Homeಕರ್ನಾಟಕಹಾಸನ: ಶಾಲೆಯಲ್ಲಿ ಬಕ್ರಿದ್ ಆಚರಣೆ ವಿರುದ್ದ ಹಿಂದುತ್ವ ಸಂಘಟನೆಗಳ ಆಕ್ರೋಶ; ಆಡಳಿತ ಮಂಡಳಿ ಸ್ಪಷ್ಟನೆ ಇಲ್ಲಿದೆ..

ಹಾಸನ: ಶಾಲೆಯಲ್ಲಿ ಬಕ್ರಿದ್ ಆಚರಣೆ ವಿರುದ್ದ ಹಿಂದುತ್ವ ಸಂಘಟನೆಗಳ ಆಕ್ರೋಶ; ಆಡಳಿತ ಮಂಡಳಿ ಸ್ಪಷ್ಟನೆ ಇಲ್ಲಿದೆ..

- Advertisement -
- Advertisement -

ಬಕ್ರೀದ್ ಹಬ್ಬದ ಹಿನ್ನೆಲೆ ಶಾಲೆಯಲ್ಲಿ ಮಕ್ಕಳು ಸಾಮೂಹಿಕ ನಮಾಜ್ ಮಾಡಿರುವ ಆರೋಪ ಹಾಸನದಲ್ಲಿ ಕೇಳಿ ಬಂದಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಜ್ಞಾನಸಾಗರ ಇಂಟರ್​ ನ್ಯಾಷನಲ್ ಶಾಲೆಯ ವಿರುದ್ಧ ಹಿಂದುತ್ವ ಸಂಘಟನೆಗಳು ಗಂಭೀರ ಆರೋಪ ಮಾಡಿದ್ದು, ಮಕ್ಕಳನ್ನು ಒಟ್ಟಿಗೆ ಸೇರಿಸಿ ಮುಸ್ಲಿಂ ಧರ್ಮದ ಶ್ಲೋಕ ಹೇಳಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಸಾಮೂಹಿಕವಾಗಿ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೇವಲ ಮೂರು ಮುಸ್ಲಿಂ ಮಕ್ಕಳು ಮಾತ್ರ ಪ್ರಾರ್ಥನೆ ಮಾಡಿವೆ. ಬೇರೆ ಮಕ್ಕಳಿಂದ ಪ್ರಾರ್ಥನೆ ಮಾಡಿಸಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವೈರಲ್ ಆಗಿರೋ ವಿಡಿಯೋಗೆ ಸ್ಪಷ್ಟನೆ ನೀಡಿದೆ.

ಶಾಲೆ ಆಡಳಿತ ಮಂಡಳಿ ಸ್ಪಷ್ಟನೆ

ಮಕ್ಕಳಿಂದ ಪ್ರಾರ್ಥನೆ ಮಾಡಿಸಿಲ್ಲ, ಕೇವಲ ಭಾವೈಕ್ಯತೆ ಮೂಡಿಸುವ ಉದ್ಧೇಶದಿಂದ ಆಚರಣೆ ಮಾಡಿದ್ದೇವೆ. ಮುಸ್ಲಿಂ ಸಮುದಾಯದ ಮೂರು ಮಕ್ಕಳು ಮಾತ್ರ ನಮಾಜ್ ಮಾಡಿದ್ದಾರೆ. ಉಳಿದ ಮಕ್ಕಳು ಕಣ್ಮುಚ್ಚಿ ಕುಳಿತಿದ್ದರು ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ನಾವು ಶಾಲೆಯಲ್ಲಿ ಎಲ್ಲಾ ಹಬ್ಬಗಳನ್ನು ಆಚರಣೆ ಮಾಡುತ್ತೇವೆ. ಕೇವಲ ಮುಸ್ಲಿಂ ಹಬ್ಬ ಮಾತ್ರವಲ್ಲ ಎಲ್ಲಾ ಧರ್ಮದ ಹಬ್ಬಗಳ ಪರಿಚಯ ಮಾಡಲು ಸಾಂಕೇತಿಕ ಆಚರಣೆ ಮಾಡಲಾಗುತ್ತಿದೆ. ಈಗ ನೀವು ಬೇಡ ಎಂದು ಹೇಳಿದ ಮೇಲೆ ನಾವು ಆಚರಣೆ ಮಾಡಿಸಲ್ಲ ಎಂದು ಶಿಕ್ಷಕ ವರ್ಗ ಹೇಳಿದೆ.

ಮಕ್ಕಳು ಕಾರ್ಯಕ್ರಮ ನೀಡುತ್ತಿರುವ ವೇಳೆ ಇನ್ನುಳಿದವರು ಗಲಾಟೆ ಮಾಡಬಾರದು ಎಂದು ಕಣ್ಣುಚ್ಚಿ ಕುಳಿತುಕೊಳ್ಳಲು ಸೂಚನೆ ನೀಡಲಾಗಿತ್ತು. ಕುರಾನ್ ಪಠಣೆ ಮಾಡಿಸಲಾಗಿದೆಯಾ ಅಥವಾ ಇಲ್ಲವೇ ಎಂಬುದನ್ನು ಮಕ್ಕಳನ್ನು ಕೇಳಿ ತಿಳಿದುಕೊಳ್ಳಿ, ಇದು ಕೇವಲ ಮೂರು ಮಕ್ಕಳಿಂದ ನಡೆದ ಕಾರ್ಯಕ್ರಮವಾಗಿದೆ. ನಿಮಗೆ ಅನುಮಾನ ಇದ್ದರೆ ಮಕ್ಕಳ ಜೊತೆ ಮಾತನಾಡಬಹುದು ಎಂದು ಶಿಕ್ಷಕರು ಹೇಳಿದ್ದಾರೆ.

ಸೋಮವಾರ ಹೋರಾಟಕ್ಕೆ ಕರೆ

ಶಾಲೆಯಲ್ಲಿ ಮುಸ್ಲಿಂ ಧರ್ಮ ಸಾಮೂಹಿಕ ಆಚರಣೆ ಖಂಡಿಸಿ ಸೋಮವಾರ ಹೋರಾಟಕ್ಕೆ ಹಿಂದುತ್ವ ಸಂಘಟನೆಗಳು ಕರೆ ನೀಡಿದೆ. ಸದ್ಯ ಶಾಲೆಯ ಈ ಕಾರ್ಯಕ್ರಮ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...