Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ: ’ತುಷಾರ ಹಾರ’ವೆಂಬ ಅನುಭವ ಕಥನ

ಪುಸ್ತಕ ಪರಿಚಯ: ’ತುಷಾರ ಹಾರ’ವೆಂಬ ಅನುಭವ ಕಥನ

- Advertisement -
- Advertisement -

ನಾನು ಮುಂಬೈ ಹೋದಾಗಲೆಲ್ಲ ಅಲ್ಲಿನ ಅನೇಕ ಜೀವನೋತ್ಸಾಹದ ಮಹಿಳೆಯರನ್ನು ಕಾಣುತ್ತೇನೆ. ಇವರೆಲ್ಲರೂ ಗೃಹಿಣಿಯರು ಅಥವಾ ಮತ್ತಿತರ ಉದ್ಯೋಗದಲ್ಲಿರುವವರು. ಬರೆಹ ಅವರ ಪ್ರವೃತ್ತಿ. ಇವರಲ್ಲಿ ಅನೇಕರು ಪಿಎಚ್.ಡಿ. ಪದವಿ ಪಡೆದವರು. ಕೆಲವರು ಜಗತ್ತಿನ ಸಾಹಿತ್ಯದಿಂದ ಕನ್ನಡಕ್ಕೆ ಅಗತ್ಯವಾದ ಕೃತಿಗಳನ್ನು ಅನುವಾದ ಮಾಡಿದವರು. ಇವರಲ್ಲಿ ಸೋಮೇಶ್ವರ ಉಚ್ಚಿಲ ಮೂಲದ ಶಾಮಲಾ ಮಾಧವ ಕೂಡ ಒಬ್ಬರು. ಇವರ ಪುಸ್ತಕ ಬಿಡುಗಡೆಗೊಮ್ಮೆ ನಾನು ಮುಂಬೈ ಹೋಗಿದ್ದೆ. ಕಾರ್ಯಕ್ರಮ ಮುಗಿಸಿ ಪುಣೆಗೆ ಹೋಗಿ ಅಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್‌ನಲ್ಲಿ ಅಮೀರಬಾಯಿ ಕರ್ನಾಟಕಿ ಬಗ್ಗೆ ಮಾಹಿತಿ ಹುಡುಕಬೇಕಿತ್ತು. ಆಗ ಶ್ಯಾಮಲಾ ಅವರು ಪುಣೆವಾಸಿಯೂ ಸಾಫ್ಟ್‌ವೇರ್ ಇಂಜಿನಿಯರನೂ ಆದ ತಮ್ಮ ಮಗ ತುಷಾರನ ಜತೆಮಾಡಿ ನನಗೆ ಕಳಿಸಿಕೊಟ್ಟರು. ತುಷಾರ ನನ್ನನ್ನು ಫಿಲ್ಮ ಇನ್ಸ್ಟಿಟ್ಯೂಟ್‌ಗೆ ಕರೆದುಕೊಂಡು ಹೋದರು. ನಾನಲ್ಲಿ ಇದ್ದಷ್ಟೂ ದಿನ ನನಗೆ ಬಗೆಬಗೆಯ ಸಹಾಯ ನೀಡಿದರು. ನನಗೆ ನೆನಪಿರುವಂತೆ, ಅವರಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧತೆಯಿತ್ತು. ದಾರ್ಶನಿಕ ಮನೋಭಾವವಿತ್ತು.

ಹೀಗಿರುತ್ತ ಒಂದು ದಿನ ಶ್ಯಾಮಲಾ ಅವರು ನನಗೆ ನೋವಿನಿಂದ ಪತ್ರ ಬರೆದರು: “ನನ್ನ ಮಗು ತುಷಾರನಿಗೆ ಹುಶಾರಿಲ್ಲ. ನನ್ನ ಹೃದಯ ಚಡಪಡಿಸುತ್ತಿದೆ. ಕ್ಯಾನ್ಸರಂತೆ. ಏನು ಮಾಡಲಿ ರಹಮತ್? ದಿಕ್ಕೇ ತೋಚುತ್ತಿಲ್ಲ”. ಇದಾದ ಬಳಿಕ ಅವರು ಸಾವಿನೊಂದಿಗೆ ಸೆಣಸಾಟ ಮಾಡುತ್ತಿರುವ ದಾರುಣ ಸನ್ನಿವೇಶವನ್ನು ಈಮೇಲಲ್ಲಿ ವಾಟ್ಸಾಪಿನಲ್ಲಿ ಹಂಚಿಕೊಳ್ಳುತ್ತಿದ್ದರು. ತುಷಾರ ನಮದು ಜೀವಬಿಟ್ಟ ದಿನ, ಹತಾಶೆಯಿಂದ ಎದೆ ಬಿರಿವಂತೆ ತಮ್ಮ ಶೋಕ ತೋಡಿಕೊಂಡಿದ್ದರು. ಈಗ ಅವರು ತುಷಾರನ ಆರೈಕೆಯಲ್ಲಿ ಪಟ್ಟ ಪಾಡು ಪುಸ್ತಕವಾಗಿ ಹೊರಬಂದಿದೆ. ತಾಯ ಅಳಲೆಲ್ಲವೂ ಹೆಪ್ಪುಗಟ್ಟಿದಂತೆ ಅದರೊಳಗೆ ಬಂದಿದೆ.

ಈ ಪುಸ್ತಕವನ್ನು ಕೇವಲ ಶಾಮಲಾ ಅವರು ಬರೆದಿಲ್ಲ. ಇದರಲ್ಲಿ ತುಷಾರನ ಗೆಳೆಯರಾದ ಸಂಜಯ ಮುಖರ್ಜಿ, ಪ್ರಸಾದ ನಾಯ್ಕರ ಬರೆಹಗಳಿವೆ. ಶ್ಯಾಮಲಾ ಅವರ ಗೆಳತಿ, ಕನ್ನಡ ಲೇಖಕಿ ನೇಮಿಚಂದ್ರ ಅವರ ಬರೆಹವಿದೆ. ಎಲ್ಲವೂ ತುಷಾರನ ಜೀವನ ಪ್ರೀತಿಯ ಬಗೆಗಿನ ಬರೆಹಗಳು. ಬೇನೆ ನೋವು ಸಾವಿನ ದಾರುಣತೆಯನ್ನು ಕುರಿತವು.

ಇವುಗಳಲ್ಲೆಲ್ಲ ಹೆತ್ತತಾಯಿ ಶ್ಯಾಮಲಾ ಅವರ ಬರೆಹವು ದೀರ್ಘವಾಗಿದೆ. ಅವರ ಬರೆಹದ ವಿಶೇಷತೆ ಎಂದರೆ, ತುಷಾರನ ಹುಟ್ಟು, ಬಾಲ್ಯದ ಆಟೋಟ, ತಾರುಣ್ಯದ ಚಟುವಟಿಕೆ, ಯೌವನದ ಚಿಂತನಶೀಲತೆ, ಬೇನೆಯ ಜತೆ ಮಾಡಿದ ಸೆಣಸಾಟ ಎಲ್ಲವೂ ಒಟ್ಟೊಟ್ಟಿಗೆ ಬಂದಿರುವುದು. ಇದು, ಕಾಲಾನುಕ್ರಮಣಿಕೆ ಇದ್ದೂ ಅದನ್ನು ಮುರಿದಿರುವ ವಿಶಿಷ್ಟ ಕಥನಕ್ರಮ. ಕಾಲ ಎಂದರೆ ಸಮಯ ಮಾತ್ರವಲ್ಲ, ಸಾವು ಎಂದೂ ಅರ್ಥವಿದೆಯಷ್ಟೆ. ಈ ಕಾಲಕ್ರಮವನ್ನು ಬೆರೆಸುವ ಕ್ರಮವು, ಜೀವವೊಂದು ಲೋಕಕ್ಕೆ ಆಗಮಿಸುವ ಮತ್ತು ತೆರಳುವ ನಡುವಿನ ಕಾಲದ ಬದುಕನ್ನು ಹಿಡಿಯುವುದಕ್ಕೆ ಲೇಖಕಿ ಕಂಡುಕೊಂಡಿರುವ ದಾರ್ಶನಿಕ ಕ್ರಮದಂತೆಯೂ ತೋರುವುದು.

ಇದನ್ನೂ ಓದಿ: ಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

ಈ ಅನುಭವ ಕಥನದಲ್ಲಿ ಕಾಣುವ ವಿಶೇಷತೆ ಎಂದರೆ, ಮಹಾನಗರದ ಹೊಸ ಔದ್ಯೋಗಿಕ ಜಗತ್ತಿನಲ್ಲಿ, ಏರ್ಪಡುವ ಭಾಷಾತೀತ ಧರ್ಮಾತೀತ ಜಾತ್ಯತೀತ ಮಾನವ ಸಂಬಂಧಗಳು. ತುಷಾರನ ಗೆಳೆಯ ಗೆಳತಿಯರು, ವೈದ್ಯರು, ಕಷ್ಟಕ್ಕೆ ಮಿಡಿವ ಲೇಖಕಿಯ ಗೆಳತಿಯರು, ಶಿಕ್ಷಕರು, ಸಹಾಯಕರು- ಎಲ್ಲರೂ ಕೇವಲ ಮನುಷ್ಯರು. ಹೀಗಾಗಿ ಈ ಕೃತಿ ಬೇನೆಗೆ ಒಳಗಾಗಿ ಒಬ್ಬ ಯುವಕ ಅಕಾಲಿಕವಾಗಿ ಮೃತ್ಯುವಶವಾದ, ಅವನ ತಾಯಿ ಮಗನನ್ನು ಉಳಿಸಿಕೊಳ್ಳಲು ಸೆಣಸಾಟ ಮಾಡುವ ಕಥನ ಮಾತ್ರವಲ್ಲ; ಮನುಷ್ಯರ ನೋವು ನಲಿವುಗಳಲ್ಲಿ ಕೇವಲ ಪ್ರೀತಿ ಅಂತಃಕರಣದಿಂದ ಒದಗುವ ಲೋಕದ ಕಾರುಣ್ಯದ ಕಥನವೂ ಆಗಿದೆ.

ಇಡೀ ಕೃತಿಯಲ್ಲಿ ಇರುವ ಅನುಭವವು ಸಾವಿನಂತಹ ಕಠೋರ ಸತ್ಯದ ಮುಖಾಮುಖಿಯಲ್ಲಿ ಹುಟ್ಟುವುದರಿಂದ, ಅದರ ನಿರೂಪಣೆಯಲ್ಲಿ ಒಂದು ಬಗೆಯ ದಾರ್ಶನಿಕ ಎನ್ನಬಹುದಾದ ನೋಟಗಳಿವೆ, ಮಾತುಗಳಿವೆ. ಇದು ದುಃಖದ ಒಡಲಲ್ಲೇ ಹುಟ್ಟುವ ಅಧ್ಯಾತ್ಮ.

ಕನ್ನಡದಲ್ಲಿ ಈ ಬಗೆಯ ಕೃತಿಗಳು ಬಹಳ ಇಲ್ಲ. ನಾನು ಓದಿರುವ ಎರಡು ಕೃತಿಗಳೆಂದರೆ, ನನಗೆ ಪಾಠ ಹೇಳಿದ ಶಿಕ್ಷಕ ಸಣ್ಣರಾಮ ಅವರು (ಅಳುನುಂಗಿ ನಗುವೊಮ್ಮೆ) ಹಾಗೂ ಬೀದರಿನ ಮಿತ್ರರಾದ ಶಂಭುಲಿಂಗ ವಾಲ್ದೊಡ್ಡಿಯವರು (ಮಹಾತಾಯಿ) ತಮ್ಮತಮ್ಮ ಮಡದಿಯರ ಕ್ಯಾನ್ಸರ್ ಕಾಯಿಲೆಯೊಂದಿಗೆ, ದವಾಖಾನೆ ಮತ್ತು ಮನೆಯಲ್ಲಿ ಮಾಡಿದ ಹೋರಾಟ ಕುರಿತ ಅನುಭವ ಕಥನಗಳು. ಶ್ಯಾಮಲಾ ಅವರ ಪುಸ್ತಕವನ್ನೂ ಒಳಗೊಂಡಂತೆ ಇವೆಲ್ಲವೂ ಕೇವಲ ವೇದನೆಯ ಕಥನಗಳಾಗಿಲ್ಲ. ಸಾವನ್ನು ಸ್ವೀಕರಿಸಿದ ವ್ಯಕ್ತಿ ಬದುಕಿದ್ದಾಗ ಬಾಳಿದ ದೊಡ್ಡ ಬದುಕಿನ ಚಿತ್ರಗಳೂ ಆಗಿವೆ.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...