Homeಮುಖಪುಟನಿತೀಶ್‌ಗಾಗಿ ಬಾಗಿಲು ಯಾವಾಗಲೂ ತೆರೆದಿರುತ್ತದೆ: ಲಾಲೂ ಪ್ರಸಾದ್ ಯಾದವ್

ನಿತೀಶ್‌ಗಾಗಿ ಬಾಗಿಲು ಯಾವಾಗಲೂ ತೆರೆದಿರುತ್ತದೆ: ಲಾಲೂ ಪ್ರಸಾದ್ ಯಾದವ್

- Advertisement -
- Advertisement -

ಮುಂಬರುವ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಆರ್‌ಜೆಡಿ ಅಭ್ಯರ್ಥಿಗಳಾದ ಮನೋಜ್ ಝಾ ಮತ್ತು ಸಂಜಯ್ ಯಾದವ್ ಅವರ ಬೆಂಬಲ ಸೂಚಿಸಲು ವಿಧಾನಸಭೆಗೆ ತೆರಳಿದ್ದ ಲಾಲೂ ಪ್ರಸಾದ್ ಯಾದವ್ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಖಾಮುಖಿಯಾಗಿದ್ದು, ಉಭಯ ನಾಯಕರು ಸಂತೋಷವನ್ನು ವಿನಿಮಯ ಮಾಡಿಕೊಂಡಿದ್ದಾರೆ.

ಮಹಾಘಟಬಂಧನ್‌ ತ್ಯಜಿಸುವ ನಿತೀಶ್‌ ಕುಮಾರ್‌ ನಿರ್ಧಾರದ ನಂತರ ಇದು ಅವರ ನಡುವಿನ ಮೊದಲ ಮುಖಾಮುಖಿಯಾಗಿದೆ. ನಿತೀಶ್ ಕುಮಾರ್ ಅವರು ಮಹಾಮೈತ್ರಿಕೂಟಕ್ಕೆ ಮರಳುವ ಸಾಧ್ಯತೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಪ್ರತಿಕ್ರಿಯಿಸಿದ್ದು, “ಅವರು ಮೊದಲು ಹಿಂತಿರುಗಿ ಬರಲಿ; ನಂತರ ನಾವು ಯೋಚಿಸುತ್ತೇವೆ (ಜಬ್ ಆಂಗೆ ಟ್ಯಾಬ್ ದೇಖಾ ಜಾಯೇಗಾ)” ಎಂದು ಉತ್ತರಿಸಿದರು.

ತಮ್ಮ ಹಳೆಯ ಮಿತ್ರನಿಗೆ ಇನ್ನೂ ಬಾಗಿಲು ತೆರೆದಿದೆಯೇ ಎಂಬ ಮರು ಪ್ರಶ್ನೆಗೆ, ‘ಹೌದು.. ಯಾವಾಗಲೂ ತೆರೆದಿರುತ್ತದೆ (ಖುಲಾ ಹೈ ರಹತಾ ಹೈ)’ ಎಂದು ಉತ್ತರಿಸಿದರು.

ಜೆಡಿಯು ಮುಖ್ಯ ವಕ್ತಾರ ಮತ್ತು ಎಂಎಲ್‌ಸಿ ನೀರಜ್ ಕುಮಾರ್ ಅವರು ಊಹಾಪೋಹಗಳಿಗೆ ತೆರೆ ಎಳೆದಿದ್ದು, ‘ಬಾಗಿಲುಗಳು ಇನ್ನೂ ತೆರೆದಿವೆ ಎಂದು ಲಾಲು ಜಿ ಹೇಳುತ್ತಾರೆ. ಅಲಿಘರ್‌ನ ಪ್ರಸಿದ್ಧ ಬೀಗವನ್ನು ಬಾಗಿಲುಗಳ ಮೇಲೆ ಇರಿಸಲಾಗಿದೆ ಎಂದು ಅವರು ತಿಳಿದಿರಬೇಕು. ನಮ್ಮ ನಾಯಕ ನಿತೀಶ್ ಕುಮಾರ್ ಅವರು ಆರ್‌ಜೆಡಿ ನಮ್ಮೊಂದಿಗೆ ಅಧಿಕಾರ ಹಂಚಿಕೊಂಡಾಗಲೆಲ್ಲಾ ಅದು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪುನಃ ಹಿಂತಿರುಗುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.

ಲಾಲು ಪ್ರಸಾದ್ ಅವರ ಪುತ್ರ ಮತ್ತು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಶುಕ್ರವಾರ ಸಸಾರಾಮ್‌ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಉದ್ದೇಶಿಸಿ ಮಾತನಾಡುವಾಗ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

‘ನಮ್ಮ ಸಿಎಂ ಹೇಗಿದ್ದಾರೆಂದು ನಿಮಗೆಲ್ಲ ಚೆನ್ನಾಗಿ ಗೊತ್ತಿದೆ, ಯಾರ ಮಾತನ್ನೂ ಕೇಳಲು ಇಷ್ಟಪಡುವುದಿಲ್ಲ. ಬೇಕಾದರೆ ನಾನು ಸಾಯುತ್ತೇನೆ, ಆದರೆ ಬಿಜೆಪಿ ಸೇರುವುದಿಲ್ಲ ಎಂದು ಹೇಳುತ್ತಿದ್ದರು.. ನಾವು ನಿತೀಶ್ ಜೀ ಜೊತೆಗೇ ಇರಲು ನಿರ್ಧರಿಸಿದ್ದೇವೆ. 2024ರಲ್ಲಿ ಬಿಜೆಪಿಯನ್ನು ಸೋಲಿಸಲು ನಾವು ಸಾಕಷ್ಟು ತ್ಯಾಗ ಮಾಡಬೇಕಾಗಿದೆ. ನಾವು ಬೇಸತ್ತ ಮುಖ್ಯಮಂತ್ರಿಯನ್ನು ನೇಮಿಸಿದ್ದೇವೆ’ ಎಂದು ತೇಜಸ್ವಿ ಯಾದವ್ ಹೇಳಿದರು.

ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ ಅವರ ಹಾದಿಯು ದಶಕಗಳಿಂದ ಬಿಹಾರದ ರಾಜಕೀಯದೊಂದಿಗೆ ಹೆಣೆದುಕೊಂಡಿದೆ. ಇಬ್ಬರೂ ಸಹ ಕಳೆದ 33 ವರ್ಷಗಳಿಗೂ ಹೆಚ್ಚು ಕಾಲ ರಾಜ್ಯದಲ್ಲಿ ಅಧಿಕಾರ ನಡೆಸಿದ್ದಾರೆ. ಜೆಪಿ ಚಳವಳಿಯ ಸಮಯದಲ್ಲಿ ಮಿತ್ರಪಕ್ಷಗಳಾಗಿ ಪ್ರಾರಂಭವಾದ ಅವರು ನಂತರ ಪ್ರತಿಸ್ಪರ್ಧಿಗಳಾದರು, ನಂತರ ಮಿತ್ರರು, ನಂತರ ಪ್ರತಿಸ್ಪರ್ಧಿಗಳು, ನಂತರ ಮಿತ್ರರು ಮತ್ತು ನಂತರ ಮತ್ತೆ ಪ್ರತಿಸ್ಪರ್ಧಿಗಳಾಗಿದ್ದಾರೆ.

ಇದನ್ನೂ ಓದಿ; ರೈತರ ದೆಹಲಿ ಚಲೋ ಮೆರವಣಿಗೆ: ಎಂಎಸ್‌ಪಿ ಜಾರಿಗೆ ಒಪ್ಪದ ಕೇಂದ್ರ; ಮೂರನೇ ಸುತ್ತಿನ ಸಭೆಯೂ ವಿಫಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...