Homeಮುಖಪುಟದೆಹಲಿ ಎಸ್‌ಐಆರ್ : ಮುಸ್ತಫಾಬಾದ್‌ನ ಸುಳ್ಳು 'ಫಾರಂ-7' ಅರ್ಜಿಗಳ ಕುರಿತು ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ...

ದೆಹಲಿ ಎಸ್‌ಐಆರ್ : ಮುಸ್ತಫಾಬಾದ್‌ನ ಸುಳ್ಳು ‘ಫಾರಂ-7’ ಅರ್ಜಿಗಳ ಕುರಿತು ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

- Advertisement -
- Advertisement -

ದೆಹಲಿಯ ಮುಸ್ತಫಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ವೇಳೆ ಮತದಾರರ ಹೆಸರನ್ನು ಅಳಿಸಿಹಾಕಲು ನಕಲಿ ‘ಫಾರಂ-7’ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬ ದೂರಿನ ಕುರಿತು ಪರಿಶೀಲನೆ ನಡೆಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ನವೆಂಬರ್ 19) ಭಾರತೀಯ ಚುನಾವಣಾ ಆಯೋಗ (ಇಸಿಐ) ಮತ್ತು ದೆಹಲಿಯ ಮುಖ್ಯ ಚುನಾವಣಾಧಿಕಾರಿಗೆ (ಸಿಇಒ) ನಿರ್ದೇಶನ ನೀಡಿದೆ.

ಆರೋಪಗಳು ಸತ್ಯವೆಂದು ಕಂಡುಬಂದರೆ ಕಾನೂನಿನ ಪ್ರಕಾರ ಅಗತ್ಯವಿರುವ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಕಾಂಗ್ರೆಸ್ ನಾಯಕ ಅಲಿ ಮೆಹದಿ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ಪೀಠವು, ಆರೋಪಗಳ ಸತ್ಯಾಸತ್ಯತೆಯ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಅರ್ಜಿಯನ್ನು ಇತ್ಯರ್ಥಪಡಿಸಿದೆ.

‘ದಿ ಹಿಂದೂ’ ಪತ್ರಿಕೆಯ ವರದಿಯನ್ನು ಆಧರಿಸಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಮತದಾರರು ಮೃತಪಟ್ಟಿದ್ದಾರೆ ಅಥವಾ ಸ್ಥಳಾಂತರಗೊಂಡಿದ್ದಾರೆ ಎಂದು ಕಾರಣ ನೀಡಿ ಸಲ್ಲಿಸಲಾದ ಹಲವು ಫಾರಂ-7 ಅರ್ಜಿಗಳಿಗೆ ತಾವು ಸಹಿ ಹಾಕಿಲ್ಲ ಎಂದು ಬೂತ್ ಮಟ್ಟದ ಏಜೆಂಟರು (ಬಿಎಲ್‌ಎಗಳು) ನಿರಾಕರಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅಲ್ಲದೆ, ಹೆಸರು ಅಳಿಸಲು ಅರ್ಜಿ ಸಲ್ಲಿಸಲಾದ 28 ಮತದಾರರು ವಾಸ್ತವವಾಗಿ ಜೀವಂತವಾಗಿದ್ದು, ಅದೇ ವಿಳಾಸದಲ್ಲಿ ವಾಸಿಸುತ್ತಿದ್ದಾರೆ ಎಂದು ಅರ್ಜಿದಾರರು ತಿಳಿಸಿದ್ದರು. ವಿಚಾರಣೆಯ ವೇಳೆ, ಸಲ್ಲಿಸಲಾದ 37 ಫಾರಂ-7 ಅರ್ಜಿಗಳಲ್ಲಿ 36 ಅರ್ಜಿಗಳು ನಕಲಿಯಾಗಿವೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಬೂತ್ ಮಟ್ಟದ ಏಜೆಂಟರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಾಗಿರುವುದರಿಂದ ಚುನಾವಣಾ ಆಯೋಗಕ್ಕೆ ಅವರ ಮೇಲೆ ನೇರ ನಿಯಂತ್ರಣವಿರುವುದಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ. “ಒಬ್ಬ ಬೂತ್ ಮಟ್ಟದ ಏಜೆಂಟ್ ನಕಲಿ ಅರ್ಜಿ ಸಲ್ಲಿಸಿದರೆ, ಚುನಾವಣಾ ಆಯೋಗವು ಅವರನ್ನು ಕಪ್ಪುಪಟ್ಟಿಗೆ ಸೇರಿಸಬಹುದು. ಅದಕ್ಕಿಂತ ಹೆಚ್ಚಿನ ನಿಯಂತ್ರಣ ಆಯೋಗಕ್ಕಿಲ್ಲ” ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದ್ದಾರೆ.

ತಮ್ಮ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಅರ್ಜಿದಾರರು ತಿಳಿಸಿದಾಗ, ಈ ಕುರಿತು ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.

ಅರ್ಜಿದಾರರು ಈಗಾಗಲೇ ಪೊಲೀಸರು, ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿರುವುದನ್ನು ಗಮನಿಸಿದ ಪೀಠವು, ಸಂಬಂಧಪಟ್ಟ ಅಧಿಕಾರಿಗಳು ದೂರನ್ನು ಪರಿಶೀಲಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

Courtesy: livelaw.in

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಕ್ಕಲಿಗ ರಾಜಕಾರಣದ ಅಸ್ಮಿತೆ: ಪಾರಂಪರಿಕ ಪ್ರಾಬಲ್ಯ ಮತ್ತು ಹೊಸ ನಾಯಕತ್ವದ ‘ಡಿಕೆಶಿ V/s ಕುಮಾರ ಸಂಘರ್ಷ’

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಜಾತಿ ಸಮೀಕರಣಗಳು ಮತ್ತು ಸಮುದಾಯದ ನಾಯಕತ್ವವು ಸದಾ ನಿರ್ಣಾಯಕ ಪಾತ್ರ ವಹಿಸುತ್ತಲೇ ಬಂದಿವೆ. ಅದರಲ್ಲೂ ಹಳೆಯ ಮೈಸೂರು ಭಾಗದಲ್ಲಿ ಅತ್ಯಂತ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ರಾಜಕೀಯ ಒಲವು, ರಾಜ್ಯದ...

ಉತ್ತರ ಪ್ರದೇಶ: ಮದುವೆಗೆ 15 ದಿನ ಇರುವಾಗ ಪೊಲೀಸ್ ಕಸ್ಟಡಿಯಲ್ಲಿ ಮುಸ್ಲಿಂ ಯುವಕನ ಸಾವು; ಪೊಲೀಸರ ವಿರುದ್ಧ ಚಿತ್ರಹಿಂಸೆ, ₹18.8 ಲಕ್ಷ ಸುಲಿಗೆ ಆರೋಪ

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ 22 ವರ್ಷದ ಮುಸ್ಲಿಂ ಯುವಕನೊಬ್ಬನ ಮದುವೆಗೆ ಇನ್ನು ಕೇವಲ 15 ದಿನಗಳು ಬಾಕಿ ಇರುವಾಗ ಹರಿಯಾಣದ ಫರಿದಾಬಾದ್ ಜೈಲಿನಲ್ಲಿ ಮೃತಪಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್...

ದಲಿತ ಕುಟುಂಬದ ಮೇಲೆ ಹಲ್ಲೆ ಆರೋಪ: ಸಿಒ, ಎಸ್‌ಎಚ್‌ಒ ಸೇರಿ 15 ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಆದೇಶ

ದಲಿತ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿ, ಮಹಿಳೆಯೊಬ್ಬರನ್ನು ಪೊಲೀಸ್ ಕಸ್ಟಡಿಯಲ್ಲಿ ಹಿಂಸಿಸಿ, ಆಕೆಯ ಮಗನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಸರ್ಕಲ್ ಆಫೀಸರ್ (ಸಿಒ),...

‘ಎಸ್ಐಆರ್’ ಬಳಿಕ ‘ಎಸ್ಎಸ್ಆರ್’ ಮೂಲಕ ಮುಖ ಉಳಿಸಿಕೊಳ್ಳಲು ಚುನಾವಣಾ ಆಯೋಗದ ಕಸರತ್ತು: SIR ವಿರೋಧಿ ಜನಪರ ಸಂಘಟನೆಗಳಿಂದ ತೀವ್ರ ಹೋರಾಟದ ಎಚ್ಚರಿಕೆ

ಕರ್ನಾಟಕದ ಅಂತಿಮ ಮತದಾರರ ಪಟ್ಟಿ ತರ್ಕಹೀನ, ದೋಷಪೂರಿತ ಎಂದು ಆರೋಪ; SIR ಪಟ್ಟಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರಕ್ಕೆ ಒತ್ತಾಯ; ನವೆಂಬರ್ 26ರಿಂದ ದೇಶದ 100 ನಗರಗಳಲ್ಲಿ ಪ್ರಜಾತಂತ್ರ ಮರುಸ್ಥಾಪನಾ ಅಭಿಯಾನಕ್ಕೆ ಸಿದ್ಧತೆ ಬೆಂಗಳೂರು: ಮತದಾರರ...

ಒಡಿಶಾದ ಬುಡಕಟ್ಟು ಪ್ರದೇಶದಲ್ಲಿ ಗಣಿ ಭೂಸ್ವಾಧೀನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಬುಡಕಟ್ಟು ಸಮುದಾಯಗಳ ಪೂರ್ವಾನುಮತಿ ಕಡ್ಡಾಯ ಎಂದು ತೀರ್ಪು

ಒಡಿಶಾದ ಸುಂದರಗಢ ಜಿಲ್ಲೆಯ ಅನುಸೂಚಿತ ಗ್ರಾಮ ಪ್ರದೇಶಗಳಲ್ಲಿ ಡಾಲ್ಮಿಯಾ ಸಿಮೆಂಟ್ ಸ್ಥಾವರಕ್ಕಾಗಿ ಕೈಗೊಂಡಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಬುಡಕಟ್ಟು ಪ್ರದೇಶಗಳಲ್ಲಿ ಭೂಸ್ವಾಧೀನಕ್ಕೆ ಮುಂದುವರಿಯುವ ಮೊದಲು ಸ್ಥಳೀಯ ಗ್ರಾಮ ಪಂಚಾಯತ್‌ ಅಥವಾ...

ಪ್ಯಾಲೆಸ್ತೀನ್ ನಾಯಕ ಯಾಸರ್ ಅರಾಫಾತ್ ಸಲಹೆಗಾರರಾಗಿದ್ದ ಅಹ್ಮದ್ ತಿಬಿ ಇಸ್ರೇಲ್ ಸಂಸತ್ತಿನ ಉಪಸಭಾಪತಿಯಾಗಿ ಆಯ್ಕೆ

ಇಸ್ರೇಲ್‌ ಸಂಸತ್ತಾದ ನೆಸೆಟ್‌ಗೆ (Knesset) ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಪ್ರಧಾನಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಆಡಳಿತರೂಢ ಒಕ್ಕೂಟಕ್ಕೆ ಸೋಲಾಗಿರುವುದು ಹಲವು ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಿದೆ. ಅವುಗಳಲ್ಲಿ ಒಂದು ಅಹ್ಮದ್ ತಿಬಿ ಅವರು ಉಪಸಭಾಪತಿಯಾಗಿ...

“ಚುನಾವಣೆ ಬಹಿಷ್ಕರಿಸಿದರೆ ಪ್ರಜಾಪ್ರಭುತ್ವ ಅಂತ್ಯ”: ರಾಹುಲ್ ಗಾಂಧಿ ಎಚ್ಚರಿಕೆ; ಆಯೋಗದೊಳಗಿಂದಲೇ ಮಾಹಿತಿ ಸಿಗುತ್ತಿದೆ ಎಂದ ವಿಪಕ್ಷ ನಾಯಕ

ಅಮೆರಿಕ: ಭಾರತೀಯ ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯ ಎದುರಾಗಿದೆ ಎಂಬ ಮಾಹಿತಿ ಚುನಾವಣಾ ಆಯೋಗದ ಒಳಗಿನಿಂದಲೇ ವಿರೋಧ ಪಕ್ಷಗಳಿಗೆ ಲಭ್ಯವಾಗುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ...

ಸೈನಿಕರು ಸಂಕಲ್ಪ ಮಾಡಿದರೆ ಪಂಜಾಬ್ ಸರ್ಕಾರವನ್ನು ಕಿತ್ತೊಗೆಯಲು ಸಾಧ್ಯ: ಪಂಜಾಬ್‌ನಲ್ಲಿ ಹೊಸ ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್!

ಜಲಂಧರ್: ಪಂಜಾಬ್‌ನ ಆಮ್ ಆದ್ಮಿ ಪಕ್ಷದ (AAP) ಸರ್ಕಾರವನ್ನು ಗುರಿಯಾಗಿಸಿಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಸಂತ ಗುರು ರವಿದಾಸ್...

ಮಹಿಳಾ ಪತ್ರಕರ್ತರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ : ದೆಹಲಿ ಪೊಲೀಸರಿಂದ ದೂರುಗಳ ವಿಚಾರಣೆ ಮುಕ್ತಾಯ

ಅಕ್ಟೋಬರ್‌ನಲ್ಲಿ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ನಡೆದ ಪ್ರತಿಭಟನೆಗಳ ವರದಿ ಮಾಡುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಗಳು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮೂವರು ಮಹಿಳಾ ಪತ್ರಕರ್ತರು...

ತಿರುಪರಂಕುಂದ್ರಂ ವಿವಾದ | ಹೈಕೋರ್ಟ್ ಆದೇಶಕ್ಕೆ ತಡೆ ನೀಡದಿದ್ದರೆ ಸಾವಿರಾರು ಸರ್ವೆ ಕಂಬಗಳು ಧಾರ್ಮಿಕ ಸ್ವರೂಪ ಪಡೆಯಲಿವೆ : ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ಸರ್ಕಾರ ವಾದ

ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದರ್ಗಾದ ಸಮೀಪದ ಕಲ್ಲಿನ ಸ್ತಂಭದ ಮೇಲೆ ಸಾಂಪ್ರದಾಯಿಕ ಕಾರ್ತಿಕ ದೀಪವನ್ನು ಬೆಳಗಿಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ತಮಿಳುನಾಡು ಸರ್ಕಾರ ಬುಧವಾರ (ನ.18)...