ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಇದರಲ್ಲಿ ಪೋಷಕರು ತಮ್ಮ ಮಗಳಲ್ಲಿ ಮನವಿ ಮಾಡುತ್ತಿರುವ ಮತ್ತು ಮನವೊಲಿಸಲು ಪ್ರಯತ್ನಿಸುತ್ತಿರುವ ದೃಶ್ಯ ಕಂಡುಬಂದಿದ್ದು, ಇದನ್ನು ‘ಲವ್ ಜಿಹಾದ್’ ಎಂಬ ಪ್ರತಿಪಾದನೆಯೊಂದಿಗೆ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಸ್ಟನ್ನು ಹಂಚಿಕೊಂಡಿದ್ದಾರೆ.
ಇದೇ ವಿಡಿಯೋ ಹಂಚಿಕೊಂಡವರಲ್ಲಿ ಬಲಪಂಥೀಯ ನಿರೂಪಕಿ ಶೆಫಾಲಿ ವೈದ್ಯ ಕೂಡ ಇದ್ದಾರೆ.
This video broke my heart!If the info that I have is correct, this is a Hindu father begging his daughter to not fall…
Posted by Shefali Vaidya on Monday, October 5, 2020
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ನಟ ಅಮಿತಾಬ್ ಬಚ್ಚನ್ ದಾವೂದ್ ಇಬ್ರಾಹಿಂನನ್ನು ಭೇಟಿ ಆಗಿದ್ದು ನಿಜವೆ?
ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಶೆಫಾಲಿ ವೈದ್ಯ, “ಈ ವಿಡಿಯೋ ನನ್ನ ಹೃದಯವನ್ನು ಘಾಸಿಗೊಳಿಸಿದೆ! ನನ್ನಲ್ಲಿರುವ ಮಾಹಿತಿಯು ಸರಿಯಾಗಿದ್ದರೆ, ಇದು ಹಿಂದೂ ತಂದೆಯೋರ್ವ ತನ್ನ ಮಗಳನ್ನು ಲವ್ ಜಿಹಾದ್‌ಗೆ ಬಲಿಯಾಗದಂತೆ ಕೇಳಿಕೊಳ್ಳುತ್ತಿದ್ದಾನೆ. ಅವನು ತನ್ನ ಪಗಡಿಯನ್ನು ಅವಳ ಕಾಲುಗಳ ಬಳಿ ಇಡುತ್ತಾನೆ. ರಾಜಸ್ಥಾನಿ ಸಂಪ್ರದಾಯವನ್ನು ಚೆನ್ನಾಗಿ ಬಲ್ಲವರು ಮಾತ್ರ ಇದರ ತೀವ್ರತೆಯನ್ನು ಅರ್ಥಮಾಡಿಕೊಳ್ಳುತ್ತಾರೆ. ಹುಡುಗಿ ಎಷ್ಟು ಮುಗುಳ್ನಗುತ್ತಾ ಅವನನ್ನು ತಳ್ಳುತ್ತಾಳೆಂದು ನೋಡಿ! ಅವಳು ಬಹುಶಃ ತನ್ನ ಐದನೇ ಮಗುವನ್ನು ಹೊತ್ತುಕೊಂಡು ಮೂರನೆಯ ಹೆಂಡತಿಯಾಗಿ ಕೊನೆಗೊಳ್ಳಬಹುದು ಅಥವಾ ಸೋನ್‌ಭದ್ರಾದ ಮಹಿಳೆಯಂತೆ ಶಿರಚ್ಚೇದನಕ್ಕೆ ಒಳಗಾಗಬಹುದು. ಆದರೆ ಅಷ್ಟರೊಳಗೆ ಆ ಮುದುಕ ಬಹುಶಃ ಹೃದಯ ಒಡೆದು ಸತ್ತಿರಬಹುದು!” ಎಂದು ಬರೆದುಕೊಂಡಿದ್ದಾರೆ. ಇದರ ತನಿಖೆ ಮಾಡುತ್ತಿರುವ ಸಂಸ್ಥೆಯೊಂದು ತನಗೆ ಮಾಹಿತಿ ನೀಡಿದೆ ಎಂದು ಅವರು ವಿಶೇಷ ಸೂಚನೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕಂಗನಾ ರಾಣಾವತ್ ಚುನಾವಣೆಯಲ್ಲಿ ಬಲವಂತವಾಗಿ ಶಿವಸೇನೆಗೆ ಮತ ಚಲಾಯಿಸಿದರೆ?
ಇದೇ ವೀಡಿಯೋವನ್ನು ಇದೇ ಹೇಳಿಕೆಯೊಂದಿಗೆ ಟ್ವಿಟ್ಟರ್‌ನಲ್ಲಿಯೂ ಹಂಚಿಕೊಳ್ಳಲಾಗುತ್ತಿದೆ.
Another Hindu Daughter deceived in Islam Marriage. Father puts his Turban on his Daughter's feet begging her not to marry but she did not accept. Just wait & watch, she will regret it because right after marriage she will be killed. If lucky she might manage to escape, Guarantee! pic.twitter.com/0XR88W4WSn
— Renee Lynn (@Voice_For_India) October 3, 2020
ಈ ವರದಿಯನ್ನು ಬರೆಯುವ ವೇಳೆಗೆ ಈ ಟ್ವೀಟ್‌ಗೆ ಸುಮಾರು 3,700 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 2,200 ರಿಟ್ವೀಟ್‌ಗಳನ್ನು ಮಾಡಿದ್ದಾರೆ. 31,700 ಬಳಕೆದಾರರು ಇದನ್ನು ವೀಕ್ಷಿಸಿದ್ದಾರೆ.
ಫ್ಯಾಕ್ಟ್‌ಚೆಕ್:
ರಾಯಲ್ ರೈಕಾ ಎಂಬ ಫೇಸ್‌ಬುಕ್ ಪುಟದಿಂದ ಅಪ್‌ಲೋಡ್ ಮಾಡಲಾದ ವೀಡಿಯೊವನ್ನು ಸುಳ್ಳು ಮಾಹಿತಿಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿರುವ ಹುಡುಗಿ ಸೀತಾ ಮತ್ತು ವ್ಯಕ್ತಿ ಲಖರಾಮ್ ಎಂದು ಆ ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಯುವತಿಯನ್ನು ಅಮಾನುಷವಾಗಿ ಕೊಲ್ಲುತ್ತಿರುವ ಈ ವಿಡಿಯೋ ಭಾರತದ್ದಲ್ಲ
ನಾವು ಎರಡೂ ಜಿಲ್ಲೆಗಳಲ್ಲಿನ ಪೊಲೀಸರನ್ನು ಸಂಪರ್ಕಿಸಿದಾಗ, ಕಳೆದ ತಿಂಗಳು ಪಾಲಿಯಲ್ಲಿ ಈ ಘಟನೆ ನಡೆದಿರುವುದು ಕಂಡುಬಂದಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.
ಪಾಲಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಕುಮಾರ್ ಸೋನಿ ದಿ ಕ್ವಿಂಟ್ ಜೊತೆ ಮಾತನಾಡಿದ್ದು, “ಈ ಘಟನೆ ಪಾಲಿಯಲ್ಲಿ ನಡೆದಿದೆ. ಆದರೆ, ಇದು ಲವ್ ಜಿಹಾದ್ ಪ್ರಕರಣ ಎಂದು ಹೇಳಿತ್ತಿರುವುದು ಸಂಪೂರ್ಣವಾಗಿ ಸುಳ್ಳು. ಇಲ್ಲಿ ಮಹಿಳೆ ಮತ್ತು ಪುರುಷ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು” ಎಂದು ಸ್ಪಷ್ಟಪಡಿಸಿದ್ದಾರೆ.
ವೀಡಿಯೊದಲ್ಲಿ ನೋಡಬಹುದಾದ ಮಹಿಳೆ ಸೀತಾ. ಲಖರಾಮ್ ಎಂಬ ಈ ವ್ಯಕ್ತಿಯೊಂದಿಗೆ ಓಡಿಹೋಗಿದ್ದು, ಅವರು ಈಗಾಗಲೇ ಮದುವೆಯಾಗಿದ್ದಾರೆ. ಅವರನ್ನು ವೀಡಿಯೊದಲ್ಲಿ ಸಹ ಕಾಣಬಹುದು. ಇಲ್ಲಿ ಆಕೆಯ ಪೋಷಕರು ಮನೆಗೆ ಮರಳುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮುಸ್ಲಿಂ ಮದುವೆಯಲ್ಲಿ ಪಾಲ್ಗೊಂಡಿದ್ದಕ್ಕೆ ಕೇರಳದ RSS ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಯಿತೇ?
ಆಗಸ್ಟ್ 28 ರಂದು ಸೀತಾ ತನ್ನ ಹೇಳಿಕೆಯನ್ನು ಪೊಲೀಸರ ಬಳಿ ನೀಡಿದ್ದು, “ನಾನು ಲಖರಾಮ್‌ನೊಂದಿಗೆ ಸ್ವಯಿಚ್ಚೆಯಿಂದ ಬಂದಿದ್ದೇನೆ. ಅವರೊಂದಿಗೇ ವಾಸಿಸಲು ಬಯಸುತ್ತೇನೆ. ನಾನು ನನ್ನ ಪೋಷಕರ ಮನೆಗೆ ಹೋಗುವುದಿಲ್ಲ” ಎಂದು ಹೇಳಿರುವುದು ಉಲ್ಲೇಖವಾಗಿದೆ.
ಫ್ಯಾಕ್ಟ್-ಚೆಕಿಂಗ್ ವೆಬ್‌ಸೈಟ್ ಆಲ್ಟ್ ನ್ಯೂಸ್ ಸಹ ನವ ದಂಪತಿಗಳನ್ನು ಸಂಪರ್ಕಿಸಿದ್ದು, “ನಾವು ಒಂದೇ ಜಾತಿಗೆ ಸೇರಿದವರಾಗಿದ್ದು, ಈಗ ಮದುವೆಯಾಗಿ ಒಂದು ತಿಂಗಳಾಗಿದೆ. ಆದರೆ ಈ ವೀಡಿಯೊ ಸಂಪೂರ್ಣವಾಗಿ ಸುಳ್ಳು ಪ್ರತಿಪಾದನೆಯೊಂದಿಗೆ ವೈರಲ್ ಆಗಿದೆ. ನಾವು ನ್ಯಾಯಾಲಯದಲ್ಲಿ ಮದುವೆಯಾಗುತ್ತಿದ್ದಾಗ, ಸೀತಾಳ ತಂದೆ ಮದುವೆಯಾಗಬಾರದೆಂದು ಅವಳೊಂದಿಗೆ ತಮಾಷೆ ಮಾಡುತ್ತಿದ್ದರು. ಯಾರೋ ಈ ಕ್ಲಿಪ್ ಅನ್ನು ಬೇರೆ ಸಂದರ್ಭದಲ್ಲಿ ವೈರಲ್ ಮಾಡಿದ್ದಾರೆ. ಜೊತೆಗೆ ಮಹಿಳೆಯ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳು ಎಲ್ಲವೂ ಸರಿಯಾಗಿಯೇ ಇದೆ” ಎಂದು ಲಖರಾಮ್ ಹೇಳಿಕೆ ನೀಡಿದ್ದಾರೆ.
ಹಾಗಾಗಿ ಸ್ಪಷ್ಟವಾಗಿ, ಹಲವಾರು ಸುಳ್ಳು ಹಕ್ಕುಗಳೊಂದಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ಭಾರತಕ್ಕಿಂತ ಅಮೆರಿಕ, ಜಪಾನ್ ಜಿಡಿಪಿ ಕುಸಿತ ಹೆಚ್ಚು?: ಸುಳ್ಳು ಹರಡುತ್ತಿರುವ ಪೋಸ್ಟ್ ಕಾರ್ಡ್


