ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈಗ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆ ನನ್ನ ಕೊನೆ ಚುನಾವಣೆಯೆಂದು ಘೋಷಿಸುವ ಮೂಲಕ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಹೇಳಿದ್ದಾರೆ.
ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಯಾವುದೇ ಕೆಲಸ ಮಾಡದೇ, ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಜನರಲ್ಲಿ ಇದು ನನ್ನ ’ಕೊನೆಯ ಚುನಾವಣೆ’ ಎಂದು ಕರುಣೆ ತೋರುವಂತೆ ಮನವಿ ಮಾಡುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪಿ.ಚಿದಂಬರಂ “ಇದು ಅವರ ‘ಕೊನೆಯ ಚುನಾವಣೆ’ ಎಂದು ನಿತೀಶ್ ಕುಮಾರ್ ಘೋಷಿಸುವ ಮೂಲಕ ಅವರೇ ಸೋಲನ್ನು ಸಮರ್ಥವಾಗಿ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.
जब श्री नीतीश कुमार ने घोषणा की कि यह उनका 'अंतिम चुनाव’ होगा, तो उन्होंने प्रभावी रूप से हार मान ली।
'अंतिम चुनाव' वाली चाल उनके प्रदर्शन के आधार पर समर्थन की अपील नहीं है, बल्कि उनकें नाकामियों पर दया की याचिका है।
— P. Chidambaram (@PChidambaram_IN) November 5, 2020
ಇದನ್ನೂ ಓದಿ: ಬಿಹಾರ ಚುನಾವಣೆ: ಮುಖ್ಯಮಂತ್ರಿ ನಿತೀಶ್ ಕುಮಾರ್ ಮೇಲೆ ಈರುಳ್ಳಿ ಎಸೆದು ಆಕ್ರೋಶ!
ಮಾಜಿ ಹಣಕಾಸು ಸಚಿವ ಚಿದಂಬರಂ, “ಕೊನೆ ಚುನಾವಣೆ ಎನ್ನುವ ನಿತೀಶ್ ಕುಮಾರ್ ಅವರ ಈ ತಂತ್ರವು ಅವರ ಕಾರ್ಯಕ್ಷಮತೆಯ ಆಧಾರದ ಮೇಲೆ ಜನರ ಬೆಂಬಲಕ್ಕಾಗಿ ಮಾಡಿದ ಮನವಿಯಲ್ಲ. ಅವರ ವೈಫಲ್ಯಗಳ ಹಿನ್ನೆಲೆ ರಾಜ್ಯದ ಜನತೆಯಲ್ಲಿ ಕರುಣೆಗಾಗಿ ಮಾಡಿದ ಮನವಿ” ಎಂದು ಆರೋಪಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಕುಂಟು ಬಾತುಕೋಳಿಗೆ ಹೋಲಿಸಿದ್ದಾರೆ. “ಚುನಾಯಿತರಾದ ಮೊದಲ ದಿನದಿಂದ ಕುಂಟು ಬಾತುಕೋಳಿಯಾಗುವ ವ್ಯಕ್ತಿಗೆ ಬಿಹಾರದ ಜನರು ಯಾಕೆ ಮತ ನೀಡಬೇಕು” ಎಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಬಿಹಾರ ಚುನಾವಣೆಯ ಮೂರನೇ ಹಂತದ ಪ್ರಚಾರದ ಕೊನೆಯ ದಿನದಂದು, ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಗಳು ತಮ್ಮ ಕೊನೆ ಚುನಾವಣೆ ಎಂದು ಹೇಳಿ ಜನರಲ್ಲಿ ಗೊಂದಲ ಮೂಡಿಸಿದ್ದರು.
ನಿನ್ನೆ(ನ.5) ಬಿಹಾರದ ಪೂರ್ಣಿಯಾ ಜಿಲ್ಲೆಯ ಧಾಮ್‌ದಾಹದಲ್ಲಿ ನಡೆದ ರ್‍ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. “ಇಂದು ಪ್ರಚಾರದ ಕೊನೆ ದಿನ. ನಾಳೆಯ ನಂತರ ಮತದಾನ ನಡೆಯಲಿದೆ. ಇದು ನನ್ನ ಕೊನೆಯ ಚುನಾವಣೆ. ಎಲ್ಲವೂ ಚೆನ್ನಾಗಿ ಮುಗಿಯುತ್ತದೆ” ಎಂದು ನಿತೀಶ್ ಕುಮಾರ್ ಹೇಳಿದರು.
ಬಿಹಾರ ಚುನಾವಣೆಯ ಕೊನೆಯ ಹಂತದ ಮತದಾನ ನಾಳೆ (ನವೆಂಬರ್ 7) ರಂದು ನಡೆಲಿದೆ. ನವೆಂಬರ್ 10 ರಂದು ಫಲಿತಾಂಶ ಹೊರಬೀಳಲಿದೆ.


