Homeಅಂತರಾಷ್ಟ್ರೀಯತೈವಾನ್ ದೇಶದ ಕೊರೊನಾ ಚಮತ್ಕಾರ: ನಾಗೇಶ್‌ ಹೆಗಡೆ ಅವರ ಲೇಖನ

ತೈವಾನ್ ದೇಶದ ಕೊರೊನಾ ಚಮತ್ಕಾರ: ನಾಗೇಶ್‌ ಹೆಗಡೆ ಅವರ ಲೇಖನ

- Advertisement -
- Advertisement -

ಚೀನಾದ ಪಕ್ಕದಲ್ಲೇ ಇರುವ ಪುಟ್ಟ ದ್ವೀಪದೇಶ ತೈವಾನ್. ಕೊರೊನಾ ದಾಳಿಯಿಂದ ತತ್ತರಿಸಿ ಹೋಗಬೇಕಿತ್ತು. ಏಕೆಂದರೆ ಸುಮಾರು ಹದಿಮೂರು ಲಕ್ಷ ಮಂದಿ ತೈವಾನೀಯರು ಚೀನಾದೊಂದಿಗೆ ನಿತ್ಯ ಸಂಪರ್ಕ ಇಟ್ಟುಕೊಂಡಿದ್ದಾರೆ. ದಿನವೂ ವುಹಾನ್ ಜೊತೆ ನೇರ ವಿಮಾನಗಳ ಸಂಚಾರವಿದೆ. (2019ರಲ್ಲಿ 27 ಲಕ್ಷ ಜನರು ಚೀನಾಕ್ಕೆ ಹೋಗಿ ಬಂದಿದ್ದಾರೆ.) ಆದರೆ ಅಚ್ಚರಿ ನೋಡಿ: ಅಲ್ಲಿ ಕೇವಲ 395 ಜನರಲ್ಲಿ ರೋಗಲಕ್ಷಣ ಕಂಡಿದೆ. 155 ಜನರು ಗುಣಮುಖರಾಗಿದ್ದಾರೆ. 6 ಜನ ಮಾತ್ರ ಸಾವಪ್ಪಿದ್ದಾರೆ. ಹಾಗೆಂದು ಅಲ್ಲಿನ ಪ್ರಜೆಗಳ ಮೇಲೆ ತುರ್ತುಸ್ಥಿತಿಯನ್ನು ಹೇರಿಲ್ಲ. ಯಾವ ಊರನ್ನೂ ಲಾಕ್‌ಡೌನ್ ಮಾಡಲಿಲ್ಲ. ಮನೆಮನೆಗೆ ಹೊಕ್ಕು ಟೆಸ್ಟಿಂಗ್ ಮಾಡಿಲ್ಲ. ಪೊಲೀಸರ ದಬ್ಬಾಳಿಕೆ ಇಲ್ಲ (ಅಲ್ಲಿ ಮಿಲಿಟರಿ ಆಡಳಿತವಿಲ್ಲ, ಪ್ರಜಾಪ್ರಭುತ್ವ ಇದೆ). ವಲಸೆ ಹೊರಟವರ ಗೋಳಿನ ಕತೆಗಳಿಲ್ಲ.

ಜಗತ್ತಿನ ಇತರೆಲ್ಲ ದೇಶಗಳಿಗೆ ಮಾದರಿಯಾಗುವಂಥ ಅದೇನು ಮ್ಯಾಜಿಕ್ ಅಲ್ಲಿ ನಡೆದಿದೆ ಗೊತ್ತೆ?

1. ಕೊರೊನಾದ ಹೊಸ ಅವತಾರ ತಲೆ ಎತ್ತಿದೆ ಎಂಬುದು ಗೊತ್ತಾದ ತಕ್ಷಣವೇ ಜನವರಿಯಲ್ಲೇ ತೈವಾನ್ ವಿಶೇಷ ನಿಗಾ ದಳವನ್ನು ಸೃಷ್ಟಿಸಿ, ಬಿಗಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತು. ಅಲ್ಲಿಂದ ಬರುವ ವಿಮಾನಗಳಲ್ಲಿ ಜ್ವರ ಪೀಡಿತರ ತಪಾಸಣೆಯನ್ನು ಆರಂಭಿಸಿತು. ವಿಮಾನ ನೆಲಕ್ಕಿಳಿಯುವ ಮೊದಲೇ ತಪಾಸಣೆ ನಡೆದಿದ್ದರಿಂದ ಉದ್ದುದ್ದ ಕ್ಯೂ ಇರಲಿಲ್ಲ.

2. ಫೆಬ್ರುವರಿ 10ರ ವೇಳೆಗೆ ಚೀನಾದಲ್ಲಿ 30 ಸಾವಿರ ಮಂದಿ ಕಾಯಿಲೆ ಬಿದ್ದಾಗ ತೈವಾನ್ನಲ್ಲಿ ಕೇವಲ 16 ರೋಗಿಗಳು ಪತ್ತೆ ಆಗಿದ್ದೇ ತಡ, ಚೀನಾದಿಂದ ಬರುವ ಎಲ್ಲ ಉಡ್ಡಾಣಗಳನ್ನೂ ಸ್ಥಗಿತಗೊಳಿಸಿ, ಹಾಂಗ್‌ಕಾಂಗ್ ಮೂಲಕ ಬರುವವರ ಪರೀಕ್ಷೆಯನ್ನು ವಿಮಾನದಲ್ಲೇ ನಡೆಸತೊಡಗಿತು. ತನ್ನ ದ್ವೀಪದ ಸುತ್ತ ಲಕ್ಷ್ಮಣ ರೇಖೆಯನ್ನು ಎಳೆಯಿತು.

2. ಮುಖವಾಡಗಳ ರಫ್ತನ್ನು ನಿಲ್ಲಿಸಿತು. ಉತ್ಪಾದನೆಯನ್ನು ಎಂಟು ಪಟ್ಟು ಹೆಚ್ಚಿಸಿತು. ಅವುಗಳ ತಯಾರಿಕೆಯನ್ನು ಮೊದಲು ಕೈದಿಗಳಿಗೆ (ಕೆಳಗಿನ ಚಿತ್ರ – ಹೊಲಿಗೆ ಕೆಲಸದಲ್ಲಿ ನಿರತರಾದ ಕೈದಿಗಳದ್ದು), ಆನಂತರ ಮಿಲಿಟರಿಗೇ ಒಪ್ಪಿಸಿತು. ಪ್ರತಿಯೊಬ್ಬ ಪ್ರಜೆಗೂ ವಾರಕ್ಕೆ ಮೂರು ನಾಲ್ಕು ಮುಖವಾಡಗಳ ವ್ಯವಸ್ಥೆ ಮಾಡಿತು. ಅದು ಎಲ್ಲಿ ಸಿಗುತ್ತದೆ ಎಂಬುದನ್ನು ಅವರವರ ಮೊಬೈಲ್‌ನಲ್ಲೇ ಮಾಹಿತಿ ಸಿಗುವಂತೆ ಮಾಡಿತು.

3. ಕೊರೊನಾ ಪೀಡಿತರನ್ನು ವೈರಸ್ ಥರಾ ಪರಿಗಣಿಸದೆ ಅವರನ್ನು ಪ್ರಜೆಗಳಂತೇ ನೋಡಿಕೊಂಡಿತು. ಅವರಿಗೆ ಅತ್ಯುತ್ತಮ ಕ್ವಾರಂಟೈನ್ ವ್ಯವಸ್ಥೆಯನ್ನು ಕಲ್ಪಿಸಿತು. ಅವರ ನಿವಾಸಕ್ಕೆ ಅನ್ನಾಹಾರ ಹಾಗೂ ಅಗತ್ಯ ವಸ್ತುಗಳ ಕೊರತೆ ಆಗದಂತೆ ನೋಡಿಕೊಂಡಿತು. ಪುಸ್ತಕಗಳನ್ನೂ ಒದಗಿಸಿತು. ದಿನಭತ್ಯೆಯನ್ನೂ ಘೋಷಿಸಿತು. ಜನರು ತಾವಾಗಿ ಖುಷಿಯಿಂದ ಕ್ವಾರಂಟೈನ್‌ಗೆ ಒಳಪಡುವಂತೆ ಮನವೊಲಿಸಿತು. ಅವರ ಫೋನ್ ನಂಬರನ್ನು ಪಡೆದು ಅದರಲ್ಲಿ ವಿಶೇಷ ಆಪ್ ಹಾಕಿತು. ಮನೆಬಿಟ್ಟು ಆಚೆ ಹೋದರೆ ಅವರ ಬ್ಯಾಂಕ್ ಖಾತೆಯಿಂದ ದೊಡ್ಡ ಮೊತ್ತದ ದಂಡ ವಜಾ ಆಗುತ್ತದೆಂದು ಟಿವಿ ಮೂಲಕ ಪ್ರಚಾರ ಕೊಟ್ಟಿತು. ಕಾಯಿಲೆ ಉಲ್ಪಣಗೊಂಡರೆ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿತು.

4. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುವದಂತಿಗಳನ್ನು ಪತ್ತೆ ಹಚ್ಚಬಲ್ಲ ವಿಶೇಷ ಅಲ್ಗೊರಿದಮ್ಮನ್ನು ಅದು ಸೃಷ್ಟಿಸಿತು. ಅದು ಚೀನಾದಿಂದ ಬರುವ ಸುಳ್ಳುಸುದ್ದಿಗಳನ್ನು ಫಿಲ್ಟರ್ ಮಾಡತೊಡಗಿತು. ದೇಶದೊಳಕ್ಕೆ ಬರುವ ಎಲ್ಲರ ಡೇಟಾಗಳನ್ನು ವಿಮಾ ಕಂಪನಿಗಳಿಂದ ತರಿಸಿಕೊಂಡು, ಅದನ್ನು ವೀಸಾ ವಿಭಾಗದ ಡೇಟಾ ಜೊತೆ ಜೋಡಿಸಿ, ಜ್ವರಪೀಡಿತರ ಕುರಿತ ಮಾಹಿತಿ ಎಲ್ಲ ಆಸ್ಪತ್ರೆ, ಔಷಧಾಲಯಗಳಿಗೂ ಮುಂಚಿತವಾಗಿಯೇ ಲಭಿಸುವಂತೆ ನೋಡಿಕೊಂಡಿತು.

 

* ಇತರ ಕೆಲವು ಮಹತ್ವದ ಮಾಹಿತಿಗಳು: ತೈವಾನ್ ದೇಶದ ಅಧ್ಯಕ್ಷರು ವಿಶ್ವವಿಖ್ಯಾತ ಲಂಡನ್ ಸ್ಕೂಲ್ ಆಫ್ ಇಕಾನಮಿಕ್ಸ್‌ನಲ್ಲಿ ಪಿಎಚ್‌ಡಿ ಮಾಡಿದ ಅರ್ಥತಜ್ಞ. ಉಪಾಧ್ಯಕ್ಷರು ಸ್ವತಃ ಎಪಿಡೀಮಿಯಾಲಜಿ ಡಾಕ್ಟರು- ಅಂದರೆ ಸಾಂಕ್ರಾಮಿಕ ರೋಗತಜ್ಞ. ಅಲ್ಲಿ ಕೊರೊನಾ ಸಂದರ್ಭದ ಅವರ TTT ಘೋಷವಾಕ್ಯ ಏನೆಂದರೆ ಟ್ರಸ್ಟ್, ಟ್ರಾನ್ಸಪರೆನ್ಸಿ ಮತ್ತು ಟೆಕ್ನಾಲಜಿ. ಜನರೊಂದಿಗಿನ ವಿಶ್ವಾಸ, ಪಾರದರ್ಶಕತೆ ಮತ್ತು ತಂತ್ರಜ್ಞಾನ. ಅಲ್ಲಿ ಕೇವಲ 20 ನಿಮಿಷಗಳಲ್ಲಿ ಕೋವಿಡ್ ಟೆಸ್ಟ್ ಫಲಿತಾಂಶ ಬರುವಂಥ ವೈದ್ಯಕೀಯ ವಿಧಾನ ಚಾಲ್ತಿಗೆ ಬಂದಿದೆ (ನಮ್ಮಲ್ಲಿ ಫಲಿತಾಂಶ ಬರಲು 6 ಗಂಟೆಯಿಂದ 24 ಗಂಟೆ ಬೇಕು).

*ತೈವಾನ್ ಜನಸಂಖ್ಯೆ 238 ಲಕ್ಷ ನಿಜ. ಆದರೆ ವುಹಾನ್‌ನಿಂದ ಕೇವಲ 943 ಕಿ.ಮೀ. ದೂರದಲ್ಲಿದೆ. ಅದಕ್ಕೆ ಹೋಲಿಸಿದರೆ ವುಹಾನ್ನಿಂದ 7500 ಕಿ.ಮೀ. ದೂರದ, ಕೇವಲ 192 ಲಕ್ಷ ಜನರಿರುವ ರುಮೇನಿಯಾದಲ್ಲಿ 7700 ರೋಗಿಗಳಿದ್ದು 392 ಮೃತರಾಗಿದ್ದಾರೆ. ಸುಮಾರು ಅಷ್ಟೇ ದೂರದಲ್ಲಿರುವ ಇನ್ನೂ ಕಡಿಮೆ ಜನಸಂಖ್ಯೆಯ ಕತಾರ್ ದೇಶದಲ್ಲಿ 4103 ರೋಗಿಗಳಿದ್ದಾರೆ, 7 ಮಂದಿ ಗತಿಸಿದ್ದಾರೆ. ಸುಮಾರು ಅಷ್ಟೇ ದೂರದಲ್ಲಿರುವ ಬಹ್ರೇನ್ ದೇಶದಲ್ಲೂ 1703 ರೋಗಿಗಳಿದ್ದು 7 ಮಂದಿ ಗತಿಸಿದ್ದಾರೆ. ಕೊನೆಯ ಈ ಎರಡೂ ದೇಶಗಳು ಭಾರೀ ತೈಲಧನಿಕ ಅಷ್ಟೇ ಅಲ್ಲ, ಮುನ್ನೆಚ್ಚರಿಕೆಗೆ ಅವಕ್ಕೆ ಮೂರು ತಿಂಗಳು ಕಾಲಾವಧಿ ಇತ್ತು.

ಕೊನೆಯ ಕುಟುಕು: ವುಹಾನ್ ಮಹಾಮಾರಿಯ ಅಲೆ ದಶದಿಕ್ಕುಗಳಲ್ಲಿ ಹಬ್ಬುತ್ತಿದ್ದಾಗ, ಎಲ್ಲ ಬಿಬಿಸಿ-ಸಿಎನ್‌ಎನ್‌ಗಳಲ್ಲಿ ಅದರದೇ ಪ್ರಮುಖ ಸುದ್ದಿ ಬರುತ್ತಿದ್ದಾಗ ನಮ್ಮ ಮಾಧ್ಯಮಗಳ ಗಮನವೆಲ್ಲ ಕಮಲನಾಥ್ ಸರಕಾರವನ್ನು ಕೆಡವುವ ಕಮಲದ ಸರ್ಕಸ್ ಕಡೆ, ಹಾಗೂ ಅಹ್ಮದಾಬಾದ್ ಕ್ರೀಡಾಂಗಣದಲ್ಲಿ ಟ್ರಂಪ್ ಮಹಾಶಯನ ಟ್ರಂಪೆಟ್‌ ಕಡೆ ನೆಟ್ಟಿತ್ತು.

(ಕೃಪೆ: ನಾಗೇಶ್ ಹೆಗಡೆ ಅವರ ಫೇಸ್‌ಬುಕ್‌ ವಾಲ್‌ನಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...