Homeಮುಖಪುಟತನಿಷ್ಕ್ ಜಾಹೀರಾತಿಗೆ ಟ್ವಿಟ್ಟರ್‌ನಲ್ಲಿ ಭಾರಿ ಬೆಂಬಲ: ಅಂತರ್‌ಧರ್ಮೀಯ ವಿವಾಹಿತರ ಮನದಾಳದ ಮಾತು

ತನಿಷ್ಕ್ ಜಾಹೀರಾತಿಗೆ ಟ್ವಿಟ್ಟರ್‌ನಲ್ಲಿ ಭಾರಿ ಬೆಂಬಲ: ಅಂತರ್‌ಧರ್ಮೀಯ ವಿವಾಹಿತರ ಮನದಾಳದ ಮಾತು

ಅಂತರ್-ಧರ್ಮೀಯ ಕುಟುಂಬಗಳಲ್ಲಿ ಮದುವೆಯಾದ ಕಲಾವಿದರು, ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಗಳಲ್ಲಿ ಫೋಟೋಗಳನ್ನು ಶೇರ್ ಮಾಡಿ ತನಿಷ್ಕ್ ಜಾಹೀರಾತನ್ನು ಬೆಂಬಲಿಸುತ್ತಿದ್ದಾರೆ.

- Advertisement -
- Advertisement -

ಕೆಟ್ಟ ಟ್ರೋಲಿಂಗ್ ನಂತರ ಹಿಂದೂ-ಮುಸ್ಲಿಂ ದಂಪತಿಗಳು ಮತ್ತು ಅವರ ಕುಟುಂಬಗಳನ್ನು ಒಳಗೊಂಡ ಜಾಹೀರಾತನ್ನು ಹಿಂತೆಗೆದುಕೊಂಡಿರುವ ಟೈಟಾನ್‌ ಆಭರಣ ಬ್ರಾಂಡ್ ತನಿಷ್ಕ್‌ನ ಏಕತ್ವಂ ಜಾಹೀರಾತಿಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.

ಅಂತರ್-ಧರ್ಮೀಯ ಕುಟುಂಬಗಳಲ್ಲಿ ಮದುವೆಯಾದ ಕಲಾವಿದರು, ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಗಳಲ್ಲಿ ಫೋಟೋಗಳನ್ನು ಶೇರ್ ಮಾಡಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ತನಿಷ್ಕ್ ಏಕತ್ವಂ ಜಾಹೀರಾತನ್ನು ಬೆಂಬಲಿಸುತ್ತಿದ್ದಾರೆ.

ನಟ ಮೊಹಮ್ಮದ್ ಜೀಶನ್ ಅಯೂಬ್ ಅವರನ್ನು ಮದುವೆಯಾದ ನಟಿ, ನಿರ್ದೇಶಕಿ ರಸಿಕಾ ಅಗಾಶೆ ತಮ್ಮ 6 ವರ್ಷಗಳ ಹಿಂದಿನ ಬೇಬಿ ಶವರ್(ಸೀಮಂತ) ಚಿತ್ರವನ್ನು ಹಂಚಿಕೊಂಡಿದ್ದಾರೆ.

“ಲವ್ ಜಿಹಾದ್ ಎಂದು ಕೂಗುವ ಮೊದಲು, ವಿಶೇಷ ಮದುವೆ ಕಾಯ್ದೆಯ ಬಗ್ಗೆ ತಿಳಿದುಕೊಳ್ಳೋಣ” ಎಂದು ರಸಿಕಾ ಅಗಾಶೆ ಹೇಳಿದ್ದಾರೆ. ಫೋಟೋದಲ್ಲಿ ಜೀಶನ್ ಅಯ್ಯೂಬ್ ಕೂಡ ಅವರ ಪಕ್ಕದಲ್ಲಿ ಕುಳಿತಿರುವುದನ್ನು ನೋಡಬಹುದು.

ಇದನ್ನೂ ಓದಿ: ಸೌಹಾರ್ದತೆ ಸಾರುವ ’ಏಕತ್ವಂ’ ಜಾಹೀರಾತು ನಿಲ್ಲಿಸಿದ ತನಿಷ್ಕ್ ಆಭರಣ ಕಂಪನಿ: ಅಂತದ್ದೇನಿದೆ ಅದರಲ್ಲಿ?

ಗ್ರಿಹಾ ಅತುಲ್, “ತನೀಶ್ಕ್ ಜಾಹೀರಾತು ಅವಳಂತಹ ಅನೇಕರ ನೈಜತೆಗಳನ್ನು ಆಧರಿಸಿದೆ. ನಾನು ಮುಸ್ಲಿಂ ಮನೆಯೊಂದರಲ್ಲಿ ಮದುವೆಯಾಗಿದ್ದೇನೆ. ಅದು ನನ್ನ ಧಾರ್ಮಿಕ ಗುರುತನ್ನು ಗೌರವಿಸುತ್ತದೆ ಮತ್ತು ಸ್ವೀಕರಿಸುತ್ತದೆ. ಆದ್ದರಿಂದ ತನೀಷ್ಕ್ ಜಾಹೀರಾತು ಕಲ್ಪನೆಯಲ್ಲ. ಇದು ಫ್ಯಾಸಿಸ್ಟ್ ಶಕ್ತಿಗಳಿಂದ ಉದ್ದೇಶಪೂರ್ವಕವಾಗಿ ನಿರಾಕರಿಸಲ್ಪಟ್ಟ ನಮ್ಮ ಕಾಲದ ವಾಸ್ತವವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

 

ಇದನ್ನೂ ಓದಿ: ತನಿಷ್ಕ್ ಜಾಹೀರಾತು: ಗುಜರಾತ್‌ನ ಅಂಗಡಿ ಮಳಿಗೆಗಳಿಗೆ ಬೆದರಿಕೆ!

ಮದುವೆಯಾಗಿ 44 ವರ್ಷಗಳಾದ ಇನ್ನೊಂದು ದಂಪತಿ ತಮ್ಮ ಕಥೆಯನ್ನೂ ಹಂಚಿಕೊಂಡಿದ್ದಾರೆ. ಹಲವು ವರ್ಷಗಳ ಹೋರಾಟದ ನಂತರ ಈ ದಂಪತಿ ಈಗ ಶಾಂತಿಯನ್ನು ಕಂಡುಕೊಂಡಿದ್ದಾರೆ. ಗೋವಾದಲ್ಲಿ ತಮ್ಮ ಮನೆಗೆ ಹಿಂದಿಯಲ್ಲಿ “ಹಮ್” ಎಂದು ಹೆಸರಿಸಿದ್ದಾರೆ. ಅಲ್ಲಿ “ಎಚ್” ಎಂದರೆ ಹಿಂದೂ ಮತ್ತು”ಎಂ” ಮುಸ್ಲಿಂ.

“I saw her for the first time before Dussehra– we were neighbours and family friends. But because I was away at boarding…

Posted by Humans of Bombay on Wednesday, October 14, 2020

 

ತನಿಷ್ಕ್ ಜಾಹೀರಾತು ಲವ್ ಜಿಹಾದ್ ಎಂಬ ಕಾಮೆಂಟುಗಳಳ ಹಿನ್ನೆಲೆ ಈ ಸುಂದರ ಕಥೆಯನ್ನು ಅಕ್ಟೋಬರ್ 14, 2020 ರಂದು ಹ್ಯೂಮನ್ಸ್ ಆಫ್ ಬಾಂಬೆ ಪೋಸ್ಟ್ ಮಾಡಿದೆ.

ಇವುಗಳ ಜೊತೆಗೆ ಅನೇಕ ಮಂದಿ ತನಿಷ್ಕ್‌ನಲ್ಲಿ ಆಭರಣಗಳನ್ನು ಕೊಳ್ಳುವ ಮೂಲಕ, ಅಲ್ಲೇ ಆಭರಣ ಕೊಳ್ಳುವ ಯೋಜನೆಗಳ ಮೂಲಕ ತನಿಷ್ಕ್‌ಗೆ ಬೆಂಬಲ ಸೂಚಿಸುತ್ತಿದ್ದಾರೆ.

ಇನ್ನು ಕೆಲವರು ತಾವು ತನಿಷ್ಕ್‌ನಲ್ಲಿ ಆಭರಣ ಕೊಂಡುಕೊಂಡಿರುವುದಕ್ಕೆ ಹೆಮ್ಮೆಯಿದೆ ಎಂದು ಪೋಸ್ಟ್ ಮಾಡಿದ್ದಾರೆ.

ಏಕತ್ವಂ ಅಭಿಯಾನದ ಜಾಹೀರಾತಿನ ಮೂಲಕ ತನಿಷ್ಕ್ ‘ಲವ್ ಜಿಹಾದ್’ ಹಾಗೂ ‘ನಕಲಿ ಜಾತ್ಯತೀತತೆ’ಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಹಲವು ಟ್ವಿಟ್ಟಿರಿಗರು ಆರೋಪಿಸಿದ್ದರು. ಇದನ್ನು ಕಾಂಗ್ರೆಸ್ ಮುಖಂಡ ಶಶಿ ತರೂರ್, ಲೇಖಕ ಚೇತನ್ ಭಗತ್, ಖ್ಯಾತ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಸೇರಿದಂತೆ ಹಲವು ಮಂದಿ ಖಂಡಿಸಿದ್ದಾರೆ.

’ತನಿಷ್ಕ್ ತಮ್ಮ ಉದ್ಯೋಗಿಗಳು ಮತ್ತು ಮಳಿಗೆಗಳ ಸುರಕ್ಷತೆಗಾಗಿ ಜಾಹೀರಾತನ್ನು ವಾಪಸ್ ಪಡೆಯುವ ನಿರ್ಧಾರ ತೆಗೆದುಕೊಂಡರು. ನಾವು ಆರ್ಥಿಕ ಬಿಕ್ಕಟ್ಟಿನಲ್ಲಿದ್ದೇವೆ ಮತ್ತು ತನಿಷ್ಕ್ ಹಲವು ಆಭರಣ ಮಳಿಗೆಗಳನ್ನು ಹೊಂದಿದೆ. ಇವುಗಳ ಸುರಕ್ಷತೆ ಮುಖ್ಯ ಹಾಗಾಗಿ ಜಾಹೀರಾತು ವಾಪಸ್ ಪಡೆದಿದ್ದಾರೆ’ ಎಂದು ಜಾಹೀರಾತು ನಿರ್ದೇಶಕಿ ಜೊಯೀತಾ ಹೇಳಿದ್ದಾರೆ.


ಇದನ್ನೂ ಓದಿ: ನಾವು ಜಾತ್ಯಾತೀತರು, ಜಾತ್ಯಾತೀತರಾಗೇ ಇರುತ್ತೇವೆ- ತನಿಷ್ಕ್ ಜಾಹೀರಾತು ನಿರ್ದೇಶಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...