ವಯಸ್ಕ ಯುವಕ-ಯುವತಿ ಪ್ರೀತಿಸಿ ಮದುವೆಯಾಗುವಾಗ ಪೋಷಕರ ಒಪ್ಪಿಗೆಯನ್ನು ಪಡೆಯುವುದು ಕಡ್ಡಾಯಗೊಳಿಸಬೇಕು ಎಂದು ಗುಜರಾತ್‌ನ ಇಬ್ಬರು ಶಾಸಕರು ರಾಜ್ಯ ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾರೆ ಎಂದು ದಿ ಹಿಂದೂ ಬುಧವಾರ ವರದಿ ಮಾಡಿದೆ.
ಮಾರ್ಚ್ 17ರಂದು ನಡೆದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಭಾರತೀಯ ಜನತಾ ಪಕ್ಷದ ಶಾಸಕ ಫತೇಸಿನ್ಹ್ ಚೌಹಾಣ್ ಮತ್ತು ಕಾಂಗ್ರೆಸ್ ಶಾಸಕ ಜೆನಿಬೆನ್ ಠಾಕೂರ್ ಅವರು ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಚೌಹಾಣ್ ಮತ್ತು ಠಾಕೂರ್ ಅವರು, ”ಮದುವೆಗಳ ನೋಂದಣಿ ಕಾಯಿದೆ-2009, ತಿದ್ದುಪಡಿ ಕೋರಿದರು. ಈ ಸಂದರ್ಭಗಳಲ್ಲಿ ಪೋಷಕರ ಸಹಿ ಕಡ್ಡಾಯಗೊಳಿಸಬೇಕು. ಪುರುಷ ಅಥವಾ ಮಹಿಳೆ ವಾಸಿಸುವ ತಾಲೂಕಿನಲ್ಲಿಯೇ ಇಂತಹ ವಿವಾಹಗಳನ್ನು ನೋಂದಣಿ ಮಾಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
”ಪೋಷಕರ ಒಪ್ಪಿಗೆಯಿಲ್ಲದೆ ನಡೆಯುವ ವಿವಾಹಗಳಿಂದ ಅಪರಾಧದ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗುತ್ತವೆ…. ಅಂತಹ ಮದುವೆಗಳನ್ನು ಪೋಷಕರ ಒಪ್ಪಿಗೆಯೊಂದಿಗೆ ನೋಂದಾಯಿಸಿದರೆ, ಅಪರಾಧದ ಪ್ರಮಾಣವು 50% ಕ್ಕೆ ಇಳಿಯುತ್ತದೆ” ಎಂದು ಚೌಹಾಣ್ ಹೇಳಿಕೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದನ್ನೂ ಓದಿ: ‘ಮೋದಿ ಉಪನಾಮ’ ಟೀಕೆ ಕೇಸ್‌ನಲ್ಲಿ ರಾಹುಲ್‌ಗೆ 2 ವರ್ಷ ಜೈಲು: ಬಿಜೆಪಿಯ ಪಿತೂರಿ ಎಂದ ಪ್ರತಿಪಕ್ಷಗಳು
”ಹುಡುಗ ಮತ್ತು ಹುಡುಗಿ ತಮ್ಮ ದಾಖಲೆಗಳನ್ನು ಮರೆಮಾಡಿ ಬೇರೆ ಜಿಲ್ಲೆಗಳಲ್ಲಿ ಮದುವೆಯಾಗುತ್ತಾರೆ. ಇದರಿಂದ ಮುಂದೆ ಆ ಹುಡುಗಿ ತಂದೆ ತಾಯಿಯಿಂದ ದೂರ ಉಳಿದು ಬಳಲುತ್ತಾಳೆ ಅಥವಾ ಪೋಷಕರು ಮಗಳು ಓಡಿಹೋಗಿದ್ದಾಳೆ ಎಂದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ” ಎಂದು ಅವರು ಹೇಳಿದರು.
”ತಂದೆ ತಾಯಿ ತಮ್ಮ ವೃತ್ತಿಯ ಕಾರಣಕ್ಕೆ ಕೆಲಸದಲ್ಲೇ ಕಾರ್ಯನಿರತರಾಗಿತ್ತಾರೆ ಹಾಗಾಗಿ ಪೋಷಕರು ತಮ್ಮ ಹೆಣ್ಣುಮಕ್ಕಳ ಕಡೆಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗಿರುವುದಿಲ್ಲ. ಈ ವೇಳೆ ಸಮಾಜ ವಿರೋಧಿಗಳು ಇದರ ಲಾಭವನ್ನು ಪಡೆದುಕೊಳ್ಳುತ್ತಾರೆ, ಮತ್ತೆ ಹುಡುಗಿಯರೊಂದಿಗೆ ಓಡಿಹೋಗುತ್ತಾರೆ” ಎಂದು ಹೇಳಿದರು.
ಈ ವೇಳೆ ಠಾಕೂರ್ ಮಾತನಾಡಿ, ”ಪೋಷಕರ ಒಪ್ಪಿಗೆಯಿಲ್ಲದೆ ನಡೆಯುವ ಪ್ರೇಮ ವಿವಾಹಗಳನ್ನು ವಿರೋಧಿಸಬೇಕು” ಎಂದರು.
“ನಾವು ಹುಡುಗಿ ಮತ್ತು ಹುಡುಗನ ನಡುವಿನ ‘ಪ್ರೇಮ’ ವಿವಾಹಗಳನ್ನು ವಿರೋಧಿಸುವುದಿಲ್ಲ, ಆದರೆ ಪೋಷಕರ ಒಪ್ಪಿಗೆಯನ್ನು ಪಡೆಯದ ಮದುವೆಗೆ ನಾವು ವಿರೋಧಿಸುತ್ತೇವೆ” ಎಂದು ಅವರು ಹೇಳಿದರೆಂದು ದಿ ಹಿಂದೂ ವರದಿ ಮಾಡಿದೆ.
”ಮಹಿಳೆಯ ಕುಟುಂಬ ವಾಸಿಸುವ ತಾಲೂಕಿನಲ್ಲಿ ಇಂತಹ ವಿವಾಹಗಳನ್ನು ನೋಂದಾಯಿಸಬೇಕು ಮತ್ತು ಮದುವೆಗಳಿಗೆ ಸ್ಥಳೀಯ ಸಾಕ್ಷಿಗಳು ಇರಬೇಕು” ಎಂದು ಠಾಕೂರ್ ಒತ್ತಾಯಿಸಿದರು.
ಕಳೆದ ವರ್ಷ, ರಾಜ್ಯದ ಪ್ರಭಾವಿ ಪಾಟಿದಾರ್ ಸಮುದಾಯದ ಸದಸ್ಯರು, ”ತಮ್ಮ ಸಮುದಾಯದ ಮಹಿಳೆ ಪ್ರೇಮವಿವಾಹವಾಗಬೇಕಾದರೆ, ಅವರು ತಮ್ಮ ಮದುವೆಯನ್ನು ನೋಂದಾಯಿಸಲು ಕನಿಷ್ಠ ಒಬ್ಬ ಪೋಷಕರ ಸಹಿ ಕಡ್ಡಾಯವಾಗಿರಬೇಕು” ಎಂದು ಹೇಳಿದ್ದರು.



Love marriage means after mutual consent of the lovers it will take place. If consents of parents required means independence of lovers in jeopardy.