Homeಮುಖಪುಟಬಿಜೆಪಿ-ಫೇಸ್‌ಬುಕ್ ಸಖ್ಯ: ಹುದ್ದೆ ತ್ಯಜಿಸಿದ ಫೇಸ್‌ಬುಕ್ ಇಂಡಿಯಾದ ಮುಖ್ಯಸ್ಥೆ ಅಂಖಿದಾಸ್!

ಬಿಜೆಪಿ-ಫೇಸ್‌ಬುಕ್ ಸಖ್ಯ: ಹುದ್ದೆ ತ್ಯಜಿಸಿದ ಫೇಸ್‌ಬುಕ್ ಇಂಡಿಯಾದ ಮುಖ್ಯಸ್ಥೆ ಅಂಖಿದಾಸ್!

ಫೇಸ್‌‌ಬುಕ್ ಅನ್ನು ಬಿಜೆಪಿಯ ಪರವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಂಸದೀಯ ಸಮಿತಿಯು ಅವರನ್ನು 2 ಗಂಟೆಗೂ ಹೆಚ್ಚು ಸಮಯ ಪ್ರಶ್ನಿಸಿತ್ತು.

- Advertisement -
- Advertisement -

ಭಾರತದ ಫೇಸ್‌ಬುಕ್ ಮುಖ್ಯಸ್ಥರಾದ ಅಂಖಿದಾಸ್ ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ ಎಂದು ವರದಿಯಾಗಿದ್ದು, “ಬಿಜೆಪಿಗೆ ಸಹಕಾರಿಯಾಗಿ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ ಅನ್ನು ದುರುಪಯೋಗಪಡಿಸಿಕೊಂಡಿದ್ದರು” ಎಂಬ ಆರೋಪದ ಮೇಲೆ ಕೆಲವು ದಿನಗಳಿಂದ ವಿಚಾರಣೆ ಎದುರಿಸುತ್ತಿದ್ದರು.

ಅಮೇರಿಕಾದ ಪತ್ರಿಕೆಯೊಂದು ಮಾಡಿದ ವರದಿಯ ಆಧಾರದ ಮೇಲೆ ಭಾರತದಲ್ಲಿ ವ್ಯಾಪಕ ಟೀಕೆಗಳೊಟ್ಟಿಗೆ ವಿಚಾರಣೆಯನ್ನು ಎದುರಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಂಸದೀಯ ಸಮಿತಿಯು ಅವರನ್ನು 2 ಗಂಟೆಗೂ ಹೆಚ್ಚು ಸಮಯ ಪ್ರಶ್ನಿಸಿತ್ತು. ಇದರ ನಡುವೆ ಅವರು ಹುದ್ದೆಯನ್ನು ತ್ಯಜಿಸಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಇದನ್ನೂ ಓದಿ: ಫೇಸ್‌ಬುಕ್ – ಬಿಜೆಪಿ ನಂಟು: ಸಮಿತಿ ಅಧ್ಯಕ್ಷ ಶಶಿ ತರೂರ್ ವಿರುದ್ಧ ಬಿಜೆಪಿ ಸಂಸದನ ಪತ್ರ

“ಭಾರತೀಯ ರಾಜಕೀಯದೊಂದಿಗೆ ಫೇಸ್‌ಬುಕ್ ದ್ವೇಷ-ಭಾಷಣ ನಿಯಮಗಳಲ್ಲಿ ಘರ್ಷಣೆ – ವಿವಾದಾತ್ಮಕ ರಾಜಕಾರಣಿಯನ್ನು ನಿಷೇಧಿಸುವ ಕ್ರಮವನ್ನು ಕಂಪನಿಯ ಕಾರ್ಯನಿರ್ವಾಹಕ ವಿರೋಧಿಸಿದ್ದಾರೆ” ಎಂಬ ಶೀರ್ಷಿಕೆಯಲ್ಲಿ ಅಮೆರಿಕಾ ಮೂಲದ ವಾಲ್ ಸ್ಟ್ರೀಟ್ ಜರ್ನಲ್ ವಿಶೇಷ ವರದಿ ಮಾಡಿತ್ತು.

ಬಿಜೆಪಿ ಕಾರ್ಯಕರ್ತರ ಉಲ್ಲಂಘನೆಗಳಿಗೆ ಶಿಕ್ಷೆ ನೀಡುವುದು ಭಾರತದಲ್ಲಿ ಕಂಪನಿಯ ವ್ಯವಹಾರದ ಭವಿಷ್ಯವನ್ನು ಹಾನಿಗೊಳಿಸುತ್ತದೆ ಎಂದು ಅಂಖಿದಾಸ್‌ ಹೇಳಿರುವುದಾಗಿ ಜರ್ನಲ್ ವರದಿ ಮಾಡಿತ್ತು.

ಇದನ್ನೂ ಓದಿ: ದೆಹಲಿ ಹಿಂಸಾಚಾರದಲ್ಲಿ ಫೇಸ್‌ಬುಕ್ ಸಹ ಆರೋಪಿ: ಶಾಸಕಾಂಗ ಸಮಿತಿ

“ಫೇಸ್‌ಬುಕ್‌ ಉದ್ಯೋಗಿಗಳನ್ನು ಮಾತ್ರ ಒಳಗೊಂಡಿರುವ ಕಂಪನಿಯ ಆಂತರಿಕ ಗುಂಪಿನಲ್ಲಿ ಅಂಖಿ ದಾಸ್ ಹಲವು ವರ್ಷಗಳಿಂದ ಸತತವಾಗಿ ಬಿಜೆಪಿ ಪರವಾದ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ವಿರುದ್ಧದ ಪೂರ್ವಗ್ರಹದ ಪೋಸ್ಟ್‌ಗಳನ್ನು ಹಾಕುತ್ತಿದ್ದರು” ಎಂದು ವಾಲ್ ಸ್ಟ್ರೀಟ್ ಜರ್ನಲ್ ಮತ್ತೊಂದು ವರದಿ ಮಾಡಿತ್ತು.

ನರೇಂದ್ರ ಮೋದಿಯವರು 2014ರ ಚುನಾವಣೆಯಲ್ಲಿ ಗೆಲುವನು ಪಡೆದ ಹಿಂದಿನ ದಿನ, ದೇಶದ ಫೇಸ್‌ಬುಕ್‌ನ ಸಾರ್ವಜನಿಕ ನೀತಿಯ ಮುಖ್ಯಸ್ಥರಾದ ಅಂಖಿ ದಾಸ್‌, “ನಾವು ಅವರ (ಮೋದಿಯವರ) ಸೋಷಿಯಲ್‌ ಮೀಡಿಯಾ ಕ್ಯಾಂಪೇನ್‌ಗೆ ಅಗತ್ಯವಿದ್ದ ಕಾವನ್ನು ಹೊತ್ತಿಸಿದೆವು. ಅಲ್ಲಿಂದಾಚೆಗಿನದ್ದು ಇತಿಹಾಸ” ಎಂದು ಪೋಸ್ಟ್ ಮಾಡಿದ್ದರು.

“ಅಂತಿಮವಾಗಿ ಭಾರತವನ್ನು ಸಮಾಜವಾದದಿಂದ ಮುಕ್ತಗೊಳಿಸಲು ಮೂವತ್ತು ವರ್ಷಗಳ ತಳಮಟ್ಟದ ಕೆಲಸವನ್ನು ತೆಗೆದುಕೊಂಡಿದೆ” ಎಂದು ಕಾಂಗ್ರೆಸ್ ಸೋಲಿನ ಬಗ್ಗೆ ಅಂಖಿ ದಾಸ್ ಮತ್ತೊಂದು ಪೋಸ್ಟ್ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಫೇಸ್‌ಬುಕ್ ಇಂಡಿಯಾದ ಮುಖ್ಯಸ್ಥೆ ಅಂಖಿದಾಸ್‌ಗೆ ಜೀವಬೆದರಿಕೆ: ದೂರು ದಾಖಲು

ನರೇಂದ್ರ ಮೋದಿಯವರು ಶಕ್ತಿಯುತ ಮನುಷ್ಯ ಎಂದು ಹೊಗಳಿದ್ದ ಅವರು ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದರು. ಅಂಖಿ ದಾಸ್ ಅವರು ಫೇಸ್‌ಬುಕ್‌ನ ಉನ್ನತ ಜಾಗತಿಕ ಚುನಾವಣಾ ಅಧಿಕಾರಿ ಕಾಟೀ ಹರ್ಬಾತ್ ಅವರನ್ನು ಈ ಬಿಜೆಪಿ ಪರವಾಗಿನ ಅಭಿಯಾನದಲ್ಲಿ ಒಳಗೊಂಡಿದ್ದಲ್ಲೇ ಮೋದಿಯವರು ವಿಜಯ ಸಾಧಿಸಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಮತ್ತು ಹರ್ಬಾತ್ ನಡುವೆ ನಗುತ್ತಾ ಫೋಟೊ ತೆಗೆಸಿಕೊಂಡಿದ್ದರು.


ಇದನ್ನೂ ಓದಿ: ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಿದ್ದ ಫೇಸ್‌ಬುಕ್‌ನ ಅಂಖಿದಾಸ್: ವಾಲ್ ಸ್ಟ್ರೀಟ್ ಜರ್ನಲ್ ತೆರೆದಿಟ್ಟ ಸ್ಪೋಟಕ ಸತ್ಯ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...