ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಟ್ವಿಟರ್ ಖಾತೆಯಿಂದ ಅವರ ಪ್ರೊಫೈಲ್ ಚಿತ್ರವನ್ನು ಟ್ವಿಟ್ಟರ್ ತೆಗೆದುಹಾಕಿದೆ. ಕೆಲವು ದೋಷದಿಂದಾಗಿ, ಸಾಮಾಜಿಕ ಮಾಧ್ಯಮವು ತನ್ನ ಜಾಗತಿಕ ಹಕ್ಕುಸ್ವಾಮ್ಯ ನೀತಿಗಳ ಅಡಿಯಲ್ಲಿ ಅಮಿತ್ ಶಾ ಅವರ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಬೇಕಾಯಿತು ಎಂದು ಟ್ವಿಟರ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಶಾ ಅವರ ಅಧಿಕೃತ ಖಾತೆಯ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕಿಸಿದರೆ, ‘ಮಾಧ್ಯಮವನ್ನು ಪ್ರದರ್ಶಿಸಲಾಗದು. ಕಾಪಿರೈಟ್ (ಕೃತಿಸ್ವಾಮ್ಯ) ಹೊಂದಿರುವವರ ವರದಿಗೆ ಪ್ರತಿಕ್ರಿಯೆಯಾಗಿ ಈ ಚಿತ್ರವನ್ನು ತೆಗೆದುಹಾಕಲಾಗಿದೆ’ ಎಂದು ತೋರಿಸಲಾಗುತ್ತಿತ್ತು. ಇದಕ್ಕೆ ಟ್ವಿಟರ್ ಈಗ ಪ್ರತಿಕ್ರಿಯೆ ನೀಡಿದ್ದು, ಅಜಾಗರೂಕತೆಯಿಂದ ಅದು ಸಂಭವಿಸಿದೆ ಎಂದಿದೆ.
’ಅಜಾಗರೂಕ ದೋಷದಿಂದಾಗಿ, ನಮ್ಮ ಜಾಗತಿಕ ಹಕ್ಕುಸ್ವಾಮ್ಯ ನೀತಿಗಳ ಅಡಿಯಲ್ಲಿ ನಾವು ಈ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಿದ್ದೇವು. ಈ ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳಲಾಗಿದೆ. ಸದ್ಯ ಖಾತೆಯು ಸಂಪೂರ್ಣವಾಗಿ ಕ್ರಿಯಾತ್ಮಕವಾಗಿದೆ” ಎಂದು ಟ್ವಿಟರ್ ವಕ್ತಾರರು ಹೇಳಿದ್ದಾರೆ.
ಇದನ್ನೂ ಓದಿ: ಬುಡಕಟ್ಟು ನಾಯಕ ಬಿರ್ಸಾ ಮುಂಡಾಗೆ ಅಮಿತ್ ಶಾ ಅವಮಾನ: ಟಿಎಂಸಿ ಆಕ್ರೋಶ
Due to an inadvertent error, we temporarily locked this account under our global copyright policies. This decision was reversed immediately and the account is fully functional: Twitter Spokesperson on Home Minister Amit Shah's account being temporarily locked yesterday evening https://t.co/KVPkyo2Lic
— ANI (@ANI) November 13, 2020
ಗುರುವಾರ, 23.6 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಶಾ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪ್ರೊಫೈಲ್ ಚಿತ್ರವನ್ನು ಅವರ ತೆಗೆದುಹಾಕಲಾಗಿತ್ತು. ಇದು “ಕೃತಿಸ್ವಾಮ್ಯ ಹೊಂದಿರುವವರ ವರದಿಗೆ” ಪ್ರತಿಕ್ರಿಯೆಯಾಗಿ ಎಂದು ತಿಳಿಸಲಾಗಿತ್ತು. ಪ್ರೊಫೈಲ್ ಚಿತ್ರವನ್ನು ಮರುಸ್ಥಾಪಿಸಿದ ಟ್ವಿಟರ್ ಇತರ ವಿವರಗಳನ್ನು ಹಂಚಿಕೊಂಡಿಲ್ಲ.
ಕೆಲ ದಿನಗಳ ಹಿಂದಷ್ಟೇ ಕೇಂದ್ರ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಟ್ವಿಟರ್‌ಗೆ ನೋಟಿಸ್ ನೀಡಿತ್ತು. ಏಕೆಂದರೆ, ಟ್ವಿಟರ್ ಲಡಕ್ ಬದಲು ಲೇಹ್ ಅನ್ನು ಜಮ್ಮು ಮತ್ತು ಕಾಶ್ಮೀರದ ಭಾಗವಾಗಿ ತೋರಿತ್ತು. ಈ ಕುರಿತು ಟ್ವಿಟರ್ ವಿರುದ್ಧ ಕಾನೂನು ಕ್ರಮ ಏಕೆ ತೆಗೆದುಕೊಳ್ಳಬಾರದು ಎಂದು ಪ್ರಶ್ನಿಸಿ ಉತ್ತರಿಸುವಂತೆ ಐದು ದಿನಗಳ ಸಮಯ ನೀಡಿತ್ತು.


