Homeಕರ್ನಾಟಕನುಡಿನಮನ: ಹೋರಾಟದ ಸಂಗಾತಿ ಪಟ್ಟಾಭಿಯವರ ನೆನಪುಗಳು

ನುಡಿನಮನ: ಹೋರಾಟದ ಸಂಗಾತಿ ಪಟ್ಟಾಭಿಯವರ ನೆನಪುಗಳು

ಪಟ್ಟಾಭಿರಾಮ ಸೋಮಯಾಜಿಯವರು "ನನಗೆ ದೇಶವಾಸಿಗಳ ತೆರಿಗೆಯ ದುಡ್ಡಿನಿಂದ ಸಂಬಳ ಬರುತ್ತಿದೆ. ದೇಶವಾಸಿಗಳಲ್ಲಿ ಒಂದು ವಿಭಾಗಕ್ಕೆ ಅನ್ಯಾಯವಾಗುವಾಗ ಅದನ್ನು ವಿರೋಧಿಸುವುದು ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ" ಎಂದಿದ್ದರು.

- Advertisement -
- Advertisement -

ಪಟ್ಟಾಭಿ ನಮ್ಮನ್ನಗಲಿ ಅವರ ದೇಹ ಬೂದಿಯಾಗಿಯೂ ಆಯಿತು. ಒಂದು ಕಾಲದಲ್ಲಿ ಚಳವಳಿಗಳಲ್ಲಿ ಒಡನಾಡಿಯಾಗಿದ್ದರೂ ಕಳೆದೆರಡು ವರ್ಷಗಳಿಂದ ಸಂಪರ್ಕವೂ ಇರಲಿಲ್ಲ. ಸಂಪರ್ಕವಿರದ ಕಾಲಕ್ಕಾಗಲೀ, ಅವರು ಅಗಲಿದ ಈ ಹೊತ್ತಿಗಾಗಲೀ ಸಂಪರ್ಕವಿಟ್ಟುಕೊಂಡಿರಲಿಲ್ಲ ಎಂಬ ಖೇದ ನನಗಂತೂ ಇಲ್ಲ. ಅವರು ಯಾರನ್ನೂ ಮನಸ್ಸಿಗೆ ಹಚ್ಚಿಕೊಂಡು ಗೆಳೆತನವಿಟ್ಟುಕೊಂಡವರಲ್ಲ. ಹಾಗಿರುವಾಗ ಆತ್ಮೀಯತೆ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ ಅಷ್ಟೆ. ಆದರೆ ನಮಗೆ ಒಡನಾಟವಿದ್ದ ಕಾಲದಲ್ಲಿ ಅವರ ಕೋಮುವಾದ ವಿರೋಧೀ ಹೋರಾಟದ ಕಾರಣಕ್ಕಾಗಿ ಅವರ ಉದ್ಯೋಗಕ್ಕೆ ಕುತ್ತು ಬಂದಾಗ ಅವರ ಪರವಾಗಿ ನಾವು ಎರಡೆರಡು ಬಾರಿ ಮಂಗಳೂರು ಯುನಿವರ್ಸಿಟಿಯ ಕುಲಪತಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ಒಮ್ಮೆಯಂತೂ ಆಗಿನ ಕುಲಪತಿ‌ ಟಿ.ಸಿ.ಶಿವಶಂಕರ ಮೂರ್ತಿಗೆ ನನ್ನ ಕಟುವಾದ ಮಾತಿನಿಂದ ಸಿಟ್ಟು ಬಂದು ನನ್ನ ಮೇಲೆ ರೇಗಿದ್ದರು.

ಎರಡು ವರ್ಷಗಳ ಹಿಂದೊಮ್ಮೆ ಕರೆಮಾಡಿ, ‘ಜಿ.ರಾಜಶೇಖರ್ ಕುರಿತು ಒಂದು ಪುಸ್ತಕ ತರಬೇಕಿದೆ. ನೀವು ಅವರ ಕುರಿತು ಬರೆದ ಲೇಖನ ಓದಿದೆ, ಚೆನ್ನಾಗಿತ್ತು, ಸ್ವಲ್ಪ ವಿಸ್ತರಿಸಿ ಕೊಡಿ’ ಎಂದು ಕೇಳಿದ್ದರು. ನನ್ನದಾದರೋ ಒಮ್ಮೆ ಬರೆದ ಬಳಿಕ ಅದರಿಂದ ಕಳಚಿಬಿಡುವ ಅಭ್ಯಾಸ. ಅದನ್ನು ಪುನಃ ಬರೆದು ಕೊಡಿ ಎಂದು ಯಾರಾದರೂ ಒಮ್ಮೆ ಅಪೇಕ್ಷಿಸಿದರೆ ನಾನು ಈ ವರೆಗೆ ಯಾರಿಗೂ ಯಾವ ಬರಹವನ್ನು ಕೊಟ್ಟದ್ದಿಲ್ಲ. ಮೂರು ಬಾರಿ ಕೇಳಿದರೆ ಅವರ ಸೀರಿಯಸ್ಸಾಗಿಯೇ ಕೇಳುತ್ತಿದ್ದಾರೆ ಎಂದು ಭಾವಿಸುತ್ತೇನೆ. ಆಗ ಅದನ್ನು ಹುಡುಕಿ ಹಿಗ್ಗಿಸಿಯೋ, ಕುಗ್ಗಿಸಿಯೋ ಕೊಡುತ್ತೇನೆ. ಪಟ್ಟಾಭಿಯವರಲ್ಲಿ ಒಬ್ಬನಿಗೆ ಪದೇ ಪದೇ ಕರೆ ಮಾಡಿ ಅಂಗಲಾಚುವ ಸ್ವಭಾವ ಬಿಲ್ಕುಲ್ ಇರಲಿಲ್ಲ. ಅಂತಹ ಸ್ವಭಾವವನ್ನು ಅವರಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಷ್ಟು ಬಿಗಿ ವ್ಯಕ್ತಿತ್ವ ಅವರದ್ದು.

ಪಟ್ಟಾಭಿ ನನಗಂತಲ್ಲ.. ಅವರ ಹೆಚ್ಚಿನೆಲ್ಲಾ ಒಡನಾಡಿಗಳಿಗೆ ಅರ್ಥವಾಗದ ಒಗಟು. ಒಂಥರಾ ಅಂತರ್ಮುಖಿ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡಬೇಕಾದುದನ್ನು ಖಡಾಖಂಡಿತವಾಗಿ ಮಾತನಾಡುತ್ತಿದ್ದರು. ನನಗೆ ತಿಳಿದಂತೆ ಮಂಗಳೂರಿನಲ್ಲಿ ಸಹೋದ್ಯೋಗಿಗಳ ಹೊರತುಪಡಿಸಿ ಅವರ ಹೆಚ್ಚಿನೆಲ್ಲಾ ಸಂಪರ್ಕ ಮುಸ್ಲಿಮರ ಜೊತೆಗೇ ಇದ್ದದ್ದು. ಕೋಮುವಾದದ ಪ್ರಬಲ ಶತ್ರುವಾಗಿದ್ದ ಪಟ್ಟಾಭಿ ಆ ವಿಚಾರದಲ್ಲಿ ನೆಹರೂ ಅವರ ಸೈದ್ಧಾಂತಿಕ ಧಾರೆಯವರು. ಅವರು ಬಹುಸಂಖ್ಯಾತ ಕೋಮುವಾದವನ್ನು ವಿರೋಧಿಸಿದಷ್ಟು ಅಲ್ಪಸಂಖ್ಯಾತ ಕೋಮುವಾದದ ವಿರುದ್ಧ ಮಾತನಾಡಿಲ್ಲ. ನೆಹರೂ ಹೇಳುವ ಪ್ರಕಾರ “ಅಲ್ಪಸಂಖ್ಯಾತ ಕೋಮುವಾದ ಸ್ವತಃ ಆ ಸಮುದಾಯಕ್ಕೆ ಮಾರಕ, ಬಹುಸಂಖ್ಯಾತ ಕೋಮುವಾದ ದೇಶಕ್ಕೆ ಮಾರಕ”. ಆದುದರಿಂದಲೋ ಏನೋ ಪಟ್ಟಾಭಿ ಬಹುಸಂಖ್ಯಾತ ಕೋಮುವಾದದ ವಿರುದ್ಧ ಕಟುವಾಗಿ ಮಾತನಾಡುತ್ತಿದ್ದರು.

ಸರಕಾರಿ ಉದ್ಯೋಗಿಯಾಗಿಯೂ ಸರಕಾರದ ವಿರುದ್ಧ ಮಾತನಾಡುತ್ತಿದ್ದರು ಎಂದು ಎಲ್ಲರೂ ಹೇಳುತ್ತಿದ್ದರು. ಪಟ್ಟಾಭಿಯವರಲ್ಲಿ ಆ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಲುವೊಂದಿತ್ತು. “ನಾನು ಮಾತನಾಡುವುದು ಅಧಿಕಾರದಲ್ಲಿ ಕೂತ ವ್ಯಕ್ತಿಯ ಸ್ವಜನ ಪಕ್ಷಪಾತ, ಕೋಮುವಾದ, ಕೆಡುಕು ಇವುಗಳ ವಿರುದ್ಧವೇ ಹೊರತು ಸರಕಾರ ಎಂಬ ಸಂಸ್ಥೆಯ ವಿರುದ್ಧವಲ್ಲ. ನನಗೆ ಅವರ್ಯಾರೂ ತಮ್ಮ ಜೇಬಿನಿಂದ ಸಂಬಳ ಕೊಡುವುದಲ್ಲ. ದೇಶವಾಸಿಗಳ ತೆರಿಗೆಯ ದುಡ್ಡಿನಿಂದ ಸಂಬಳ ಬರುತ್ತಿದೆ. ದೇಶವಾಸಿಗಳಲ್ಲಿ ಒಂದು ವಿಭಾಗಕ್ಕೆ ಅನ್ಯಾಯವಾಗುವಾಗ ಅದನ್ನು ವಿರೋಧಿಸುವುದು ಜವಾಬ್ದಾರಿಯುತ ನಾಗರಿಕನಾಗಿ ನನ್ನ ಕರ್ತವ್ಯ” ಎಂದಿದ್ದರು. ನೋಟೀಸುಗಳ ಮೇಲೆ ನೋಟೀಸು ಹೋದರೂ, ವರ್ಗಾವಣೆಯಾದರೂ, ಅಮಾನತ್ತಾದರೂ ಅವರು ತನ್ನ ವ್ಯವಸ್ಥೆಯ ವಿರೋಧೀ ಮನೋಧರ್ಮವನ್ನು ತ್ಯಜಿಸಲೇ ಇಲ್ಲ.

ಪಟ್ಟಾಭಿ ಅಪ್ಪಟ ಗಾಂಧಿವಾದಿ. ಗಾಂಧಿವಾದವೆಂದರೆ ಗಾಂಧೀಜಿಯ ಉಡುಪಲ್ಲ, ಗಾಂಧೀಜಿಯ ಧಾರ್ಮಿಕ ವಿಶ್ವಾಸವೂ ಅಲ್ಲ, ಗಾಂಧೀಜಿಯ ಆಹಾರ ಶೈಲಿಯೂ ಅಲ್ಲ. ಗಾಂಧೀಜಿ ದೇಶದ ಹಿತಕ್ಕಾಗಿ ಆಯ್ದುಕೊಂಡ ಹೋರಾಟದ ದಾರಿ. ಪಟ್ಟಾಭಿ ಶಾಸ್ತ್ರೋಕ್ತವಾಗಿ ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಮದುವೆಯಾದಾಗ ಅವರ ಹಲವು ಒಡನಾಡಿಗಳೇ ಅವರನ್ನು ವಿಮರ್ಶಿಸಿದರು. ಅದನ್ನು ಕೆಲವು ಎಡಬಿಡಂಗಿತನವೆಂದರು. ಪಟ್ಟಾಭಿ ಯಾರಿಗೂ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಆಗ ನಾನು ಪಟ್ಟಾಭಿಯನ್ನು ಹೀಗೆ ಅರ್ಥೈಸಿದ್ದೆ. “ಪಟ್ಟಾಭಿ ಧಾರ್ಮಿಕ ವಿಧಿ ವಿಧಾನಗಳನುಸಾರ ಮದುವೆಯಾದರೆ ತಪ್ಪೇನು? ಅವರೆಲ್ಲಾದರೂ ಹಿಂದೂ ಧಾರ್ಮಿಕ ವಿಧಿ ವಿಧಾನಗಳನ್ನು ಟೀಕಿಸಿದ್ದಾರಾ..? ಖಂಡಿತಾ ಇಲ್ಲವಲ್ಲಾ. ಅವರು ವಿರೋಧಿಸಿದ್ದು ಹಿಂದೂಯಿಸಂನ ಹೆಸರಲ್ಲಿ ನಡೆಯುತ್ತಿದ್ದ ಬರ್ಬರತೆಯನ್ನು ಮಾತ್ರವಲ್ಲವೇ..?”
ಅವರು ಮದುವೆಯ ಹೊರತಾಗಿ ವೈಯಕ್ತಿಕವಾಗಿಯೂ ಧಾರ್ಮಿಕ ಆಚರಣೆಗಳನ್ನು ಆಚರಿಸಿದ್ದನ್ನು ಹತ್ತು ವರ್ಷಗಳ ಕಾಲದ ಅವರ ಜೊತೆಗಿನ ಒಡನಾಟದಲ್ಲಿ ಕಂಡಿಲ್ಲ. ಅವರಿಗೆ ಗಾಂಧಿಯ ಬಗ್ಗೆ ಇದ್ದ ಒಲವು ಅಪಾರವಾದುದು. ಭಾರತದ ಸಂಕಟಗಳಿಗೆ ಗಾಂಧಿ ಮಾರ್ಗದಲ್ಲಿ ಪರಿಹಾರ ಕಾಣಬಹುದೆಂದು ಅವರು ನಂಬಿದ್ದರು. ಅವರು ಗಾಂಧಿ ಕುರಿತು ತನ್ನ ಕಾಲೇಜಿನಲ್ಲಿ ಪ್ರತೀ ವರ್ಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು ಕೂಡಾ.

ಓರ್ವ ವ್ಯಕ್ತಿಯ ವ್ಯಕ್ತಿತ್ವದ ದೋಷಗಳನ್ನು ಇಟ್ಟುಕೊಂಡು ಆತ ಸರಿಯಿಲ್ಲ ಎನ್ನುವುದನ್ನು ನಾನಂತೂ ಒಪ್ಪಲಾರೆ. ಆತನಿಂದ ಸಮಾಜಕ್ಕೆ ಹಾನಿಯಾಗದಿದ್ದರಾಯಿತು ಅಷ್ಟೇ. ಹಾಗೆ ಯಾರ ವ್ಯಕ್ತಿತ್ವದಲ್ಲಿ ದೋಷವಿಲ್ಲ ಹೇಳಿ..? ದಿ‌ ಪರ್ಫೆಕ್ಟ್ ಮ್ಯಾನ್ ಎಂದು ಯಾರಿದ್ದಾರೆ..? ಪಟ್ಟಾಭಿ ಕೋಮುವಾದದ ವಿರುದ್ಧ ಯಾವ ನಿಲುವುಗಳನ್ನು ತಾಳಬೇಕಿತ್ತೋ ಆ ನಿಲುವುಗಳನ್ನು ಸದಾ ತಾಳಿದ್ದಾರೆ. ಅವರು ಅಂತಹ ಸಂದರ್ಭಗಳಲ್ಲಿ ಯಾವತ್ತೂ ತನ್ನ ಉದ್ಯೋಗ ಭದ್ರತೆಯ ಕುರಿತು ಯೋಚಿಸಿಲ್ಲ.

ನನ್ನ ತಂಗಿ ಪಟ್ಟಾಭಿಯವರ ವಿದ್ಯಾರ್ಥಿನಿಯಾಗಿದ್ದಳು. ಅವಳು ಹೇಳುವ ಪ್ರಕಾರ ಮತ್ತು ಅವರ ಇತರ ವಿದ್ಯಾರ್ಥಿಗಳು ಹೇಳುವ ಪ್ರಕಾರ ಪಟ್ಟಾಭಿ ಓರ್ವ ಅದ್ಭುತ ಅಧ್ಯಾಪಕ. ಅಕಾಡೆಮಿಕ್ ಆಗಿ ಅವರ ಮೇಲೆ ಬೆರಳು ತೋರಿಸುವ ಅರ್ಹತೆ ಇದ್ದ ಇನ್ನೊಬ್ಬ ಅಧ್ಯಾಪಕ ಇಡೀ ಮಂಗಳೂರು ಯುನಿವರ್ಸಿಟಿಯಲ್ಲಿರಲಿಲ್ಲ. ಹಾಗೆ ಯಾರೂ ಅವರ ವಿರುದ್ಧ ದೂರಿದ್ದು ನನಗಂತೂ ಗೊತ್ತಿಲ್ಲ. ಅವರು ತನ್ನ ಸೈದ್ಧಾಂತಿಕ ಒಲವು ನಿಲುವುಗಳನ್ನು ಕ್ಯಾಂಪಸ್ ಒಳಗೆ ತೋರಿಸಿದ್ದೇ ಇಲ್ಲ. ತರಗತಿಯಲ್ಲಿ ಏನು ಪಾಠ ಮಾಡಬೇಕೋ ಅದನ್ನು ಮಾತ್ರ ಪಾಠ ಮಾಡುತ್ತಿದ್ದರು. ಇಂಗ್ಲಿಷ್ ಅಧ್ಯಾಪಕರಾದುದರಿಂದ ಶೇಕ್ಸ್ ಪಿಯರ್, ಬ್ರೆಕ್ಟ್ ಮುಂತಾದ ಪಾಶ್ಚಾತ್ಯ ಸಾಹಿತಿ, ನಾಟಕಕಾರರುಗಳ ಸಾಹಿತ್ಯವನ್ನು ಮುಂದಿರಿಸಿಕೊಂಡು ಪ್ರಗತಿಪರ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರಷ್ಟೆ.
ಅವರಿಗೆ ತನ್ನ ಸಹೋದ್ಯೋಗಿಗಳ ಜೊತೆಗೆ ಜಗಳವೂ ಇರಲಿಲ್ಲ. ಯಾಕೆಂದರೆ ಅವರು ಕ್ಯಾಂಪಸ್ ಒಳಗೆ ತನ್ನ ಸಬ್ಜೆಕ್ಟ್ ಹೊರತಾಗಿ ಬೇರೇನನ್ನೂ ಮಾತಾಡುತ್ತಿರಲಿಲ್ಲ. ಅವರು ಕ್ಯಾಂಪಸ್ ಒಳಗೆ ಏನೇ ಮಾತನಾಡುವುದಾದರೂ ಅಳೆದು ತೂಗಿ ಮಾತನಾಡುತ್ತಿದ್ದರು.

ಬಿಜೆಪಿ ಸಂಘಪರಿವಾರವನ್ನು ಶತ್ರುವೆಂದು ಪರಿಗಣಿಸಿದರೂ ಸೈದ್ಧಾಂತಿಕವಾಗಿ ವಿರುದ್ಧ ಧ್ರುವಗಳಂತಿದ್ದ ಕಮ್ಯೂನಿಸ್ಟರು, ಜಮಾ‌ಅತೇ ಇಸ್ಲಾಮಿಯವರು, ಪಾಪ್ಯುಲರ್ ಫ್ರಂಟ್‌ನವರು ಹೀಗೆ ಎಲ್ಲರೂ ತಂತಮ್ಮ ಕಾರ್ಯಕ್ರಮಗಳಿಗೆ ಪಟ್ಟಾಭಿಯವರನ್ನು ಆಹ್ವಾನಿಸುತ್ತಿದ್ದರು ಎನ್ನುವುದೇ ಅವರ ವ್ಯಕ್ತಿತ್ವದ ವಿಶೇಷ. ಪಟ್ಟಾಭಿ ಸಂಘಪರಿವಾರದ ತಪ್ಪುಗಳನ್ನು ಖಂಡಿಸುವ, ವಿರೋಧಿಸುವ ಒಂದೇ ಒಂದು ಅವಕಾಶಗಳನ್ನು ಮಿಸ್ ಮಾಡುತ್ತಿರಲಿಲ್ಲ.

ಅವರ ಇಂಗ್ಲಿಷ್ ಜ್ಞಾನ ಅದ್ಭುತವಾಗಿತ್ತು. ಅವರು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದರೆ ಶಶಿ ತರೂರ್‌ರನ್ನೂ ಮೀರಿಸುತ್ತಿದ್ದರೇನೋ.. ಅಪಾರವಾದ ವಿದ್ವತ್ತು ಮತ್ತು ಆಳವಾದ ಓದು ಇದ್ದರೂ ಅವರು ಬರೆದದ್ದು ಕಡಿಮೆ. ಬರೆಯುತ್ತಿದ್ದರೆ ಓರ್ವ ಶ್ರೇಷ್ಠ ಗುಣಮಟ್ಟದ ವಿಮರ್ಶಕಗಾಗುತ್ತಿದ್ದರು. ಅವರದ್ದು ಮೌಖಿಕ ಪರಂಪರೆಯಾಗಿತ್ತು. ಬರೆಯಬೇಕಾದುದನ್ನು ಮಾತನಾಡಿಯೇ ಮುಗಿಸುತ್ತಿದ್ದರು.

ಪಟ್ಟಾಭಿಯ ಸಾವಿನಿಂದ ನಾಡು ಒಂದು ಪ್ರಬಲ ಜನಪರವಾದ ಧ್ವನಿಯನ್ನು ಕಳಕೊಂಡಿದೆ. ನಾಡು ಅವರು ಮಾಡಿದ ಕೆಲಸಗಳಿಗಾಗಿ ಅವರನ್ನು ಬಹುಕಾಲ ನೆನಪಿಡುತ್ತೆ. ಸಂತಾಪಗಳು ಪಟ್ಟಾಭಿ ಸರ್…

ಇಸ್ಮತ್ ಪಜೀರ್

(ಕರ್ನಾಟಕ ಕೋಮು ಸೌರ್ಹಾದ ವೇದಿಕೆಯ ಒಡನಾಡಿ)

ಇದನ್ನೂ ಓದಿ: ಹಾಸನ: ಶಾಲೆಯಲ್ಲಿ ಬಕ್ರಿದ್ ಆಚರಣೆ ವಿರುದ್ದ ಹಿಂದುತ್ವ ಸಂಘಟನೆಗಳ ಆಕ್ರೋಶ; ಆಡಳಿತ ಮಂಡಳಿ ಸ್ಪಷ್ಟನೆ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...