Homeಕರ್ನಾಟಕಹಿರಿಯ ನಿರ್ದೇಶಕ ಎಸ್‌ಕೆ ಭಗವಾನ್ ನಿಧನ

ಹಿರಿಯ ನಿರ್ದೇಶಕ ಎಸ್‌ಕೆ ಭಗವಾನ್ ನಿಧನ

- Advertisement -
- Advertisement -

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್‌ಕೆ ಭಗವಾನ್ ಅವರು ಇಂದು ಬೆಳಗ್ಗೆ 6 ಗಂಟೆಗೆ (ಫೆಬ್ರವರಿ 20) ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕನ್ನಡ ಚಿತ್ರರಂಗದ ನಟ, ನಟಿಯರು ಭಗವಾನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಭಗವಾನ್ ಅವರಿಗೆ ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳಿದ್ದಾಳೆ. ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಭಗವಾನ್ ಅವರ ಪಾರ್ಥೀವ ಶರೀರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

1933ರಲ್ಲಿ ಮೈಸೂರಿನ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಎಸ್‌ಕೆ ಭಗವಾನ್ ಜನಿಸಿದರು. ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. 1956ರಲ್ಲಿ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಎಸ್‌ಕೆ ಭಗವಾನ್ ಪೂರ್ಣ ಹೆಸರು ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್. ಕನ್ನಡ ಚಿತ್ರರಂಗದಲ್ಲಿ ದೊರೈರಾಜ್ ಅವರ ಜೊತೆ ಸೇರಿ ಸುಮಾರು 55 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ದೊರೈ-ಭಗವಾನ್ ಎಂದೇ ಇಬ್ಬರು ಖ್ಯಾತರಾಗಿದ್ದರು. 25 ಕಾದಂಬರಿ ಆಧಾರಿತ ಸಿನಿಮಾಗಳನ್ನು ನಿರ್ದೇಶನ ಮಾಡಿದ ಹೆಗ್ಗಳಿಕೆ ದೊರೈ-ಭಗವಾನ್ ಜೋಡಿಯದ್ದಾಗಿದೆ.

ಭಗವಾನ್ ಅವರು ಡಾ ರಾಜ್‌ಕುಮಾರ್, ಉದಯ್ ಕುಮಾರ್ ಅವರಿಗೆ ‘ಸಂಧ್ಯಾ ರಾಗ’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆದರೆ ಈ ಚಿತ್ರದ ನಿರ್ದೇಶನದ ಕ್ರೆಡಿಟ್‌ಅನ್ನು ಎಸಿ ನರಸಿಂಹ ಮೂರ್ತಿ ಅವರಿಗೆ ನೀಡಿದ್ದರು. ಮೊದಲ ಬಾರಿಗೆ ಕನ್ನಡದಲ್ಲಿ ಜೇಮ್ಸ್ ಬಾಂಡ್ ಮಾದರಿಯ ಸಿನಿಮಾಗಳನ್ನು ಮಾಡಿದ ಕೀರ್ತಿ ದೊರೈ ಭಗವಾನ್ ಜೋಡಿಗೆ ಸಲ್ಲುತ್ತದೆ.

ರಾಜ್‌ಕುಮಾರ್ ಜೊತೆ ಕೊನೆಯದಾಗಿ 1994ರಲ್ಲಿ ‘ಒಡಹುಟ್ಟಿದವರು’ ಸಿನಿಮಾ ಮಾಡಿದ್ದರು. ದೊರೈ ಭಗವಾನ್ ಜೋಡಿಯು ರಾಜ್‌ಕುಮಾರ್ ಅಷ್ಟೇ ಅಲ್ಲದೆ ಅನಂತ್ ನಾಗ್, ಲಕ್ಷ್ಮೀ ಅವರಿಗೂ ಕೂಡ ಕಾದಂಬರಿ ಆಧಾರಿತ ಅನೇಕ ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ. ದೊರೈ ನಿಧನದ ನಂತರ ಭಗವಾನ್ ಅವರು ಸಿನಿಮಾದಿಂದ ಸ್ವಲ್ಪ ದೂರ ಉಳಿದರೂ ಕೂಡ 2019ರಲ್ಲಿ ‘ಆಡುವೆ ಗೊಂಬೆ’ ಚಿತ್ರ ನಿರ್ದೇಶನ ಮಾಡಿದ್ದರು. ಇದು ಅವರ 50ನೇ ಸಿನಿಮಾವಾಗಿತ್ತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಚುನಾವಣೆ ಪ್ರಚಾರದಲ್ಲಿ ಪದೇ ಪದೇ ಸುಳ್ಳು ಹೇಳುತ್ತಿರುವುದರಿಂದ…..’,: ಮೋದಿಗೆ ಕಾಂಗ್ರೆಸ್‌ ಪ್ರಣಾಳಿಕೆಯನ್ನು ವಿವರಿಸಿ ಪತ್ರ...

0
ಕಾಂಗ್ರೆಸ್‌ ಪ್ರಣಾಳಿಕೆಯ ಬಗ್ಗೆ ಮೋದಿ, ಅಮಿತ್‌ ಶಾ ಚುನಾವಣಾ ಭಾಷಣದಲ್ಲಿ ಸುಳ್ಳು ಆಪಾದನೆ ಮಾಡುತ್ತಿರುವ ಮಧ್ಯೆ ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ಚರ್ಚೆಗೆ ನರೇಂದ್ರ ಮೋದಿ ಅಥವಾ ಅವರಿಂದ ನಿಯೋಜಿಸಲ್ಪಟ್ಟ ಯಾರಾದರು ಬನ್ನಿ ಎಂದು...