ ಹೇರಿದ್ದ ವೀಸಾ ನಿಷೇಧಗಳನ್ನು ಅವರು ಮರೆಯಬಾರದು. ಅದನ್ನೀಗ ಅವರು ಬಗೆಹರಿಸಿಕೊಂಡಿದ್ದಾರೆ ಆದರೆ ಪ್ರಧಾನಿಯಾಗಿ ಮೋದಿಯವರು ಮೊದಲ ವಿಶ್ವ ನಾಯಕ ಎಂದು ಕರೆಸಿಕೊಳ್ಳುವ ಹಂಬಲದಲ್ಲಿದ್ದಾರೆ. ಆದರೆ, ಜವಾಹರಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಪಿ ವಿ ನರಸಿಂಹ ರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಅವರು ತಮ್ಮ ಪಾಂಡಿತ್ಯದ ಕಾರಣದಿಂದಾಗಿ ಸುಲಭವಾಗಿ ವಿಶ್ವ ಮಟ್ಟದಲ್ಲಿ ಗೌರವ ಸಂಪಾದಿಸಿದ್ದರು. ಆದೇ ರೀತಿ ನರೇಂದ್ರ ಮೋದಿ ಅವರು 2014ರಿಂದ ವಿಶ್ವಮಟ್ಟದಲ್ಲಿ ತಾವು ಕೂಡ ವಿಶ್ವನಾಯಕ ಎನ್ನುವ ಗೌರವ ಪಡೆಯಬೇಕು ಎಂದು ಹವಣಿಸುತ್ತಿದ್ದಾರೆ. ಅವರು ಜಿ20ಯ ಅಧ್ಯಕ್ಷತೆಯ ಮೂಲಕ ಆ ಮಹತ್ವಾಕಾಂಕ್ಷೆಯನ್ನು ಸಾಧಿಸುವ ಅಂಚಿನಲ್ಲಿದ್ದರು, ಆದರೆ ಈ ದಾಳಿ ನಡೆಸುವ ಮೂಲಕ ಮತ್ತೆ ತಮ್ಮ ಇಮೇಜ್‌ಗೆ ತಾವೇ ಡ್ಯಾಮೇಜ್ ಮಾಡಿಕೊಂಡಿದ್ದಾರೆ.

ಮೊದಲು BBC ಸಾಕ್ಷ್ಯಚಿತ್ರ, ನಂತರ ಇದೀಗ ಅದಾನಿ ಗ್ರೂಪ್‌ನ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯು ಮೋದಿ ಆಡಳಿತದ ಆಶ್ರಯದಲ್ಲಿ ಕ್ರೋನಿ ಬಂಡವಾಳಶಾಹಿಗಳು ಪ್ರವರ್ಧಮಾನಕ್ಕೆ ಬಂದವು ಎಂದು ಸೂಚಿಸುತ್ತವೆ. ಇವು ಮೋದಿ ಅವರು ಜಿ20ಯ ಅಧ್ಯಕ್ಷತೆಯ ಮೂಲಕ ವಿಶ್ವ ನಾಯಕರಾಗಿ ಏರುವ ಸಾಧ್ಯತೆಯನ್ನು ಅಪಾಯಕ್ಕೆ ಸಿಲುಕಿಸಿವೆ. ಮಾಧ್ಯಮಗಳ ಅಬ್ಬರದ ಪ್ರಚಾರ ಮತ್ತು ವಿಶ್ವದ ಇತರ ನಾಯಕರೊಂದಿಗಿನ ಬಾಂಧವ್ಯವು ಭಾರತೀಯ ಮತದಾರರಿಗೆ ಸಂದೇಶವನ್ನು ಕಳುಹಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಜಗತ್ತು ಮೋದಿಯನ್ನು ನಾಯಕ ಎಂದು ಒಪ್ಪಿಕೊಂಡರೆ, 2024ರಲ್ಲಿ ಮೂರನೇ ಅವಧಿಗೆ ಪ್ರಧಾನಿ ಪಟ್ಟವನ್ನು ಏರಬಹುದಿತ್ತು. ಆದರೆ ಇದೀಗ ವಿಶ್ವಮಟ್ಟದಲ್ಲೇ ತಮ್ಮ ಇಮೇಜ್‌ ಅನ್ನು ಮೋದಿ ಹಾಳುಮಾಡಿಕೊಂಡಿದ್ದಾರೆ.

ಮುಂಬರುವ ದಿನಗಳಲ್ಲಿ ಮೋದಿಯವರ ಜಾಗತಿಕ ಸಂಕಷ್ಟಗಳು ಹೆಚ್ಚಾಗಬಹುದು. ಸಂಸತ್ತು, ನ್ಯಾಯಾಂಗ ಮತ್ತು ಮಾಧ್ಯಮಗಳಂತ ಪ್ರಜಾಪ್ರಭುತ್ವ ಸಂಸ್ಥೆಗಳ ಕುಸಿತವು ಅವರ ಆಡಳಿತದ ಪರಿಣಾಮ ಎಂದೇ ಎಲ್ಲಾ ಜಾಗತಿಕ ಮಾಧ್ಯಮ ವೇದಿಕೆಗಳು ಹೇಳುತ್ತಿವೆ. ಭಾರತವು BBC ಸಾಕ್ಷ್ಯಚಿತ್ರವನ್ನು ನಿರ್ಬಂಧಸಿದ ನಂತರ ನ್ಯೂಯಾರ್ಕ್ ಟೈಮ್ಸ್ ಸಂಪಾದಕೀಯ ಮಂಡಳಿಯು ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. “ಸ್ವತಂತ್ರ ಸುದ್ದಿ ಮಾಧ್ಯಮವನ್ನು ಬೆದರಿಸಲು, ಸೆನ್ಸಾರ್ ಮಾಡಲು, ಮೌನಗೊಳಿಸಲು ಅಥವಾ ಶಿಕ್ಷಿಸಲು ಅವರ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಜನಪ್ರಿಯ ಮತ್ತು ನಿರಂಕುಶ ನಾಯಕರ ಆತಂಕಕಾರಿ ಲಕ್ಷಣವಾಗಿದೆ” ಮತ್ತು “ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ರೀತಿ ಮಾಧ್ಯಮ ಸ್ವಾತಂತ್ರದ ಹರಣ ಮಾಡುತ್ತಿದ್ದಾರೆ” ಎಂದು ಅದು ಹೇಳಿದೆ. ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಶಕ್ತಿಯುವಾದ ದೇಶ ಮತ್ತು ನಿರ್ಣಾಯಕ ಪಾತ್ರವಹಿಸುವ ದೇಶವಾಗಿದೆ ಎಂದು ಒಪ್ಪಿಕೊಳ್ಳುವ ಸಂದರ್ಭದಲ್ಲಿ, ಮೋದಿಯವರು, ಪತ್ರಿಕಾ ಮಾಧ್ಯಮಗಳ ಸ್ವಾತಂತ್ರವನ್ನು ಕಿತ್ತುಕೊಳ್ಳುವ ಕೆಲಸ ಮಾಡಬಾರದು ಎಂದು ಟೈಮ್ಸ್ ಸಂಪಾದಕೀಯ ಮಂಡಳಿಯು ಎಚ್ಚರಿಸಿದೆ.

ಮೂಲ: ಭರತ್ ಭೂಷಣ್

ಕೃಪೆ: ಡೆಕ್ಕನ್ ಹೆರಾಲ್ಡ್

ಇದನ್ನೂ ಓದಿ: ಫಾರ್ಬಿಡನ್‌ ಪ್ರಕಟಿಸುತ್ತಿರುವ ‘ಸ್ಟೋರಿ ಕಿಲ್ಲರ್ಸ್’ ಸರಣಿಗೆ ಗೌರಿ ಲಂಕೇಶ್‌ ಸ್ಫೂರ್ತಿ; ಗಾರ್ಡಿಯನ್‌ ಉಲ್ಲೇಖ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...