ಮಾಜಿ ಫೇಸ್‌ಬುಕ್ ಉದ್ಯೋಗಿ ಮಾರ್ಕ್ ಲಕ್ಕಿ ಗುರುವಾರ ಫೇಸ್‌ಬುಕ್ ವಿರುದ್ಧ ತೀವ್ರ ಆರೋಪಗಳನ್ನು ಮಾಡಿದ್ದು, ಫೇಸ್‌ಬುಕ್ ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ದೆಹಲಿ ಗಲಭೆಗಳನ್ನು ತಪ್ಪಿಸಬಹುದಿತ್ತು ಮತ್ತು ಫೇಸ್‌ಬುಕ್ ಸ್ವಯಂ ನಿಯಂತ್ರಣ ಹೊಂದಿದೆ ಎಂದು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚಾಡ್ಡ ಅವರ ಅಧ್ಯಕ್ಷತೆಯಲ್ಲಿರುವ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಸಮಿತಿ ಜೊತೆಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಲಕ್ಕಿ, “ಫೇಸ್‌ಬುಕ್ ದ್ವೇಷದಿಂದ ಲಾಭ ಗಳಿಸುತ್ತಿರುವುದು ನಿಜ” ಎಂದು ಹೇಳಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ದೆಹಲಿಯ ಈಶಾನ್ಯ ಭಾಗಗಳಲ್ಲಿ ನಡೆದ ಗಲಭೆಯಲ್ಲಿ, ಫೇಸ್‌ಬುಕ್ ದ್ವೇಷ ಭಾಷಣ ನಿಯಮಗಳು ಮತ್ತು ನೀತಿಗಳನ್ನು ಸರಿಯಾಗಿ ಅನ್ವಯಿಸದೆ ಕೋಮು ಹಿಂಸಾಚಾರಕ್ಕೆ ಕಾರಣವಾಗಿದೆ ಎಂಬುದರ ಕುರಿತು ಶಾಸಕ ರಾಘವ್ ಚಾಡ್ಡ ಮಾಜಿ ಫೇಸ್‌ಬುಕ್ ಉದ್ಯೋಗಿ ಮಾರ್ಕ್ ಎಸ್ ಲಕ್ಕಿಯನ್ನು ಪ್ರಶ್ನಿಸಿದರು.
ದೆಹಲಿಯಲ್ಲಿ ನಡೆದ ಗಲಭೆಗಳಲ್ಲಿ ಫೇಸ್‌ಬುಕ್‌ನ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ಅಸೆಂಬ್ಲಿಯ ಶಾಂತಿ ಮತ್ತು ಸಾಮರಸ್ಯ ಸಮಿತಿಯ ಮುಂದೆ ಲಕ್ಕಿ ಈ ಅಭಿಪ್ರಾಯಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಅಂಬೇಡ್ಕರ್ ಮೊಮ್ಮಗ ’ರಾಜರತ್ನ’ ಪೇಜನ್ನು ಡಿಲೀಟ್ ಮಾಡಲು ಪ್ರಯತ್ನಿಸಿದ ಫೇಸ್‌ಬುಕ್!
ಅಟ್ಲಾಂಟಾ ಮೂಲದ ಮಾಜಿ ಫೇಸ್‌ಬುಕ್ ಉದ್ಯೋಗಿ ಲಕ್ಕಿ, 2018ರಲ್ಲಿ ಫೇಸ್‌ಬುಕ್ ತನ್ನ ವೈವಿಧ್ಯತೆಯ ಕೊರತೆಯನ್ನು ಪರಿಹರಿಸಲು ಸಾಕಷ್ಟು ಕೆಲಸ ಮಾಡಲಿಲ್ಲ ಎಂದು ಆರೋಪಿಸಿ ರಾಜೀನಾಮೆ ನೀಡಿ ಹೊರನಡೆದಿದ್ದರು.
ಸಮುದಾಯ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ಹೊಂದಾಣಿಕೆಗಳಿವೆ ಎಂಬುದರ ಬಗ್ಗೆ ಲಕ್ಕಿ ಗಮನ ಸೆಳೆದಿದ್ದಾರೆ. ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ ಸಾಮಾಜಿಕ ಜಾಲತಾಣದ ಕಾರ್ಯನಿರ್ವಾಹಕ ತಂಡಗಳಿಗೆ “ಇಂತಹ ಸ್ಥೂಲ ನಿಷ್ಕ್ರಿಯತೆ ಮತ್ತು ದುರುಪಯೋಗದ ಬಗ್ಗೆ ಸಾಮಾನ್ಯವಾಗಿ ತಿಳಿದಿರುತ್ತದೆ” ಎಂದು ಲಕ್ಕಿ ಹೇಳಿದ್ದಾರೆ.
ಆಪ್ ಬಿಡುಗಡೆ ಮಾಡಿರುವ ವಿಡಿಯೋ ತುಣುಕುಗಳಲ್ಲಿ, ಲಕ್ಕಿ ಹೇಳುವಂತೆ, “ದುರದೃಷ್ಟವಶಾತ್, ದ್ವೇಷ ಮತ್ತು ವಿಭಜಕ ವಿಷಯಗಳು ಹೆಚ್ಚಾಗಿ ಫೇಸ್‌ಬುಕ್ ಬಳಕೆದಾರರಲ್ಲಿ ಹೆಚ್ಚು ಷೇರುಗಳು, ಲೈಕ್ ಅಥವಾ ಕಾಮೆಂಟ್‌ಗಳನ್ನು ಹೊಂದಿವೆ. ಹೌದು, ಫೇಸ್‌ಬುಕ್ ದ್ವೇಷದಿಂದ ಲಾಭ ಗಳಿಸುತ್ತಿದೆ” ಎಂದಿದ್ದಾರೆ.
"Unfortunately, hateful & divisive content often has the most shares, likes or comments which are the metrics that FB uses…Yes, FB is profiting off of hate."
Former FB employee Mark Luckie gives his statement before the Delhi Peace & Harmony Committee headed by @raghav_chadha pic.twitter.com/x5R1AN1pvl
— AAP (@AamAadmiParty) November 12, 2020
“ಜನರು ನೋಡುವ ಮತ್ತು ನೋಡದ ವಿಷಯಗಳಲ್ಲಿ ಫೇಸ್‌ಬುಕ್ ಸಕ್ರಿಯವಾಗಿ ಹಸ್ತಕ್ಷೇಪ ಮಾಡುತ್ತದೆ. ಫ್ಲಾಟ್‌ಫಾರಂನಲ್ಲಿ ಮುಂದುವರಿಯಲು ಫೇಸ್‌ಬುಕ್ ಬಹಳಷ್ಟು ಹಿಂಸಾಚಾರ ಮತ್ತು ತಪ್ಪು ಮಾಹಿತಿಯ ಮೇಲೆ ಪ್ರಭಾವ ಬೀರುತ್ತದೆ ಜೊತೆಗೆ ಅಂತಹ ವಿಷಯಗಳಿಗೆ ಸಹಾಯ ಮಾಡುತ್ತದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಬಿಜೆಪಿ-ಫೇಸ್‌ಬುಕ್ ಸಖ್ಯ: ಹುದ್ದೆ ತ್ಯಜಿಸಿದ ಫೇಸ್‌ಬುಕ್ ಇಂಡಿಯಾದ ಮುಖ್ಯಸ್ಥೆ ಅಂಖಿದಾಸ್!
"FB actively interferes in what people see & dont see. It influence & aid a lot of these violence & misinformation to continue on the platform."
– Mark Luckie, former FB employee at the proceedings of Delhi Peace & Harmony Panel headed by @raghav_chadha pic.twitter.com/F2k1z0Xjuv
— AAP (@AamAadmiParty) November 12, 2020
ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಸಮಿತಿಯ ಹೇಳಿಕೆಯನ್ನು ಉಲ್ಲೇಖಿಸಿದ ಎಎನ್‌ಐ ದೆಹಲಿ ಕೋಮು ಹಿಂಸಾಚಾರ, ಮ್ಯಾನ್ಮಾರ್ ನರಮೇಧ ಮತ್ತು ಶ್ರೀಲಂಕಾದ ಕೋಮು ಹಿಂಸಾಚಾರದಂತಹ ಘಟನೆಗಳಲ್ಲಿ ಫೇಸ್‌ಬುಕ್ “ಹೆಚ್ಚು ಪೂರ್ವಭಾವಿಯಾಗಿ ಮತ್ತು ತ್ವರಿತವಾಗಿ ನಡೆದುಕೊಂಡಿದ್ದರೆ ಅದನ್ನು ಸುಲಭವಾಗಿ ತಪ್ಪಿಸಬಹುದಿತ್ತು” ಎಂದು ಹೇಳಿದೆ.
ಮಾಜಿ ಉದ್ಯೋಗಿ ಮಾರ್ಕ್ ಲಕ್ಕಿಯ ಹೇಳಿಕೆಗಳ ಕುರಿತು ಫೇಸ್‌ಬುಕ್ ಇನ್ನೂ ಪ್ರತಿಕ್ರಿಯಿಸಿಲ್ಲ.
ಘಟನೆಯನ್ನು ವರದಿ ಮಾಡುವ ಜನರ ಸಂಖ್ಯೆಯನ್ನು ಅವಲಂಬಿಸಿ ಮೇಲ್ವಿಚಾರಕರಿಗೆ ದ್ವೇಷಪೂರಿತ ಪೋಸ್ಟ್‌ಗಳನ್ನು ಫ್ಲ್ಯಾಗ್ ಮಾಡಲಾಗುತ್ತದೆ ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಒಳಗೊಳ್ಳುವಿಕೆ ಕೂಡ ಒಂದು ಘಟನೆಯ ಪರಿಣಾಮವನ್ನು ಅಳೆಯಲು ಆಧರಿಸಿದೆ ಎಂದು ಲಕ್ಕಿ ದೆಹಲಿ ಅಸೆಂಬ್ಲಿ ಪ್ಯಾನೆಲ್‌ಗೆ ತಿಳಿಸಿದ್ದಾರೆ.
ಭಾರತದಲ್ಲಿ ದ್ವೇಷದ ಭಾಷಣವನ್ನು ಹರಡುವಲ್ಲಿ ಫೇಸ್‌ಬುಕ್‌ನ ಪಾತ್ರವು ಪರಿಶೀಲನೆಗೆ ಒಳಪಟ್ಟಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಲೇಖನವೊಂದು ಬಹಿರಂಗಪಡಿಸಿದ ನಂತರ ಭಾರತದಲ್ಲಿ ಫೇಸ್‌ಬುಕ್ ಉನ್ನತ ಶ್ರೇಣಿಯ ಅಧಿಕಾರಿಗಳು ನರೇಂದ್ರ ಮೋದಿ ಸರ್ಕಾರವನ್ನು ಬೆಂಬಲಿಸುತ್ತಿದೆ ಎಂದು ತಿಳಿದುಬಂದಿದೆ.
ಭಾರತದ ಫೇಸ್‌ಬುಕ್ ಮುಖ್ಯಸ್ಥರಾದ ಅಂಖಿದಾಸ್ ಎರಡು ವಾರಗಳ ಹಿಂದೆ ತಮ್ಮ ಹುದ್ದೆಯಿಂದ ಕೆಳಗಿಳಿದರು. “ಬಿಜೆಪಿಗೆ ಸಹಕಾರಿಯಾಗಿ ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಅನ್ನು ದುರುಪಯೋಗಪಡಿಸಿಕೊಂಡಿದ್ದರು” ಎಂಬ ಆರೋಪದ ಮೇಲೆ ಕೆಲವು ದಿನಗಳಿಂದ ವಿಚಾರಣೆ ಎದುರಿಸುತ್ತಿದ್ದರು. ಅವರು ಮೋದಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆಂದು ಆರೋಪಿಸಲಾಗಿತ್ತು ಮತ್ತು 2014 ರ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಗೆ ಸಹಾಯ ಮಾಡುವ ಬಗ್ಗೆಯೂ ಮಾತನಾಡಿದ್ದರು.


