Homeಕರ್ನಾಟಕಮೈತ್ರಿಗಾಗಿ ರಾಷ್ಟ್ರೀಯ ಪಕ್ಷದ ದೂತರು ನನ್ನ ಬಳಿ ಬಂದಿದ್ದರು: ಎಚ್‌ಡಿ ದೇವೇಗೌಡರ ಹೇಳಿಕೆ

ಮೈತ್ರಿಗಾಗಿ ರಾಷ್ಟ್ರೀಯ ಪಕ್ಷದ ದೂತರು ನನ್ನ ಬಳಿ ಬಂದಿದ್ದರು: ಎಚ್‌ಡಿ ದೇವೇಗೌಡರ ಹೇಳಿಕೆ

- Advertisement -
- Advertisement -

”ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಾತನಾಡಿದ್ದಾರೆ. ಜೆಡಿಎಸ್‌ಗೆ ವೋಟ್ ಹಾಕಿದ್ರೂ ಬಿಜೆಪಿಗೆ ವೋಟ್ ಹಾಕಿದಂತೆ” ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಅವರು ಹೇಳಿಕೆ ನೀಡಿದ್ದರು, ಈ ಬೆನ್ನಲ್ಲೇ ಇದೀಗ ಜೆಡಿಎಸ್ ರಾಷ್ಟೀಯ ಅಧ್ಯಕ್ಷ ಎಚ್‌ಡಿ ದೇವೇಗೌಡ ಅವರು ಪ್ರತಿಕ್ರಿಯಿಸಿದ್ದಾರೆ.

”ಚುನಾವಣೋತ್ತರ ಮೈತ್ರಿಗಾಗಿ ರಾಷ್ಟ್ರೀಯ ಪಕ್ಷಗಳ ದೂತರು ನನ್ನ ಬಳಿಯೇ ಬಂದಿದ್ದರು. ಅವರನ್ನು ಎಚ್‌.ಡಿ. ಕುಮಾರಸ್ವಾಮಿ ಬಳಿ ಕಳಿಸಿದ್ದೇನೆ” ಎಂದು ಶನಿವಾರ ಪ್ರಜಾವಾಣಿ ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದಕ್ಕೂ ಮುನ್ನ ಕುಮಾರಸ್ವಾಮಿ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಧೂತರು ಈಗಾಗಲೇ ನನ್ನ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯ ಬಗ್ಗೆ ಭವಿಷ್ಯ ನುಡಿದಿದ್ದರು.

ಕುಮಾರಸ್ವಾಮಿ ಹೇಳಿಕೆಗೆ ಇದೀಗ ದೇವೆಗೌಡರು ಒಪ್ಪಿದ್ದು, ಹೌದು ”ಚುನಾವಣೋತ್ತರ ಮೈತ್ರಿಗಾಗಿ ರಾಷ್ಟ್ರೀಯ ಪಕ್ಷಗಳ ದೂತರು ನನ್ನ ಬಳಿಯೇ ಬಂದಿದ್ದರು. ಅವರನ್ನು ಎಚ್‌.ಡಿ. ಕುಮಾರಸ್ವಾಮಿ ಬಳಿ ಕಳಿಸಿದ್ದೇನೆ” ಎಂದು ಹೇಳಿದ್ದಾರೆ.

”ನನಗೆ ವಯಸ್ಸಾಗಿರುವ ಕಾರಣದಿಂದ ಆ ಹೊಣೆಗಾರಿಕೆ ಹೊರುವುದು ಕಷ್ಟ. ಆ ಜವಾಬ್ದಾರಿಯನ್ನು ಕುಮಾರಸ್ವಾಮಿ ಅವರಿಗೆ ನೀಡಿರುವೆ. ಕೆ. ಚಂದ್ರಶೇಖರ್ ರಾವ್‌, ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರು ಈ ವಿಚಾರದಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ” ಎಂದು ದೇವೇಗೌಡ ಅವರು ತಿಳಿಸಿದರು.

ಮೈತ್ರಿಗಾಗಿ ಯಾರೆಲ್ಲ ಪ್ರಯತ್ನಿಸಿದರು ಎನ್ನುವುದನ್ನು ಅವರು ಬಿಟ್ಟುಕೊಟ್ಟಿಲ್ಲ. ಆದರೆ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ ಎಂದು ಪದೇ ಪದೇ ಒತ್ತಿ ಹೇಳಿದರು.

ಇದನ್ನೂ ಓದಿ: ಬಿಜೆಪಿ ಬಹುಮತ ಪಡೆಯುವುದಿಲ್ಲ ಎಂಬುದನ್ನು ಧ್ವನಿಸಿತೇ ಪ್ರೀತಂಗೌಡರ ಭಾಷಣ?

ಹಾಸನದ ಶಾಸಕ ಪ್ರೀತಂ ಗೌಡ ಅವರು ಜೆಡಿಎಸ್‌ನೊಂದಿಗಿನ ಮಾತುಕತೆ ಬಗ್ಗೆ ಎರಡು ದಿನಗಳ ಹಿಂದಷ್ಟೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು.

ಪ್ರೀತಂ ಗೌಡ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಾತನಾಡಿದ್ದಾರೆ. ಜೆಡಿಎಸ್‌ಗೆ ವೋಟ್ ಹಾಕಿದ್ರೂ ಬಿಜೆಪಿಗೆ ವೋಟ್ ಹಾಕಿದಂತೆ” ಎಂದು ಪ್ರೀತಂಗೌಡ ಅವರು ಹೇಳಿಕೆ ನೀಡಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಮಾತನಾಡಿರುವ ಅವರು, ”ನಿಮಗೆ ಅರ್ಥವಾಗಲಿ ಎಂದು ಬಿಡಿಸಿ, ಬಿಡಿಸಿ ಹೇಳುತ್ತಿದ್ದೇನೆ. ಜನತಾ ದಳಕ್ಕೆ ವೋಟ್ ಹಾಕಿದ್ರೂ ಬಿಜೆಪಿಗೆ ವೋಟ್ ಹಾಕಿದಂತೆ ಲೆಕ್ಕ. ದೇವೇಗೌಡ್ರು- ಮೋದಿ ಸಾಹೇಬ್ರು ಮಾತನಾಡಿಕೊಂಡಿದ್ದಾರೆ. ಯಾಕೆಂದರೆ ಅವರಿಗೆ ಬರೋದು 20-25 ಸೀಟ್‌. ನೀವು ಬೆಂಗಳೂರಿಗೆ ಹೋಗಬೇಕೆಂದರೆ ಮೈಸೂರು ಮೇಲೆ ಬೆಂಗಳೂರಿಗೆ ಹೋಗಬೇಡಿ. ಹಾಸನದಿಂದ ಬೆಳ್ಳೂರು ಕ್ರಾಸ್ ಮಾರ್ಗದಲ್ಲಿ ಹೋಗಿ ಅಂತ ಮಾತ್ರ ಹೇಳ್ತೀನಿ. ಮೈಸೂರಿಗೆ ಹೋಗಿ, ಬೆಂಗಳೂರಿಗೆ ಹೋಗ್ತೀನಿ ಅಂದ್ರೆ ನಿಮ್ಮಿಷ್ಟ. ಎಲ್ಲ ನದಿ ನೀರು ಹರಿಯೋದು ಸಮುದ್ರಕ್ಕೇನೆ. ನೀವು ಅವರಿಗೆ ವೋಟ್ ಹಾಕಿದ್ರೂ ಮತ್ತೆ ನಮ್ಮ ಹತ್ತಿರಕ್ಕೆ ಬರಬೇಕು. ಯೋಚನೆ ಮಾಡಿ” ಎಂದು ಮತದಾರರಿಗೆ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...