ರಾಜ್ಯದಲ್ಲಿ ಉಪಚುನಾವಣೆಯ ಭಾಗವಾಗಿ ಆರ್.ಆರ್.ನಗರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, “ಈ ಚುನಾವಣೆಯ ಮೂಲಕ ರಾಜ್ಯದ ಜನತೆಗೆ ಒಂದು ಸಂದೇಶ ರವಾನೆಯಾಗಬೇಕು. ಜನರ ತೀರ್ಪು ಮಾರಿಕೊಂಡವರಿಗೆ ಪಾಠವಾಗಬೇಕು” ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಉಪಚುನಾವಣೆಯ ಕಾವೇರುತ್ತಿದ್ದು, ಪ್ರತಿಯೊಂದು ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಆರೋಪ-ಪ್ರತ್ಯಾರೋಪಗಳನ್ನೂ ಮಾಡುತ್ತಿವೆ.
ತಮ್ಮ ಪಕ್ಷದ ಅಭ್ಯರ್ಥಿ ಮತ್ತು ದಿವಂಗತ ಡಿ.ಕೆ.ರವಿಯವರ ಪತ್ನಿ ಕುಸುಮಾ ಪರ ಪ್ರಚಾರದ ವೇಳೆ ಡಿ.ಕೆ.ಶಿವಕುಮಾರ್ ಈ ಮಾತನ್ನು ಹೇಳಿದ್ದಾರೆ.
ಇದನ್ನೂ ಓದಿ: ಶಿರಾ ಉಪಚುನಾವಣೆ: ಮೂಲ VS ವಲಸೆ ಬಿಜೆಪಿಗರ ನಡುವೆ ಬಿರುಕು! ಯಾರ ಕೈಹಿಡಿಯಲಿದ್ದಾನೆ ಮತದಾರ
ಡಿ.ಕೆ.ಶಿವಕುಮಾರ್ ಮಾತನಾಡಿರುವ ವೀಡಿಯೋವನ್ನು ಕಾಂಗ್ರೆಸ್ ಪಕ್ಷ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಸರ್ಕಾರವನ್ನು ಕೆಡವುವ ಕಳಂಕ ನಮಗೆ ಬೇಡ. ಅಂತಹ ನೀಚ ಕೆಲಸವನ್ನು ನಾವು ಎಂದಿಗೂ ಮಾಡುವುದಿಲ್ಲ. ಆದರೆ ಈ ಚುನಾವಣೆಯ ಮೂಲಕ ರಾಜ್ಯಕ್ಕೆ ಒಂದು ಸಂದೇಶ ರವಾನೆಯಾಗಬೇಕು ಮತ್ತು ಜನರ ತೀರ್ಪು ಮಾರಿಕೊಂಡವರಿಗೆ ಒಂದು ಪಾಠವಾಗಬೇಕು. ಮುಂದಿನ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ” ಎಂದು ಹೇಳಿದ್ದಾರೆ.
ಸರ್ಕಾರ ಕೆಡವುವ ಕಳಂಕ ನಮಗೆ ಬೇಡ, ಈ ಚುನಾವಣೆಯ ಮೂಲಕ ರಾಜ್ಯಕ್ಕೆ ಒಂದು ಸಂದೇಶ ರವಾನೆಯಾಗಬೇಕು. ಜನರ ತೀರ್ಪು ಮಾರಿಕೊಂಡವರಿಗೆ ಪಾಠವಾಗಬೇಕು.
– @DKShivakumar pic.twitter.com/w0Hl4eqxi5— Karnataka Congress (@INCKarnataka) October 19, 2020
ಇದನ್ನೂ ಓದಿ: ಯುಪಿ ಉಪಚುನಾವಣೆ: ಹೆಚ್ಚುತ್ತಿರುವ ಅಪರಾಧಗಳ ನೆರಳಲ್ಲಿ ಮತದಾರರು ಯಾರ ಕೈಹಿಡಿಯಲಿದ್ದಾರೆ?


