Homeಮುಖಪುಟ’ಮೋದಿಜಿಯ ವೋಟಿಂಗ್ ಮಷಿನ್ & ಮೋದಿಜಿಯ ಮೀಡಿಯಾಕ್ಕೆ ನಾನು ಹೆದರುವುದಿಲ್ಲ’- ರಾಹುಲ್

’ಮೋದಿಜಿಯ ವೋಟಿಂಗ್ ಮಷಿನ್ & ಮೋದಿಜಿಯ ಮೀಡಿಯಾಕ್ಕೆ ನಾನು ಹೆದರುವುದಿಲ್ಲ’- ರಾಹುಲ್

ನಾವು ಅವರ ಸಿದ್ಧಾಂತದ ವಿರುದ್ಧ, ಅವರ ಆಲೋಚನೆಗಳ ವಿರುದ್ಧ ಹೋರಾಡುತ್ತೇವೆ, ಅವರ ಆಲೋಚನೆಗಳನ್ನು ನಾವು ಸೋಲಿಸುತ್ತೇವೆ -ರಾಹುಲ್ ಗಾಂಧಿ

- Advertisement -
- Advertisement -

ಚುನಾವಣೆಗಳಲ್ಲಿ ಬಳಸಿದ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ (ಇವಿಎಂ) ಮತ್ತು ಭಾರತೀಯ ಮಾಧ್ಯಮಗಳ ಬಗ್ಗೆ ಮತ್ತೊಂದು ಹೊಸ ವ್ಯಾಖ್ಯಾನ ನೀಡಿ ಬಿಹಾರದ ಚುನಾವಣಾ ಪ್ರಚಾರದಲ್ಲಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ

EVM-ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಅಂದ್ರೆ MVM -ಮೋದಿ ವೋಟಿಂಗ್ ಮಷಿನ್ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಜೊತೆಗೆ ಎಂವಿಎಂ ಎಂದರೆ, ಮೋದಿಜಿ ಅವರ ಮೀಡಿಯಾ ಎಂದೂ ಹೇಳಿದ್ದಾರೆ.

ಇಂದು ಬಿಹಾರದ ಅರಾರಿಯಾದಲ್ಲಿ ನಡೆದ ರ್‍ಯಾಲಿ ಉದ್ದೇಶಿಸಿ ಅವರು ಮಾತನಾಡಿ, “ಅದು ಎಂವಿಎಂ (ಮೋದಿ ವೋಟಿಂಗ್ ಮಷಿನ್) ಅಥವಾ ಮೋದಿ ಜಿ ಕಾ ಮೀಡಿಯಾ (ಮೋದಿಯ ಮಾಧ್ಯಮ) ಆಗಿರಲಿ, ನಾನು ಅವರಿಗೆ ಹೆದರುವುದಿಲ್ಲ.  ಸತ್ಯವೇ ಸತ್ಯ, ನ್ಯಾಯವೇ ನ್ಯಾಯ” ಎಂದಿದ್ದಾರೆ.

’ನಾನು ಅವರ ಸಿದ್ಧಾಂತದ ವಿರುದ್ಧ ಯುದ್ಧವನ್ನು ಮಾಡುತ್ತಿದ್ದೇನೆ. ನಾವು ಅವರ ಆಲೋಚನೆಗಳ ವಿರುದ್ಧ ಹೋರಾಡುತ್ತೇವೆ, ಅವರ ಆಲೋಚನೆಗಳನ್ನು ನಾವು ಸೋಲಿಸುತ್ತೇವೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ: ಜೈಶ್ರೀರಾಮ್, ಭಾರತ್ ಮಾತಾಕೀ ಜೈ ಘೋಷಣೆ ವಿರೋಧಿಗಳಿಗೆ ಮತ ನೀಡಬೇಕೆ? ಪ್ರಧಾನಿ ಬಾಯಲ್ಲಿ ಎಂತಹ ಮಾತು?

2019 ರಲ್ಲಿ ಕೂಡ ರಾಹುಲ್ ಗಾಂಧಿ ಇವಿಎಂ ದುರುಪಯೋಗದ ಬಗ್ಗೆ ಆರೋಪಿಸಿದ್ದರು. ಜೊತೆಗೆ ಚುನಾವಣಾ ಆಯೋಗವು ಮೋದಿ ಮತ್ತು ಅವರ ಗ್ಯಾಂಗ್‌ಗೆ ಮೋದಲೇ ಶರಣಾಗಿತ್ತು ಎಂದಿದ್ದರು.

ರ್‍ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, “ನರೇಂದ್ರ ಮೋದಿ ಅವರು ತಮ್ಮ ಸಭೆಗಳಲ್ಲಿ ನನ್ನ ಬಗ್ಗೆ ಅಹಿತಕರ ಸಂಗತಿಗಳನ್ನು ಹೇಳುತ್ತಾರೆ. ಹೆಚ್ಚು ದ್ವೇಷವನ್ನು ಹರಡಲು ಅವರು ಪ್ರಯತ್ನಿಸುತ್ತಾರೆ. ಆದರೆ, ನಾನು ಯಾವಾಗಲೂ ಪ್ರೀತಿಯನ್ನು ಹರಡಲು ಪ್ರಯತ್ನಿಸುತ್ತೇನೆ. ದ್ವೇಷದಿಂದ ದ್ವೇಷವನ್ನು ಸೋಲಿಸಲು ಸಾಧ್ಯವಿಲ್ಲ, ಬದಲಿಗೆ ಪ್ರೀತಿಯಿಂದ ಮಾತ್ರ ಸಾಧ್ಯ” ಎಂದಿದ್ದಾರೆ.

“ಇಂದು ಯುವಕರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಸಾರ್ವಜನಿಕ ಸಭೆಗಳಲ್ಲಿ ಅವರೇ ಭರವಸೆ ನೀಡಿದ್ದ ಉದ್ಯೋಗಗಳ ಬಗ್ಗೆ ಕೇಳಿದರೆ ಅವರು ಬೆದರಿಕೆ ಹಾಕುತ್ತಾರೆ. ಯುವಜನತೆಯನ್ನು ಸ್ಥಳದಿಂದ ಓಡಿಸುತ್ತಾರೆ ಮತ್ತು ಅವರ ಮೇಲೆ ಹಲ್ಲೆ ನಡೆಸುತ್ತಾರೆ” ಎಂದು ರಾಹುಲ್ ಗಾಂಧಿ ಆರೋಪಿಸಿದರು.

ನಿನ್ನೆ(ನ.3) ಮಧುಬನಿ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ಕಲ್ಲು ಮತ್ತು ಈರುಳ್ಳಿ ಎಸೆದು ಅಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿತ್ತು.


ಇದನ್ನೂ ಓದಿ: ಛತ್ತಿಸ್‌ಘಡದ ರೈತರಿಗೆ 2,500 ರೂ. ಬಿಹಾರದವರಿಗೆ 700 ರೂ. ಏಕೆ ಈ ಅನ್ಯಾಯ?: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...