Homeಅಂಕಣಗಳುವಿಧಾನ ಪರಿಷತ್ತು ಪುಡಾರಿಗಳ ಪುನರ್ವಸತಿ ಕೇಂದ್ರವೇ?

ವಿಧಾನ ಪರಿಷತ್ತು ಪುಡಾರಿಗಳ ಪುನರ್ವಸತಿ ಕೇಂದ್ರವೇ?

- Advertisement -
- Advertisement -

ವಿಧಾನ ಪರಿಷತ್ತಿಗೆ ಹಾಲಿ ಇದ್ದ ಸದಸ್ಯರ ಅವಧಿ ಮುಗಿದಿದ್ದರಿಂದ ಅವರ ಸ್ಥಾನದಲ್ಲಿ ಹೊಸಬರನ್ನು ಚುನಾಯಿಸುವ ಸಂದರ್ಭ ಒದಗಿದೆ. ವಿಧಾನ ಪರಿಷತ್ತನ್ನು ಸಾಮಾನ್ಯವಾಗಿ ಮೇಲ್ಮನೆ ಎಂದು ಕರೆಯಲಾಗುತ್ತದೆ. ಮೇಲ್ಮನೆಯ ಕೆಲಸ ವಿಧಾನ ಸಭೆಯಲ್ಲಿ ಮಂಡಿಸಲಾಗುವ ಹಾಗೂ ಅಂಗೀಕಾರವಾಗುವ ಮಸೂದೆಗಳು ಜನಪರವಾಗಿವೆಯೇ ಇಲ್ಲವೇ ಎಂಬುದನ್ನು ಅಥವಾ ಏನಾದರೂ ದೋಷಗಳಿವೆಯೇ ಎಂಬುದನ್ನು ಪರಿಶೀಲಿಸುವುದು; ಒಂದುವೇಳೆ ಏನಾದರೂ ದೋಷಗಳು ಕಂಡುಬಂದಲ್ಲಿ ಸದರಿ ಮಸೂದೆಯನ್ನು ಪುನರ್‍ಪರಿಶೀಲನೆಗಾಗಿ ವಿಧಾನಸಭೆಗೆ ವಾಪಸ್ ಕಳಿಸಲಾಗುತ್ತದೆ. ಮೇಲ್ಮನೆಯಲ್ಲಿ ಎತ್ತಲಾದ ಎಲ್ಲಾ ಆಕ್ಷೇಪಣೆಗಳನ್ನು ಪುನಃ ಪರಿಶೀಲಿಸಿ ಮತ್ತೆ ವಿಧಾನಸಭೆಯ ಮುಂದೆ ಮಂಡಿಸಿ ಹೀಗೆ ತಿದ್ದುಪಡಿಯಾದ ಮಸೂದೆಯನ್ನು ಮತ್ತೆ ವಿಧಾನಪರಿಷತ್ತಿಗೆ ರವಾನಿಸಬೇಕು. ವಿಧಾನ ಪರಿಷತ್ತು ಈ ತಿದ್ದುಪಡಿಯಾದ ಮಸೂದೆಯನ್ನೂ ಕೂಲಂಕಷವಾಗಿ ಪರಿಶೀಲಿಸಿ ಅದಕ್ಕೆ ಒಪ್ಪಿಗೆ ಕೊಟ್ಟ ನಂತರ ಮತ್ತೆ ವಿಧಾನಸಭೆಗೆ ಕಳಿಸಲಾಗುವುದು. ಈ ಮಸೂದೆಯನ್ನು ವಿಧಾನಸಭೆ ಅಂಗೀಕರಿಸಿದ ಮೇಲೆಯೇ ಮಸೂದೆ ಶಾಸನವಾಗಿ ಪರಿವರ್ತನೆಯಾಗುವುದು. ಅದರಂತೆಯೇ, ಸರ್ಕಾರ ರೂಪಿಸುವ ಎಲ್ಲವನ್ನೂ ಪ್ರಶ್ನಿಸುವ ಅಧಿಕಾರ ಕೂಡ ಈ ಮೇಲ್ಮನೆಗೆ ಇದೆ.

ಮೇಲ್ಮನೆಯಲ್ಲಿ ಶಾಸನಸಭೆಯಿಂದ ಆರಿಸಿ ಹೋಗುವ 25 ಸದಸ್ಯರು, ಸ್ಥಳೀಯ ಸಂಸ್ಥೆಗಳಿಂದ 25, ಶಿಕ್ಷಕರ ಕ್ಷೇತ್ರದಿಂದ 7 ಮತ್ತು ಪದವೀಧರರ ಕ್ಷೇತ್ರದಿಂದ 7 ಸದಸ್ಯರು ಆಯ್ಕೆಯಾಗುತ್ತಾರೆ. ಇವರ ಜೊತೆಗೆ ಸರ್ಕಾರ (ರಾಜ್ಯಪಾಲರ ಮೂಲಕ) 11 ಮಂದಿ ಗಣ್ಯರನ್ನು ನಾಮಕರಣ ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ಹೀಗೆ ನಮ್ಮ ವಿಧಾನ ಪರಿಷತ್ತಿನಲ್ಲಿ ಒಟ್ಟು 75 ಸದಸ್ಯ ಬಲವಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ 1/3 ಭಾಗದಷ್ಟು ಸದಸ್ಯರು ನಿವೃತ್ತಿಯಾಗಿ ಹೊಸಸದಸ್ಯರು ಆಯ್ಕೆಯಾಗಬೇಕಾಗುತ್ತದೆ. ಈಗಿನ ಚುನಾವಣೆ ಕೂಡ ಅಂಥ ಒಂದು ಪ್ರಕ್ರಿಯೆಯೇ.

ಒಟ್ಟಿನಲ್ಲಿ ಈ ಮೇಲ್ಮನೆ ವಿಧಾನಸಭೆಯ ಕಾವಲು ಸಮಿತಿಯಾಗಿ ಕೆಲಸ ಮಾಡಬೇಕು. ಈ ಕಾವಲು ಸಮಿತಿಯಲ್ಲಿ ಪಕ್ಷಾತೀತರೂ, ಗಣ್ಯರೂ, ಕಾನೂನು ಕಟ್ಟಲೆಗಳ ಜ್ಞಾನ ಇರುವವರೂ, ಶಾಸನ ಸಭೆಯ ಸದಸ್ಯರ ಮನ್ನಣೆಗೆ ಪಾತ್ರರಾದವರು ಮಾತ್ರ ಇರಬೇಕು. ಹಾಗಾದಾಗ ಮಾತ್ರ ಮೇಲ್ಮನೆಯ ಪರಿಕಲ್ಪನೆ ಸಾರ್ಥಕವಾಗುತ್ತದೆ. ರಾಜ್ಯದ ವಿಧಾನ ಪರಿಷತ್ತಿನ ರೀತಿಯಲ್ಲೇ ಕೇಂದ್ರದಲ್ಲಿ ರಾಜ್ಯಸಭೆ ಇದೆ. ಪ್ರತಿಭಾವಂತರು ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಉತ್ತಮ ಕೊಡುಗೆ ನೀಡಬಲ್ಲವರನ್ನು ಇಂಥಾ ಸ್ಥಾನಕ್ಕೆ ಆಯ್ಕೆ ಮಾಡುತ್ತಿದ್ದರೆಂಬುದಕ್ಕೆ ಅಂಬೇಡ್ಕರ್ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಿದ್ದು ಉತ್ತಮ ಉದಾಹರಣೆ. ಖ್ಯಾತ ವಿಜ್ಞಾನಿ ಡಾ.ರಾಜಾರಾಮಣ್ಣನಂಥವರೂ ಕೂಡ ರಾಜ್ಯಸಭೆ ಸದಸ್ಯರಾಗಿದ್ದರು. ಕರ್ನಾಟಕದ ಉದಾಹರಣೆ ನೋಡುವುದಾದರೂ ಕಾರ್ಮಿಕ ನಾಯಕ ಬಿವಿ ಕಕ್ಕಿಲ್ಲಾಯ, ಅಬ್ದುಲ್ ನಜೀರ್ ಸಾಬ್, ವೈಕುಂಠ ಬಾಳಿಗಾ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಬಸವರಾಜ ಕಟ್ಟೀಮನಿ ಮುಂತಾದ ಗಣ್ಯರು ಈ ಮೇಲ್ಮನೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದನ್ನು ನಾವು ಸ್ಮರಿಸಿಕೊಳ್ಳಬಹುದು. ಇದು ಇತಿಹಾಸದ ಮಾತು.
ಸ್ವಾತಂತ್ರ್ಯ ಬಂದ ಮೇಲೆ ಹತ್ತಾರು ವರ್ಷಗಳ ಕಾಲ ಇಂತಹ ಗಣ್ಯರನ್ನೇ ಆಡಳಿತ ನಡೆಸುವ ಸರ್ಕಾರಗಳು ಆಯ್ಕೆಮಾಡುತ್ತಿದ್ದವು. ನಂತರದ ದಿನಮಾನಗಳಲ್ಲಿ ಆರಂಭವಾಯಿತು ಅಧಃಪತನ. ಜಾತಿವಾರು ಆಯ್ಕೆ, ಸ್ವಜನ ಪಕ್ಷಪಾತ, ತಮ್ಮ ಪಕ್ಷದವರನ್ನೇ ಆಯ್ಕೆ ಮಾಡಿಕೊಳ್ಳುವುದು, ಚುನಾವಣೆಗಳಲ್ಲಿ ಸೋತ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮೇಲ್ಮನೆಯಲ್ಲಿ ‘ಪುನರ್‍ವಸತಿ ಕಲ್ಪಿಸುವುದು’ ಇಂದು ಎಲ್ಲ ಪಕ್ಷಗಳಲ್ಲೂ ವ್ಯಾಪಕವಾಗಿದೆ. ಕೆಲವು ಉದ್ಯಮಿಗಳ ಬಳಿ ಕೋಟ್ಯಾಂತರ ರೂಪಾಯಿ ಹಣ ಪಡೆದು ಮೇಲ್ಮನೆಯ ಸದಸ್ಯತ್ವವನ್ನು ಮಾರಾಟ ಮಾಡುವ ಅಧಮ ರಾಜಕೀಯ ನಾಯಕರು ಹುಟ್ಟಿಕೊಂಡಿದ್ದಾರೆ. ಈಗಿನ ಮೇಲ್ಮನೆಯಲ್ಲಿ 50 ವರ್ಷಗಳ ಹಿಂದಿನಂತೆ ಅರ್ಹತೆಯುಳ್ಳವರು, ವರ್ಚಸುಳ್ಳವರು, ಗಣ್ಯರು, ಪಾರ್ಲಮೆಂಟೇರಿಯನ್‍ಗಳು, ಜನರ ಗೌರವಕ್ಕೆ ಪಾತ್ರರಾದವರ ಸಂಖ್ಯೆ ವಿರಳವಾಗುತ್ತಿದೆ. ವಾಸ್ತವದಲ್ಲಿ, ಮೇಲ್ಮನೆ ಕೆಳಮನೆಯ ಮಟ್ಟಕ್ಕೇ ಇಳಿದುಬಿಟ್ಟಿದೆ.


ಮೇಲ್ಮನೆ ಈಗ ವಿಧಾನಸಭೆಯ ಕಾಲೆಳೆಯುವ, ಕುಹಕಿಗಳಿಂದ ಕೂಡಿದ ಕೂಟವಾಗಿದೆ. ಇದರ ಘನತೆ ಗೌರವಗಳು ಹಾರಿಹೋಗಿವೆ. ಮೇಲ್ಮನೆ ವಿಧಾನಸಭೆಯ ಹಿತೈಷಿಯಾಗಿದ್ದರ ಬದಲಾಗಿ, ವಿಧಾನಸಭೆಯ ಶತ್ರು ಎನಿಸಿದೆ. ವಿಧಾನಸಭೆಯ ಘನತೆಯನ್ನು ಹೆಚ್ಚಿಸುವ ಕೆಲಸ ವಿಧಾನಪರಿಷತ್ತು ಮಾಡಬೇಕು. ಕಾಲ ಕಾಲಕ್ಕೆ ರಚನಾತ್ಮಕ ಸಲಹೆಗಳನ್ನು ನೀಡಿ, ವಿಧಾನ ಸಭೆ ಸರಿಯಾದ ದಾರಿಯಲ್ಲಿ ಸಾಗಲು ನೆರವಾಗಬೇಕು.
ವಿಧಾನಸಭೆ ಜನಪರವಾಗಿ ಕೆಲಸಮಾಡಲಿಕ್ಕೂ, ಸಂವಿಧಾನದ ಆಶಯವಾದ ಬಡವ – ಬಲ್ಲಿದ ಅಂತರವನ್ನು ತಗ್ಗಿಸುವ ಸಾಧನವನ್ನಾಗಿ ಪರಿವರ್ತಿಸುವ ಕೆಲಸವನ್ನೂ ವಿಧಾನ ಪರಿಷತ್ತು ಮಾಡಬೇಕಿತ್ತು. ಸರ್ಕಾರ ನಡೆಸುವವರ ಓರೆಕೋರೆಗಳನ್ನು ತಿದ್ದಿ, ಕಾನೂನಿಗನುಸಾರ ಕೆಲಸ ಮಾಡಿಸುವ ಕಾವಲು ಸಮಿತಿಯ ಪಾತ್ರವನ್ನು ನಿರ್ವಹಿಸಬೇಕು.
ಈಗಿನ ದುರಂತವೆಂದರೆ, ಹಾಲಿ ವಿಧಾನ ಪರಿಷತ್ತಿನಲ್ಲಿ ಕ್ರಿಮಿನಲ್‍ಗಳು, ಭೂಗಳ್ಳರು, ರಿಯಲ್ ಎಸ್ಟೇಟ್ ಧಂಧೆಯವರು, ಪಕ್ಷದ ನಾಯಕರ ಆಸ್ತಿಗಳನ್ನು ಕಾಪಾಡುವ ಏಜೆಂಟರು… ಎಲ್ಲರೂ ಇದ್ದಾರೆ. ಇಂತಹ ವಿಧಾನಪರಿಷತ್ತಿನ ಅಗತ್ಯತೆ ಇದೆಯೇ?
ಕುಮಾರಸ್ವಾಮಿಯವರ ಸರ್ಕಾರದಲ್ಲಿಯಾದರೂ ಘನತೆವೆತ್ತ ಜನರನ್ನು ಪರಿಷತ್ತಿಗೆ ಆಯ್ಕೆ ಮಾಡುವ ಪರಿಪಾಠ ಆರಂಭವಾಗುತ್ತದೆಯೆಂಬ ನಿರೀಕ್ಷೆ ಹುಸಿಯಾಗಿದೆ. ವಿಧಾನ ಪರಿಷತ್ತನ್ನು ಯಾವ ಉದಾತ್ತ ದೃಷ್ಟಿಯಿಂದ ಆರಂಭಿಸಲಾಯಿತೋ ಆ ದಿನಗಳು ಮತ್ತೆ ಬರುತ್ತವೆಯೆ?
– ಎಚ್.ಎಸ್.ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...