2020 ರ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರ (EVM)ಗಳನ್ನು ಕಳವು ಮಾಡಲಾಗಿದೆ ಎಂಬ ಹೇಳಿಕೆಯೊಂದಿಗೆ EVM ಗಳನ್ನು ಅರಣ್ಯ ಪ್ರದೇಶದ ಮೂಲಕ ಸಾಗಿಸುವ ವ್ಯಕ್ತಿಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಸ್ಟೆಫ್ಫಿ ಎಂಬುವವರು ಈ ಚಿತ್ರಗಳನ್ನು ಹಂಚಿಕೊಂಡು, “EVM ಯಂತ್ರಗಳನ್ನು ಮತ್ತೆ ಪರಿಶೀಲಿಸಬೇಕು. ನಿತೀಶ್ ಕುಮಾರ್ ಜೈಲಿಗೆ ಹೋಗುತ್ತಾರೆಯೇ? ಬಿಹಾರದ ಜನತೆ ಕೇಳುತ್ತಿದ್ದಾರೆ, EVM ಯಂತ್ರವನ್ನು ಕದ್ದ ನಂತರ ಅವನು ಎಲ್ಲಿಗೆ ಹೋಗುತ್ತಿದ್ದಾನೆ? ಮೋದಿ ಆಯೋಗ ಕಳ್ಳ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ನೈಜೀರಿಯಾದಲ್ಲಿ ನಟ ಸುಶಾಂತ್‌ಗೆ ನ್ಯಾಯ ಕೋರಿ ನಡೆಯಿತೆ ಪ್ರತಿಭಟನೆ?
EVM की होगी जांच, नितीश जाएंगे जेल?
पूछता है युवा, पूछता है बिहार EVM चोरी करके कहां ले जा रहा है।
मोदी आयोग चोर है।#Recounting_Bihar_Election#बिहार_मांगें_रिकॉउंटिंग pic.twitter.com/hXUuPy8bnF— steffi (@sara75165335) November 13, 2020
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ತನಿಷ್ಕ್ ಜಾಹೀರಾತಿನ ವಿರುದ್ಧ ದೆಹಲಿಯ ಜಾಮಾ ಮಸೀದಿ ಫತ್ವಾ ಹೊರಡಿಸಿದೆಯೇ?
ಇದೇ ರೀತಿಯ ಹೇಳಿಕೆ ಮತ್ತು ಚಿತ್ರಗಳಿರುವ ಈ ಪೋಸ್ಟನ್ನು ಫೇಸ್‌ಬುಕ್‌ನಲ್ಲಿಯೂ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಜಯ್ ಪ್ರತಾಪ್ ಸಿಂಗ್ ಎಂಬುವವರು, “ದೇಶದಲ್ಲಿ ಏನಾಗುತ್ತಿದೆ? ನಿಮಗೆ ತಿಳಿದಿದೆಯೇ ಅಥವಾ ನೀವು ಮಲಗಿದ್ದೀರಾ, ಕಳ್ಳರು ಸಾರ್ವಜನಿಕವಾಗಿ ಕದಿಯುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
ಹೀಗೆ ನೂರಾರು ಜನರು ಇದನ್ನು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್:
ಈ ಚಿತ್ರಗಳನ್ನು ಆಧರಿಸಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, 2019 ರ ಅಕ್ಟೋಬರ್ ತಿಂಗಳಿನ ಎರಡು ಟ್ವೀಟ್‌ಗಳು ಪತ್ತೆಯಾದವು. ಅದರಲ್ಲಿ ಈ ಫೋಟೋಗಳು ರಾಯಗಡ್‌ನದ್ದು ಎಂದು ಹೇಳಿದೆ. ಹಾಗಾಗಿ ರಾಯಗಡ್ ಮತದಾನದ ವಿವರವನ್ನು ಒಳಗೊಂಡಿರುವ ಹೆಚ್ಚಿನ ಟ್ವೀಟ್‌ಗಳಿಗಾಗಿ ಹುಡುಕಾಡಿದಾಗ, ರಾಯಗಡ್‌ನ ಜಿಲ್ಲಾ ಮಾಹಿತಿ ಕಚೇರಿಯ ಅಧಿಕೃತ ಹ್ಯಾಂಡಲ್ ಪೋಸ್ಟ್ ಮಾಡಿದ ಟ್ವೀಟ್ ಪತ್ತೆಯಾಯಿತು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ದೇಹಕ್ಕೆ ಕಬ್ಬಿಣದ ಮುಳ್ಳುತಂತಿ ಸುತ್ತಿಕೊಂಡು ಅತ್ಯಾಚಾರದ ವಿರುದ್ಧ ಪ್ರತಿಭಟನೆ?- ವಾಸ್ತವವೇನು?
ಇದರಲ್ಲಿ, “ಕಲ್ಕರೈನಂತಹ ದೂರದ ದುರ್ಗಮ ಪ್ರದೇಶಗಳ ಮತಗಟ್ಟೆಗಳನ್ನು ತಲುಪುತ್ತಿರುವ ಸಿಬ್ಬಂದಿ. ನಾವು ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ” ಎಂದು ಬರೆಯಲಾಗಿದೆ.
कळकराई सारख्या दुर्गम भागात मतदान केंद्रावर पोहोचणारे कर्मचारी. आम्हाला तुमचा सार्थ अभिमान आहे ??#vidhansabha2019@CEO_Maharashtra
@MahaDGIPR
@MahaCyber1 pic.twitter.com/c2f4ya5HOk— DISTRICT INFORMATION OFFICE, RAIGAD (@InfoRaigad) October 20, 2019
ಹಾಗಾಗಿ ಇದರಿಂದ ತಿಳಿದುಬರುವುದೇನೆಂದರೆ, ಈ ಚಿತ್ರಗಳು ಬಿಹಾರ ಚುನಾವಣೆಯಲ್ಲಿ ಮತಯಂತ್ರಗಳನ್ನು ಕದಿಯಲಾಗುತ್ತಿದೆ ಎಂದು ಮಾಡಿರುವ ಆರೋಪ ಸುಳ್ಳಾಗಿದ್ದು, ಇದು ಚುನಾವಣಾ ಸಿಬ್ಬಂದಿಯು ಮತಯಂತ್ರಗಳೊಟ್ಟಿಗೆ ಮತಗಟ್ಟೆಯನ್ನು ತಲುಪುತ್ತಿರುವಾಗ ತೆಗೆದ ಚಿತ್ರವಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ವಿಶ್ವದ ಏಳನೇ ಹೆಚ್ಚು ವಿದ್ಯಾವಂತ ನಾಯಕ ಎಂಬುದು ನಿಜವೇ?


