Homeಮುಖಪುಟಆಲ್ಟ್‌ನ್ಯೂಸ್‌ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ಹೈಕೋರ್ಟ್

ಆಲ್ಟ್‌ನ್ಯೂಸ್‌ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ಹೈಕೋರ್ಟ್

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ನಿಂದ ದೂರು ಬಂದ ಹಿನ್ನಲೆಯಲ್ಲಿ ಪೊಲೀಸರು ಜುಬೇರ್‌ ವಿರುದ್ದ ಎಫ್‌ಐಆರ್‌ ದಾಖಲಿಸಿದ್ದರು.

- Advertisement -
- Advertisement -

ಫ್ಯಾಕ್ಟ್‌ಚೆಕಿಂಗ್‌ ವೆಬ್‌ಸೈಟ್ ’ಆಲ್ಟ್‌ನ್ಯೂಸ್’ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್‌ ವಿರುದ್ದ ದೆಹಲಿ ಮತ್ತು ರಾಯ್‌ಪುರದಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಎರಡು ಎಫ್‌ಐಆರ್‌ ದಾಖಲಿಸಲಾಗಿದ್ದು, ದೆಹಲಿ ಹೈಕೋರ್ಟ್ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿ ಆದೇಶ ಹೊರಡಿಸಿದೆ.

ನ್ಯಾಯಮೂರ್ತಿ ಯೋಗೇಶ್ ಖನ್ನಾ ಅವರ ಏಕ ನ್ಯಾಯಪೀಠವು ದೆಹಲಿ ಸರ್ಕಾರ ಮತ್ತು ಪೊಲೀಸ್ ಉಪ ಆಯುಕ್ತ ಸೈಬರ್ ಸೆಲ್‌ಗೆ 8 ವಾರಗಳಲ್ಲಿ ಈ ಪ್ರಕರಣದಲ್ಲಿ ನಡೆಸಿದ ತನಿಖೆಯ ಬಗ್ಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.

ಇದನ್ನೂ ಓದಿ: ಆಲ್ಟ್‌ನ್ಯೂಸ್‌‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ವಿರುದ್ದ FIR

ಟ್ವಿಟರ್ ಬಳಕೆದಾರ ಜಗದೀಶ್ ಸಿಂಗ್ ಅವರು ತಮ್ಮ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಪತ್ರಕರ್ತ ಮೊಹಮ್ಮದ್ ಜುಬೈರ್ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರ ಜುಬೇರ್‌ ಪರವಾಗಿ ಹಾಜರಾದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್, “ಅರ್ಜಿದಾರರು ಸಮರ್ಪಿತ ಪ್ರಜೆಯಾಗಿದ್ದು, ಆಲ್ಟ್‌‌ನ್ಯೂಸ್‌ನ ಸಹಸಂಸ್ಥಾಪಕರಾಗಿದ್ದಾರೆ. ಅವರು ತಮ್ಮ ಸುದ್ದಿವಾಹಿನಿಯ ಮೂಲಕ ಯಾವುದೇ ವ್ಯಕ್ತಿ ಹಾಗೂ ರಾಜಕೀಯ ಪಕ್ಷಗಳ ಪಕ್ಷಪಾತವಿಲ್ಲದೆ ತಪ್ಪು ಮಾಹಿತಿಯನ್ನು ಬಹಿರಂಗಪಡಿಸುತ್ತಾರೆ. ಇದಕ್ಕಾಗಿ ಅವರ ಮೇಲೆ ರಾಜಕೀಯ ವ್ಯಕ್ತಿ ಹಾಗೂ ಪಕ್ಷಗಳ ಅಂಧ ಅಭಿಮಾನಿಗಳು ನಿಂದನೆ, ಬೆದರಿಕೆ ಹಾಗೂ ಅವರೊಂದಿಗೆ ಹೀನಾಯವಾಗಿ ವರ್ತಿಸುತ್ತದೆ” ಎಂದು ವಾದಿಸಿದರು.

“ಪ್ರಸ್ತುತ ದೂರು ಸಲ್ಲಿಸಿದವರು ಗಂಭೀರ ಕಿರುಕುಳ ನೀಡುವವರಾಗಿದ್ದು, ಅವರು ಉದಾರವಾದಿ, ಪ್ರಗತಿಪರ ದೃಷ್ಟಿಕೋನಗಳಿರುವ ಹಾಗೂ ಸರ್ಕಾರದ ಅಭಿಪ್ರಾಯಗಳನ್ನು ಯಾರು ಒಪ್ಪುವುದಿಲ್ಲವೊ ಅವರ ವಿರುದ್ದ ದಾಳಿ ಮಾಡುತ್ತಾರೆ” ಎಂದು ಗೊನ್ಸಾಲ್ವೆಸ್ ವಾದಿಸಿದರು.

ಇದನ್ನೂ ಓದಿ: ಜಿಡಿಪಿ ಪಾತಾಳದಲ್ಲಿದ್ದರೂ ಸುಳ್ಳು ಹೇಳುತ್ತಿರುವ ಕರ್ನಾಟಕ ಬಿಜೆಪಿ: ಫ್ಯಾಕ್ಟ್‌ಚೆಕ್

ಆಗಸ್ಟ್ 6 ರಂದು ಟ್ವಿಟರ್ ಬಳಕೆದಾರ ಜಗದೀಶ್ ಸಿಂಗ್ ಎಂಬವರ ನಿಂದನೀಯ ಸಂದೇಶವೊಂದಕ್ಕೆ ಪ್ರತಿಕ್ರಿಯಿಸಿದ್ದ ಜುಬೇರ್, “ಹಲೋ ಜಗದೀಶ್ ಸಿಂಗ್, ನಿಮ್ಮ ಮುದ್ದಾದ ಮೊಮ್ಮಗಳಿಗೆ ನೀವು ಸಾಮಾಜಿಕ ಜಾಲತಾಣದಲ್ಲಿ ಜನರನ್ನು ನಿಂದಿಸುವ ನಿಮ್ಮ ಅರೆಕಾಲಿಕ ಕೆಲಸದ ಬಗ್ಗೆ ತಿಳಿದಿದೆಯೆ? ನಾನು ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ಸಲಹೆ ನೀಡುತ್ತೇನೆ” ಎಂದು ಜಗದೀಶ್‌ ಸಿಂಗ್ ಜೊತೆಗೆ ಬಾಲಕಿಯೊಬ್ಬರು ನಿಂತಿರುವ ಫೋಟೋವನ್ನು ಹಾಕಿದ್ದರು. ಜೊತೆಗೆ ಪೋಟೋದಲ್ಲಿರುವ ಬಾಲಕಿಯ ಮುಖವನ್ನು ಜುಬೇರ್ ಬ್ಲರ್‌ ಮಾಡಿದ್ದಾರೆ.

ಈಶಾನ್ಯ ಭಾರತದ ಫೋರಂ ಫಾರ್‌ ಇಂಡಿಜೀನಿಯಸ್‌ ರೈಟ್ಸ್ ನೀಡಿದ ದೂರಿನ ಮೇರೆಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಆಗಸ್ಟ್ 8 ರಂದು ಈ ವಿಷಯವನ್ನು ಗಮನಿಸಿ ದೆಹಲಿಯ ಉಪ ಪೊಲೀಸ್ ಆಯುಕ್ತ ಮತ್ತು ನೋಡಲ್ ಸೈಬರ್ ಸೆಲ್ ಅಧಿಕಾರಿಗೆ ಪತ್ರ ಬರೆದಿದ್ದು, ಜುಬೈರ್ ವಿರುದ್ಧ “ಅಪ್ರಾಪ್ತ ಬಾಲಕಿಯನ್ನು ಟ್ವಿಟ್ಟರ್‌ನಲ್ಲಿ ಉಲ್ಲೇಖಿಸಿದ್ದಕ್ಕಾಗಿ” ಕ್ರಮ ಕೈಗೊಳ್ಳಬೇಕೆಂದು ಕೋರಿತ್ತು.

ಅಪ್ರಾಪ್ತ ಬಾಲಕಿಗೆ “ಆನ್‌ಲೈನ್ ಕಿರುಕುಳ ಮತ್ತು ಚಿತ್ರಹಿಂಸೆ” ಆರೋಪದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ನಿಂದ ದೂರು ಬಂದ ಹಿನ್ನಲೆಯಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ರಾಣಾ
ಇದನ್ನೂ ಓದಿ: ಪ್ರಣಬ್ ಮುಖರ್ಜಿ ನಿಧನಕ್ಕೆ ಪತ್ರಕರ್ತೆ ರಾಣಾ ಅಯೂಬ್ ಸಂತಸಪಟ್ಟಿದ್ದು ಸುಳ್ಳುಸುದ್ದಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನೂನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...